G20 Summit Budget: ಜಿ-20 ಶೃಂಗಸಭೆಗೆ ವ್ಯಯಿಸಿದ ಹಣವೆಷ್ಟು? ಇಲ್ಲಿದೆ ಮಾಹಿತಿ

ಜಿ-20 ಶೃಂಗಸಭೆಯ ಒಟ್ಟು ಬಜೆಟ್ (G20 Summit Budget)​​ ಎಷ್ಟು ಎಂಬ ಮಾಹಿತಿಯನ್ನು ಸರ್ಕಾರ ನೀಡಿದೆ. ಈ ಸಭೆಯಿಂದ ದೆಹಲಿ ವಾತಾವರಣದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಕಂಡಿದೆ. ಈ ಸಭೆಗಾಗಿ ರಸ್ತೆಗಳನ್ನು ಸುಂದರಗೊಳಿಸಲಾಗಿದ್ದು, ಪ್ರತಿಮೆಗಳು ಮತ್ತು ಕಾರಂಜಿಗಳಂತಹ ಅಲಂಕಾರಿಕ ತುಣುಕುಗಳನ್ನು ಸ್ಥಾಪಿಸಲಾಗಿದೆ.

G20 Summit Budget: ಜಿ-20 ಶೃಂಗಸಭೆಗೆ ವ್ಯಯಿಸಿದ ಹಣವೆಷ್ಟು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
|

Updated on: Sep 11, 2023 | 11:19 AM

ದೆಹಲಿ, ಸೆ.11: ಭಾರತ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಎರಡು (ಸೆ.9, 10) ದಿನಗಳ ಕಾಲ ನಡೆದ ಜಿ-20 ಶೃಂಗಸಭೆಗೆ (G20 Summit) ನೆನ್ನೆ (ಸೆ.10) ತೆರೆ ಬಿದ್ದಿದೆ. ಇನ್ನು ಈ ಶೃಂಗಸಭೆಯ ಒಟ್ಟು ಬಜೆಟ್ (G20 Summit Budget)​​ ಎಷ್ಟು ಎಂಬ ಮಾಹಿತಿಯನ್ನು ಸರ್ಕಾರ ನೀಡಿದೆ. ಈ ಸಭೆಯಿಂದ ದೆಹಲಿ ವಾತಾವರಣದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಕಂಡಿದೆ. ಈ ಸಭೆಗಾಗಿ ರಸ್ತೆಗಳನ್ನು ಸುಂದರಗೊಳಿಸಲಾಗಿದ್ದು, ಪ್ರತಿಮೆಗಳು ಮತ್ತು ಕಾರಂಜಿಗಳಂತಹ ಅಲಂಕಾರಿಕ ತುಣುಕುಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕ ಸ್ಥಳಗಳು ಮತ್ತು ಫುಟ್ ಓವರ್ ಬ್ರಿಡ್ಜ್ / ಫ್ಲೈಓವರ್‌ಗಳಲ್ಲಿ ಬಣ್ಣ ಮತ್ತು ದುರಸ್ಥಿತಿಗಳನ್ನು ಮಾಡಲಾಗಿದೆ. ಈ ಎಲ್ಲ ಕೆಲಸಗಳಿಗೆ ಹಾಗೂ ಶೃಂಗಸಭೆಗೆ ಸರ್ಕಾರ ಮಾಡಿದ ಖರ್ಚು ಎಷ್ಟು ಎಂಬ ಸಾಮಾನ್ಯ ಪ್ರಶ್ನೆ ಮೂಡುವುದು ಸಹಜ. ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಟ್ವಿಟರ್​​ನಲ್ಲಿ (X) ಹಂಚಿಕೊಂಡಿದ್ದಾರೆ.

G20 ಶೃಂಗಸಭೆ 2023 ಬಜೆಟ್

ಭಾರತದ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಸಚಿವ ಮೀನಾಕ್ಷಿ ಲೇಖಿ ಅವರು ನೀಡಿದ ವರದಿಗಳ ಪ್ರಕಾರ, ಜಿ-20 ಶೃಂಗಸಭೆ ನಡೆಯುವ ಸ್ಥಳವನ್ನು ಸುಂದರಗೊಳಿಸಲು ಕೇಂದ್ರ ಸರ್ಕಾರ ಸುಮಾರು ₹4,110.75 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ. ರಾಜಧಾನಿಯಲ್ಲಿ ರಸ್ತೆಗಳ ನಿರ್ಮಾಣ, ದುರಸ್ತಿ, ನಿರ್ವಹಣೆ ಮತ್ತು ಸೌಂದರ್ಯೀಕರಣಕ್ಕಾಗಿ ಕೇಂದ್ರ ಸರ್ಕಾರ ₹ 700 ಕೋಟಿ ಮಂಜೂರು ಮಾಡಿದೆ. ಈ ಹಣವನ್ನು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಮತ್ತು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ನಗರದ ಬದಲಾವಣೆಗೆ ಬಳಸಿಕೊಂಡಿವೆ ಎಂದು ಹೇಳಿದ್ದಾರೆ. G20 ಶೃಂಗಸಭೆ 2023ಯ ಇತರ ಖರ್ಚುಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ.

G20 ಶೃಂಗಸಭೆ 2023 ವೆಚ್ಚದ ವಿಭಜನೆ

ಸಚಿವೆ ಮೀನಾಕ್ಷಿ ಲೇಖಿ ಅವರು ಟ್ವಿಟರ್​​ನಲ್ಲಿ ಹಂಚಿಕೊಂಡ ಮಾಹಿತಿಗಳು ಪ್ರಕಾರ, ಜಿ 20ಗಾಗಿ ಯಾವೆಲ್ಲ ಕೆಲಸಗಳಿಗೆ ಹಣವನ್ನು ಖರ್ಚು ಮಾಡಲಾಗಿದೆ:

1. ತೋಟಗಾರಿಕೆ ಸುಧಾರಣೆ

2. ರಸ್ತೆ ಗುರುತು ಕರ್ಬ್ ಸ್ಟೋನ್ ಪ್ರತಿಫಲಕಗಳು ಮತ್ತು ಚಿಹ್ನೆಗಳು

3. ಕ್ಯಾರೇಜ್‌ವೇಗಳ ಮೈಕ್ರೋ ಸರ್ಫೇಸಿಂಗ್/ಬ್ಲ್ಯಾಕ್‌ಟಾಪ್

4. ಬೀದಿ ದೀಪಗಳ ನಿರ್ವಹಣೆ ಮತ್ತು ಕಾಣೆಯಾದ ದೀಪಗಳನ್ನು ಸರಿಪಡಿಸುವುದು

5. ಪ್ಯಾಲೇಡ್ ಲೈಟಿಂಗ್ನೊಂದಿಗೆ ಶಿಲ್ಪಗಳನ್ನು ಸ್ಥಾಪಿಸುವುದು

6. ಬೀದಿ ಪೀಠೋಪಕರಣಗಳ ದುರಸ್ಥಿತಿ

7. ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರಕಲೆ

8. ಫುಟ್‌ಪಾತ್ ನಿರ್ವಹಣೆ

9. ಸಾರ್ವಜನಿಕ ಸ್ಥಳಗಳಿಂದ ಅತಿಕ್ರಮಣ (C&D) ತ್ಯಾಜ್ಯಗಳು/MSW ತೆರವುಗೊಳಿಸುವುದು

10. ಪೇಂಟಿಂಗ್ ಮತ್ತು ಫುಟ್ ಓವರ್ ಬ್ರಿಡ್ಜ್‌ಗಳು/ಫ್ಲೈಓವರ್‌ಗಳನ್ನು ತೊಳೆಯುವುದು

11. G20 ಬ್ರ್ಯಾಂಡಿಂಗ್

ಇದನ್ನೂ ಓದಿ:ಇದು ಜನರ ಜಿ20 ಎಂದ ಪ್ರಧಾನಿ ಮೋದಿ, ಆಫ್ರಿಕನ್ ಯೂನಿಯನ್​ಗೆ ಸದಸ್ಯತ್ವ ಘೋಷಣೆ

₹ 4,110.75 ಕೋಟಿ ಇಲಾಖೆಗಳಿಗೆ ಹಂಚಿಕೆ ಹೇಗೆ ?

1. ಎನ್‌ಡಿಎಂಸಿ- ಸುಮಾರು ₹60 ಕೋಟಿ

2. ಡಿಡಿಎ- ಸುಮಾರು ₹18 ಕೋಟಿ

3. ರಸ್ತೆ ಮೇಲ್ಮೈ ಸಾರಿಗೆ ಸಚಿವಾಲಯ- ಸುಮಾರು ₹26 ಕೋಟಿ

4. ಪಿಡಬ್ಲ್ಯುಡಿ- ಸುಮಾರು ₹45 ಕೋಟಿ

5.ಎಂಸಿಡಿ – ಸುಮಾರು ₹ 5 ಕೋಟಿ

6. ಎಂಇಎಸ್/ಎಂಇಎ- ಸುಮಾರು ₹0.75 ಕೋಟಿ

7. ಅರಣ್ಯ ಇಲಾಖೆ- ಸುಮಾರು ₹ 16 ಕೋಟಿ

8. ದೆಹಲಿ ಪೊಲೀಸ್- ಸುಮಾರು ₹ 340 ಕೋಟಿ

9. ITPO – ಸುಮಾರು ₹ 3,600 ಕೋಟಿ

ಎರಡು ದಿನಗಳ ಜಿ-20 ಶೃಂಗಸಭೆ ಮುಕ್ತಾಯಗೊಂಡಿದ್ದು, ಈ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನು ಈ ಸಭೆಯಲ್ಲಿ ಆಫ್ರಿಕನ್ ಒಕ್ಕೂಟಕ್ಕೆ G20 ಖಾಯಂ ಸದಸ್ಯತ್ವವನ್ನು ನೀಡಲಾಗಿದೆ. ಪ್ರಧಾನಿ ಮೋದಿ ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು ಘೋಷಿಸಿದರು, ಭಾರತ ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್ಗೆ ಸಂಬಂಧಿಸಿದ ಯೋಜನೆಯನ್ನು ಸಹ ಚರ್ಚಿಸಲಾಗಿದೆ ಮತ್ತು ರಷ್ಯಾ ಕುರಿತು ಮಹತ್ವದ ಚರ್ಚೆಗಳು ನಡೆದಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ