ನಿಮ್ಮ ಮೊಬೈಲ್​ಗೆ ಎಮರ್ಜೆನ್ಸಿ ಅಲರ್ಟ್ ಬಂದಿದ್ದರೆ ಗಾಬರಿ ಬೇಡ; ಇದು ಸೆಲ್ ಬ್ರಾಡ್​ಕ್ಯಾಸ್ಟ್ ಅಲರ್ಟ್ ಸಿಸ್ಟಂನ ಪರೀಕ್ಷಾರ್ಥ ಪ್ರಯೋಗ

Emergency Alert Message: ನೈಸರ್ಗಿಕ ವಿಕೋಪ ಇತ್ಯಾದಿ ತುರ್ತು ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ಅಲರ್ಟ್ ಹೊರಡಿಸಲು ದೂರಸಂಪರ್ಕ ಇಲಾಖೆ ಮೂಲಕ ಎಲ್ಲರ ಮೊಬೈಲ್​ಗಳಿಗೆ ಈ ತುರ್ತು ಸಂದೇಶಗಳನ್ನು ಕಳುಹಿಸುವ ಒಂದು ವ್ಯವಸ್ಥೆಯನ್ನು ಸರ್ಕಾರ ರೂಪಿಸುತ್ತಿದೆ. ಅದರ ಪ್ರಯೋಗಾರ್ಥ ಸ್ಯಾಂಪಲ್ ಮೆಸೇಜ್​ಗಳನ್ನು ಕಳುಹಿಸಲಾಗುತ್ತದೆ. ಕಳೆದ ಸೆಪ್ಟೆಂಬರ್ 15ರಂದೂ ಇಂಥದ್ದೇ ಒಂದು ಪ್ರಯೋಗ ನಡೆದಿತ್ತು. ಇದೀಗ ಅಕ್ಟೋಬರ್ 12ರಂದು ಮತ್ತೊಮ್ಮೆ ಟೆಸ್ಟ್ ಮೆಸೇಜ್ ಬರಲಿದೆ.

ನಿಮ್ಮ ಮೊಬೈಲ್​ಗೆ ಎಮರ್ಜೆನ್ಸಿ ಅಲರ್ಟ್ ಬಂದಿದ್ದರೆ ಗಾಬರಿ ಬೇಡ; ಇದು ಸೆಲ್ ಬ್ರಾಡ್​ಕ್ಯಾಸ್ಟ್ ಅಲರ್ಟ್ ಸಿಸ್ಟಂನ ಪರೀಕ್ಷಾರ್ಥ ಪ್ರಯೋಗ
ಮೊಬೈಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 11, 2023 | 3:54 PM

ನಿಮ್ಮ ಮೊಬೈಲ್​ಗೆ ನಾಳೆ, ಅಕ್ಟೋಬರ್ 12ರಂದು ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಬರಬಹುದು. ಇಂದೇ ಕೆಲವರಿಗೆ ಬಂದಿದ್ದಿರಲೂಬಹುದು. ‘ಎಮರ್ಜೆನ್ಸಿ ಅಲರ್ಟ್: ಎಕ್ಸ್​ಟ್ರೀಮ್’ (emergency alert: extreme) ಎಂದು ಹೆಡಿಂಗ್​ನಲ್ಲಿ ಇರುವ ಮೆಸೇಜ್ ನೋಡಿ ಗಾಬರಿ ಆಗದಿರಿ. ಇದು ಸರ್ಕಾರದಿಂದಲೇ ಕಳುಹಿಸುವ ಸ್ಯಾಂಪಲ್ ಮೆಸೇಜ್. ನೈಸರ್ಗಿಕ ವಿಕೋಪ ಇತ್ಯಾದಿ ತುರ್ತು ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ಅಲರ್ಟ್ ಹೊರಡಿಸಲು ದೂರಸಂಪರ್ಕ ಇಲಾಖೆ ಮೂಲಕ ಎಲ್ಲರ ಮೊಬೈಲ್​ಗಳಿಗೆ ಈ ತುರ್ತು ಸಂದೇಶಗಳನ್ನು ಕಳುಹಿಸುವ ಒಂದು ವ್ಯವಸ್ಥೆಯನ್ನು ಸರ್ಕಾರ ರೂಪಿಸುತ್ತಿದೆ. ಅದರ ಪ್ರಯೋಗಾರ್ಥ ಸ್ಯಾಂಪಲ್ ಮೆಸೇಜ್​ಗಳನ್ನು (sample message) ಕಳುಹಿಸಲಾಗುತ್ತದೆ. ಕಳೆದ ಸೆಪ್ಟೆಂಬರ್ 15ರಂದೂ ಇಂಥದ್ದೇ ಒಂದು ಪ್ರಯೋಗ ನಡೆದಿತ್ತು. ಇದೀಗ ಅಕ್ಟೋಬರ್ 12ರಂದು ಮತ್ತೊಮ್ಮೆ ಟೆಸ್ಟ್ ಮೆಸೇಜ್ ಬರಲಿದೆ.

ಸ್ಯಾಂಪಲ್ ಮೆಸೇಜ್ ಹೇಗಿರುತ್ತದೆ?

ಎಮರ್ಜೆನ್ಸಿ ಅಲರ್ಟ್: ಎಕ್ಸ್​ಟ್ರೀಮ್

‘ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್​ಕ್ಯಾಸ್ಟಿಂಗ್ ಸಿಸ್ಟಂ ಮೂಲಕ ಕಳುಹಿಸಲಾದ ಸ್ಯಾಂಪಲ್ ಟೆಸ್ಟಿಂಗ್ ಮೆಸೇಜ್ ಇದು. ಈ ಸಂದೇಶಕ್ಕೆ ಸ್ಪಂದಿಸದೆ ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಜಾರಿಗೆ ತರಲಾಗುತ್ತಿರುವ ಭಾರತದಾದ್ಯಂತದ ಎಮರ್ಜೆನ್ಸಿ ಅಲರ್ಟ್ ಸಿಸ್ಟಂ ಅನ್ನು ಪರೀಕ್ಷಿಸಲು ಈ ಸಂದೇಶ ಕಳುಹಿಸಲಾಗಿದೆ. ತುರ್ತು ಸಂದರ್ಭದಲ್ಲಿ ಸಕಾಲಕ್ಕೆ ಅಲರ್ಟ್ ನೀಡಲು ಮತ್ತು ಸಾರ್ವಜನಿಕ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗಿದೆ.’

ಇದನ್ನೂ ಓದಿ: ಸಮೃದ್ಧ ಭಾರತ ನಿರ್ಮಾಣದತ್ತ ನಮ್ಮ ಪ್ರಯಾಣದ ವೇಗ ಇನ್ನಷ್ಟು ಹೆಚ್ಚುತ್ತದೆ: ಐಎಂಎಫ್ ವರದಿಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ

ಹಿಂದಿ ಮತ್ತು ಇಂಗ್ಲೀಷ್​ನಲ್ಲಿರುವ ಈ ಮೆಸೇಜ್​ನ ಕನ್ನಡ ರೂಪ ಇದು. ಇದರ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಬಂದಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರದೊಂದಿಗೆ ಸಹಭಾಗಿತ್ವದಲ್ಲಿ ದೂರಸಂಪರ್ಕ ಇಲಾಖೆಯು ಸೆಲ್ ಬ್ರಾಡ್​ಕ್ಯಾಸ್ಟಿಂಗ್ ಸಿಸ್ಟಂನ ಟ್ರಯಲ್ ಟೆಸ್ಟಿಂಗ್ ಅನ್ನು ಅಕ್ಟೋಬರ್ 12ರಂದು ನಡೆಸುತ್ತಿದೆ. ಧ್ವನಿ ಮತ್ತು ವೈಬ್ರೇಶನ್​ವೊಂದಿಗೆ ನಿಮ್ಮ ಮೊಬೈಲ್​ಗೆ ಟೆಸ್ಟ್ ಅಲರ್ಟ್ ಮೆಸೇಜ್​ಗಳು ಬರಬಹುದು. ಈ ಅಲರ್ಟ್​​ಗಳು ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿ ಇರಲಿವೆಯೇ ಹೊರತು ನಿಜವಾದ ತುರ್ತು ಸ್ಥಿತಿ ಎಂದು ಭಾವಿಸಬಾರದು ಎಂದು ವಿವರಣೆ ನೀಡಲಾಗಿದೆ.

ಹಲವು ಮಂದಿಗೆ ಈಗಾಗಲೇ ಈ ರೀತಿಯ ಅಲರ್ಟ್ ಮೆಸೇಜ್​ಗಳು ಬಂದಿವೆ. ಕೆಲವರು ತುರ್ತು ಸ್ಥಿತಿ ಏನಿರಬಹುದು ಎಂದು ಗಾಬರಿಪಟ್ಟು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದುಂಟು.

ಇದನ್ನೂ ಓದಿ: Cyber Fraud ಮೂಲಕ ಭಾರಿ ಹಣ ಕಳೆದುಕೊಂಡ ಡಿಎಂಕೆ ಸಂಸದ, ಮಾಜಿ ಕೇಂದ್ರ ಮಂತ್ರಿ ದಯಾನಿಧಿ ಮಾರನ್ #DigitalIndia ಸೇಫ್​ ಅಲ್ಲ ಅಂದರು!

ಏನಿದು ಸೆಲ್ ಬ್ರಾಡ್​ಕ್ಯಾಸ್ಟ್ ಅಲರ್ಟ್ ಸಿಸ್ಟಂ?

ಭೂಕಂಪ, ಭೂಕುಸಿತ, ಪ್ರವಾಹ, ಸುನಾಮಿ, ಚಂಡಮಾರುತ ಇತ್ಯಾದಿ ವಿಪತ್ತುಗಳು ಎದುರಾದಾಗ ಅಥವಾ ಎದುರಾಗುವ ಸಂಭವನೀಯತೆ ಇದ್ದಾಗ ನಿರ್ದಿಷ್ಟ ಪ್ರದೇಶಗಳಲ್ಲಿರುವ ಎಲ್ಲಾ ಜನರ ಮೊಬೈಲ್​ಗಳಿಗೆ ಅಲರ್ಟ್ ಮೆಸೇಜ್​ಗಳನ್ನು ಕಳುಹಿಸುವುದು ಈ ಅತ್ಯಾಧುನಿಕ ಸಿಸ್ಟಂನ ಉದ್ದೇಶ. ವಿಪತ್ತು ಬಂದಿರುವ ಪ್ರದೇಶಕ್ಕೆ ಪ್ರವಾಸಿಗರು ಹೋಗಿದ್ದರೆ ಅವರ ಮೊಬೈಲ್​ಗೂ ಅಲರ್ಟ್ ಮೆಸೇಜ್ ಬರುತ್ತದೆ.

ಹೀಗಾಗಿ, ಒಂದೊಂದು ಪ್ರದೇಶಕ್ಕೆ ಸೀಮಿತವಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಪರೀಕ್ಷಾರ್ಥವಾಗಿ ಅಲರ್ಟ್ ಮೆಸೇಜ್​​ಗಳು ಬರಬಹುದು. ಅಧಿಕೃತವಾಗಿ ಈ ಸಿಸ್ಟಂ ಜಾರಿಗೆ ಬರುವವರೆಗೂ ಜನರು ಈ ಮೆಸೇಜ್​ಗಳನ್ನು ನಿರ್ಲಕ್ಷಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು