ಸಾರ್ವಜನಿಕ ಹಣವನ್ನು ಮೊದಲು ಕಬರಿಸ್ತಾನ್​​ಗಳಿಗೆ ಖರ್ಚು ಮಾಡಲಾಗುತ್ತಿತ್ತು, ಈಗ ದೇವಸ್ಥಾನಗಳಿಗೆ ಖರ್ಚು ಮಾಡಲಾಗಿದೆ: ಯೋಗಿ ಆದಿತ್ಯನಾಥ

Yogi Adityanath "ಇದು ಆಲೋಚನೆಯಲ್ಲಿನ ವ್ಯತ್ಯಾಸ," ಎಂದ ಆದಿತ್ಯನಾಥ "ಕಬರಿಸ್ತಾನದ ಬಗ್ಗೆ ಕಾಳಜಿ ವಹಿಸಿದವರು, ಅದಕ್ಕಾಗಿ ಸಾರ್ವಜನಿಕ ಹಣವನ್ನು ಖರ್ಚು ಮಾಡಿದರು. ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಕಾಳಜಿಯುಳ್ಳವರು, ಅವರು ಧರ್ಮ ಮತ್ತು ಸಂಸ್ಕೃತಿಯ ಉನ್ನತಿ ಮತ್ತು ಪ್ರಗತಿಗೆ ಹಣವನ್ನು ಬಳಸುತ್ತಾರೆ ಎಂದಿದ್ದಾರೆ.

ಸಾರ್ವಜನಿಕ ಹಣವನ್ನು ಮೊದಲು ಕಬರಿಸ್ತಾನ್​​ಗಳಿಗೆ ಖರ್ಚು ಮಾಡಲಾಗುತ್ತಿತ್ತು, ಈಗ ದೇವಸ್ಥಾನಗಳಿಗೆ ಖರ್ಚು ಮಾಡಲಾಗಿದೆ: ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 04, 2021 | 2:04 PM

ಲಖನೌ: ಉತ್ತರ ಪ್ರದೇಶದ ಅಂದಿನ ಸಮಾಜವಾದಿ ಪಕ್ಷದ ಸರ್ಕಾರವನ್ನು ಧಾರ್ಮಿಕ ತಾರತಮ್ಯದ ಬಗ್ಗೆ ಹೇಳುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಕಬರಿಸ್ತಾನ್ (ಮೃತದೇಹಗಳನ್ನು ದಫನ ಮಾಡುವ) ಮತ್ತು ಶಂಶಾನ್ (ಸ್ಮಶಾನ) ಹೋಲಿಕೆಯನ್ನು ಪ್ರಸ್ತಾಪಿಸಿದ್ದರು. ಇದಾಗಿ ಸುಮಾರು ಐದು ವರ್ಷಗಳ ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬುಧವಾರ ಮತ್ತೊಮ್ಮೆ ಇದೇ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಹಿಂದಿನ ಸರ್ಕಾರವು ಕಬರಿಸ್ತಾನಗಳ ಸುತ್ತಲೂ ಗಡಿ ಗೋಡೆಗಳನ್ನು ನಿರ್ಮಿಸಲು ಸಾರ್ವಜನಿಕ ಹಣವನ್ನು ಖರ್ಚು ಮಾಡುವುದಕ್ಕಿಂತ ಭಿನ್ನವಾಗಿ ತಮ್ಮ ಸರ್ಕಾರವು ದೇವಾಲಯಗಳ ಪುನರಾಭಿವೃದ್ಧಿ ಮತ್ತು ಸುಂದರಗೊಳಿಸಲು ರಾಜ್ಯದ ಹಣವನ್ನು ಬಳಸುತ್ತಿದೆ ಎಂದು ಹೇಳಿದ್ದಾರೆ.

ದೀಪೋತ್ಸವದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸ್ವಾಮೀಜಿಗಳು ಮತ್ತು ಅವರ ಸಂಪುಟ ಸಹೋದ್ಯೋಗಿಗಳನ್ನು ಒಳಗೊಂಡ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, “ಉತ್ತರ ಪ್ರದೇಶದಲ್ಲಿ ಬದಲಾವಣೆ ಕಾಣುತ್ತದೆ. ಈ ಹಿಂದೆ, ರಾಜ್ಯದ ಹಣವನ್ನು ಕಬರಿಸ್ತಾನದ ಆವರಣ ಗೋಡೆಗೆ ಖರ್ಚು ಮಾಡಲಾಗುತ್ತಿತ್ತು, ಇಂದು ಹಣವನ್ನು ದೇವಾಲಯಗಳ ಪುನರಾಭಿವೃದ್ಧಿ ಮತ್ತು ಸುಂದರಗೊಳಿಸಲು ಖರ್ಚು ಮಾಡಲಾಗಿದೆ ಎಂದಿದ್ದಾರೆ.

“ಇದು ಆಲೋಚನೆಯಲ್ಲಿನ ವ್ಯತ್ಯಾಸ,” ಎಂದ ಆದಿತ್ಯನಾಥ “ಕಬರಿಸ್ತಾನದ ಬಗ್ಗೆ ಕಾಳಜಿ ವಹಿಸಿದವರು, ಅದಕ್ಕಾಗಿ ಸಾರ್ವಜನಿಕ ಹಣವನ್ನು ಖರ್ಚು ಮಾಡಿದರು. ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಕಾಳಜಿಯುಳ್ಳವರು, ಅವರು ಧರ್ಮ ಮತ್ತು ಸಂಸ್ಕೃತಿಯ ಉನ್ನತಿ ಮತ್ತು ಪ್ರಗತಿಗೆ ಹಣವನ್ನು ಬಳಸುತ್ತಾರೆ ಎಂದಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆದಿತ್ಯನಾಥ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಫೆಬ್ರುವರಿ 19, 2017 ರಂದು ಫತೇಪುರ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಮೊದಲು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಸಮಾಜವಾದಿ ಪಕ್ಷದ ಸರ್ಕಾರವು ತಾರತಮ್ಯವನ್ನು ಹೊಂದಿದೆ ಎಂದು ಆರೋಪಿಸಿದ ಅವರು, “ಒಂದು ಹಳ್ಳಿಗೆ ಕಬರಿಸ್ತಾನ್ ಸಿಕ್ಕರೆ, ಸ್ಮಶಾನವೂ ಸಿಗಬೇಕು. ರಂಜಾನ್ ವೇಳೆ ಕರೆಂಟ್ ಇದ್ದರೆ ದೀಪಾವಳಿಯಲ್ಲೂ ವಿದ್ಯುತ್ ಇರಬೇಕು. ಹೋಳಿಗೆ ಕರೆಂಟು ಇದ್ದರೆ ಈದ್‌ನಲ್ಲೂ ಕರೆಂಟು ಇರಬೇಕು. ಯಾವುದೇ ತಾರತಮ್ಯ ಇರಬಾರದು’ ಎಂದಿದ್ದರು.

ಅಯೋಧ್ಯೆಯಲ್ಲಿ ರಾಮ ಮಂದಿರದ ಅಭಿವೃದ್ಧಿಯ ಹೊರತಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತರ ಪ್ರದೇಶದ 500 ಕ್ಕೂ ಹೆಚ್ಚು ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಕೆಲಸವನ್ನು ಕೈಗೊಂಡಿವೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಅಭಿವೃದ್ಧಿಯ ಹಾದಿಯಲ್ಲಿ ಯಾವುದೇ ಅಡೆತಡೆಗಳು ಉಳಿದಿಲ್ಲ. ಪ್ರಧಾನಿಯನ್ನು ಹೊಗಳಿದ ಆದಿತ್ಯನಾಥ ಜಗತ್ತಿನ ಯಾವ ಶಕ್ತಿಯೂ ಇದರ ನಿರ್ಮಾಣವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

31 ವರ್ಷಗಳ ಹಿಂದೆ ಅಕ್ಟೋಬರ್ 30 ಮತ್ತು ನವೆಂಬರ್ 2 ರಂದು ಶ್ರೀರಾಮನ ಭಕ್ತರ ಮೇಲೆ ಗುಂಡುಗಳನ್ನು ಹಾರಿಸಲಾಯಿತು ಮತ್ತು ಲಾಠಿಚಾರ್ಜ್ ಮಾಡಲಾಗಿತ್ತು ಎಂದು ಮುಖ್ಯಮಂತ್ರಿ ಹೇಳಿದರು. “ಜೈ ಶ್ರೀ ರಾಮ್ ಘೋಷಣೆ ಮಾಡುವುದು ಮತ್ತು ರಾಮಮಂದಿರದ ಬಗ್ಗೆ ಮಾತನಾಡುವುದು ಅಪರಾಧವಾಗಿತ್ತು. ಆದರೆ ಪ್ರಜಾಪ್ರಭುತ್ವದ ಬಲದಿಂದಾಗಿ 31 ವರ್ಷಗಳ ಹಿಂದೆ ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ನಿಮ್ಮ ಶಕ್ತಿಯ ಮುಂದೆ ತಲೆಬಾಗಿದ್ದಾರೆ. “ನೀವು ಇನ್ನೂ ಕೆಲವು ವರ್ಷಗಳ ಕಾಲ ಅದೇ ಶಕ್ತಿಯೊಂದಿಗೆ ಮುಂದುವರಿದರೆ, ಅವರು ಮತ್ತು ಅವರ ಕುಟುಂಬಗಳು ಮುಂದಿನ ಕರಸೇವೆಗೆ ಸಾಲಿನಲ್ಲಿ ಬರುತ್ತಾರೆ ಎಂದು ಈಗ ತೋರುತ್ತಿದೆ.” ಎಂದು ಆದಿತ್ಯನಾಥ ಹೇಳಿದ್ದಾರೆ.

ದೀಪೋತ್ಸವದ ಸಂದರ್ಭದಲ್ಲಿ ರಾಮ್ ಕಿ ಪೈದಿಯಲ್ಲಿ 9 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಯಿತು ಮತ್ತು ಅಯೋಧ್ಯೆಯಾದ್ಯಂತ ಮಠಗಳು ಮತ್ತು ದೇವಾಲಯಗಳಲ್ಲಿ 3 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಲಾಯಿತು. ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿದೆ.

ಇದನ್ನೂ ಓದಿ: Excise Duty Cut On Petrol, Diesel: ಪೆಟ್ರೋಲ್, ಡೀಸೆಲ್ ಅಬಕಾರಿ ಕಡಿತ ಸುಂಕವನ್ನು ಸಾಧ್ಯವಾಗಿಸಿದ ಮೋದಿ ಸರ್ಕಾರದ ಆರ್ಥಿಕ ಶಿಸ್ತು

Published On - 2:02 pm, Thu, 4 November 21