AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಲಾಕ್​ಡೌನ್ ಜಾರಿ; ಸುಪ್ರೀಂ ಕೋರ್ಟ್​ಗೆ ಇಂದು ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಕೆ

Delhi Air Pollution: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟಲು ಲಾಕ್‌ಡೌನ್ ಹೇರುವ ಸಾಧ್ಯತೆ ಕುರಿತು ಇಂದು ದೆಹಲಿ ಸರ್ಕಾರದ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ಆಲಿಸಲಿದೆ.

ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಲಾಕ್​ಡೌನ್ ಜಾರಿ; ಸುಪ್ರೀಂ ಕೋರ್ಟ್​ಗೆ ಇಂದು ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಕೆ
ದೆಹಲಿ ವಾಯುಮಾಲಿನ್ಯದ ಚಿತ್ರಣ
TV9 Web
| Edited By: |

Updated on:Nov 15, 2021 | 10:12 AM

Share

ನವದೆಹಲಿ: ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಲಾಕ್‌ಡೌನ್ ಹೇರುವ ಮತ್ತು ಅದರ ವಿಧಾನಗಳ ಕುರಿತು ಇಂದು ಸುಪ್ರೀಂ ಕೋರ್ಟ್‌ಗೆ ಪ್ರಸ್ತಾವನೆಯನ್ನು ಸಲ್ಲಿಸಲಿದೆ. ದೆಹಲಿಯ ವಾಯುಮಾಲಿನ್ಯದ ಕುರಿತು ಶನಿವಾರ ತುರ್ತು ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಅಗತ್ಯವಿದ್ದರೆ ದೆಹಲಿಯಲ್ಲಿ 2 ದಿನಗಳ ಲಾಕ್​ಡೌನ್ ಮಾಡಿ ದೆಹಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ದೆಹಲಿಯಲ್ಲಿನ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಕೇಳಿದ ಕೆಲವು ದಿನಗಳ ನಂತರ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ವಾಹನಗಳನ್ನು ನಿಲ್ಲಿಸುವುದು ಮತ್ತು ಲಾಕ್‌ಡೌನ್ ಜಾರಿಗೊಳಿಸಲು ಸೂಚಿಸಿದ ಬೆನ್ನಲ್ಲೇ ಇಂದು ದೆಹಲಿ ಸರ್ಕಾರದ ಸುಪ್ರೀಂ ಕೋರ್ಟ್​ಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಿದೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ದೆಹಲಿಯ ಗಾಳಿಯ ಗುಣಮಟ್ಟವು ಪ್ರತಿವರ್ಷ ಅಪಾಯಕಾರಿ ಮಟ್ಟ ತಲುಪುತ್ತದೆ. ದೆಹಲಿಯ ಸುತ್ತಲಿನ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನದಲ್ಲಿ ಗೋಧಿ ಬೆಳೆದ ನಂತರ ಹುಲ್ಲುಗಳನ್ನು ಸುಡುವುದರಿಂದ, ಸಾರಿಗೆಯಿಂದ ಹೊರಸೂಸುವಿಕೆ, ಇತರ ಕೈಗಾರಿಕೆಗಳ ಹೊರಗಿನ ಕಲ್ಲಿದ್ದಲು ಸ್ಥಾವರಗಳು, ತೆರೆದ ಜಾಗದಲ್ಲಿ ಕಸವನ್ನು ಸುಡುವುದು ಮತ್ತು ಧೂಳಿನಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ.

ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟಲು ಲಾಕ್‌ಡೌನ್ ಹೇರುವ ಸಾಧ್ಯತೆ ಕುರಿತು ಇಂದು ದೆಹಲಿ ಸರ್ಕಾರದ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ಆಲಿಸಲಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯದ ಹೆಚ್ಚಳವನ್ನು ತುರ್ತು ಪರಿಸ್ಥಿತಿ ಎಂದು ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿತ್ತು. ಹರಿಯಾಣ ಮತ್ತು ಪಂಜಾಬ್‌ನಲ್ಲಿನ ಕೃಷಿ ಬೆಂಕಿಯಿಂದ ಹೊರಸೂಸುವಿಕೆ ಗಣನೀಯವಾಗಿ ಕುಸಿದಿದ್ದರಿಂದ ದೆಹಲಿಯು ಭಾನುವಾರದಂದು 437ಕ್ಕೆ ಹೋಲಿಸಿದರೆ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 330 ದಾಖಲಾಗಿದೆ.

ಮಾಲಿನ್ಯ ತಡೆಗೆ ಇದುವರೆಗೆ ಕೈಗೊಂಡಿರುವ ಕ್ರಮಗಳನ್ನು ಹಂಚಿಕೊಳ್ಳುವಂತೆಯೂ ಸುಪ್ರೀಂ ಕೋರ್ಟ್ ಕೇಂದ್ರವನ್ನು ಕೇಳಿತ್ತು. ಸಾಮಾನ್ಯವಾಗಿ 51 ಮತ್ತು 100ರ ನಡುವಿನ AQI ಅನ್ನು ‘ತೃಪ್ತಿದಾಯಕ’ ಎಂದು ಪರಿಗಣಿಸಲಾಗುತ್ತದೆ. 101-200 ‘ಮಧ್ಯಮ’, 201-300 ‘ಕಳಪೆ’ ವರ್ಗದ ಅಡಿಯಲ್ಲಿ ಬರುತ್ತದೆ. 300-400 ಅನ್ನು ‘ಅತ್ಯಂತ ಕಳಪೆ’ ಎಂದು ಪರಿಗಣಿಸಿದರೆ, 401-500 ನಡುವಿನ ಮಟ್ಟಗಳು ‘ಅಪಾಯಕಾರಿ’ ವರ್ಗಕ್ಕೆ ಸೇರುತ್ತವೆ.

ಶನಿವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಶಾಲೆಗಳನ್ನು ಸೋಮವಾರದಿಂದ ಒಂದು ವಾರದವರೆಗೆ ಮುಚ್ಚಲಾಗುವುದು ಎಂದು ಘೋಷಿಸಿದ್ದರು. ಮಕ್ಕಳು ಕಲುಷಿತ ಗಾಳಿಯನ್ನು ಉಸಿರಾಡದಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಜ್ರಿವಾಲ್ ಸಚಿವಾಲಯದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ತಿಳಿಸಿದ್ದರು. ಹಾಗೇ, ಇಂದಿನಿಂದ ದೆಹಲಿಯ ಎಲ್ಲಾ ಸರ್ಕಾರಿ ಕಚೇರಿಗಳ ಕೆಲಸಗಳನ್ನು ಮನೆಯಿಂದಲೇ ಮಾಡಲು ಕೇಜ್ರಿವಾಲ್ ಸೂಚಿಸಿದ್ದರು. ಜೊತೆಗೆ, ನವೆಂಬರ್ 17ರವರೆಗೆ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಿತ್ತು.

ಇದನ್ನೂ ಓದಿ: ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ; ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಪಂದ್ಯಗಳು ಸ್ಥಳಾಂತರ?

Air Pollution: ಕಲುಷಿತವಾಗುತ್ತಿದೆ ಪ್ರಾಣವಾಯು; ಅತಿ ಹೆಚ್ಚು ವಾಯು ಮಾಲಿನ್ಯವಿರುವ ಭಾರತದ ಟಾಪ್ 10 ನಗರಗಳಿವು

Published On - 10:08 am, Mon, 15 November 21