NTPC ಶಿಬಿರದಲ್ಲಿ 120 ಹುಡುಗಿಯರಿಗೆ ಸಬಲೀಕರಣದ ತರಬೇತಿ

ಶೈಕ್ಷಣಿಕ ಕಲಿಕೆ, ದೈಹಿಕ ಸಾಮರ್ಥ್ಯ, ಲಿಂಗ ಸಂವೇದನೆಯಿಂದ ಹಿಡಿದು ನೈರ್ಮಲ್ಯೀಕರಣ, ಪರಿಸರ ಜಾಗೃತಿ ಮತ್ತು ಆತ್ಮರಕ್ಷಣೆಯಂತಹ ಜೀವನ ಕೌಶಲ್ಯಗಳವರೆಗೆ, ಈ ಬೇಸಿಗೆ ಶಿಬಿರದಲ್ಲಿ  ಆಯೋಜಿಸಲಾಗಿದೆ.

NTPC ಶಿಬಿರದಲ್ಲಿ 120 ಹುಡುಗಿಯರಿಗೆ ಸಬಲೀಕರಣದ ತರಬೇತಿ
Empowerment camp
Image Credit source: HT
TV9kannada Web Team

| Edited By: ಅಕ್ಷಯ್​ ಕುಮಾರ್​​

Jun 15, 2022 | 5:42 PM

ನೋಯ್ಡಾ ನಗರದಿಂದ ಸುಮಾರು 40 ಕಿಲೋಮೀಟರ್ ದೂರದ ದಾದ್ರಿಯಲ್ಲಿ ಬೇಸಿಗೆ ಶಿಬಿರ ನಡೆಯುತ್ತಿದೆ, ಈ ಶಿಬಿರದಲ್ಲಿ  ಸರ್ಕಾರಿ ಶಾಲೆಗಳ ಪೂರ್ವ-ಹದಿಹರೆಯದ ಹುಡುಗಿಯರು ತಮ್ಮ ಸಬಲೀಕರಣದ ಒಂದು ಭಾಗವನ್ನು ಇಲ್ಲಿ ಕಲಿಯುತ್ತಿದ್ದಾರೆ.  ತಮ್ಮ ಬದುಕಿನಲ್ಲಿ ಯಾವುದು ಒಳ್ಳೆಯದು ಮತ್ತು ಈ ಸಮಾಜದಲ್ಲಿ ಯಾವ ರೀತಿ ಜೀವನವನ್ನು ಸಾಗಿಸಬೇಕು, ತಮ್ಮ ಹಕ್ಕುಗಳು ಯಾವುದು ? ದೈಹಿಕವಾಗಿ ಮತ್ತು ಮಾನಸಿಕವಾಗಿ ಸಬಲೀಕರಣಗೊಳ್ಳುವ ಬಗ್ಗೆ ಇಲ್ಲಿ ಹೇಳಿಕೊಂಡಲಾಗುತ್ತದೆ.  ಎನ್‌ಟಿಪಿಸಿಯ (ಹಿಂದೆ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್) ದಾದ್ರಿ ಟೌನ್‌ಶಿಪ್‌ನಲ್ಲಿ ನಡೆಯುತ್ತಿರುವ ಸಾರ್ವಜನಿಕ ಸೇವಾ ಸಂಸ್ಥೆ (ಪಿಎಸ್‌ಯು) ಇಂಧನ ಸಂಸ್ಥೆಯ ನಾಲ್ಕು ವಾರಗಳ ಅವಧಿಯ ವಸತಿ ಕಾರ್ಯಾಗಾರದಲ್ಲಿ ಹತ್ತಿರದ ಹಳ್ಳಿಗಳ 120 ಹುಡುಗಿಯರು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.  ಇದು ಮೇ 23 ರಂದು ಪ್ರಾರಂಭವಾಗಿ  ಮತ್ತು ಜೂನ್ 19ಕ್ಕೆ ಕೊನೆಗೊಳ್ಳಲಿದೆ.

ಶೈಕ್ಷಣಿಕ ಕಲಿಕೆ, ದೈಹಿಕ ಸಾಮರ್ಥ್ಯ, ಲಿಂಗ ಸಂವೇದನೆಯಿಂದ ಹಿಡಿದು ನೈರ್ಮಲ್ಯೀಕರಣ, ಪರಿಸರ ಜಾಗೃತಿ ಮತ್ತು ಆತ್ಮರಕ್ಷಣೆಯಂತಹ ಜೀವನ ಕೌಶಲ್ಯಗಳವರೆಗೆ, ಈ ಬೇಸಿಗೆ ಶಿಬಿರದಲ್ಲಿ  ಆಯೋಜಿಸಲಾಗಿದೆ. ಎನ್‌ಟಿಪಿಸಿಯ ದಾದ್ರಿ ಟೌನ್‌ಶಿಪ್ ಬಳಿಯ 10 ಸರ್ಕಾರಿ ಶಾಲೆಗಳ ಸುಮಾರು 120 ಹುಡುಗಿಯರನ್ನು ಆರೋಗ್ಯದ ಬಗ್ಗೆ  ಪರೀಕ್ಷಿಸಿದ ಶಿಬಿರಕ್ಕೆ  ಆಯ್ಕೆ ಮಾಡಲಾಗಿದೆ. ನಾಲ್ಕು ವಾರಗಳ ವಸತಿ ಕಾರ್ಯಕ್ರಮಕ್ಕೆ ಅವರ ಪೋಷಕರಿಂದ ಒಪ್ಪಿಗೆ ಕೂಡ ಅಗತ್ಯವಾಗಿತ್ತು, ಎಂದು ದಾದ್ರಿಯ NTPC ಯಲ್ಲಿ ಪ್ರಧಾನ ವ್ಯವಸ್ಥಾಪಕ (ಮಾನವ ಸಂಪನ್ಮೂಲ) ವಿ ಶಿವ ಪ್ರಸಾದ್ ಹೇಳಿದರು.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಮಹಾತ್ಮ ಗಾಂಧಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಹೆಸರು ಸೂಚಿಸಿದ ಎಡಪಕ್ಷಗಳು

ಶಿಬಿರಾರ್ಥಿಗಳಿಗೆ ತಮ್ಮ ದಿನವನ್ನು ಬೆಳಿಗ್ಗೆ 7 ಗಂಟೆಗೆ ಯೋಗ ಅವಧಿಗಳೊಂದಿಗೆ ಪ್ರಾರಂಭಿಸಿ, 9 ರಿಂದ ಮಧ್ಯಾಹ್ನ 1 ರ ನಡುವೆ ಶೈಕ್ಷಣಿಕ ತರಗತಿಗಳು ನಡೆಯುತ್ತವೆ.  ಹಲವಾರು ಪಠ್ಯೇತರ ತರಗತಿಗಳನ್ನು ನಡೆಸಲಾಗುತ್ತದೆ, ಇದರಲ್ಲಿ ವೃತ್ತಿ ಸಮಾಲೋಚನೆ, ಆತ್ಮರಕ್ಷಣೆ, ಆತ್ಮವಿಶ್ವಾಸವನ್ನು ಬೆಳೆಸುವ ಸಲಹೆಗಳು, ಸಾರ್ವಜನಿಕ ಭಾಷಣ ಮತ್ತು ಲಿಂಗ ಸಂವೇದನೆ ಬಗ್ಗೆ ತಿಳಿಸಲಾಗುತ್ತದೆ. ಇದರಲ್ಲಿ ಅನೇಕ ಸೇವೆಗಳ ಬಗ್ಗೆ ಮತ್ತು ಇದರಲ್ಲಿ ಸ್ಪರ್ಥಾತ್ಮಕ ವಿಚಾರಗಳನ್ನು ತಿಳಿಸಲಾಗುವುದು.

ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯವ್ಯಕ್ತಿಗಳು ಹಾಗೂ ಸಿವಿಲ್ ಸೇವೆಯಲ್ಲಿ ಇರುವ ವ್ಯಕ್ತಿಗಳಿಂದ ಸ್ಪೂರ್ತಿದಾಯಕ ಕಥೆಗಳನ್ನು ಹೇಳಿಕೊಂಡಲಾಗುವುದು. ಇದರ ಜೊತೆಗೆ IPS, IAS ಅಧಿಕಾರಿಗಳು   ತಮ್ಮ ಜೀವನದಲ್ಲಿ  ಕಂಡ ಕಷ್ಟ, ಸಾಧನೆಗಳ ಬಗ್ಗೆ ಶಿಬಿರಾರ್ಥಿಗಳಿಗೆ ಹೇಳುವ ಮೂಲಕ ಅವರಿಗೆ ಪ್ರೇರಣೆ ನೀಡಲಾಗುವುದು.

ಇದನ್ನೂ ಓದಿ

ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada