ಕೆಂಪು ಕೋಟೆ ನನ್ನದು, ನಾನೇ ಉತ್ತರಾಧಿಕಾರಿ ಎಂದು ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದ ಮಹಿಳೆ; ನ್ಯಾಯಾಧೀಶರು ಹೇಳಿದ್ದೇನು?

ದೆಹಲಿಯಲ್ಲಿರುವ ಕೆಂಪುಕೋಟೆಯನ್ನು 1857ರಲ್ಲಿ ಬ್ರಿಟಿಷ್​ ಈಸ್ಟ್ ಇಂಡಿಯಾ ಕಂಪನಿ  ಅಕ್ರಮವಾಗಿ ವಶಪಡಿಸಿಕೊಂಡಿದ್ದರು. ಕಾನೂನು ಪ್ರಕಾರ ನಾನು ಅದರ ಉತ್ತರಾಧಿಕಾರಿ ಎಂದು ಸುಲ್ತಾನಾ ಬೇಗಂ ಅರ್ಜಿ ಯಲ್ಲಿ ಹೇಳಿದ್ದರು.

ಕೆಂಪು ಕೋಟೆ ನನ್ನದು, ನಾನೇ ಉತ್ತರಾಧಿಕಾರಿ ಎಂದು ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದ ಮಹಿಳೆ; ನ್ಯಾಯಾಧೀಶರು ಹೇಳಿದ್ದೇನು?
ಕೆಂಪು ಕೋಟೆ
Follow us
TV9 Web
| Updated By: Lakshmi Hegde

Updated on: Dec 21, 2021 | 4:18 PM

ದೆಹಲಿಯಲ್ಲಿರುವ ಕೆಂಪು ಕೋಟೆ (Red Fort) ನನ್ನದು. ಕಾನೂನು ಪ್ರಕಾರ ನಾನೇ ಅದರ ಉತ್ತರಾಧಿಕಾರಿ ಎಂದು ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ (Delhi High Court) ಸೋಮವಾರ ವಜಾಗೊಳಿಸಿದೆ. ಅಂದಹಾಗೆ ಈ ಅರ್ಜಿಯನ್ನು ಸಲ್ಲಿಸಿದವರ ಹೆಸರು ಸುಲ್ತಾನಾ ಬೇಗಂ. ಮೊಘಲ್​ ರಾಜ ಬಹದ್ದೂರ್ ಶಾ ಜಾಫರ್-II ರ ಮೊಮ್ಮಗ ದಿವಂಗತ ಮಿರ್ಜಾ ಮೊಹಮ್ಮದ್ ಬೇಡರ್ ಬಖ್ತ್​ರ ಪತ್ನಿ. ನನ್ನ ಪತಿ ಬೇಡರ್​ ಬಖ್ತ್​ 1980 ರ ಮೇ 22ರಲ್ಲಿ ಮೃತಪಟ್ಟಿದ್ದಾರೆ ಎಂದು ಇವರು ಅರ್ಜಿಯಲ್ಲಿ ತಿಳಿಸಿದ್ದರು.  

ಇದೀಗ ದೆಹಲಿಯಲ್ಲಿರುವ ಕೆಂಪುಕೋಟೆಯನ್ನು 1857ರಲ್ಲಿ ಬ್ರಿಟಿಷ್​ ಈಸ್ಟ್ ಇಂಡಿಯಾ ಕಂಪನಿ  ಅಕ್ರಮವಾಗಿ ವಶಪಡಿಸಿಕೊಂಡಿದ್ದರು. ಕಾನೂನು ಪ್ರಕಾರ ನಾನು ಅದರ ಉತ್ತರಾಧಿಕಾರಿ ಎಂದು ಸುಲ್ತಾನಾ ಬೇಗಂ ಅರ್ಜಿ ಯಲ್ಲಿ ಹೇಳಿದ್ದರು. ಕೆಂಪುಕೋಟೆಯನ್ನು ನನಗೆ ಕೊಡಲು ಅಥವಾ 1857ರಿಂದ ಇಲ್ಲಿಯವರೆಗೆ ಅದರ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಎಷ್ಟು ಹಣವಾಯಿಯೋ ಅಷ್ಟನ್ನು ನನಗೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರ್ಟ್​ಗೆ ಮನವಿ ಮಾಡಿದ್ದರು.  1857ರಲ್ಲಿ ಬ್ರಿಟಿಷರು ಅದನ್ನು ಅಕ್ರಮವಾಗಿ ವಶಪಡಿಸಿಕೊಂಡರು. ಅದಾದ ಬಳಿಕ ಕೇಂದ್ರ ಸರ್ಕಾರ ಸ್ವಾಧೀನದಲ್ಲಿ ರೆಡ್​ ಫೋರ್ಟ್ ಇರುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ನನಗೆ ಪರಿಹಾರದ ಹಣ ಕೊಡಬೇಕು ಇಲ್ಲವೇ ಇಡೀ ಕೆಂಪುಕೋಟೆಯನ್ನು ನನಗೆ ಹಸ್ತಾಂತರಿಸಬೇಕು ಎಂಬುದು ಸುಲ್ತಾನಾ ಬೇಗಂ ಅವರ ಬೇಡಿಕೆಯಾಗಿತ್ತು.

150 ವರ್ಷ ತಡ ಯಾಕೆ? ಸುಲ್ತಾನಾ ಬೇಗಂ ಅವರ ಅರ್ಜಿಯನ್ನು ಹೈಕೋರ್ಟ್ ನ್ಯಾಯಾಧೀಶೆ ರೇಖಾ ಪಲ್ಲಿ ವಿಚಾರಣೆ ನಡೆಸಿದ್ದಾರೆ. ರೆಡ್​ ಪೋರ್ಟ್ ನಿಮ್ಮದು ಎಂದಾದರೆ ಕೋರ್ಟ್​ಗೆ ಅರ್ಜಿ ಸಲ್ಲಿಸಲು ಯಾಕೆ ಇಷ್ಟು ವಿಳಂಬ ಮಾಡಿದಿರಿ?  ಎಂದು ಪ್ರಶ್ನಿಸಿದ್ದಾರೆ. ನನಗೆ ಇತಿಹಾಸ ಸರಿಯಾಗಿ ಗೊತ್ತಿಲ್ಲ. ಆದರೆ 1857ರಲ್ಲಿ ಬ್ರಿಟಿಷರು ಕೆಂಪುಕೋಟೆಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದರು. ಅದಾಗಿ 150 ವರ್ಷಗಳೇ ಕಳೆದುಹೋಯಿತು. ಈ 150 ವರ್ಷ ನಿಮ್ಮ ಕುಟುಂಬದವರು ಯಾಕೆ ಕೋರ್ಟ್ ಮೆಟ್ಟಿಲೇರಲಿಲ್ಲ. ಕೆಂಪು ಕೋಟೆ ನಮ್ಮದೆಂದು ಯಾಕೆ ಪ್ರತಿಪಾದಿಸಲಿಲ್ಲ? ಇಷ್ಟು ವರ್ಷ ನೀವೆಲ್ಲ ಏನು ಮಾಡುತ್ತಿದ್ದಿರಿ ಎಂದು ನ್ಯಾಯಾಧೀಶೆ ರೇಖಾ ಪ್ರಶ್ನಿಸಿದ್ದಾರೆ. ಮಿತಿಮೀರಿದ ವಿಳಂಬವಾಗಿ ಅರ್ಜಿ ಸಲ್ಲಿಸಿದ್ದರಿಂದ ಇದನ್ನು ಮಾನ್ಯ ಮಾಡಲು ಸಾಧ್ಯವೇ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಜಾಕ್ವೆಲಿನ್​​ಗಾಗಿ ಬರೋಬ್ಬರಿ ₹ 500 ಕೋಟಿ ಬಜೆಟ್​ನ ಸೂಪರ್​ಹೀರೋ​ ಚಿತ್ರ ನಿರ್ಮಿಸುವುದಾಗಿ ಭರವಸೆ ನೀಡಿದ್ದ ವಂಚಕ ಸುಕೇಶ್

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ