ಭಾರತದಲ್ಲಿ ಮುಂದಿನ ಎರಡು ತಿಂಗಳೊಳಗೆ ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಪಾಯಿಂಟ್ಗಳ ಆರಂಭಿಸುವ ಯೋಜನೆ
ಭಾರತದಲ್ಲಿ ಮುಂದಿನ ಎರಡು ತಿಂಗಳೊಳಗೆ ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಪಾಯಿಂಟ್ಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ.
ಮುಂದಿನ ಎರಡು ತಿಂಗಳೊಳಗೆ ಎಲೆಕ್ಟ್ರಿಕಲ್ ವಾಹನಗಳಿಗೆ ಏಸಿ (ಆಲ್ಟರ್ನೇಟಿಂಗ್ ಕರೆಂಟ್) ಚಾರ್ಜಿಂಗ್ ಪಾಯಿಂಟ್ಗಳನ್ನು ಆರಂಭಿಸುವ ಬಗ್ಗೆ ಭಾರತವು ಯೋಜನೆ ರೂಪಿಸುತ್ತಿದೆ. ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಮೂಲಸೌಕರ್ಯ ಸ್ಥಾಪನೆ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಅಂದಹಾಗೆ ಸರ್ಕಾರಿಂದ ಬುಧವಾರ ನೀಡಿದ ಹೇಳಿಕೆ ಪ್ರಕಾರ, ಈ ಏಸಿ ಚಾರ್ಜಿಂಗ್ ಪಾಯಿಂಟ್ಗಳ ಬೆಲೆಯು ಒಂದು ಘಟಕಕ್ಕೆ ರೂ. 3500ರಿಂದ ಶುರುವಾಗುತ್ತದೆ. ದೇಶದಾದ್ಯಂತ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಮೂಲಸೌಕರ್ಯ ಒದಗಿಸಬೇಕು ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಬೇಕು ಎಂದು ಹೀಗೆ ಮಾಡಲಾಗಿದೆ.
ಇದಕ್ಕಾಗಿ ಒಂದು ಸಮಿತಿಯನ್ನು ರಚನೆ ಮಾಡಲಾಗಿದೆ. ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಪಡಿಸಲು ವಾಹನಗಳ ಉತ್ಪಾದಕರು, ಪೂರೈಕೆದಾರರನ್ನೂ ಜತೆಗೂಡಿಸಿಕೊಳ್ಳಲಾಗಿದೆ. ಕಡಿಮೆ ವೆಚ್ಚದ ಏಸಿ ಚಾರ್ಜ್ ಪಾಯಿಂಟ್ನಿಂದ 3kW ಪವರ್ ಅನ್ನು ಪಡೆಯಬಹುದು. ಅದರ ಮೂಲಕ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಚಾರ್ಜ್ ಮಾಡಬಹುದು. ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಕ್ಕೆ ಸದ್ಯಕ್ಕೆ ದೊರೆಯುತ್ತಿರುವ ಚಾರ್ಜಿಂಗ್ ಯೂನಿಟ್ ಬೆಲೆಗಿಂತ ಅರ್ಧದ ಬೆಲೆಯಾದ ಪ್ರತಿ ಯೂನಿಟ್ಗೆ ರೂ. 3500ದಂತೆ ದೊರಕಿಸುವುದು ಗುರಿಯಾಗಿದೆ.
ಈ ಗುಂಪು 3500 ರೂಪಾಯಿಗಿಂತ ಕಡಿಮೆ ವೆಚ್ಚದಲ್ಲಿ, ಸ್ಮಾರ್ಟ್ಫೋನ್ನಿಂದ ಆಪರೇಟ್ ಮಾಡಬಹುದಾದ ಸ್ಮಾರ್ಟ್ ಚಾರ್ಜ್ ಏಸಿ ರೂಪಿಸುವ ಉದ್ದೇಶ ಇರಿಸಿಕೊಂಡಿದೆ. ಈ ಕೈಗೆಟುಕುವ ಎಲೆಕ್ಟ್ರಿಕಲ್ ವಾಹನ ಚಾರ್ಜಿಂಗ್ ಜಾಗತಿಕ ಮಟ್ಟದಲ್ಲಿ ಬದಲಾವಣೆ ಆಗಿದೆ. ಗುಣಮಟ್ಟವನ್ನು ವೇಗವಾಗಿ ಅಭಿವೃದ್ಧಿ ಪಡಿಸುವುದು, ಕೈಗಾರಿಕೆ ಮತ್ತು ಸರ್ಕಾರದ ಜತೆಗೆ ಕೆಲಸ ಮಾಡುವುದು, ಪರೀಕ್ಷೆ ಹಾಗೂ ವ್ಯಾಲಿಡೇಷನ್ ಮತ್ತು ಯಶಸ್ಸಿನ ಮಿಳಿತದ ಗುರಿಯಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
220V 15A ಸಿಂಗಲ್ ಫೇಸ್ ಲೈನ್ ಇರುವ ಎಲ್ಲಿಯಾದರೂ ಕಡಿಮೆ ವೆಚ್ಚದ ಏಸಿ ಚಾರ್ಜ್ ಪಾಯಿಂಟ್ ಆರಂಭಿಸಬಹುದು. ಚಾರ್ಜಿಂಗ್ ಮತ್ತು ಪೇಮೆಂಟ್ ಸ್ಮಾರ್ಟ್ಫೋನ್ ಸಹಾಯದಿಂದಲೇ ಮಾಡಬಹುದು. ಒಂದು ಸ್ಮಾರ್ಟ್ ಫೋನ್ ಅನ್ನೇ ಹಲು ಹಲವು ಅಕೌಂಟ್ಸ್ ಮತ್ತು ಪೇಮೆಂಟ್ಸ್ ಆಯ್ಕೆ ಸಾಧ್ಯವಿದೆ. ಮೆಟ್ರೋ ಮತ್ತು ರೈಲ್ವೆ ನಿಲ್ದಾಣ, ಶಾಪಿಂಗ್ ಮಾಲ್ಗಳು, ಆಸ್ಪತ್ರೆಗಳು, ಕಚೇರಿ ಸಮುಚ್ಚಯ, ಅಪಾರ್ಟ್ಮೆಂಟ್ಗಳು ಮತ್ತು ಸಣ್ಣ ಅಂಗಡಿಗಳಲ್ಲೂ ಬದಲಾವಣೆ ಮಾಡುವುದು ಸರ್ಕಾರದ ಗುರಿ ಆಗಿದೆ ಎನ್ನಲಾಗಿದೆ.
ಸಂಪೂರ್ಣವಾಗಿ ಇವುಗಳನ್ನು ಬಳಸುವುದಕ್ಕೆ ಮೊದಲು ಮುಂದಿನ ಎರಡು ತಿಂಗಳಲ್ಲಿ ಸರ್ಕಾರದಿಂದ ಈ ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಪಾಯಿಂಟ್ಸ್ ಬಾಳಿಕೆ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ. ಇವುಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ನಿಂದ ಅಧಿಕೃತವಾಗಿ ವಿತರಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಮೂಲಸೌಕರ್ಯದ ಮೂಲಕ ಹೊಸ ಕೈಗಾರಿಕೆ ವಲಯ ಸೃಷ್ಟಿಯಾಗುತ್ತದೆ. ಹೆಚ್ಚಿನ ಪ್ರಮಾಣಕ್ಕೆ, ಕಡಿಮೆ ವೆಚ್ಚದ ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಒದಗಿಸುತ್ತದೆ. ಸರ್ಕಾರದಿಂದ ನಿರೀಕ್ಷೆ ಮಾಡುವ ಪ್ರಕಾರ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯಲ್ಲಿ ಮಹತ್ತರ ಬದಲಾವಣೆ ಆಗಲಿದೆ. 2025ರ ಹೊತ್ತಿಗೆ 40 ಲಕ್ಷ ಎಲೆಕ್ಟ್ರಿಕಲ್ ವಾಹನಗಳು ಪ್ರತಿ ವರ್ಷ ಮಾರಾಟ ಆಗಲಿವೆ. 2030ರ ಹೊತ್ತಿಗೆ ಈ ಪ್ರಮಾಣ 1 ಕೊಟಿ ಆಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಸಾವಿರಾರು EV ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೆ ಗ್ರೀನ್ ಸಿಗ್ನಲ್, ವಿಧಾನಸೌಧ ಸ್ಟೇಷನ್ ಏನಾಯ್ತು!?
(Electrical Vehicles charging points will be roll out in next two months in India)