ಅತಿಯಾದ ಸ್ಟಿರಾಯ್ಡ್ ಔಷಧ ಬಳಕೆಯಿಂದ ಬ್ಲ್ಯಾಕ್ ಫಂಗಸ್ ಇನ್ಫೆಕ್ಷನ್ಗೆ ತುತ್ತಾಗುವ ಸಾಧ್ಯತೆ ಇದೆ: ಡಾ. ವಿ.ಕೆ.ಪೌಲ್
ಕಣ್ಣು, ಮೆದುಳಿಗೆ ಬ್ಲ್ಯಾಕ್ ಫಂಗಸ್ ಹೆಚ್ಚು ಅಪಾಯಕಾರಿಯಾಗಿದೆ. ಗಾಳಿಯಲ್ಲೂ ಫಂಗಸ್ ಹರಡುವ ಸಾಧ್ಯತೆ ಇದೆ. ಇನ್ನು ಫಂಗಸ್ನಿಂದ ಬಚಾವಾಗಲು ಮಾಸ್ಕ್ ಬಳಕೆ ಅವಶ್ಯಕವಾಗಿದೆ ಎಂದು ದೆಹಲಿಯ ಏಮ್ಸ್ ನಿರ್ದೇಶಕ ಡಾಕ್ಟರ್ ರಣದೀಪ್ ಗುಲೇರಿಯಾ ಹೇಳಿದ್ದಾರೆ.
ದೆಹಲಿ: ಕೊರೊನಾ ಸೋಂಕು ಪ್ರಸರಣದ ಈ ಸಂದರ್ಭದಲ್ಲಿ ಭಾರತದಲ್ಲಿ ಈಗ ಮ್ಯಾಕರೋಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಹರಡುವಿಕೆ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಇದರ ಚಿಕಿತ್ಸೆಗೆ ಬಳಸುವ ಲೆಪಸೋಮಲ್ ಅಂಪೋಟೋರಿಸಿನ್ ಬಿ ಡ್ರಗ್ಸ್ನ ಬೇಡಿಕೆ ಹೆಚ್ಚಾಗುತ್ತಿದೆ. ಆದರೇ, ನಮ್ಮ ದೇಶದಲ್ಲಿ ಲೆಪಸೋಮಲ್ ಅಂಪೋಟೋರಿಸಿನ್ ಬಿ ಇಂಜೆಕ್ಷನ್ಗೆ ಬಾರಿ ಕೊರತೆ ಇದೆ. ಧಿಡಿರನೇ ಬ್ಲ್ಯಾಕ್ ಫಂಗಸ್ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಬೇಡಿಕೆಗೆ ತಕ್ಕಂತೆ, ಲೆಪಸೋಮಲ್ ಅಂಪೋಟೋರಿಸಿನ್ ಬಿ ಇಂಜೆಕ್ಷನ್ ಸಿಗುತ್ತಿಲ್ಲ.
ಕೊರೊನಾ ಭೀಕರತೆ ಜೊತೆ ಜೊತೆಗೆ ಬ್ಲ್ಯಾಕ್ ಫಂಗಸ್ ಕಂಟಕ ಎದುರಾಗಿದ್ದು, ಕೊರೊನಾದಿಂದ ಬಳಲುತ್ತಿರುವವರು ಹಾಗೂ ಕೊರೊನಾದಿಂದ ಗುಣಮುಖರಾದವರಲ್ಲಿ ಮ್ಯಾಕರೋಮೈಕೋಸಿಸ್ ಫಂಗಲ್ ಇನ್ಪೆಕ್ಷನ್ ಅಥವಾ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಈ ಬ್ಲ್ಯಾಕ್ ಫಂಗಸ್ ಬಗ್ಗೆ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಮತ್ತು ಏಮ್ಸ್ ನಿರ್ದೇಶಕರು ಸಾಕಷ್ಟು ಮಾಹಿತಿ ನೀಡಿದ್ದು, ಕೊರೊನಾ ಬಳಿಕ ಫಂಗಲ್ ಇನ್ಫೆಕ್ಷನ್ ಏರಿಕೆಯಾಗುತ್ತಿದೆ. ಇದು ಹೊಸ ಖಾಯಿಲೆಯಲ್ಲ ಆದರೆ ಈ ಮೊದಲು ಹೆಚ್ಚು ಈ ಸೋಂಕು ಕಾಣುಸುತ್ತಿರಲಿಲ್ಲ. ಆದರೆ ಕೊರೊನಾ ದಾಳಿ ಬಳಿಕ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣ ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಕಣ್ಣು, ಮೆದುಳಿಗೆ ಬ್ಲ್ಯಾಕ್ ಫಂಗಸ್ ಹೆಚ್ಚು ಅಪಾಯಕಾರಿಯಾಗಿದೆ. ಗಾಳಿಯಲ್ಲೂ ಫಂಗಸ್ ಹರಡುವ ಸಾಧ್ಯತೆ ಇದೆ. ಇನ್ನು ಫಂಗಸ್ನಿಂದ ಬಚಾವಾಗಲು ಮಾಸ್ಕ್ ಬಳಕೆ ಅವಶ್ಯಕವಾಗಿದೆ ಎಂದು ದೆಹಲಿಯ ಏಮ್ಸ್ ನಿರ್ದೇಶಕ ಡಾಕ್ಟರ್ ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಅತಿಯಾದ ಸ್ಟಿರಾಯ್ಡ್ ಔಷಧ ಬಳಕೆಯಿಂದ ಇನ್ಫೆಕ್ಷನ್ಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಡಯಾಬಿಟಿಸ್ ಇರುವವರಿಗೆ ಫಂಗಸ್ ಇನ್ಫೆಕ್ಷನ್ ದಾಳಿ ಸಾಧ್ಯತೆ ಹೆಚ್ಚು. ಇದರಿಂದ ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ತರಲು ನೀತಿ ಆಯೋಗದ ಸದಸ್ಯ ಡಾಕ್ಟರ್ ವಿ.ಕೆ.ಪೌಲ್ ಹೇಳಿದ್ದಾರೆ. ಇನ್ನು ಬ್ಲ್ಯಾಕ್ ಫಂಗಸ್ ಹರಡದಂತೆ ತಡೆಗೆ ಸೂಚನೆ ನೀಡಲಾಗಿದ್ದು, ರಾಜ್ಯಗಳ ಜತೆಗೆ ಸೇರಿ ಕೆಲಸ ಮಾಡುತ್ತಿದ್ದೇವೆ ಎಂದು ಈ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ:
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ; ರಾಜ್ಯದ ಈ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ