Fact Check: ಮಹಾಕುಂಭದಲ್ಲಿ ಆರತಿ ಮಾಡುವಾಗ ಶಿವನ ರೂಪ ಕಂಡಿದ್ದು ನಿಜವೇ?
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂದಿದೆ. ನಮ್ಮ ತನಿಖೆಯಲ್ಲಿ ವೈರಲ್ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ಕಂಡುಬಂದಿದೆ. ಮೂಲ ವಿಡಿಯೋ ರಿಷಿಕೇಶದ್ದಾಗಿದ್ದು, ಅದನ್ನು ಎಡಿಟ್ ಮಾಡಿ ಮತ್ತು ಅದಕ್ಕೆ ಶಿವನ ಚಿತ್ರವನ್ನು ಸೇರಿಸಲಾಗಿದೆ.
ಇಲ್ಲಿಯವರೆಗೆ, ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ 10 ಕೋಟಿಗೂ ಹೆಚ್ಚು ಭಕ್ತರು ಸ್ನಾನ ಮಾಡಿದ್ದಾರೆ. ಇದರ ನಡುವೆ ಮಹಾಕುಂಭದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಗಟ್ಟಲೆ ವಿಡಿಯೋಗಳು ಕೂಡ ಹರಿದಾಡುತ್ತಿವೆ. ಇದೀಗ ಗಂಗಾ ಆರತಿಯ ಸಮಯದಲ್ಲಿ ಶಿವನ ಚಿತ್ರವನ್ನು ಕಾಣುವ ವಿಡಿಯೋ ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ಅನೇಕರು ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ, ಈ ವಿಡಿಯೋವು ಪ್ರಯಾಗ್‌ರಾಜ್‌ನದ್ದು ಎಂದು ಹೇಳಲಾಗುತ್ತಿದೆ, ಅಲ್ಲಿ ಆರತಿಯ ಸಮಯದಲ್ಲಿ ಹಲವು ರೀತಿಯ ಪವಾಡ ಸಂಭವಿಸಿದೆ ಮತ್ತು ಭಗವಾನ್ ಶಿವನ ಚಿತ್ರವು ಗೋಚರಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ವೈರಲ್ ಆಗುತ್ತಿರುವುದು ಏನು?:
ಫೇಸ್ಬುಕ್ ಬಳಕೆದಾರರೊಬ್ಬರು ಈ ವೈರಲ್ ವಿಡಿಯೋವನ್ನು ಹಂಚಿಕೊಳ್ಳುವಾಗ, ‘‘ಪ್ರಯಾಗರಾಜ್ ಮಹಾ ಕುಂಭದಲ್ಲಿ ಒಂದು ಪವಾಡ ಸಂಭವಿಸಿತು, ಶಿವನು ತನ್ನ ರೂಪವನ್ನು ಓಂ ನಮಃ ಶಿವಾಯ ಬಂ ಬಂ ಭೋಲೇ ಎಂದು ತೋರಿಸಿದನು’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂದಿದೆ. ನಮ್ಮ ತನಿಖೆಯಲ್ಲಿ ವೈರಲ್ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ಕಂಡುಬಂದಿದೆ. ಮೂಲ ವಿಡಿಯೋ ರಿಷಿಕೇಶದ್ದಾಗಿದ್ದು, ಅದನ್ನು ಎಡಿಟ್ ಮಾಡಿ ಮತ್ತು ಅದಕ್ಕೆ ಶಿವನ ಚಿತ್ರವನ್ನು ಸೇರಿಸಲಾಗಿದೆ.
Fact Check: ಪ್ರಿಯಾಂಕಾ ಚೋಪ್ರಾ ಮಹಾಕುಂಭಕ್ಕೆ ಬಂದು ಪವಿತ್ರ ಸ್ನಾನ ಮಾಡಿದ್ದು ನಿಜವೇ?, ಇಲ್ಲಿದೆ ಸತ್ಯಾಂಶ
ವೈರಲ್ ಕ್ಲೈಮ್‌ನ ಸತ್ಯವನ್ನು ತಿಳಿಯಲು, ನಾವು ಗೂಗಲ್ ರಿವರ್ಸ್ ಇಮೇಜ್ ಸಹಾಯದಿಂದ ಈ ವಿಡಿಯೋದ ಕೀಫ್ರೇಮ್‌ಗಳನ್ನು ಹುಡುಕಿದ್ದೇವೆ. ಆಗ ಈ ವಿಡಿಯೋವನ್ನು 2022 ರಲ್ಲಿ ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಆದರೆ, ಈ ಮೂಲ ವಿಡಿಯೋದಲ್ಲಿ ಶಿವನ ಯಾವುದೇ ಚಿತ್ರ ಇರಲಿಲ್ಲ.
ಈ ವಿಡಿಯೋ ಅಸಲಿಗೆ ಎಲ್ಲಿಂದ ಬಂದಿದೆ ಎಂದು ಈಗ ನಾವು ಹುಡುಕಿದಾಗ ಕಾಶಿಯಿಂದ ಮತ್ತು ಹರಿದ್ವಾರದಿಂದ ಎಂದು ಹೇಳಲಾಗಿದೆ. ಖಚಿತಪಡಿಸಲು ನಾವು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಅದರಲ್ಲಿ ಶತ್ರುಘ್ನ ಘಾಟ್ ಬರೆದಿರುವುದನ್ನು ಕಾಣಬಹುದು. ಕೀವರ್ಡ್ ಹುಡುಕಾಟದ ಮೂಲಕ ನಾವು ಋಷಿಕೇಶದಲ್ಲಿರುವ ಶತ್ರುಘ್ನ ಘಾಟ್ ಬಗ್ಗೆ ತಿಳಿದುಕೊಂಡಿದ್ದೇವೆ. ಈ ಘಾಟ್‌ನ ಚಿತ್ರಗಳು ವೈರಲ್ ವಿಡಿಯೋವನ್ನು ಹೋಲುತ್ತವೆ.
ಈ ಮೂಲಕ ವೈರಲ್ ವಿಡಿಯೋ ಋಷಿಕೇಶದ್ದು ಮತ್ತು ಇದು ಎಡಿಟ್ ಮಾಡಿದ ವಿಡಿಯೋ ಎಂಬುದು ಸ್ಪಷ್ಟವಾಯಿತು. ಆದರೆ ಪ್ರಯಾಗ್‌ರಾಜ್ ಮಹಾಕುಂಭಮೇಳದಲ್ಲಿ ಇಂತಹ ಪವಾಡ ಸಂಭವಿಸಿದೆಯೇ ಎಂದು ಗೂಗಲ್ ಮೂಲಕ ಹುಡುಕಿದಾಗ ಅಂತಹ ಯಾವುದೇ ಅಧಿಕೃತ ಸುದ್ದಿ ನಮಗೆ ಎಲ್ಲಿಯೂ ಕಂಡುಬಂದಿಲ್ಲ.
ಹೀಗಾಗಿ ಮಹಾಕುಂಭದಲ್ಲಿ ಆರತಿ ಮಾಡುವ ವೇಳೆ ಶಿವನ ಚಿತ್ರವನ್ನು ತೋರಿಸುವ ಹೆಸರಿನಲ್ಲಿ ವೈರಲ್ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಕಂಡುಹಿಡಿದಿದೆ. ಋಷಿಕೇಶದ 2 ವರ್ಷಗಳ ಹಳೆಯ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಮತ್ತು ಅದನ್ನು ಪ್ರಯಾಗ್ರಾಜ್ ಎಂದು ಹೇಳುವ ಮೂಲಕ ಸುಳ್ಳು ಪ್ರಚಾರ ಮಾಡಲಾಗುತ್ತಿದೆ.
ಉತ್ತರಪ್ರದೇಶದ ಪ್ರಯಾಗರಾಜ್ ನಗರದಲ್ಲಿ ನಡೆಯುತ್ತಿರುವ ಮಹಾಕುಂಭವು ಕುಂಭಮೇಳಗಳ ಕುಂಭಮೇಳ ಎನಿಸಿದೆ. ಇದು ಪ್ರತೀ 144 ವರ್ಷಗಳಿಗೊಮ್ಮೆ ನಡೆಯುತ್ತದೆ. ಒಂದು ಕುಂಭ ಮೇಳ 12 ವರ್ಷಗಳಿಗೊಮ್ಮೆ ನಡೆಯುತ್ತದೆ. 12 ಕುಂಭಮೇಳಗಳಿಗೊಮ್ಮೆ ಮಹಾಕುಂಭ ನಡೆಯುತ್ತದೆ. ಅಷ್ಟರಮಟ್ಟಿಗೆ ಈ ಬಾರಿಯ ಕುಂಭ ಮೇಳ ಮಹತ್ವದ್ದಾಗಿದೆ. ದೇಶ ವಿದೇಶಗಳಿಂದ ಈ ಬಾರಿಯ ಮಹಾಕುಂಭಕ್ಕೆ ನಾಲ್ಕು ಕೋಟಿಗೂ ಅಧಿಕ ಜನರು ಭೇಟಿ ನೀಡಲಿದ್ದಾರೆ. ಜನವರಿ 13ರಂದು ಆರಂಭವಾಗಿರುವ ಈ ಮಹಾಕುಂಭವು ಫೆಬ್ರುವರಿ 26ರವರೆಗೂ ಇರಲಿದೆ. ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿನ ಪವಿತ್ರ ಗಂಗಾ ನದಿ ನೀರಲ್ಲಿ ಮಿಂದೆದ್ದರೆ ಜೀವನ ಪಾವನ ಆಗುತ್ತದೆ ಎನ್ನುವ ನಂಬಿಕೆ ಇದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ