ಹೊಸ ಯೋಜನೆಗಳನ್ನು ತರಲಿದೆ ಭಾರತೀಯ ರೈಲ್ವೇ; 2027ರ ವೇಳೆಗೆ ಪ್ರತಿಯೊಬ್ಬ ರೈಲು ಪ್ರಯಾಣಿಕರಿಗೂ ಸಿಗುತ್ತದೆ ದೃಢೀಕೃತ ಟಿಕೆಟ್‌

ಪ್ರಸ್ತುತ ಪ್ರತಿದಿನ 10,748 ರೈಲುಗಳು ಸಂಚರಿಸುತ್ತಿದ್ದು, ಇದನ್ನು ಪ್ರತಿದಿನ 13,000 ರೈಲುಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಮುಂದಿನ 3-4 ವರ್ಷಗಳಲ್ಲಿ 3,000 ಹೊಸ ರೈಲುಗಳನ್ನು ಓಡಿಸುವ ಯೋಜನೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರತಿ ವರ್ಷ ಸುಮಾರು 800 ಕೋಟಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ, ಪ್ರಯಾಣಿಕರ ಸಾಮರ್ಥ್ಯವನ್ನು 1,000 ಕೋಟಿಗೆ ಹೆಚ್ಚಿಸುವ ಯೋಜನೆ ಇದೆ.

ಹೊಸ ಯೋಜನೆಗಳನ್ನು ತರಲಿದೆ ಭಾರತೀಯ ರೈಲ್ವೇ; 2027ರ ವೇಳೆಗೆ ಪ್ರತಿಯೊಬ್ಬ ರೈಲು ಪ್ರಯಾಣಿಕರಿಗೂ ಸಿಗುತ್ತದೆ ದೃಢೀಕೃತ ಟಿಕೆಟ್‌
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on: Nov 17, 2023 | 2:11 PM

ದೆಹಲಿ ನವೆಂಬರ್ 17: 2027ರ ವೇಳೆಗೆ ಪ್ರತಿಯೊಬ್ಬ ರೈಲು (Indian Railways) ಪ್ರಯಾಣಿಕರು ದೃಢೀಕೃತ ಟಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ರೈಲ್ವೇ ಮೂಲಗಳು ಎನ್‌ಡಿಟಿವಿಗೆ ತಿಳಿಸಿದ್ದು, ದೊಡ್ಡ ರೈಲ್ವೆಯ ವಿಸ್ತರಣೆ ಯೋಜನೆಗಳಲ್ಲಿ ಪ್ರತಿದಿನ ಹೊಸ ರೈಲುಗಳನ್ನು ಸೇರಿಸಲಾಗುವುದು. ದೀಪಾವಳಿ ವಾರದಲ್ಲಿ ಕಿಕ್ಕಿರಿದ ಪ್ಲಾಟ್‌ಫಾರ್ಮ್‌ಗಳು ಮತ್ತು ರೈಲುಗಳಲ್ಲಿ ಜನರ ನೂಕುನುಗ್ಗಲಿನ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ (Social media) ಹರಿದಾಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆಯು ಬಂದಿದೆ. 40 ವರ್ಷದ ವ್ಯಕ್ತಿಯೊಬ್ಬರು ಬಿಹಾರದಿಂದ ಛಾತ್‌ಗೆ ಹೋಗುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದಾಗ ಸಾವಿಗೀಡಾದ ಘಟನೆಯೂ ನಡೆದಿದೆ. ದೀಪಾವಳಿಯ ಪೂರ್ವಭಾವಿಯಾಗಿ ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಜನದಟ್ಟಣೆ ಇರುತ್ತದೆ.

ಈ ದೊಡ್ಡ ರೂಪಾಂತರವನ್ನು ಸಾಧಿಸಲು ರೈಲ್ವೇಸ್ ಹೇಗೆ ಯೋಜಿಸುತ್ತಿದೆ ಎಂದು ಕೇಳಿದಾಗ ಪ್ರತಿ ವರ್ಷ ಹೊಸ ಟ್ರ್ಯಾಕ್‌ಗಳನ್ನು ಹಾಕಲಾಗುವುದು. ವರ್ಷಕ್ಕೆ 4,000-5,000 ಕಿಲೋಮೀಟರ್ ಟ್ರ್ಯಾಕ್ ಹಾಕಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಪ್ರಸ್ತುತ ಪ್ರತಿದಿನ 10,748 ರೈಲುಗಳು ಸಂಚರಿಸುತ್ತಿದ್ದು, ಇದನ್ನು ಪ್ರತಿದಿನ 13,000 ರೈಲುಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಮುಂದಿನ 3-4 ವರ್ಷಗಳಲ್ಲಿ 3,000 ಹೊಸ ರೈಲುಗಳನ್ನು ಓಡಿಸುವ ಯೋಜನೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರತಿ ವರ್ಷ ಸುಮಾರು 800 ಕೋಟಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ, ಪ್ರಯಾಣಿಕರ ಸಾಮರ್ಥ್ಯವನ್ನು 1,000 ಕೋಟಿಗೆ ಹೆಚ್ಚಿಸುವ ಯೋಜನೆ ಇದೆ.

ರೈಲ್ವೇಯು ಪ್ರಯಾಣದ ಸಮಯವನ್ನು ಕಡಿತಗೊಳಿಸಲು ಸಹ ಕೆಲಸ ಮಾಡುತ್ತಿದೆ. ಇದರಲ್ಲಿ ಹೆಚ್ಚಿನ ಟ್ರ್ಯಾಕ್‌ಗಳನ್ನು ಹಾಕುವುದು, ವೇಗವನ್ನು ಹೆಚ್ಚಿಸುವುದು ಅವಶ್ಯಕ, ಇದರಿಂದಾಗಿ ರೈಲು ನಿಲ್ಲಿಸಲು ಮತ್ತು ವೇಗವನ್ನು ಪಡೆಯಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿಮೈಸೂರಿನಲ್ಲಿ ರೈಲು ಅಪಘಾತಕ್ಕೆ ಸಂಚು: ಹಳಿ ಮೇಲೆ ಮರದ ದಿಮ್ಮಿ, ಕಬ್ಬಿಣದ ರಾಡ್ ಇಟ್ಟವರು ಪೊಲೀಸ್ ವಶಕ್ಕೆ

ರೈಲ್ವೇಯ ಅಧ್ಯಯನದ ಪ್ರಕಾರ, ದೆಹಲಿಯಿಂದ ಕೋಲ್ಕತ್ತಾಗೆ ಪ್ರಯಾಣಿಸಲು ಎರಡು ಗಂಟೆ ಇಪ್ಪತ್ತು ನಿಮಿಷಗಳು ವೇಗವರ್ಧನೆ ಮತ್ತು ವೇಗವನ್ನು ಹೆಚ್ಚಿಸಿದರೆ ಉಳಿಸಬಹುದು. ಪುಶ್ ಮತ್ತು ಪುಲ್ ತಂತ್ರವು ವೇಗವರ್ಧನೆ ಹೆಚ್ಚಿಸಲು ಸಹಾಯ ಮಾಡುತ್ತದೆ.

ಪ್ರಸ್ತುತ ವಾರ್ಷಿಕವಾಗಿ ಸುಮಾರು 225 ರೈಲುಗಳನ್ನು ತಯಾರಿಸಲಾಗುತ್ತಿದ್ದು, ಇದರಲ್ಲಿ ಪುಶ್ ಪುಲ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಪ್ರಮುಖ ರೈಲುಗಳಾದ ವಂದೇ ಭಾರತ್‌ನ ವೇಗವರ್ಧನೆ ಮತ್ತು ನಿಧಾನಗೊಳಿಸುವ ಸಾಮರ್ಥ್ಯವು ಪ್ರಸ್ತುತ ರೈಲುಗಳಿಗಿಂತ ನಾಲ್ಕು ಪಟ್ಟು ಹೆಚ್ಚು ಆಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ