Covid Vaccine Certificate: ನಿಮ್ಮ ಕೊವಿಡ್ ಲಸಿಕೆಯ ಸರ್ಟಿಫಿಕೆಟ್ ಅಸಲಿಯೇ ಎಂದು ಪತ್ತೆ ಹಚ್ಚುವುದು ಹೇಗೆ?

CoWIN Website: ಕೊರೊನಾ ಲಸಿಕೆ ಹಾಕಿಸಿಕೊಂಡ ಬಳಿಕ ನೀಡಲಾಗುವ ಕೊವಿಡ್ ಲಸಿಕೆಯ ಸರ್ಟಿಫಿಕೆಟ್ ಅಸಲಿಯಾ? ಅಥವಾ ನಕಲಿಯಾ? ಎಂಬುದನ್ನು ಪತ್ತೆ ಹಚ್ಚುವುದು ಹೇಗೆ?

Covid Vaccine Certificate: ನಿಮ್ಮ ಕೊವಿಡ್ ಲಸಿಕೆಯ ಸರ್ಟಿಫಿಕೆಟ್ ಅಸಲಿಯೇ ಎಂದು ಪತ್ತೆ ಹಚ್ಚುವುದು ಹೇಗೆ?
ಕೋವಿನ್ ಆ್ಯಪ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 24, 2021 | 8:51 PM

ನವದೆಹಲಿ: ಭಾರತದ ಕೊವಿಡ್ ಸರ್ಟಿಫಿಕೆಟ್ ಅಸಲಿತನದ ಬಗ್ಗೆ ಈಗಾಗಲೇ ಇಂಗ್ಲೆಂಡ್ ಅನುಮಾನ ಹೊರಹಾಕಿದೆ. ನಮಗೆ ಭಾರತದ ಕೊರೊನಾ ಲಸಿಕೆಗಳ ಬಗ್ಗೆ ಯಾವುದೇ ಸಮಸ್ಯೆಯಿಲ್ಲ ಆದರೆ, ಕೋವಿನ್ ಸರ್ಟಿಫಿಕೆಟ್​ ಬಗ್ಗೆ ನಮಗೆ ನಂಬಿಕೆಯಿಲ್ಲ ಎನ್ನುವ ಮೂಲಕ ಇಂಗ್ಲೆಂಡ್ ಹೊಸ ತಗಾದೆ ತೆಗೆದಿದೆ. ಹಾಗಾದರೆ, ಕೊರೊನಾ ಲಸಿಕೆ ಹಾಕಿಸಿಕೊಂಡ ಬಳಿಕ ನೀಡಲಾಗುವ ಕೊವಿಡ್ ಲಸಿಕೆಯ ಸರ್ಟಿಫಿಕೆಟ್ ಅಸಲಿಯಾ? ಅಥವಾ ನಕಲಿಯಾ? ಎಂಬುದನ್ನು ಪತ್ತೆ ಹಚ್ಚುವುದು ಹೇಗೆ?

ಭಾರತದಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ದೇಶದ ಬಹುತೇಕ ಮಂದಿ ಈಗಾಗಲೇ ಎರಡೂ ಡೋಸ್ ಲಸಿಕೆಗಳನ್ನು ಹಾಕಿಸಿಕೊಂಡಿದ್ದಾರೆ. ಬ್ಲಾಕ್​ ಮಾರ್ಕೆಟ್​ನಲ್ಲಿ ನಕಲಿ ಕೊವಿಡ್ ಲಸಿಕೆಯ ಪ್ರಮಾಣಪತ್ರಗಳನ್ನು ತಯಾರಿಸಲಾಗುತ್ತಿದೆ. ಹೀಗಾಗಿ, ಕೊರೊನಾ ಲಸಿಕೆ ಹಾಕಿಸಿಕೊಂಡ ಬಳಿಕ ನಮಗೆ ಸಿಕ್ಕಿರುವ ಸರ್ಟಿಫಿಕೇಟ್ ಅಸಲಿಯಾ, ನಕಲಿಯಾ ಎಂಬುದರ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.

ಕೊರೊನಾ ಲಸಿಕೆಯ ಸರ್ಟಿಫಿಕೆಟ್​ಗಳನ್ನು ಅಧಿಕೃತ ಆ್ಯಪ್ ಅಥವಾ ವೆಬ್​ಸೈಟ್ ಆಗಿರುವ ಕೋವಿನ್​ನಲ್ಲಿಯೇ (cowin.gov.in) ಡೌನ್​ಲೋಡ್ ಮಾಡಿಕೊಳ್ಳಿ. ನಿಮ್ಮ ಕೊವಿಡ್ ಸರ್ಟಿಫಿಕೆಟ್ ಅಸಲಿಯೇ ಎಂದು ಪರಿಶೀಲಿಸಿಲು ಮೊದಲು ಕೋವಿನ್ ವೆಬ್​​ಸೈಟ್​​ಗೆ ಭೇಟಿ ನೀಡಿ. ಅಲ್ಲಿ ವೇರಿಫೈ ವ್ಯಾಕ್ಸಿನೇಷನ್ ಸರ್ಟಿಫಿಕೆಟ್ ಎಂಬ ಹೊಸ ಟ್ಯಾಬ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಮೊಬೈಲ್​ನ ಕ್ಯಾಮೆರಾ ಓಪನ್ ಮಾಡಲು ಅನುಮತಿ ಕೇಳುತ್ತದೆ. ಅದಕ್ಕೆ ಓಕೆ ಎಂದು ಕ್ಲಿಕ್ ಮಾಡಿ.

ಆಗ ಮೊಬೈಲ್ ಕ್ಯಾಮೆರಾವನ್ನು ಕ್ಯೂಆರ್ ಕೋಡ್‌ನಲ್ಲಿ ಪೇಪರ್ ಅಥವಾ ಡಿಜಿಟಲ್ ಪ್ರಮಾಣಪತ್ರದಲ್ಲಿ ತೋರಿಸಿ ಮತ್ತು ಸ್ಕ್ಯಾನ್ ಮಾಡಿ. ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಸರ್ಟಿಫಿಕೇಟ್ ಅಸಲಿಯಾಗಿದ್ದರೆ ಸರ್ಟಿಫಿಕೆಟ್​ ಸಕ್ಸಸ್​ಫುಲಿ ವೇರಿಫೈಡ್ (Certificate Successfully Verified) ಎಂದು ಬರುತ್ತದೆ. ನಿಮ್ಮ ಪ್ರಮಾಣಪತ್ರ ನಕಲಿಯಾಗಿದ್ದರೆ ಸರ್ಟಿಫಿಕೆಟ್ ಇನ್​ವ್ಯಾಲಿಡ್ (Certificate Invalid) ಎಂದು ಬರುತ್ತದೆ. ಈ ಮೂಲಕ ಸುಲಭವಾಗಿ ನಿಮ್ಮ ಸರ್ಟಿಫಿಕೆಟ್ ಅಸಲಿಯೇ ಎಂದು ಪತ್ತೆ ಹಚ್ಚಬಹುದು.

ಆಸ್ಟ್ರಿಯಾ, ಬ್ರೆಜಿಲ್, ಲಾಟ್ವಿಯಾ, ಲಿಥುವೇನಿಯಾ, ಮಾಲ್ಟಾ, ಪೋರ್ಚುಗಲ್, ಸಿಂಗಾಪುರ, ಥೈಲ್ಯಾಂಡ್, ಯುಎಇ ಮುಂತಾದ ದೇಶಗಳಲ್ಲಿ ಭಾರತದ ಕೊವಿಡ್ ಸರ್ಟಿಫಿಕೆಟ್ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಈ ಬಗ್ಗೆ ಇಂಗ್ಲೆಂಡ್​ ಹೈ ಕಮಿಷನ್ ಭಾರತದಲ್ಲಿ ನೀಡಲಾಗಿರುವ ಕೋವಿಶೀಲ್ಡ್ ಲಸಿಕೆ ಬಗ್ಗೆ ನಮ್ಮ ಯಾವ ತಕರಾರೂ ಇಲ್ಲ. ಆದರೆ, ಭಾರತದ ಕೋವಿನ್ ಆ್ಯಪ್ ಹಾಗೂ ಕೊವಿಡ್ ಸರ್ಟಿಫಿಕೆಟ್​ಗಳಲ್ಲಿ ಸಮಸ್ಯೆ ಇದೆ ಎಂದು ಹೇಳಿತ್ತು.

ಇಂಗ್ಲೆಂಡ್​ನಲ್ಲಿ ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ ನೀಡದಿರುವುದಕ್ಕೆ ಭಾರತದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇಂಗ್ಲೆಂಡ್​ನಲ್ಲಿ ನೀಡಲಾಗುವ ಆಸ್ಟ್ರಾಜೆನಿಕಾ ಲಸಿಕೆಯ ಭಾರತದ ಆವೃತ್ತಿಯಾದ ಕೋವಿಶೀಲ್ಡ್‌ನ ಎರಡು ಡೋಸ್ ಪಡೆದಿದ್ದರೂ ಅವರಿಗೆ ಇನ್ನೂ ಲಸಿಕೆ ನೀಡಲಾಗಿಲ್ಲ ಎಂದು ಇಂಗ್ಲೆಂಡ್​ನಲ್ಲಿ ಪರಿಗಣಿಸಲಾಗುತ್ತಿತ್ತು. ಅಲ್ಲದೆ, ಕೋವಿಶೀಲ್ಡ್ ಲಸಿಕೆ ಪಡೆದವರಿಗೆ 10 ದಿನಗಳ ಕ್ವಾರಂಟೈನ್ ಕೂಡ ಕಡ್ಡಾಯವಾಗಿತ್ತು. ಕೋವಿಶೀಲ್ಡ್ ಅನ್ನೇ ಬ್ರಿಟನ್​ನಲ್ಲಿ ಅಸ್ಟ್ರಾಜೆನಿಕಾ ಲಸಿಕೆ ಎಂಬ ಹೆಸರಿನಲ್ಲಿ ನೀಡಲಾಗುತ್ತಿದೆ, ಆದರೂ ಕೋವಿಶೀಲ್ಡ್​ಗೆ ಮಾನ್ಯತೆ ನೀಡದಿರುವುದು ಭಾರತೀಯರ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ನಾವು ಕೋವಿಶೀಲ್ಡ್ ಲಸಿಕೆಯನ್ನು ಅನುಮೋದಿತ ಲಸಿಕೆ ಎಂದು ಸ್ವೀಕಾರ ಮಾಡುತ್ತೇವೆ. ಆದರೆ, ಈ ಲಸಿಕೆ ಹಾಕಿಸಿಕೊಂಡ ಭಾರತೀಯರು ಕ್ವಾರಂಟೈನ್ ಆಗಬೇಕಾದುದು ಕಡ್ಡಾಯ ಹಾಗೇ ಅವರಿಗೆ ಬ್ರಿಟನ್ ಏರ್​ಪೋರ್ಟ್​ನಲ್ಲಿ ಕೂಡ ಕೊವಿಡ್ ಟೆಸ್ಟ್ ಮಾಡಲಾಗುತ್ತದೆ. ಏಕೆಂದರೆ ನಾವು ಕೋವಿನ್ ಸರ್ಟಿಫಿಕೆಟ್ ಅನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಇಂಗ್ಲೆಂಡ್ ಸ್ಪಷ್ಟಪಡಿಸಿತ್ತು.

ಇದನ್ನೂ ಓದಿ: CoWIN Certificate | ಕೋವಿಶೀಲ್ಡ್ ಬಳಿಕ ಭಾರತದ ಕೊವಿಡ್ ಲಸಿಕೆಯ ಸರ್ಟಿಫಿಕೆಟ್ ಬಗ್ಗೆ ಇಂಗ್ಲೆಂಡ್ ತಗಾದೆ

ಇಂಗ್ಲೆಂಡ್​ನ ಅನುಮೋದಿತ ಲಸಿಕೆಗಳ ಪಟ್ಟಿಗೆ ಕೋವಿಶೀಲ್ಡ್ ಸೇರ್ಪಡೆ; ಭಾರತೀಯರಿಗೆ ಕ್ವಾರಂಟೈನ್ ಮಾತ್ರ ಕಡ್ಡಾಯ

(CoWIN How to check if your COVID-19 vaccination certificate is authentic or fake Check Here)

Published On - 8:50 pm, Fri, 24 September 21