ದೇಶದಾದ್ಯಂತ ರೈತರು ಈ ಬಾರಿ ರಗೊಬ್ಬರಗಳ ಬೆಲೆಗಳ ವಿರುದ್ಧ ಮುಷ್ಕರ ನಡೆಸಲಿರುವ ಸುಳಿವು ಪಡೆದು ನರೇಂದ್ರ ಮೋದಿ ಅವರ ಸರ್ಕಾರವು ಬುಧವಾರದಂದು ಡೈ ಅಮೋನಿಯಂ ಫಾಸ್ಫೇಟ್ (ಡಿಎಪಿ) ಮೇಲಿನ ಸಬ್ಸಿಡಿಯನ್ನು ಶೇಕಡಾ 140ರಷ್ಟು ಹೆಚ್ಚಿಸಿತು. ಇದುವರೆಗೆ ಒಂದು 50ಕೆಜಿ ಡಿಎಪಿ ಮೂಟೆ ಮೇಲೆ ಸಿಗುತ್ತಿದ್ದ ರೂ. 511 ಸಬ್ಸಿಡಿಯನ್ನು ರೂ. 1200 ಕ್ಕೆ ಸರ್ಕರ ಹೆಚ್ಚಿಸಿತು. ಬೊಕ್ಕಸಕ್ಕೆ ಈ ಬಾರಿಯ ಮುಂಗಾರು ಋತುವೊಂದರಲ್ಲೇ ರೂ. 14,775 ಕೋಟಿಗಳ ಹೆಚ್ಚುವರಿ ಹೊರೆ ಇದರಿಂದ ಬೀಳಲಿದ್ದಾಗ್ಯೂ ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸರ್ಕಾರದೆದುರು ಆರ್ಥಿಕ ಮಾತ್ತು ರಾಜಕೀಯ ಅನಿವಾರ್ಯತೆಗಳು ಏನಿದ್ದವು ಅನ್ನುವುದನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ.
ಡಿಎಪಿ ಎಂದರೇನು ಮತ್ತು ಯಾಕೆ ಅದು ರೈತರಿಗೆ ಅಷ್ಟು ಪ್ರಮುಖವಾಗಿದೆ?
ಯೂರಿಯಾ ನಂತರ ರೈತರು ಅತಿ ಸಾಮಾನ್ಯವಾಗಿ ಬಳಸುವ ರಸಗೊಬ್ಬರವೆಂದರೆ ಡಿಎಪಿ. ಈ ರಸಗೊಬ್ಬರದಲ್ಲಿ ಬೇರುಗಳ ಬೆಳವಣಿಗೆಯನ್ನು ಉತ್ತೇಜಿಸುವ ಫಾಸ್ಫರಸ್ (ರಂಜಕ) ಇರುವುದರಿಂದ ರೈತರು ಬಿತ್ತನೆ ಕಾರ್ಯಕ್ಕೆ ಮೊದಲು ಅದನ್ನು ತಮ್ಮ ಜಮೀನಿನಲ್ಲಿ ಹಾಕುತ್ತಾರೆ. ಬೆಳೆಗಳಿಗೆ ಉತ್ತಮವಾಗಿ ಅಭಿವೃದ್ಧಿ ಹೊಂದಿದ ಬೇರುಗಳು ಇಲ್ಲದೇ ಹೋದರೆ, ಅವು ತಮ್ಮ ಮಾಮೂಲು ಸ್ತರಕ್ಕೆ ಬೆಳೆಯಲಾರವು ಮತ್ತು ಫಲ ನೀಡಲು ಸಹ ಜಾಸ್ತಿ ಸಮಯ ತೆಗೆದುಕೊಳ್ಳುತ್ತವೆ.
ರಂಜಕವುಳ್ಳ ಬೇರೆ ರಸಗೊಬ್ಬರಗಳು ಸಹ ರೈತರಿಗೆ ಲಭ್ಯವಿವೆ. ಉದಾಹರಣೆಗೆ ಹೇಳಬೇಕೆಂದರೆ ಶೇಕಡಾ 16 ರಂಜಕ ಮತ್ತಿ ಶೇಕಡಾ 11 ಗಂಧಕವುಳ್ಳ ಸೂಪರ್ ಫಾಸ್ಫೇಟ್ ದೊರಕುತ್ತಿದ್ದರೂ ರಂಜಕದ ಅಂಶಕ್ಕಾಗಿ ರೈತರು ಡಿಎಪಿಗೆ ಆದ್ಯತೆ ನೀಡುತ್ತಾರೆ. ಇದು ಶೇಕಡಾ 46ರಷ್ಟು ನೈಟ್ರೋಜನ್ ಹೊಂದಿರುವ ಯೂರಿಯಾಗೆ ಸಮವಾಗಿದೆ. ನೈಟ್ರೋಜನ್ಯುಕ್ತ ಗೊಬ್ಬರ ಬೇಕಾದಲ್ಲಿ ರೈತರು ಯೂರಿಯಾವನ್ನು ಬಳಸುತ್ತಾರೆ.
ಡಿಎಪಿಗೆ ಯಾಕೆ ಹೆಚ್ಚು ಸಬ್ಸಿಡಿ ಸ್ಕೀಮ್, ಇದು ಬೇರೆ ರಸಗೊಬ್ಬಳಿಗಿಂತ ಹೇಗೆ ಭಿನ್ನವಾಗಿದೆ?
ಪ್ರಸ್ತುತವಾಗಿ ಯೂರಿಯಾದ ಗರಿಷ್ಠ ಮಾರಾಟ ಬೆಲೆಯನ್ನು (ಎಮ್ಆರ್ಪಿ) ರೂ 5,378 ಪ್ರತಿ ಟನ್ ಅಥವಾ 45 ಕೆಜಿ ಮೂಟೆಗೆ 242ರೂಪಾಯಿ ನಿಗದಿ ಮಾಡಲಾಗಿದೆ. ಇದನ್ನು ಉತ್ಪಾದಿಸುವ ಕಂಪನಿಗಳು ಇದೇ ಬೆಲೆಗೆ ಮಾರಬೇಕಿರುವುದರಿಂದ ಸಬ್ಸಿಡಿ (ಉತ್ಪಾದನಾ ವೆಚ್ಚ ಅಥವಾ ಆಮದು ಮತ್ತು ನಿಗದಿತ ಎಮ್ಆರ್ಪಿ ನಡುವಿನ ವ್ಯತ್ಯಾಸ) ಒಂದೇ ತೆರನಾಗಿರುವುದಿಲ್ಲ.
ಇದಕ್ಕೆ ತದ್ವಿರುದ್ಧವಾಗಿ ಉಳಿದೆಲ್ಲ ರಸಗೊಬ್ಬರಗಳ ಎಮ್ಆರ್ಪಿಗಳು ನಿಯಂತ್ರಸಲ್ಪಟ್ಟಿಲ್ಲ. ಹಾಗಾಗಿ, ಕಂಪನಿಗಳು ತಮ್ಮ ಉತ್ಪಾದನೆಯನ್ನು ತಾವು ಸರಿ ಅಂದುಕೊಳ್ಳುವ ಬೆಲೆಗೆ ಮಾರಬಹುದಾಗಿದೆ. ಸರ್ಕಾರ ಪ್ರತಿ ಟನ್ಗೆ ನಿಗದಿತ ಸಬ್ಸಿಡಿ ಮಾತ್ರ ನೀಡುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಸಬ್ಸಿಡಿ ಸ್ಥಿರವಾಗಿರುತ್ತದೆ ಆದರೆ ಎಮ್ಆರ್ಪಿ ಹೆಚ್ಚು ಕಮ್ಮಿಯಾಗುತ್ತಿರುತ್ತದೆ.
ಯೂರಿಯಾವಲ್ಲದ ಎಲ್ಲ ರಸಗೊಬ್ಬರಗಳಿಗೆ ಒಂದೇ ತೆರನಾದ ಸಬ್ಸಿಡಿ ಸಿಗುತ್ತದಯೇ?
ಹಾಗೇನಿಲ್ಲ, ಅವು ಪೋಷಕಾಂಶ ಆಧಾರಿತ ಸಬ್ಸಿಡಿಯಿಂದ (ಎನ್ಬಿಎಸ್) ನಿಯಂತ್ರಿಸಲ್ಪಪಡುತ್ತವೆ. 2020-21ರ ಸಾಲಿಗೆ ಕೇಂದ್ರವು ಎನ್ಬಿಎಸ್ ದರವನ್ನು ನೈಟ್ರೋಜನ್ಗೆ ರೂ 18.789/ಕೆಜಿ, ರೂ 14.888/ಕೆಜಿ ರಂಜಕಕ್ಕೆ, ರೂ10.116/ಕೆಜಿ ಪೊಟ್ಯಾಸಿಯಂಗೆ ಮತ್ತು ಗಂಧಕಕ್ಕೆ ರೂ 2.374 ನಿಗದಿಗೊಳಿಸಿದೆ.
ಹಾಗಾಗಿ, ಬೇರೆ ಬೇರೆ ರಸಗೊಬ್ಬರಗಳಲ್ಲಿನ ಫೋಷಕಾಂಶಗಳ ಆಧಾರದ ಮೇಲೆ ಪ್ರತಿ ಟನ್ ಸಬ್ಸಿಡಿ ಬೆಲೆ ವಿಭಿನ್ನವಾಗಿರುತ್ತದೆ. ಒಂದು ಟನ್ ಡಿಎಪಿ 260 ಕೆಜಿ (ಶೇ 46) ರಂಜಕ ಮತ್ತು 190 ಕೆಜಿ (ನೈಟ್ರೋಜನ್) ಹೊಂದಿರುವುದರಿಂದ ಅದರ ಸಬ್ಸಿಡಿ ರೂ 6,848 ಪ್ಲಸ್ 3,382.02 ಅಥವಾ ರೂ 10,231 ಆಗಿರುತ್ತದೆ.
ಆಗಲೇ ಚರ್ಚಿಸಿದ ಹಾಗೆ, 2020-21 ರ ಸಾಲಿಗೆ ಡಿಎಪಿ ಮೇಲಿನ ಸಬ್ಸಿಡಿ ಪ್ರತಿ ಟನ್ಗೆ ರೂ.10,231 ಆಗಿತ್ತು, ಅಥವಾ ಪ್ರತಿ 50-ಕೆಜಿ ಬ್ಯಾಗಿನ ಮೇಲೆ ರೂ. 511.50 ಆಗಿತ್ತು. ಬಹಳಷ್ಟು ಕಂಪನಿಗಳು ತೀರ ಇತ್ತೀಚಿನವರೆಗೆ ರೈತರಿಗೆ ಡಿಎಪಿಯನ್ನು ಪ್ರತಿ ಟನ್ಗೆ ರೂ 24,000 ರಂತೆ ಅಥವಾ ಪ್ರತಿ ಚೀಲಕ್ಕೆ ರೂ 1,200 ರಂತೆ ಮಾರುತ್ತಿದ್ದವು. ತನ್ನ ತಯಾರಾದ ಉತ್ಪಾದನೆ ಮತ್ತು ಆಮದು ಮಾಡಿಕೊಂಡ ಕಚ್ಚಾವಸ್ತುಗಳಾದ ಹರಳು ಫಾಸ್ಫೇಟ್, ಗಂಧಕ ಮತ್ತು ಫಾಸ್ಫಾರಿಕ ಌಸಿಡ್ ಮೊದಲಾದವುಗಳ ಆಂತರರಾಷ್ಟ್ರೀಯ ಬೆಲೆ ತುಟ್ಟಿಯೆನಿಸುವ ಹಾಗಿದ್ದರೆ ಕಂಪನಿಗಳು ಹಾಗೆ ಮಾಡಬಲ್ಲವು.
ಕಳೆದ ಅಕ್ಟೋಬರ್ವರಗೆ ಭಾರತದಲ್ಲಿ ಆಮದಾದ ಡಿಎಪಿ ಬೆಲೆ 400 ಡಾಲರ್ಗಳಿಗಿಂತ ಕಡಿಮೆಯಿತ್ತು. ಅದಕ್ಕೆ ಕಸ್ಟಮ್ಸ್ ಮತ್ತು ಪೋರ್ಟ್ ಹ್ಯಾಡ್ಲಿಂಗ್, ಬ್ಯಾಗಿಂಗ್, ಬಡ್ಡಿ, ದಾಸ್ತಾನು ಶುಲ್ಕ, ಟ್ರೇಡ್ ಮಾರ್ಜಿನ್ ಮೊದಲಾದವುಗಳ ಬಾಬತ್ತಿಗೆ ಸುಮಾರು ರೂ 3,000 ಸೇರಿದರೆ ಅದರ ಬೆಲೆ ರೂ 33.500 ಪ್ರತಿ ಟನ್ ಆಗುತ್ತದೆ, ಪ್ರತಿ ಟನ್ಗೆ 10,231 ರೂಪಾಯಿಗಳಷ್ಟು ಸಬ್ಸಿಡಿ ಪಡೆಯುವ ಕಂಪನಿಗಳು 24,000 ಪ್ರತಿ ಟನ್ ಅಥವಾ ಪ್ರತಿ ಚೀಲಕ್ಕೆ ರೂ, 1,200 ಗರಿಷ್ಠ ಬೆಲೆಗೆ ಮಾರುತ್ತವೆ.
ಆದರೆ ಕಳೆದ -7 ತಿಂಗಳಲ್ಲಿ ಜಾಗತಿಕ ಮಟ್ಟದಲ್ಲಿ ರಸಗೊಬ್ಬರಗಳ ಬೆಲೆ ಜಾಸ್ತಿಯಾಗಿದೆ. ಕಳೆದ ಅಕ್ಟೋಬರ್ನಿಂದ ಡಿಎಪಿಯ ಸರಾಸರಿ (ಸೆಎಫ್ಆರ್) ಬೇಲೆಗಳು ಪ್ರತಿ ಟನ್ಗೆ 395 ಡಾಲರ್ಗಳಿಂದ 770 ಡಾಲರ್ಗಳಿಗೆ ಹೆಚ್ಚಾಗಿವೆ. ಹಾಗೆಯೇ ಯೂರಿಯಾ ಬೆಲೆ ಸಹ ಹೆಚ್ಚಾಗಿರುವುದರಿಂದ ಹಳೆ ಬೆಲೆಗಳಿಗೆ ಮಾರಾಟ ಮಾಡುವುದು ಕಂಪನಿಗಳಿಗೆ ಸಾಧ್ಯವಾಗುತ್ತಿಲ್ಲ.
ಹಳೆ ದಾಸ್ತಾನು ಖಾಲಿಯಾದಂತೆಲ್ಲ ಕಂಪನಿಗಳು ಹೊಸ ಉತ್ಪಾದನೆಯನ್ನು ಹೆಚ್ಚಿನ ಬೆಲೆಗೆ ಮಾರಲಾರಂಭಿಸಿದವು. ಏಪ್ರಿಲ್ನಲ್ಲಿ ಗೊಬ್ಬರಗಳ ಮಾರಾಟ ಕುಂಠಿತಗೊಂಡಿರುತ್ತದೆ ಹಾಗಾಗಿ ಅದರ ಬೆಲೆ ಜಾಸ್ತಿಯಾಗದ್ದು ರೈತರ ಗಮನಕ್ಕೆ ಬಂದಿರಲಿಲ್ಲ. ಈ ತಿಂಗಳ ಎರಡನೇ ವಾರದಲ್ಲಿ ರಸಗೊಬ್ಬರಗಳ ಖರೀದಿಗೆ ಅವರು ತೆರಳಿದಾಗಲೇ ಅದು ಗೊತ್ತಾಗಿದ್ದು. ಅವರು ಮತ್ತೊಮ್ಮೊ ಸಿಡಿದೇಳುವುದಕ್ಕೆ ವೇದಿಕೆ ದೊರಕಿತ್ತು. ಡಿಎಪಿಯ ಪ್ರತಿ ಚೀಲಕ್ಕೆ ರೂ 700ರಷ್ಟು ಕೊಡುವುದನ್ನು ಅವರು ಅರಗಿಸಿಕೊಳ್ಳಲು ಸಾಧ್ಯವಿರಲಿಲ್ಲ. ಗಾಯದ ಮೇಲೆ ಬರೆ ಎಳೆದ ಹಾಗೆ ಕಳೆದ ವರ್ಷ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ 15 ರಷ್ಟು ಹೆಚ್ಚಾಗಿದೆ. ಇಂಥ ಪರಿಸ್ಥಿತಿಯಲ್ಲಿ ಬೆಲೆ ಏರಿಸಿದಂತೆ ಕಂಪನಿಗಳಿಗೆ ಸರ್ಕಾರ ಹೇಳುವುದು ಸಹ ಸಾಧ್ಯವುರಲಿಲ್ಲ.
ಹಾಗಾದರೆ ಸರ್ಕಾರ ಏನು ಮಾಡಿದೆ?
ಏಪ್ರಿಲ್ 9 ರಂದು ರಸಗೊಬ್ಬರಗಳ ಇಲಾಖೆಯು 2020-21 ರ ಸಾಲಿಗೆ ಎನ್ಬಿಎಸ್ ದರಗಳನ್ನು ನೋಟಿಫೈ ಮಾಡಿದೆ. ಕಳೆದ ವರ್ಷದ ಹಂತದಿಂದ ಅವು ಬದಲಾಗದಂತೆ ನೋಡಿಕೊಳ್ಳಲಾಗಿದೆ. ಆದರೆ ಕಂಪನಿಗಳಿಗೆ ಎಮ್ ಆರ್ಪಿಯನ್ನು ಹೆಚ್ಚು ಮಾಡದೆ ವಿಧಿಯಿರಲಿಲ್ಲ.
ಆದರೆ, ಬುಧವಾರದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಂದು ಸಭೆಯನ್ನು ಕರೆದಾಗ ಅವರಿಗೆ ರಸಗೊಬ್ಬರಗಳ ಜಾಗತಿಕ ದರಗಳ ಬಗ್ಗೆ ವಿವರಿಸಲಾಯಿತು. ಆ ಸಭೆಯಲ್ಲೇ ಡಿಎಪಿ ಮೇಲಿನ ಸಬ್ಸಿಡಿಯನ್ನು ಶೇಕಡಾ 140ರಷ್ಟು ಹೆಚ್ಚಿಸುವ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲಾಯಿತು.
ರಸಗೊಬ್ಬರಗಳ ಇಲಾಖೆ ಸಹ ರಂಜಕಕ್ಕೆ ( ರೂ 14.888 ರಿಂದ ರೂ. 45.323) ಹೆಚ್ಚಿನ ಎನ್ಬಿಎಸ್ ದರವನ್ನು ನೋಟಿಫೈ ಮಾಡಿ ಇತರ ಮೂರು ಪೋಷಕಾಂಶಗಾಳಾದ ನೈಟ್ರೋಜನ್, ಪೊಟ್ಯಾಸಿಯಂ ಮತ್ತು ಗಂಧಕದ ದರಗಳನ್ನು ಬದಲಾಯಿಸದೆ ಹಾಗೆ ಬಿಟ್ಟಿದೆ. ಇದು ಕಂಪನಿಗಳಿಗೆ ಡಿಎಪಿಯನ್ನು ಮೊದಲಿನ ಎಮ್ಆರ್ಪಿಗೆ ಮಾರಲು ನೆರವಾಗುತ್ತದೆ
ಇದನ್ನೂ ಓದಿ: PM Modi Announcement: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ, ಲಾಕ್ಡೌನ್ ಎಂಬುದು ರಾಜ್ಯಗಳ ಕೊನೆ ಆಯ್ಕೆಯಾಗಲಿ: ಮೋದಿ
Published On - 6:24 pm, Fri, 21 May 21