Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer: ಮಕ್ಕಳನ್ನೂ ಬಾಧಿಸುತ್ತಿದೆ ಕೊರೊನಾ; ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಈ ಸ್ಟೋರಿ‌ ಮಿಸ್ ಮಾಡದೇ ಓದಿ

‘ನನ್ನ ಮಗುವನ್ನು ಕೊರೊನಾದಿಂದ ಕಾಪಾಡಿಕೊಳ್ಳುವುದು ಹೇಗೆ’ ಕೋಟ್ಯಂತರ ಪೋಷಕರ ಈ ಪ್ರಶ್ನೆಗೆ ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಶೋಧನಾ ಸಂಸ್ಥೆ ಏಮ್ಸ್​ನ ತಜ್ಞರು ಉತ್ತರಿಸಿದ್ದಾರೆ.

Explainer: ಮಕ್ಕಳನ್ನೂ ಬಾಧಿಸುತ್ತಿದೆ ಕೊರೊನಾ; ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಈ ಸ್ಟೋರಿ‌ ಮಿಸ್ ಮಾಡದೇ ಓದಿ
ಮಕ್ಕಳಲ್ಲಿ ಕೊರೊನಾ ಸೋಂಕು ನಿರ್ವಹಣೆ ಬಗ್ಗೆ ಪೋಷಕರು ಮಾಹಿತಿ ಅರಿತಿರಬೇಕು. (ಪ್ರಾತಿನಿಧಿಕ ಚಿತ್ರ)
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 22, 2021 | 5:50 PM

ಕೊರೊನಾ ಸೋಂಕಿನ 2ನೇ ಅಲೆ ದೇಶವನ್ನು ಬಾಧಿಸುತ್ತಿದೆ. ಮೊದಲ ಅಲೆಯ ಹೊಡೆತದಲ್ಲಿ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಾಣಿಸಿಕೊಂಡಿರಲಿಲ್ಲ. ‘ದೊಡ್ಡವರಿಗೆ ಕೊರೊನಾ ಬಂದು ನರಳುವುದನ್ನೇ ನೋಡಲು ಆಗುವುದಿಲ್ಲ, ಇನ್ನು ಮಕ್ಕಳಿಗೆ ಬಂದರೆ ಕೇಳಬೇಕಾ’ ಎಂಬ ವೈದ್ಯರೊಬ್ಬರ ಮಾತು ಈ ಹಿಂದೆ ವೈರಲ್ ಆಗಿತ್ತು. ಕೊರೊನಾ ವೈರಸ್ ಸೋಂಕಿನ 2ನೇ ದೇಶವನ್ನು ವ್ಯಾಪಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಮಕ್ಕಳನ್ನು ಈ ಮಹಾಪಿಡುಗಿನಿಂದ ಕಾಪಾಡಿಕೊಳ್ಳುವ ಬಗ್ಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (All India Institute of Medical Sciences – AIIMS) ಸಂಕ್ಷಿಪ್ತ ಕನ್ನಡ ಅನುವಾದ ಇಲ್ಲಿದೆ.

1) ನನ್ನ ಮಗುವಿಗೆ ಕೋವಿಡ್-19 ಬಾರದಂತೆ ತಡೆಯುವುದು ಹೇಗೆ? ಹೊರಗಿನ ಜಗತ್ತಿನ ಬೆಳವಣಿಗೆಗಳನ್ನು ಗಮನಿಸಿದಾಗ ನಿಮ್ಮ ಮಕ್ಕಳ ಬಗ್ಗೆ ಚಿಂತೆಯಾಗುವುದು ಸಹಜ. ಆಗಾಗ ಕೈತೊಳೆಯುವುದು, ಮೂಗು ಆವರಿಸುವಂತೆ ಫೇಸ್​ಮಾಸ್ಕ್ ಧರಿಸಲು ಮಕ್ಕಳಿಗೆ ಹೇಳಿಕೊಡಿ, ಹೆಚ್ಚು ಜನಸಂದಣಿ ಇರುವ ಪ್ರದೇಶಗಳಿಗೆ ಮಕ್ಕಳನ್ನು ಕಳಿಸದಿರಿ, ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ಸರಿಯಾಗಿ ಮುಚ್ಚಿಕೊಳ್ಳಿ. ಪೌಷ್ಟಿಕಾಂಶ ಹೆಚ್ಚಾಗಿರುವ ಆರೋಗ್ಯಕರ ಆಹಾರ ಸೇವಿಸಿ. 2 ವರ್ಷ ಮೇಲ್ಪಟ್ಟ ಮಕ್ಕಳು ಮಾಸ್ಕ್ ಧರಿಸಬಹುದು.

2) ಕುಟುಂಬದ ಸದಸ್ಯರೊಬ್ಬರಿಗೆ ಕೋವಿಡ್-19 ಬಂದಿದೆ. ಮಕ್ಕಳನ್ನು ಈಗ ಹೇಗೆ ನೋಡಿಕೊಳ್ಳಬೇಕು? ಮಕ್ಕಳ ಎದುರು ದೊಡ್ಡವರು ಆತ್ಮವಿಶ್ವಾಸದಿಂದ ವರ್ತಿಸಬೇಕು. ಇಲ್ಲದಿದ್ದರೆ ಮಕ್ಕಳು ಗಾಬರಿಯಾಗುತ್ತಾರೆ. ನಿಮ್ಮ ಕುಟುಂಬದಲ್ಲಿ ಯಾರಿಗೇ ಕೋವಿಡ್-19 ಪಾಸಿಟಿವ್ ಬಂದಿದ್ದರೂ, ಉಳಿದವರೆಲ್ಲರೂ ಟೆಸ್ಟ್ ಮಾಡಿಸಿಕೊಳ್ಳಬೇಕು. ಮುಂದಿನ 14 ದಿನಗಳವರೆಗೆ ಎಲ್ಲರೂ ಸುರಕ್ಷಾ ಕ್ರಮಗಳನ್ನು ತಪ್ಪದೇ ಅನುಸರಿಸಿ. ಒಂದು ವೇಳೆ ಸ್ಥಳೀಯ ಆಡಳಿತ ಸಂಸ್ಥೆ ಅಥವಾ ಆರೋಗ್ಯ ಇಲಾಖೆ ನಿಮ್ಮ ಕುಟುಂಬಕ್ಕೆ ಮನೆಯಲ್ಲಿಯೇ ಪ್ರತ್ಯೇಕವಾಸಕ್ಕೆ (ಹೋಂ ಐಸೊಲೇಶನ್) ಶಿಫಾರಸು ಮಾಡಿದರೆ ಸಾಧ್ಯವಾದ ಮಟ್ಟಿಗೂ ಪ್ರತ್ಯೇಕ ಕೊಠಡಿಗಳಲ್ಲಿರಿ.

ಮಕ್ಕಳನ್ನು ಸೋಂಕಿನ ಲಕ್ಷಣಗಳು ತೀವ್ರವಾಗಿರುವವರಿಂದ ದೂರ ಇರಿಸಿ. ಮಾಸ್ಕ್ ಹಾಕಿಕೊಳ್ಳುವುದನ್ನು ಪ್ರೋತ್ಸಾಹಿಸಿ. ಪದೇಪದೆ ಕೈ ತೊಳೆದುಕೊಳ್ಳಲು ತಿಳಿಸಿ, ಮನೆಯಲ್ಲಿಯೇ ತಯಾರಿಸಿದ ಪೌಷ್ಟಿಕ ಮತ್ತು ತಾಜಾ ಆಹಾರ ಪದಾರ್ಥಗಳನ್ನೇ ಮಕ್ಕಳಿಗೆ ಕೊಡಿ. ಮಕ್ಕಳ ದೇಹದ ತಾಪಮಾನವನ್ನು ನಿಯಮಿತವಾಗಿ ಪರೀಕ್ಷಿಸಿ, ಅವರ ಚಟುವಟಿಕೆಗಳಲ್ಲಿ ವ್ಯತ್ಯಾಸ ಕಂಡುಬಂದರೆ, ಕೋವಿಡ್-19 ಲಕ್ಷಣಗಳು ಕಾಣಿಸಿದರೆ ಸಮೀಪದ ವೈದ್ಯರನ್ನು ಭೇಟಿ ಮಾಡಿ.

3) ಎಲ್ಲ ಮಕ್ಕಳಿಗೂ ಕೋವಿಡ್-19 ಟೆಸ್ಟ್​ ಅನಿವಾರ್ಯವೇ? ಕೋವಿಡ್-19 ರೋಗಿಯೊಂದಿಗೆ ಸಂಪರ್ಕಕ್ಕೆ ಬಂದ ನಂತರವೂ ನಿಮ್ಮ ಮಗುವಿಗೆ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬರದಿದ್ದರೂ, ಮುಂದಿನ 14 ದಿನಗಳವರೆಗೆ ನೀವು ಎಚ್ಚರಿಕೆಯಿಂದ ಮಗುವಿನ ಚಟುವಟಿಕೆ ಗಮನಿಸಬೇಕು. ಮುಂದೆ ವಿವರಿಸಿದ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ಕೊರೊನಾ ವೈರಸ್​ ಟೆಸ್ಟ್ ಮಾಡಿಸಿ.

Children-Coronavirus

ಪ್ರಾತಿನಿಧಿಕ ಚಿತ್ರ (ಕೃಪೆ: unicef.org)

4) ನನ್ನ ಮಗುವಿಗೆ ಕೋವಿಡ್-19 ಲಕ್ಷಣಗಳಿವೆ. ನಾನೇನು ಮಾಡಬೇಕು? ನೀವು ಗಾಬರಿಯಾಗಬೇಡಿ, ಮಗುವಿನ ಎದುರು ಧೈರ್ಯವಾಗಿರಿ. ಮಗುವಿಗೆ ಜ್ವರ, ಕೆಮ್ಮು, ನೆಗಡಿ ಬಂದಿದ್ದರೆ ಅದು ಕೊರೊನಾದಿಂದಲೇ ಬಂದಿದೆ ಎಂದು ಅರ್ಥವಲ್ಲ. ಇತರ ವೈರಾಣು ಸೋಂಕು ಸಹ ಕಾರಣವಿರಬಹುದು. ಕೊರೊನಾ ಟೆಸ್ಟ್ ಮಾಡಿಸಿ. ಮಗುವಿನ ದೇಹದಲ್ಲಿ ನೀರಿನ ಅಂಶ ಕಾಪಾಡುವಂಥ ಆಹಾರವನ್ನೇ ಹೆಚ್ಚಾಗಿ ಕೊಡಿ. ಮನೆಯಲ್ಲೇ ತಯಾರಿಸಿದ ಆಹಾರವನ್ನೇ ಬಳಸಿ. ಮಗುವಿನ ದೇಹದ ಉಷ್ಣಾಂಶವನ್ನೂ ಆಗಾಗ ಗಮನಿಸುತ್ತಿರಿ. 100 ಡಿಗ್ರಿ ಫ್ಯಾರನ್​ಹೀಟ್​ಗಿಂತಲೂ ಹೆಚ್ಚಿನ ಜ್ವರ ಬಂದಿದ್ದರೆ ತಣ್ಣೀರಿನಲ್ಲಿ ಬಟ್ಟೆ ತೋಯಿಸಿ, ಮಗುವನ್ನು ಒರೆಸಿ. ಪ್ಯಾರಾಸೆಟಮಾಲ್ ಸಿರಪ್ ಅಥವಾ ಮಾತ್ರೆಯನ್ನು ಕೊಡಿ.

ಮಗುವಿನ ದೇಹದ ತೂಕಕ್ಕೆ ಅನುಗುಣವಾಗಿ ವೈದ್ಯರು ಜಿಂಕ್, ಮಲ್ಟಿವಿಟಮಿನ್, ವಿಟಮಿನ್ ಡಿ, ಕ್ಯಾಲ್ಷಿಯಂ ಅಂಶಗಳಿರುವ ಔಷಧಗಳನ್ನು ಶಿಫಾರಸು ಮಾಡುತ್ತಾರೆ. ಅವರು ಹೇಳಿದ ಸಮಯಕ್ಕೆ ಹೇಳಿದ ಔಷಧಗಳನ್ನು ಕೊಡಿ. ಕೆಳಗೆ ಸೂಚಿಸಿರುವ ಅಪಾಯದ ಚಿಹ್ನೆಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ.

5) ಕೋವಿಡ್-19 ಬಂದ ಎಲ್ಲ ಮಕ್ಕಳಿಗೂ ಐಸಿಯುನಲ್ಲಿಯೇ ಚಿಕಿತ್ಸೆ ಕೊಡಬೇಕೆ? ದೊಡ್ಡವರಿಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕು ಪತ್ತೆ ತುಸು ಕಷ್ಟದ ಕೆಲಸ. ಹಲವು ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ತುಂಬಾ ತಡವಾಗಿ ಕಾಣಿಸಿಕೊಳ್ಳುತ್ತವೆ. ಕೆಲವರಲ್ಲಿ ಫ್ಲೂ (ಜ್ವರ) ಮಾದರಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇಂಥವರಿಗೆ ಮನೆಯಲ್ಲಿಯೇ ಚಿಕಿತ್ಸೆ ಕೊಡಿಸುವುದು ಸೂಕ್ತ. ಆದರೆ ಇತರ ಕಾಯಿಲೆಗಳನ್ನು ಬಹುಕಾಲದಿಂದ ಅನುಭವಿಸಿ ನಿತ್ರಾಣರಾಗಿದ್ದರೆ, ರೋಗ ನಿರೋಧಕ ಶಕ್ತಿ ಕಡಿಮೆಯಿದ್ದರೆ ಕೋವಿಡ್-19ಕ್ಕೆ ಐಸಿಯುನಲ್ಲಿ ಚಿಕಿತ್ಸೆ ಕೊಡಬೇಕಾಗಬಹುದು.

ಮಗುವನ್ನು ಯಾವಾಗ ಆಸ್ಪತ್ರೆಗೆ ಕರೆದೊಯ್ಯಬೇಕು ಎಂಬ ಮಾಹಿತಿಗಾಗಿ ಕೆಳಗಿನ ಚಿತ್ರ ನೋಡಿ.

AIIMS-SOP

ಮಕ್ಕಳನ್ನು ಯಾವಾಗ ಆಸ್ಪತ್ರೆಗೆ ಕರೆದೊಯ್ಯಬೇಕು

(Experts of AIIMS shares Information about handling coronavirus threat in children)

ಇದನ್ನೂ ಓದಿ: Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ

ಇದನ್ನೂ ಓದಿ: ರೂಪಾಂತರಿ ಕೊರೊನಾ ವೈರಸ್​ ವಿರುದ್ಧವೂ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಐಸಿಎಂಆರ್

Published On - 5:41 pm, Thu, 22 April 21

ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ