Monkeypox: ದೆಹಲಿಯಲ್ಲಿ 5ನೇ ಮಂಕಿಪಾಕ್ಸ್ ಪ್ರಕರಣ ಪತ್ತೆ
ದೆಹಲಿಯಲ್ಲಿ 5ನೇ ಮಂಕಿಪಾಕ್ಸ್ ಪ್ರಕರಣವು ಪತ್ತೆಯಾಗಿದೆ.
ದೆಹಲಿಯಲ್ಲಿ 5ನೇ ಮಂಕಿಪಾಕ್ಸ್ ಪ್ರಕರಣವು ಪತ್ತೆಯಾಗಿದೆ. ಈ ಕುರಿತು ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯ ಡಾ. ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಡಾ. ಕುಮಾರ್ ಅವರು ನೀಡಿರುವ ಮಾಹಿತಿ ಪ್ರಕಾರ, 22 ವರ್ಷದ ಯುವತಿಯಲ್ಲಿ ಲಕ್ಷಣ ಕಂಡುಬಂದಿದ್ದ ಕಾರಣ ಮಾದರಿಯನ್ನು ಲ್ಯಾಬ್ಗೆ ಕಳುಹಿಸಲಾಗಿತ್ತು. ಬಳಿಕ ಆಕೆಯ ಆರೋಗ್ಯದ ಮೇಲೆ ನಿಗಾ ಇರಿಸಲಾಗಿತ್ತು.
ಎಲ್ಎನ್ಜೆಪಿಯಲ್ಲಿ ದಾಖಲಾದ ಓರ್ವ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದೆ. ನಾಲ್ಕು ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಓರ್ವ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇತ್ತೀಚಿನ ಟ್ರಾವೆಲ್ ಹಿಸ್ಟರಿ ಇಲ್ಲ ಆದರೆ ಒಂದು ತಿಂಗಳ ಹಿಂದೆ ವಿದೇಶಕ್ಕೆ ತೆರಳಿದ್ದರು. ದೆಹಲಿಯಲ್ಲಿ ಜುಲೈ 24ರಂದು ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿತ್ತು.
ಸೋಂಕು ತಗುಲಿದ 5-13 ದಿನಗಳಲ್ಲಿ ಲಕ್ಷಣಗಳು ಗೋಚರಿಸುತ್ತದೆ, ಲಕ್ಷಣ ಗೋಚರಿಸಲು 21 ದಿನಗಳಾದರೂ ಅದರಲ್ಲಿ ಅಚ್ಚರಿ ಇಲ್ಲ. ಜ್ವರ, ತಲೆ ನೋವು, ಬೆನ್ನು ನೋವು, ಸ್ನಾಯು ನೋವು, ಚಳಿ ಹಾಗೂ ಬಳಲಿಕೆ, ಜ್ವರದೊಂದಿಗೆ ದೇಹದ ಬೇರೆ ಭಾಗಗಳಿಗೆ ಹರಡುವುದಕ್ಕೂ ಮುನ್ನ, ಮುಖ, ಕೈ ಕಾಲುಗಳಲ್ಲಿ ದದ್ದು ಹೊರಹೊಮ್ಮುತ್ತದೆ. ಬಳಿಕ ಬಾಯಿಯ ಒಳಗೆ, ಕಾರ್ನಿಯಾ, ಜನನಾಂಗಗಳಲ್ಲೂ ಕಾಣಿಸಿಕೊಳ್ಳಬಹುದಾಗಿದೆ. ಹಲವು ಪ್ರಕರಣದಲ್ಲಿ ದೇಹದ ಚರ್ಮದ ದೊಡ್ಡ ಭಾಗಗಳು ಕಳಚಿ ಬೀಳುವ ಸಾಧ್ಯತೆ ಇದೆ.
ಮನುಷ್ಯರಿಂದ ಮನುಷ್ಯರಿಗೆ ಹರಡುವುದೂ ಸಾಧ್ಯ
ಸೋಂಕು ತಗುಲಿರುವ ವನ್ಯ ಜೀವಿಗಳಿಂದ ಈ ವೈರಾಣು ಹರಡುತ್ತದೆ. ಆದರೆ ನಿಕಟ ಸಂಪರ್ಕ ಹೊಂದಿರುವ ಮನುಷ್ಯನಿಂದ ಮನುಷ್ಯನಿಗೂ ಇದು ಹರಡುವ ಸಾಧ್ಯತೆ ಇದ್ದು, ಎಬೋಲಾ ಮಾದರಿಯಲ್ಲಿ ನಿಕಟ ಸಂಪರ್ಕ, ದೇಹದ ಬೆವರು, ಕಲುಶಿತ ವಸ್ತುಗಳ ಮೂಲಕವೂ ಹರಡುವ ಸಾಧ್ಯತೆ ಇದೆ.
ಮಂಕಿಪಾಕ್ಸ್ ಸೋಂಕನ್ನು ತಪ್ಪಿಸುವುದು ಹೇಗೆ? -ಕಾಯಿಲೆಯ ಲಕ್ಷಣಗಳು ಕಂಡುಬಂದರೆ, ಮನೆಯಲ್ಲಿಯೇ ಇರಿ.
-ಈ ಸಂದರ್ಭದಲ್ಲಿ ನಿಮ್ಮ ಸಾಕುಪ್ರಾಣಿಗಳಿಂದಲೂ ಅಂತರ ಕಾಯ್ದುಕೊಳ್ಳಿ.
-ಮಂಕಿಪಾಕ್ಸ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳುವುದು.
-ಮಂಕಿಪಾಕ್ಸ್‌ನ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯ ಟವೆಲ್‌ಗಳು ಅಥವಾ ಬಟ್ಟೆಗಳಂತಹ ವೈಯಕ್ತಿಕ ವಸ್ತುಗಳನ್ನು ಮುಟ್ಟಬೇಡಿ.
-ಆಗಾಗ್ಗೆ ನಿಮ್ಮ ಕೈಗಳನ್ನು ಸೋಪ್ ಮತ್ತು ನೀರಿನಿಂದ ತೊಳೆಯಿರಿ ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಬಳಸಿ.
Published On - 3:43 pm, Sat, 13 August 22