Cyclone Biparjoy: ಗುರುವಾರ ಅಪ್ಪಳಿಸಲಿದೆ ಬಿಪೋರ್‌ಜಾಯ್ ಚಂಡಮಾರುತ; ಮುನ್ನೆಚ್ಚರಿಕೆಗಳೇನು?
ಭಾರತದಲ್ಲಿ ಗುಜರಾತ್‌ನ ಕರಾವಳಿಯ 5 ಕಿಮೀ ವ್ಯಾಪ್ತಿಯಲ್ಲಿ ವಾಸಿಸುವ ನಿವಾಸಿಗಳು ಸೇರಿದಂತೆ ತಗ್ಗು ಪ್ರದೇಶಗಳಿಂದ ಸಾವಿರಾರು ಜನರನ್ನು ಸ್ಥಳಾಂತರಿಸಲಾಯಿತು. ಅಗತ್ಯವಿದ್ದಲ್ಲಿ ಕರಾವಳಿಯ 10 ಕಿ.ಮೀ ವ್ಯಾಪ್ತಿಯಲ್ಲಿರುವವರನ್ನು ಮುಂದಿನ ಎರಡು ದಿನಗಳಲ್ಲಿ ಸ್ಥಳಾಂತರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಭಾರತ ಮತ್ತು ಪಾಕಿಸ್ತಾನದ (Pakistan) ಮೇಲೆ ಪ್ರಭಾವ ಬೀರುವ ಮೊದಲ ತೀವ್ರ ಚಂಡಮಾರುತ ಬಿಪೋರ್‌ಜಾಯ್ (Cyclone Biparjoy) ಈ ವಾರ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಅಧಿಕಾರಿಗಳು ಈಗಾಗಲೇ ಮೀನುಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದು, ಅಗತ್ಯ ಸ್ಥಳಗಲ್ಲಿ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸುತ್ತಿದ್ದಾರೆ. ಅದೇ ವೇಳೆ ಅಪಾಯದಲ್ಲಿರುವವರಿಗೆ ಸ್ಥಳಾಂತರಿಸುವ ಕಾರ್ಯವೂ ನಡೆಯುತ್ತಿದೆ. ಅರೇಬಿಯನ್ ಸಮುದ್ರದಿಂದ, ಬಿಪೋರ್‌ಜಾಯ್ ಚಂಡಮಾರುತವು ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯ ಮತ್ತು ಗುಜರಾತ್ ಕರಾವಳಿಗೆ ಬರಲಿದ್ದು ಇದು ಗುರುವಾರ ಅಪ್ಪಳಿಸಲಿದೆ. ಈ ಹೊತ್ತಲ್ಲಿ ಇದು ಗರಿಷ್ಠ ಗಾಳಿಯ ವೇಗ ಗಂಟೆಗೆ 150 ಕಿ.ಮೀ ಹೊಂದಿರುತ್ತದೆ. ಮಂಗಳವಾರ, ಭಾರತೀಯ ಹವಾಮಾನ ಇಲಾಖೆ (IMD) ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಕರಾವಳಿಗೆ ಆರೆಂಜ್ ಅಲರ್ಟ್ ನೀಡಿದ್ದು, ಜೂನ್ 15 ರ ಸಂಜೆಯ ವೇಳೆಗೆ ಬಿಪೋರ್‌ಜಾಯ್ ಗುಜರಾತ್‌ನ ಜಖೌ ಬಂದರನ್ನು ಅತಿ ತೀವ್ರ ಸೈಕ್ಲೋನಿಕ್ ಸ್ಟಾರ್ಮ್ (VSCS)ಆಗಿ ದಾಟಲಿದೆ ಎಂದು ಹೇಳಿದೆ.
ಕಳೆದ ವಾರವಷ್ಟೇ ಕಡಿಮೆ ಒತ್ತಡದ ಪ್ರದೇಶದಿಂದ ಹುಟ್ಟಿಕೊಂಡ ಬಿಪೋರ್‌ಜಾಯ್ ಮತ್ತೆ ತೀವ್ರತೆ ಪಡೆದುಕೊಂಡಿತ್ತು. ಅಂದಹಾಗೆ ಇತ್ತೀಚಿನ ದಶಕಗಳಲ್ಲಿ ಭಾರತದ ಮೇಲೆ ಪರಿಣಾಮ ಬೀರುವ ಅತ್ಯಂತ ಚಂಡಮಾರುತಗಳಲ್ಲಿ ಇದು ಒಂದಾಗಿದೆ. ಬಿಪೋರ್‌ಜಾಯ್ ಅಪ್ಪಳಿಸಿದರೆ ಇದು ಹೆಚ್ಚಿನ ಆಪತ್ತು ಉಂಟು ಮಾಡುವ ಸಾಧ್ಯತೆ ಇದೆ ಎಂದು weather.com ವರದಿ ಮಾಡಿದೆ.
ಅಪ್ಪಳಿಸುವುದು ಅಂದರೆ?
ಚಂಡಮಾರುತದ ನೀರಿನ ನಂತರ ಭೂಮಿಗೆ ಚಲಿಸಿದಾಗ ಉಂಟಾಗುವ ಪ್ರಕ್ರಿಯೆಯೇ ಇದು. ಚಂಡಮಾರುತ ಅಪ್ಪಳಿಸುವ ಗಂಟೆಗಳ ಮೊದಲು ಮಳೆ ಮತ್ತು ಧೂಳಿನ ಬಿರುಗಾಳಿ ಎಬ್ಬಿಸುತ್ತದೆ. ಹೀಗೆ ಅಪ್ಪಳಿಸಿದಾಗ ಭಾರೀ ಗಾಳಿ,ಜೋರು ಮಳೆ, ಸಮುದ್ರ ಮಟ್ಟವನ್ನು ಹೆಚ್ಚಳವಾಗುವುದರಿಂದ ಸಮುದ್ರ ಪ್ರದೇಶ, ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ಅಪಾಯವನ್ನುಂಟು ಮಾಡುತ್ತದೆ.
ಬಿಪೋರ್‌ಜಾಯ್ ಚಂಡಮಾರುತ ಎಲ್ಲಿ ಅಪ್ಪಳಿಸಲಿದೆ?
ಅತ್ಯಂತ ತೀವ್ರವಾದ ಚಂಡಮಾರುತ ಎಂದು ವರ್ಗೀಕರಿಸಲಾದ ಬಿಪೋರ್‌ಜಾಯ್ ಗುರುವಾರ ಸಂಜೆ ಗುಜರಾತ್‌ನ ಮಾಂಡ್ವಿ ಮತ್ತು ಪಾಕಿಸ್ತಾನದ ಕರಾಚಿ ನಡುವೆ ಅಪ್ಪಳಿಸುವ ನಿರೀಕ್ಷೆ ಇದೆ. ಈ ಹೊತ್ತಲ್ಲಿ ಇದು ಗರಿಷ್ಠ 125-135 ಕಿಮೀ ವೇಗದಿಂದ ಹಿಡಿದು 150 ಕಿಮೀ ವೇಗದ ಗಾಳಿ ಬೀಸಲಿದೆ ಎಂದು ಐಎಂಡಿ ಹೇಳಿದೆ.
Cyclone Warning for Saurashtra and Kutch Coasts: Orange Message. VSCS BIPARJOY at 1130IST of today about 290km WSW of Devbhumi Dwarka, 320km WSW of Porbandar, 320km SW of Jakhau Port, 330km SW of Naliya. To cross near Jakhau Port (Gujarat) AROUND evening of 15th June as VSCS. pic.twitter.com/jKpCJw1g1b
— India Meteorological Department (@Indiametdept) June 13, 2023
ಜೂನ್ 15 ರಂದು, ಗುಜರಾತ್‌ನ ದ್ವಾರಕಾ, ಜಾಮ್‌ನಗರ, ಕಚ್ ಮತ್ತು ಮೊರ್ಬಿ ಜಿಲ್ಲೆಗಳಲ್ಲಿ ಗಾಳಿಯ ವೇಗ ಗಂಟೆಗೆ 125-135 ಕಿಮೀ ಮತ್ತು ಗಂಟೆಗೆ 150 ಕಿಮೀ ವೇಗದಲ್ಲಿ ಬೀಸುತ್ತದೆ, ಇದು ವ್ಯಾಪಕ ಹಾನಿಯುಂಟುಮಾಡುವ ಸಾಮರ್ಥ್ಯ ಹೊಂದಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಪೋರಬಂದರ್, ದೇವಭೂಮಿ ದ್ವಾರಕಾ ಜಿಲ್ಲೆಗಳಲ್ಲಿ ಕಚ್‌ವರೆಗಿನ ಗಾಳಿಯ ವೇಗ ಬುಧವಾರ ಗಂಟೆಗೆ 65-75 ಕಿಮೀ ವೇಗದಲ್ಲಿ ಏರಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:Cyclone Biporjoy: ರಾಜ್ಯದಲ್ಲಿ ಬಿಪರ್ ಜಾಯ್ ಚಂಡಮಾರುತ ಆರ್ಭಟ; ಕರಾವಳಿಯಲ್ಲಿ ಆತಂಕ
ಪರಿಣಾಮ ಬೀರುವ ಸ್ಥಳಗಳು
ಅರೇಬಿಯನ್ ಸಮುದ್ರದಲ್ಲಿ ಅಲೆಗಳು ಅಬ್ಬರ, ಭಾರೀ ಮಳೆ ಮತ್ತು ರಭಸದ ಗಾಳಿಯೊಂದಿಗೆ ಗುಜರಾತಿನ ಕರಾವಳಿ ಪ್ರದೇಶಗಳಲ್ಲಿನ ಮಳೆ ಗಾಳಿ ಮರಗಳನ್ನು ಬುಡಮೇಲು ಮಾಡಿದೆ. ಗೋಡೆ ಕುಸಿದು ರಾಜ್ಯದ ಕಚ್ ಮತ್ತು ರಾಜ್‌ಕೋಟ್ ಜಿಲ್ಲೆಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ ಚಂಡಮಾರುತ ಗುಜರಾತ್ ಕರಾವಳಿಯ ಎಂಟು ಜಿಲ್ಲೆಗಳು ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಚಂಡಮಾರುತವು ಜೂನ್ 15 ರಂದು ಕಚ್, ದೇವಭೂಮಿ ದ್ವಾರಕಾ ಮತ್ತು ಜಾಮ್‌ನಗರ್ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ (20 cm ಗಿಂತ ಹೆಚ್ಚು) ಅತ್ಯಂತ ಭಾರೀ ಮಳೆಗೆ ಕಾರಣವಾಗಬಹುದು. ಪೋರಬಂದರ್, ರಾಜ್‌ಕೋಟ್, ಮೋರ್ಬಿ ಮತ್ತು ಜುನಾಗಢ್‌ಗಳಲ್ಲಿ ಭಾರೀ ಮಳೆಯಾಗಬಹುದು. ಈ ಜಿಲ್ಲೆಗಳಲ್ಲಿ 145 ಕಿಮೀ ವೇಗದ ಗಾಳಿ ಬೀಸುವ ಮುನ್ಸೂಚನೆ ಇದೆ.
ಆರು ಮೀಟರ್ ಎತ್ತರಕ್ಕೆ ತಲುಪುವ ಉಬ್ಬರವಿಳಿತದ ಅಲೆಗಳು ಸೌರಾಷ್ಟ್ರ ಮತ್ತು ಕಚ್‌ನ ತಗ್ಗು ಪ್ರದೇಶದ ಕರಾವಳಿ ಪ್ರದೇಶಗಳನ್ನು ಮುಳುಗಿಸಬಹುದು. ಸ್ಥಳಾಂತರಿಸುವ ಕ್ರಮಗಳನ್ನು ಶಿಫಾರಸು ಮಾಡಲಾಗಿದೆ. ಅಧಿಕಾರಿಗಳು ತ್ವರಿತ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಮೊಹಾಪಾತ್ರ ಹೇಳಿದರು.
ಇದನ್ನೂ ಓದಿ: ಬಿಪೋರ್‌ಜಾಯ್ ಚಂಡಮಾರುತ: ವಿಪತ್ತು ನಿರ್ವಹಣೆಗಾಗಿ ಮೂರು ಯೋಜನೆ ಘೋಷಿಸಿದ ಅಮಿತ್ ಶಾ
ಬಿಪೋರ್‌ಜಾಯ್ ಚಂಡಮಾರುತಕ್ಕೆ ಭಾರತ ಮತ್ತು ಪಾಕಿಸ್ತಾನ ಹೇಗೆ ಸಿದ್ಧತೆ ನಡೆಸುತ್ತಿವೆ?
ಭಾರತದಲ್ಲಿ ಗುಜರಾತ್‌ನ ಕರಾವಳಿಯ 5 ಕಿಮೀ ವ್ಯಾಪ್ತಿಯಲ್ಲಿ ವಾಸಿಸುವ ನಿವಾಸಿಗಳು ಸೇರಿದಂತೆ ತಗ್ಗು ಪ್ರದೇಶಗಳಿಂದ ಸಾವಿರಾರು ಜನರನ್ನು ಸ್ಥಳಾಂತರಿಸಲಾಯಿತು. ಅಗತ್ಯವಿದ್ದಲ್ಲಿ ಕರಾವಳಿಯ 10 ಕಿ.ಮೀ ವ್ಯಾಪ್ತಿಯಲ್ಲಿರುವವರನ್ನು ಮುಂದಿನ ಎರಡು ದಿನಗಳಲ್ಲಿ ಸ್ಥಳಾಂತರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾವು ಗುಜರಾತ್‌ನ ಕರಾವಳಿ ಜಿಲ್ಲೆಗಳಿಂದ 20,580 ಜನರನ್ನು ಸ್ಥಳಾಂತರಿಸಿದ್ದೇವೆ. ಅವರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಿದ್ದೇವೆ, ಅಲ್ಲಿ ಅವರಿಗೆ ಆಹಾರ, ಕುಡಿಯುವ ನೀರು ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಲಾಗುವುದು” ಎಂದು ಗುಜರಾತ್ ರಾಜ್ಯ ಸರ್ಕಾರದ ಪರಿಹಾರ ನಿರ್ದೇಶಕ ಸಿಸಿ ಪಟೇಲ್ ಹೇಳಿದ್ದಾರೆ.
ಪರಿಣಾಮ ಬೀರುವ ಪ್ರದೇಶಗಳಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ಮೀನುಗಾರಿಕೆ ಕಾರ್ಯಾಚರಣೆಯನ್ನು ಶುಕ್ರವಾರದವರೆಗೆ ಸ್ಥಗಿತಗೊಳಿಸಲಾಗಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಗುಜರಾತ್ ಸರ್ಕಾರದ ಪ್ರಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 21 ತಂಡಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ 13 ತಂಡಗಳನ್ನು ರಕ್ಷಣಾ ಕಾರ್ಯಕ್ಕಾಗಿ ರಾಜ್ಯದಲ್ಲಿ ನಿಯೋಜಿಸಲಾಗಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವದ ಅತಿದೊಡ್ಡ ಸಂಸ್ಕರಣಾ ಸಂಕೀರ್ಣವನ್ನು ನಿರ್ವಹಿಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್, ಚಂಡಮಾರುತದಿಂದಾಗಿ ಗುಜರಾತ್‌ನ ಸಿಕ್ಕಾ ಬಂದರಿನಿಂದ ಡೀಸೆಲ್ ಮತ್ತು ಇತರ ತೈಲ ಉತ್ಪನ್ನಗಳ ರಫ್ತನ್ನು ಸ್ಥಗಿತಗೊಳಿಸಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಅದಾನಿ ಸಮೂಹದ ಬಂದರುಗಳ ವ್ಯಾಪಾರ, ಅದಾನಿ ಪೋರ್ಟ್ಸ್, ದೇಶದ ಅತಿದೊಡ್ಡ ಕಲ್ಲಿದ್ದಲು ಆಮದು ಟರ್ಮಿನಲ್ ಹೊಂದಿರುವ ಭಾರತದ ಅತಿದೊಡ್ಡ ವಾಣಿಜ್ಯ ಬಂದರು ಮುಂದ್ರಾದಲ್ಲಿ ಮತ್ತು ಕಾಂಡ್ಲಾ ಬಳಿಯ ಟ್ಯೂನಾ ಬಂದರಿನಲ್ಲಿ ಸೋಮವಾರ ಹಡಗು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ಹೇಳಿದೆ. ದುಬೈ ಮೂಲದ ಶೆಲ್ಫ್ ಡ್ರಿಲ್ಲಿಂಗ್ ಒಡೆತನದ ಕೀ ಸಿಂಗಾಪುರ್ ಎಂಬ ಹೆಸರಿನ ಗುಜರಾತ್ ಕರಾವಳಿಯ ಜ್ಯಾಕ್-ಅಪ್ ತೈಲ ರಿಗ್‌ನಿಂದ 50 ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ಹೇಳಿದೆ.
ಪಾಕಿಸ್ತಾನದಲ್ಲಿ, ಪರಿಣಾಮ ಬೀರಬಹುದಾದ ದಕ್ಷಿಣ ಮತ್ತು ಆಗ್ನೇಯ ಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Tue, 13 June 23