ಭಾರತದಲ್ಲಿ 2023ರ ಬದಲು 3 ವರ್ಷ ತಡವಾಗಿ ಬುಲೆಟ್ ಟ್ರೈನ್ ಸಂಚಾರ!; ಯೋಜನೆ ವಿಳಂಬಕ್ಕೆ ಕಾರಣ ಇಲ್ಲಿದೆ

ಸಂಪೂರ್ಣ 508 ಕಿ.ಮೀ ಉದ್ದದ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯು ಮಹಾರಾಷ್ಟ್ರದ 9 ಹಳ್ಳಿಗಳಲ್ಲಿ ಭೂ ಸ್ವಾಧೀನದ ಸಮಸ್ಯೆಯಿಂದ ವಿಳಂಬವಾಗಿದೆ.

ಭಾರತದಲ್ಲಿ 2023ರ ಬದಲು 3 ವರ್ಷ ತಡವಾಗಿ ಬುಲೆಟ್ ಟ್ರೈನ್ ಸಂಚಾರ!; ಯೋಜನೆ ವಿಳಂಬಕ್ಕೆ ಕಾರಣ ಇಲ್ಲಿದೆ
ಬುಲೆಟ್ ಟ್ರೇನ್‌
Follow us
S Chandramohan
| Updated By: ಸುಷ್ಮಾ ಚಕ್ರೆ

Updated on:Dec 20, 2021 | 5:37 PM

ನವದೆಹಲಿ: ಚೀನಾ, ಜಪಾನ್ ದೇಶಗಳಂತೆ ಭಾರತ ಕೂಡ ಬುಲೆಟ್ ಟ್ರೈನ್ ಯೋಜನೆ ಹೊಂದಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಕನಸು. ಬುಲೆಟ್ ಟ್ರೇನ್ ಬಗ್ಗೆ ದೇಶದ ಜನರಲ್ಲೂ ಪ್ರಧಾನಿ ಮೋದಿ ಕನಸು ಬಿತ್ತಿದ್ದರು. ಆದರೆ, ಈ ಕನಸು ಕಾಲಮಿತಿಯಲ್ಲಿ ನನಸಾಗುತ್ತಿಲ್ಲ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಬುಲೆಟ್ ಟ್ರೇನ್ ದೇಶದಲ್ಲಿ ಓಡುವ ಆಸೆಯೂ ಈಡೇರುತ್ತಿಲ್ಲ. ಬುಲೆಟ್ ಟ್ರೇನ್‌ ಯೋಜನೆಗೆ ಮಹಾರಾಷ್ಟ್ರ ರಾಜ್ಯದಲ್ಲಿ ಭೂ ಸ್ವಾಧೀನದ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಪರಿಹಾರಕ್ಕ ಈಗ ಖಾಸಗಿ ಏಜೆನ್ಸಿ ನೇಮಕ ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸಂಪೂರ್ಣ 508 ಕಿ.ಮೀ ಉದ್ದದ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯು ಮಹಾರಾಷ್ಟ್ರದ 9 ಹಳ್ಳಿಗಳಲ್ಲಿ ಭೂ ಸ್ವಾಧೀನದ ಸಮಸ್ಯೆಯಿಂದ ವಿಳಂಬವಾಗಿದೆ. ನಿಗದಿತ 2023ರ ಕಾಲಮಿತಿಯಲ್ಲಿ ದೇಶದ ಮೊದಲ ಬುಲೆಟ್ ಟ್ರೇನ್ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಭೂಸ್ವಾಧೀನದ ಸಮಸ್ಯೆ ಪರಿಹಾರವಾದ ಬಳಿಕವಷ್ಟೇ ಯೋಜನೆ ಪೂರ್ಣಗೊಳಿಸಲು ಹೊಸ ಕಾಲಮಿತಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಲಿದೆ. ಈಗ ಭೂ ಸ್ವಾಧೀನದ ವಿಳಂಬವನ್ನು ತಪ್ಪಿಸಲು ಕೇಂದ್ರ ಸರ್ಕಾರವು ಹರಸಾಹಸ ಮಾಡುತ್ತಿದೆ. ಭಾರತದ ಮೊದಲ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಅಡೆ ತಡೆಗಳನ್ನು ಪರಿಹರಿಸಲು ಈಗ ಏಜೆನ್ಸಿಯೊಂದನ್ನು ನೇಮಿಸಿಕೊಳ್ಳಲಾಗುತ್ತಿದೆ.

ಅಹಮದಾಬಾದ್‌-ಮುಂಬೈ ಬುಲೆಟ್ ಟ್ರೇನ್ ಮಾರ್ಗದಲ್ಲಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 9 ಗ್ರಾಮಗಳ ಆದಿವಾಸಿಗಳು ತಮ್ಮ ಭೂಮಿಯನ್ನು ಬಿಟ್ಟುಕೊಡುವಲ್ಲಿ ತೋರುತ್ತಿರುವ ತೀವ್ರ ಪ್ರತಿರೋಧದಿಂದಾಗಿ ಮುಂಬೈ-ಅಹಮದಾಬಾದ್ ಬುಲೆಟ್ ಟ್ರೇನ್ ಯೋಜನೆ ವಿಳಂಬವಾಗಿದೆ. ಮಹಾರಾಷ್ಟ್ರದಲ್ಲಿ ಮುಖ್ಯವಾಗಿ ಪಾಲ್ಘರ್‌ನಲ್ಲಿ ಸುಮಾರು 285 ಹೆಕ್ಟೇರ್ ಭೂಮಿಯನ್ನು ಇನ್ನೂ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಆದರೆ, ಗುಜರಾತ್‌ನಲ್ಲಿ ಭೂಸ್ವಾಧೀನ ಪೂರ್ಣಗೊಂಡಿದೆ. ಗುಜರಾತ್‌ ರಾಜ್ಯದ 342 ಕಿ.ಮೀ ಮಾರ್ಗದಲ್ಲಿ ಕೆಲಸ ಪ್ರಾರಂಭವಾಗಿದೆ. ಬುಲೆಟ್ ಟ್ರೇನ್ ಯೋಜನೆಯು 155 ಕಿ.ಮೀ ಮಾರ್ಗ ಮಹಾರಾಷ್ಟ್ರದಲ್ಲಿ ಹಾದು ಹೋದರೇ, 384 ಕಿ.ಮೀ. ಮಾರ್ಗ ಗುಜರಾತ್‌ನಲ್ಲಿ ಹಾದು ಹೋಗಲಿದೆ. ದಾದರ್-ನಗರ ಹವೇಲಿಯಲ್ಲಿ 4.3 ಕಿ.ಮೀ. ಮಾರ್ಗ ಹಾದು ಹೋಗಲಿದೆ.

ಯೋಜನೆಗೆ ಅಗತ್ಯವಾದ ಭೂಮಿಯ ಪೈಕಿ ಶೇ.75 ರಷ್ಟನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಗುಜರಾತ್ ರಾಜ್ಯದಲ್ಲಿ ಶೇ. 97ರಷ್ಟು ಭೂಮಿ ಸ್ವಾಧೀನ ಆಗಿದೆ. ದಾದರ್-ನಗರ್ ಹವೇಲಿಯಲ್ಲಿ ಶೇ.100ರಷ್ಟು ಭೂಮಿ ಸ್ವಾಧೀನವಾಗಿದೆ. ಮಹಾರಾಷ್ಟ್ರದಲ್ಲಿ ಮಾತ್ರ ಯೋಜನೆಗೆ ಅಗತ್ಯವಾದ ಭೂಮಿಯ ಪೈಕಿ ಶೇ.28 ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

“ಮಹಾರಾಷ್ಟ್ರದಲ್ಲಿ ಸಂಪೂರ್ಣ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಯೋಜನೆಯನ್ನು ಪೂರ್ಣಗೊಳಿಸಲು ಪರಿಷ್ಕೃತ ಕಾಲಮಿತಿಯನ್ನು ನಿಗದಿಪಡಿಸಬಹುದು” ಎಂದು ಸರ್ಕಾರ ಕಳೆದ ವಾರ ಸಂಸತ್ತಿಗೆ ತಿಳಿಸಿದೆ. ಮುಂಬರುವ ಬಜೆಟ್‌ನಲ್ಲಿ ದೆಹಲಿಯಿಂದ ವಾರಣಾಸಿಗೆ ಎರಡನೇ ಬುಲೆಟ್ ರೈಲು ಯೋಜನೆಯನ್ನು ಸರ್ಕಾರ ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ. ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಈಗ ಬುಲೆಟ್ ಟ್ರೈನ್ ಯೋಜನೆಯ 108 ಕಿಮೀ ವ್ಯಾಪ್ತಿಯನ್ನು ಒಳಗೊಂಡಿರುವ “ಪಾಲ್ಘರ್ ಜಿಲ್ಲೆಗೆ ಭೂಸ್ವಾಧೀನದಲ್ಲಿ ಸಂವಹನ ನಿರ್ವಹಣೆ ಮತ್ತು ಅನುಕೂಲತೆ” ಗಾಗಿ ಏಜೆನ್ಸಿ ಅಥವಾ ಸಲಹೆಗಾರರನ್ನು ನೇಮಿಸಲು ಟೆಂಡರ್ ಅನ್ನು ಆಹ್ವಾನಿಸಿದೆ.

ಏಜೆನ್ಸಿಯು ಯೋಜನೆಯ ವಿವರಗಳನ್ನು ಮತ್ತು “ಯೋಜನೆಯ ಭಾಗಿದಾರರಿಗೆ ಸರ್ಕಾರದಿಂದ ಅದರ ಕೊಡುಗೆ ಅಥವಾ ಪ್ರಯೋಜನಗಳನ್ನು ತಿಳಿಸುತ್ತದೆ ಮತ್ತು ಭೂ ಮಾಲೀಕರ ಸಮಸ್ಯೆಗಳು ಅಥವಾ ಪ್ರತಿಕ್ರಿಯೆಗಳನ್ನು NHSRCL ಗೆ ಹಿಂತಿರುಗಿಸುತ್ತದೆ” ಎಂದು ನಿರೀಕ್ಷಿಸಲಾಗಿದೆ. ಯೋಜನೆಗಾಗಿ ಭೂಸ್ವಾಧೀನದಲ್ಲಿ ವಿವಿಧ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಂಸ್ಥೆಯು NHSRCL ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸಹಾಯ ಮಾಡುತ್ತದೆ.

ಇದು ಸಂಬಂಧಿತ ಒಂಬತ್ತು ಗ್ರಾಮಗಳಲ್ಲಿ ಗ್ರಾಮ ಸಭೆಯ ಒಪ್ಪಿಗೆಯನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿರುತ್ತದೆ, ಅವರು ಯೋಜನೆಗೆ ಒಪ್ಪಿಗೆ ನೀಡಲು ನಿರಂತರವಾಗಿ ಮನವೊಲಿಸಬೇಕು ಮತ್ತು ಮನವರಿಕೆ ಮಾಡಬೇಕು” ಎಂದು ಸರ್ಕಾರದ ಡಾಕ್ಯುಮೆಂಟ್ ನಲ್ಲಿ ಉಲ್ಲೇಖಿಸಲಾಗಿದೆ. ಎಲ್ಲಾ ಒಂಬತ್ತು ಗ್ರಾಮಗಳು ಪಂಚಾಯತ್ ವಿಸ್ತರಣೆ ಷೆಡ್ಯೂಲ್ ಏರಿಯಾದ ಕಾಯಿದೆ ಅಡಿಯಲ್ಲಿ ಬರುತ್ತವೆ.

ಏಜೆನ್ಸಿಯು “ಭೂಮಿಯನ್ನು ಶಾಂತಿಯುತವಾಗಿ ಸ್ವಾಧೀನಪಡಿಸಿಕೊಳ್ಳುವ” ಜವಾಬ್ದಾರಿಯನ್ನು ಹೊಂದಿರುತ್ತದೆ ಮತ್ತು ಪರಿಹಾರವನ್ನು ಸ್ವಇಚ್ಛೆಯಿಂದ ಸ್ವೀಕರಿಸಲು ಭೂ ಮಾಲೀಕರಿಗೆ ಮನವರಿಕೆ ಮಾಡಿಕೊಡುತ್ತದೆ. “ವಿತರಣೆ ಮತ್ತು ಪರಿಹಾರವನ್ನು ಪೂರ್ಣ ತೃಪ್ತಿಗೆ ಸ್ವೀಕರಿಸದೆ, ಕಾಗದದ ಮೇಲೆ ಭೂಮಿಯ ಸ್ವಾಧೀನವನ್ನು ಜಿಲ್ಲಾಡಳಿತ ಮಾಡಬಹುದು. ಆದರೆ ತಳಮಟ್ಟದಲ್ಲಿ ಶಾಂತಿಯುತ ಮತ್ತು ಗಲಾಟೆ ಇಲ್ಲದೇ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಡಾಕ್ಯುಮೆಂಟ್ ಹೇಳುತ್ತದೆ.

ಏಜೆನ್ಸಿಯು ಭೂಸ್ವಾಧೀನವನ್ನು ಪೂರ್ಣಗೊಳಿಸಲು ಅಗತ್ಯವಿರುವ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸಭೆಗಳನ್ನು ಆಯೋಜಿಸುತ್ತದೆ. ಗ್ರಾಮಗಳಲ್ಲಿ ಭೂಮಿಯ ಉಳುಮೆದಾರರು ಅಲ್ಲದವರ ಸಮಸ್ಯೆಯನ್ನು ಪರಿಹರಿಸುತ್ತದೆ. ಗ್ರಾಮ ಮಟ್ಟದಲ್ಲಿ ತಳಮಟ್ಟದಲ್ಲಿ ಸಂವಹನಕ್ಕಾಗಿ ತಂಡವನ್ನು ನಿಯೋಜಿಸಲಾಗುವುದು ಮತ್ತು ಯೋಜನೆಗಳಲ್ಲಿ ಒಳಗೊಂಡಿರುವ ಎಲ್ಲಾ ಗ್ರಾಮಗಳಿಗೆ ಪ್ರತಿದಿನ ಭೇಟಿ ನೀಡಲಾಗುವುದು. “ಈ ಸಂಸ್ಥೆಯು ಭೂಮಾಲೀಕರು, ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಅಭಿಪ್ರಾಯ ರೂಪಿಸುವವರು, ಮಾಧ್ಯಮಗಳು ಮುಂತಾದ ವಿವಿಧ ಪಾಲುದಾರರೊಂದಿಗೆ ಸಂವಹನ ಮಾಡುತ್ತದೆ. ಇದು ನಿಯಮಿತವಾಗಿ ಯೋಜನೆಯ ಬಗ್ಗೆ ಜನರಿಗೆ ಸರಿಯಾಗಿ ತಿಳಿಸಲಿದೆ” ಎಂದು ಟೆಂಡರ್ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.

ಅಹಮದಾಬಾದ್‌-ಮುಂಬೈ ಮಾರ್ಗದಲ್ಲಿ ಮೊದಲ ಬುಲೆಟ್ ಟ್ರೇನ್‌ ಸೂರತ್‌-ಸುಲಿಮರ ನಡುವೆ 2026ರಲ್ಲಿ ಸಂಚರಿಸುವ ನಿರೀಕ್ಷೆ ಇದೆ. ಇದುವರೆಗೂ ಬುಲೆಟ್ ಟ್ರೇನ್ ಯೋಜನೆಗಾಗಿ 39 ಸಾವಿರ ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಲಾಗಿದೆ. ಈ ಮಾರ್ಗದ ಬುಲೆಟ್ ಟ್ರೇನ್‌ ಗಾಗಿ ಕೇಂದ್ರಸರ್ಕಾರವು 1.1 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಹಣ ಹೂಡಿಕೆ ಮಾಡುತ್ತಿದೆ. ಇದರಲ್ಲಿ 88 ಸಾವಿರ ಕೋಟಿ ರೂಪಾಯಿಯನ್ನು ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಷನ್ ಏಜೆನ್ಸಿ ಹೂಡಿಕೆ ಮಾಡಲಿದೆ. ಬುಲೆಟ್ ಟ್ರೇನ್ ಪ್ರತಿ ಗಂಟೆಗೆ 300 ರಿಂದ 320 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ. ಜಪಾನ್ ದೇಶದ ಇ5 ಶಿನಕನಸೇನ್ ತಂತ್ರಜ್ಞಾನದ ಬುಲೆಟ್ ಟ್ರೇನ್ ಗಳು ಭಾರತದಲ್ಲಿ ಸಂಚರಿಸಲಿವೆ.

ದೆಹಲಿಯಿಂದ ವಾರಣಾಸಿಗೆ ದೇಶದ ಎರಡನೇ ಹೈಸ್ಪೀಡ್ ರೈಲು ಯೋಜನೆಯನ್ನು ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಘೋಷಿಸುವ ನಿರೀಕ್ಷೆ ಇದೆ. ದೆಹಲಿ-ವಾರಾಣಾಸಿ ಬುಲೆಟ್ ಟ್ರೇನ್ ಯೋಜನೆಗೆ 1.5 ಲಕ್ಷ ಕೋಟಿ ರೂಪಾಯಿ ವೆಚ್ಚ ತಗುಲುವ ನಿರೀಕ್ಷೆ ಇದೆ. ಈಗಾಗಲೇ ದೆಹಲಿ-ವಾರಾಣಾಸಿ ಬುಲೆಟ್ ಟ್ರೇನ್ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ದವಾಗಿದ್ದು, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜೊತೆಗೆ ಫೆಬ್ರವರಿ 1 ರ ಕೇಂದ್ರ ಬಜೆಟ್ ನಲ್ಲಿ ಮುಂಬೈ-ನಾಗಪುರ ನಡುವಿನ ಬುಲೆಟ್ ಟ್ರೇನ್ ಯೋಜನೆಯು ಘೋಷಣೆಯಾಗುವ ನಿರೀಕ್ಷೆ ಇದೆ. ಮುಂಬೈ-ನಾಗಪುರ ಮಾರ್ಗದ ಬುಲೆಟ್ ಟ್ರೇನ್ ಯೋಜನೆಗೆ ಡೀಟೈಲ್ ಪ್ರಾಜೆಕ್ಟ್ ರಿಪೋರ್ಟ್ ಸಿದ್ದವಾಗುತ್ತಿದ್ದು, ಸದ್ಯದಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗುತ್ತೆ. ಚೆನ್ನೈ-ಮೈಸೂರು ಮಾರ್ಗ ಸೇರಿದಂತೆ ದೇಶದ ಬೇರೆ ಬೇರೆ ಏಳು ಮಾರ್ಗಗಳಲ್ಲಿ ಬುಲೆಟ್ ಟ್ರೇನ್ ಯೋಜನೆಯ ಜಾರಿಗೊಳಿಸುವ ಸಾಧಕಭಾದಕಗಳ ಅಧ್ಯಯನಕ್ಕೆ ಕೇಂದ್ರ ಸರ್ಕಾರ ಈ ಹಿಂದೆಯೇ ಒಪ್ಪಿಗೆ ನೀಡಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರದ ಅಸಹಕಾರ, ಬುಲೆಟ್ ಟ್ರೇನ್ ಸಂಚಾರ ಇನ್ನೂ ತಡ: ಸಂಸತ್ತಿನಲ್ಲಿ ರೈಲ್ವೆ ಸಚಿವರ ಉತ್ತರ

ನಾಳೆ ಉತ್ತರಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಪ್ರಯಾಗ್​ರಾಜ್​ನಲ್ಲಿ 2 ಲಕ್ಷಕ್ಕೂ ಅಧಿಕ ಮಹಿಳೆಯರನ್ನು ಉದ್ದೇಶಿಸಿ ಭಾಷಣ

Published On - 5:37 pm, Mon, 20 December 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್