ಬದಲಾಗುತ್ತಿರುವ ಸಮಾಜದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅವ್ಯಕತೆಯಿದೆ ಎಂದ ದೆಹಲಿ ಹೈಕೋರ್ಟ್​: ಮೂಲಗಳು

ಕಳೆದ ವರ್ಷ ಮಾರ್ಚ್​ನಲ್ಲಿ ಸರ್ವೋಚ್ಛ ನ್ಯಾಯಾಲಯವು ಧರ್ಮ-ತಟಸ್ಥ ಬಾಧ್ಯಸ್ಥಿಕೆ ಮತ್ತು ಆಸ್ತಿ ವಾರಸುದಾರಿಕೆ ಸಂಬಂಧಿಸಿದಂತೆ ಕಾನೂನು ರಚಿಸುವ ಕುರಿತು ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು. ಸುಪ್ರೀಮ್ ಕೋರ್ಟ್​ನಲ್ಲಿ ವಕೀಲ ಮತ್ತು ಬಿಜೆಪಿಯ ಸದಸ್ಯರೂ ಆಗಿರುವ ಅಶ್ವಿನ ಉಪಾಧ್ಯಾಯ ಅಂಥ ಐದು ಮನವಿಗಳನ್ನು ನ್ಯಾಯಲಯಕ್ಕೆ ದಾಖಲಿಸುವಲ್ಲಿ ಸಫಲರಾಗಿದ್ದರು

ಬದಲಾಗುತ್ತಿರುವ ಸಮಾಜದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅವ್ಯಕತೆಯಿದೆ ಎಂದ ದೆಹಲಿ ಹೈಕೋರ್ಟ್​: ಮೂಲಗಳು
ಏಕರೂಪ ನಾಗರಿಕ ಸಂಹಿತೆ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 09, 2021 | 9:30 PM

ನವದೆಹಲಿ:  ಭಾರತದಲ್ಲಿ ಸಮಾನ ನಾಗರಿಕ ಸಂಹಿತೆಯ (ಯುಸಿಸಿ) ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ದೆಹಲಿ ಹೈಕೋರ್ಟ್, ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ ಎಂದು ಕೋರ್ಟ್​ ಕಲಾಪಗಳ ಮಾಹಿತಿ ಹೊಂದಿರುವ ಮೂಲಗಳು ಶುಕ್ರವಾರ ತಿಳಿಸಿವೆ. ಭಾರತದ ಆಧುನಿಕ ಸಮಾಜವು ಧಾರ್ಮಿಕ, ಸಮುದಾಯ. ಮತ್ತು ಜಾತಿ ಮೊದಲಾದ ಪಾರಂಪರಿಕ ತಡೆಗೋಡೆಗಳನ್ನು ಹಿಮ್ಮೆಟ್ಟಿ ಒಂದು ಏಕರೂಪದ ಸಮಾಜವಾಗಿ ಮಾರ್ಪಡುತ್ತಿದೆ. ಇಂಥ ಬದಲಾಗುತ್ತಿರುವ ಚಿತ್ರಣದ ಹಿನ್ನೆಲೆಯಲ್ಲೇ ದೇಶಕ್ಕೆ ಒಂದು ಏಕರೂಪ ನಾಗರಿಕ ಸಂಹಿತೆಯ ಅವಶ್ಯಕತೆಯಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮೀನಾ ಸಮುದಾಯಕ್ಕೆ ಸೇರಿದ ದಾವೆದಾರರಿಗೆ ಹಿಂದೂ ವಿವಾಹ ಕಾಯ್ದೆ 1955 ಅನ್ವಯವಾಗುತ್ತಾ ಎನ್ನುವ ಮನವಿಯೊಂದಕ್ಕೆ ಸಂಬಂಧಿಸಿದಂತೆ ಜುಲೈ 7 ರಂದು ನ್ಯಾಯಮೂರ್ತಿ ಪ್ರತಿಭಾ ಎಮ್ ಸಿಂಗ್ ಅವರು ತೀರ್ಪೊಂದನ್ನು ನೀಡಿದ್ದರು.

ವೈಯಕ್ತಿಕ ಕಾನೂನುಗಳಲ್ಲಿ ಉದ್ಭವಿಸುವ ಸಂಘರ್ಷಗಳು ಸತತವಾಗಿ ನ್ಯಾಯಾಲಯಗಳಲ್ಲಿ ದಾಖಲಾಗುತ್ತಿವೆ ಎನ್ನುವುದನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಸಿಂಗ್ ಅವರು, ಬೇರೆ ಬೇರೆ ಸಮುದಾಯ, ಜಾತಿ, ಧರ್ಮಗಳಿಗೆ ಸೇರಿದ ಜನರು ವೈವಾಹಿಕ ಕಟ್ಟಳೆಗಳನ್ನು ಮೀರಿದಾಗ ಇಂಥ ಸಂಘರ್ಷಗಳನ್ನು ಎದುರಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

‘ವಿವಿಧ ಸಮುದಾಯ, ಪಂಗಡ, ಜಾತಿ ಮತ್ತು ಧರ್ಮಗಳಿಗೆ ಸೇರಿದ ಯುವಕ/ಯುವತಿಯರು ತಮ್ಮ ಇಚ್ಛಾನುಸಾರ ಮದುವೆ ಮಾಡಿಕೊಂಡಾಗ ವೈಯಕ್ತಿಕ ಕಾನೂನುಗಳಿಗೆ ಅದರಲ್ಲೂ ವಿಶೇಷವಾಗಿ ಮದುವೆ ಮತ್ತು ಡಿವೋರ್ಸ್​ಗಳಿಗೆ ಸಂಬಂಧಿಸಿದಂತೆ ಯಾವುದೇ ಸಂಘರ್ಷಕ್ಕೆ ಒಳಗಾಗಬಾರದು,’ ಎಂದು ನಾಯಮೂರ್ತಿ ಸಿಂಗ್ ಹೇಳಿದರು.

ಸಂವಿಧಾನದ 44ನೇ ವಿಧಿಯನುಸಾರ ಪರಿಕಲ್ಪನೆ ಮಾಡಿಕೊಂಡಿರುವ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸುಪ್ರೀಮ್ ಕೋರ್ಟ್​ ಪದೆ ಪದೇ ಹೇಳುತ್ತಿದೆ. ಇಂಥ ನಾಗರಿಕ ಸಂಹಿತೆಯು ಎಲ್ಲರಿಗೆ ಸಮಾನವಾಗಿರಬೇಕು ಮತ್ತು ಮದುವೆ ಡಿವೋರ್ಸ್, ಆಸ್ತಿ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಏಕರೂಪದ ತತ್ವಗಳು ಎಲ್ಲ ಭಾರತೀಯರಿಗೆ ಅನ್ವಯಿಸುವಂತಿರಬೇಕು ಎಂದು ಅವರು ಹೇಳಿದರು.

ಕಳೆದ ವರ್ಷ ಮಾರ್ಚ್​ನಲ್ಲಿ ಸರ್ವೋಚ್ಛ ನ್ಯಾಯಾಲಯವು ಧರ್ಮ-ತಟಸ್ಥ ಬಾಧ್ಯಸ್ಥಿಕೆ ಮತ್ತು ಆಸ್ತಿ ವಾರಸುದಾರಿಕೆ ಸಂಬಂಧಿಸಿದಂತೆ ಕಾನೂನು ರಚಿಸುವ ಕುರಿತು ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು. ಸುಪ್ರೀಮ್ ಕೋರ್ಟ್​ನಲ್ಲಿ ವಕೀಲ ಮತ್ತು ಬಿಜೆಪಿಯ ಸದಸ್ಯರೂ ಆಗಿರುವ ಅಶ್ವಿನ ಉಪಾಧ್ಯಾಯ ಅಂಥ ಐದು ಮನವಿಗಳನ್ನು ನ್ಯಾಯಲಯಕ್ಕೆ ದಾಖಲಿಸುವಲ್ಲಿ ಸಫಲರಾಗಿದ್ದರು. ಈ ಬೆಳವಣಿಗೆಯನ್ನು ಸಮಾನ ನಾಗರಿಕ ಸಂಹಿತೆಗೆ ತಳಹದಿ ಎಂದು ಭಾವಿಸಲಾಗಿದೆ.

ಯಸಿಸಿಯು, ವೈಯಕ್ತಿಕ ವಿಷಯಗಳಾದ ಮದುವೆ ಡಿವೋರ್ಸ್, ದತ್ತು ಪಡೆಯುವುದು, ಪಿತ್ರಾರ್ಜಿತ ಬಾಧ್ಯತೆ, ಹಕ್ಕುದಾರಿಕೆ ಮೊದಲಾದವುಗಳಿಗೆ ಸಂಬಂಧಿಸಿದ ಭಾರತದ ಪ್ರತಿಯೊಂದು ಜಾತಿ, ಧರ್ಮ, ಪಂಗಡಗಳಿಗೆ ಸೇರಿದ ಪ್ರತಿಯೊಬ್ಬ ನಾಗರಿಕರಿಗೆ ಸಮಾನವಾಗಿ ಅನ್ವಯವಾಗುವ ಕಾನೂನುಗಳ ಸೆಟ್​ ಆಗಿದೆ. ಪ್ರಸ್ತುತವಾಗಿ ಭಾರತದಲ್ಲಿ ಪ್ರತಿಯೊಂದು ಧರ್ಮ, ಜಾತಿ,ಪಂಗಡಗಳಿಗೆ ಅವುಗಳದ್ದೇ ಆದ ಕಟ್ಟಳೆಗಳಿವೆ. ಯುಸಿಸಿ ಜಾರಿಗೆ ಬಂದರೆ ವಿವಿಧ ಬಗೆಯ ಪರ್ಸೊನಲ್ ಲಾ ಗಳು ಇಲ್ಲವಾಗುತ್ತವೆ.

ಈ ಲಾಗಳಲ್ಲಿ ಹಿಂದೂ ವಿವಾಹ ಕಾಯ್ದೆ, ಹಿಂದೂ ಉತ್ತರಾಧಿಕಾರದ ಕಾಯ್ದೆ, ಭಾರತೀಯ ಕ್ರಿಶ್ಚಿಯನ್ ಮದುವೆ ಕಾಯ್ದೆ, ಭಾರತೀಯ ಡಿವೋರ್ಸ್ ಕಾಯ್ದೆ, ಪಾರ್ಸಿ ಮದುವೆ ಮತ್ತು ಡಿವೋರ್ಸ್ ಕಾಯ್ದೆ ಸೇರಿವೆ. ಆದರೆ ಮುಸ್ಲಿಂ ಪರ್ಸೊನಲ್ ಕಾಯ್ದೆಗಳು ಧಾರ್ಮಿಕ ಕಟ್ಟಳೆಗಳು ಈ ಕಾಯ್ದೆಗಳೊಂದಿಗೆ ಸೇರ್ಪಡೆಯಾಗುವುದಿಲ್ಲ, ಅವು ಧಾರ್ಮಿಕ ಕಟ್ಟಳೆಗಳನ್ನು ಆಧರಿಸಿವೆ. ಅವುಗಳಲ್ಲಿ ಕೆಲವು ಕಾಯ್ದೆಗಳನ್ನು ಸ್ಪಷ್ಟವಾಗಿ ಶರಿಯತ್ ಅರ್ಜಿ ಕಾಯ್ದೆ ಮತ್ತು ಡಿಸ್ಸೊಲುಶನ್ ಆಫ್ ಮುಸ್ಲಿಂ ಮ್ಯಾರೇಜಸ್ ಕಾಯ್ದೆ ಮೂಲಕ ಗುರುತಿಸಲಾಗುತ್ತದೆ.

ಇದನ್ನೂ ಓದಿ: ಬುದ್ಧಿಜೀವಿಗಳೇ ಗೋವಾಕ್ಕೆ ಬನ್ನಿ, ಏಕರೂಪ ನಾಗರಿಕ ಸಂಹಿತೆ ಇಲ್ಲಿ ಹೇಗೆ ಕೆಲಸ ಮಾಡುತ್ತೆ ನೋಡಿ: ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಕರೆ

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ