ಭಾರತೀಯರು ಸ್ವಿಸ್ ಬ್ಯಾಂಕ್ಗಳಲ್ಲಿ ಹೂಡಿರುವ ಹಣದ ಬಗ್ಗೆ ಸ್ವಿಜರ್ಲ್ಯಾಂಡ್ ಅಧಿಕಾರಿಗಳಿಂದ ವಿವರ ಕೇಳಿದ ಭಾರತ ಸರ್ಕಾರ
ಠೇವಣಿ ಹೆಚ್ಚಿರುವುದಕ್ಕೆ ಸಚಿವಾಲಯ ಕಾರಣಗಳನ್ನೂ ಪಟ್ಟಿ ಮಾಡಿದೆ. ಭಾರತೀಯ ಕಂಪನಿಗಳಿಂದ ಹೆಚ್ಚಾಗಿರುವ ಬ್ಯಾಂಕ್ ವ್ಯವಹಾರ, ಸ್ವಿಸ್ ಬ್ಯಾಂಕ್ಗಳ ಭಾರತೀಯ ಶಾಖೆಗಳ ವ್ಯವಹಾರಗಳಿಂದಾಗಿ ಠೇವಣಿಗಳಲ್ಲಿ ಹೆಚ್ಚಳ ಮತ್ತು ಭಾರತ ಹಾಗು ಸ್ವಿಸ್ ಬ್ಯಾಂಕ್ಗಳ ನಡುವಿನ ಆಂತರಿಕ ವ್ಯವಹಾರ ಕಾರಣ ಎಂದು ಅದು ಹೇಳಿದೆ.
ನವದೆಹಲಿ: ಶನಿವಾರದಂದು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಹಣಕಾಸು ಸಚಿವಾಲಯವು, 2019 ರಿಂದ ಭಾರತೀಯರು ಸ್ವಿಸ್ ಬ್ಯಾಂಕ್ಗಳಲ್ಲಿ ಹಣ ಹೂಡುವ ಪ್ರಮಾಣ ಕಡಿಮೆಯಾಗಿದೆ ಎಂದು ಎನ್ನುವುದನ್ನು ದೃಢೀಕರಿಸಿದೆಯಾದರೂ ಇದಕ್ಕೆ ಸಂಬಂಧಿಸಿದ ಕಾರಣಗಳು ಮತ್ತು 2020ರಲ್ಲಿ ವ್ಯಕ್ತಿಗತವಾಗಿ ಮತ್ತು ಸಾಂಸ್ಥಿಕವಾಗಿ ಹಣ ಹೂಡುವಿಕೆಯಲ್ಲಿ ಆಗಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ಅಲ್ಲಿನ ಬ್ಯಾಂಕ್ ಅಧಿಕಾರಿಗಳ ಅಭಿಪ್ರಾಯವನ್ನು ಕೇಳಿದೆ. ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸಚಿವಾಲಯವು ಹೂಡುವಿಕೆ ಅರ್ಧದಷ್ಟು ಕಡಿಮೆಯಾಗಿದೆ ಅಂತ ಹೇಳಿದೆ ಆದರೆ, ಅಂಕಿ-ಅಂಶಗಳನ್ನು ಮಾತ್ರ ಬಹಿರಂಗಗೊಳಿಸಿಲ್ಲ. ಸ್ವಿಜರ್ಲ್ಯಾಂಡ್ನ ಕೇಂದ್ರೀಯ ಬ್ಯಾಂಕ್ನ ದತ್ತಾಂಶವನ್ನು ಉಲ್ಲೇಖಿಸಿ ಜೂನ್ 17 ರಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಮಾಡಿರುವ ವರದಿಯ ಪ್ರಕಾರ 2020ರಲ್ಲಿ ಸ್ವಿಸ್ ಬ್ಯಾಂಕ್ಗಳಲ್ಲಿ ಮತ್ತು ಅವುಗಳ ಭಾರತೀಯ ಶಾಖೆಗಳಲ್ಲಿ, ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಬಾರತೀಯರು ವ್ಯಕ್ತಿಗತವಾಗಿ, ಮತ್ತು ಸಂಸ್ಥೆಗಳ ಮೂಲಕ ಠೇವಣಿ ಮಾಡಿರುವ ಹಣ ಭಾರತೀಯ ಕರೆನ್ಸಿ ಪ್ರಕಾರ 20,700 ಕೋಟಿ ರೂಪಾಯಿಗಳಾಗಿದ್ದು ಇದು ಕಳೆದ 13 ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ಹಣ ಹೂಡುವಿಕೆಯಾಗಿದೆ.
ಹಣಕಾಸು ಸಚಿವಾಲಯವು ತನ್ನ ಹೇಳಿಕೆಯಲ್ಲಿ; ಈ ಅಂಕಿ-ಅಂಶಗಳು ಭಾರತೀಯರು ಸ್ವಿಸ್ ಬ್ಯಾಂಕ್ಗಳಲ್ಲಿ ಠೇವಣಿ ರೂಪದಲ್ಲಿ ಹೂಡಿರುವರರೆಂದು ಆರೋಪಿಸಲಾಗಿರುವ ಹಣದ ಪ್ರಮಾಣವನ್ನು ಸೂಚಿಸುವುದಿಲ್ಲ. ಅಲ್ಲದೆ, ಸದರಿ ಅಂಕಿ-ಆಂಶಗಳಲ್ಲಿ ಭಾರತೀಯರು, ಅನಿವಾಸಿ ಭಾರತೀಯರು ಮತ್ತು ಇತರರು ತೃತೀಯ ರಾಷ್ಟ್ರಗಳ ಸಂಸ್ಥೆಗಳ ಹೆಸರಿನಲ್ಲಿ ಹೂಡಿರುವ ಹಣ ಸೇರಿಲ್ಲ, ಎಂದು ತಿಳಿಸಿದೆ
ಸಚಿವಾಲಯದ ಹೇಳಿಕೆ ಪ್ರಕಾರ ಗ್ರಾಹಕ ಠೇವಣಿಗಳು 2019 ರಿಂದ ನಿಜ ಅರ್ಥದಲ್ಲಿ ಕಡಿಮೆಯಾಗಿವೆ. ಆಸ್ತಿಗಳ ಮೂಲಕ ಮೂಲಕ ಮಾಡಿರುವ ಠೇವಣಿ ಸಹ 2019 ರ ಅಂತ್ಯದ ಹೊತ್ತಿಗೆ ಅರ್ಧಷಷ್ಟು ಕಡಿಮೆಯಾಗಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಬಾಂಡ್, ಸೆಕ್ಯೂರಿಟೀಸ್ ಮತ್ತು ಇತರ ಹಣಕಾಸಿನ ರೂಪಗಳ ಠೇವಣಿಗಳಲ್ಲಿ ಅತಿಹೆಚ್ಚು ವೃದ್ಧಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಠೇವಣಿ ಹೆಚ್ಚಿರುವುದಕ್ಕೆ ಸಚಿವಾಲಯ ಕಾರಣಗಳನ್ನೂ ಪಟ್ಟಿ ಮಾಡಿದೆ. ಭಾರತೀಯ ಕಂಪನಿಗಳಿಂದ ಹೆಚ್ಚಾಗಿರುವ ಬ್ಯಾಂಕ್ ವ್ಯವಹಾರ, ಸ್ವಿಸ್ ಬ್ಯಾಂಕ್ಗಳ ಭಾರತೀಯ ಶಾಖೆಗಳ ವ್ಯವಹಾರಗಳಿಂದಾಗಿ ಠೇವಣಿಗಳಲ್ಲಿ ಹೆಚ್ಚಳ ಮತ್ತು ಭಾರತ ಹಾಗು ಸ್ವಿಸ್ ಬ್ಯಾಂಕ್ಗಳ ನಡುವಿನ ಆಂತರಿಕ ವ್ಯವಹಾರ ಕಾರಣ ಎಂದು ಅದು ಹೇಳಿದೆ.
ಸ್ವಿಸ್ ಬ್ಯಾಂಕ್ಗಳಲ್ಲಿ ಹಣ ಹೂಡುವಿಕೆ ಹೆಚ್ಚಿರುವ ಅಥವಾ ತಗ್ಗಿರುವುದರ ಹಿಂದಿನ ಕಾರಣಗಳನ್ನು ಕುರಿತು ಬ್ಯಾಂಕ್ ಅಧಿಕಾರಗಳ ದೃಷ್ಟಿಕೋನವನ್ನು ಕೇಳಲಾಗಿದೆ ಎಂದು ಸಚಿವಾಲಯ ಹೇಳಿದೆ. ತೆರಿಗೆ ವಿಷಯಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಸ್ವಿಜರ್ಲ್ಯಾಂಡ್ ನಡುವೆ ಸ್ವಯಂಚಾಲಿತ ಮಾಹಿತಿ ವಿನಿಮಯ 2018ರಿಂದ ಜಾರಿಯಲ್ಲಿದೆ.
ಈ ಚೌಕಟ್ಟಿನಡಿಯಲ್ಲಿ ಸ್ವಿಸ್ ಬ್ಯಾಂಕ್ಗಳಲ್ಲಿ ಖಾತೆಗಳನ್ನು ಹೊಂದಿರುವ ಎಲ್ಲ ಭಾರತೀಯರು 2018ರಿಂದ ನಡೆಸುತ್ತಿರುವ ಬ್ಯಾಂಕಿಂಗ್ ವ್ಯವಹಾರದ ಸಮಗ್ರ ಮಾಹಿತಿಯನ್ನು ಸೆಪ್ಟೆಂಬರ್ 2019ರಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತದ ತೆರಿಗೆ ಅಧಿಕಾರಿಗಳಿಗೆ ಒದಗಿಸಲಾಯಿತು ಮತ್ತು ಈ ಪ್ರಕ್ರಿಯೆ ಪ್ರತಿವರ್ಷ ಜಾರಿಯಲ್ಲಿದೆ. ಎರಡು ರಾಷ್ಟ್ರಗಳ ನಾಗರಿಕರ ಹಣಕಾಸು ಖಾತೆ ಮಾಹಿತಿಯ ಪರಸ್ಪರ ವಿನಿಮಯ 2019 ರಲ್ಲಿ ನಡೆದಂತೆಯೇ 2020ರಲ್ಲೂ ನಡೆಯಿತು ಎಂದ ಸಚಿವಾಲಯ ಹೇಳಿದೆ.
ಸ್ವಿಸ್ ನ್ಯಾಶನಲ್ ಬ್ಯಾಂಕ್ (ಎಸ್ ಎನ್ ಬಿ ) ನೀಡಿರುವ ದತ್ತಾಂಶದ ಪ್ರಕಾರ 2019 ರ ಅಂತ್ಯದ ಹೊತ್ತಿಗೆ ಭಾರತದ ನಾಗರಿಕರು ಸ್ವಿಸ್ ಬ್ಯಾಂಕ್ಗಳಲ್ಲಿ ಹೂಡಿರುವ ಹಣದ ಮೊತ್ತ ಸುಮಾರು ರೂ 6,626 ಕೋಟಿಗಳಷ್ಟಿದೆ ಮತ್ತು 2020 ರಲ್ಲಿ ಅದರ ಪ್ರಮಾಣ ಕಡಿಮೆಯಾಗುತ್ತಿದೆ.
ಒಟ್ಟು ಮೊತ್ತ ರೂ 20,706 ಕೋಟಿ ಸ್ವಿಸ್ ಬ್ಯಾಂಕ್ಗಳು ತಮ್ಮ ಭಾರತೀಯ ಠೇವಣಿದಾರರಿಗೆ 2020ರಲ್ಲಿ ಹಿಂತಿರುಗಿಸಬೇಕಿದ್ದ ಮೊತ್ತವಾಗಿದೆ ಎಂದು ಎಸ್ ಎನ್ ಬಿ ವಿವರಿಸಿದೆ. ಇದರಲ್ಲಿ ಸುಮಾರು 4,000 ಕೋಟಿ ರೂಪಾಯಿ ಗ್ರಾಹಕರ ಠೇವಣಿಗಳು, ರೂ, 3,100 ಕೋಟಿ ಇತರ ಬ್ಯಾಂಕ್ಗಳಲ್ಲಿ ತೊಡಗಿರುವ ಹಣ, ಸುಮಾರು 16.7 ಕೋಟಿ ರೂಪಾಯಿ ಟ್ರಸ್ಟ್ ಮತ್ತು ಆಸ್ತಿಗಳ ಮೂಲಕ ಜಮೆಯಾಗಿರುವ ಹಣ ಮತ್ತು ಸುಮಾರು 13,500 ಕೋಟಿ ರೂಪಾಯಿ ಗ್ರಾಹಕರಿಗೆ ವಿವಿಧ ರೂಪಗಳಲ್ಲಿ ಹಿಂತಿರುಗಿಸಬೇಕಿರುವ ಹಣದ ಮೊತ್ತ ಸೇರಿವೆ ಎಂದು ಎಸ್ ಎನ್ ಬಿ ಹೇಳಿದೆ.
ಗ್ರಾಹಕರ ಠೇವಣಿ ಖಾತೆಗಳೆಂದು ವರ್ಗೀಕೃತಗೊಂಡಿರುವ ಮೊತ್ತಗಳು 2019 ಅಂತ್ಯದ ಹೊತ್ತಿಗೆ 44,178 ಕೋಟಿ ರೂಪಾಯಿಗಳಿಗೆ ಇಳಿದಿವೆ ಮತ್ತು ಇದೇ ಅವಧಿಯಲ್ಲಿ ಆಸ್ತಿಗಳ ಮೂಲಕ ಜಮೆಯಾಗಿರುವ ಡೆಪಾಸಿಟ್ಗಳು ರೂ. 59.5 ಕೋಟಿಗಳಿಂದ ಅರ್ಧದಷ್ಟು ಕಡಿಮೆಯಾಗಿವೆ ಹಾಗೂ ಇತರ ಬ್ಯಾಂಕ್ಗಳಲ್ಲಿ ತೊಡಗಿಸಿರುವ ಹಣ 706 ಕೋಟಿ ರೂಪಾಯಿಗಳಿಂದ ತೀವ್ರ ಏರಿಕೆ ಕಂಡಿದೆ.