AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ಫ್ಯೂ ಹೇರಲು ಪರಿಗಣಿಸುವಂತೆ ಗುಜರಾತ್ ಸರ್ಕಾರಕ್ಕೆ ಹೈಕೋರ್ಟ್ ಸಲಹೆ

Surge in Covid cases: ಗುಜರಾತಿನ ನಾಲ್ಕು ಪ್ರಮುಖ ನಗರಗಳಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಿಧಿಸಿರುವ ಕರ್ಫ್ಯೂನಿಂದ ಯಾವ ಪ್ರಯೋಜನವೂ ಆಗುತ್ತಿಲ್ಲವೆಂದು ಮುಖ್ಯ ನ್ಯಾಯಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ಫ್ಯೂ ಹೇರಲು ಪರಿಗಣಿಸುವಂತೆ ಗುಜರಾತ್ ಸರ್ಕಾರಕ್ಕೆ ಹೈಕೋರ್ಟ್ ಸಲಹೆ
ಗುಜರಾತ್ ಹೈಕೋರ್ಟ್​
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Apr 06, 2021 | 9:35 PM

Share

ರಾಜ್ಯದಲ್ಲಿ ಕೊರೊನಾ ಸೋಂಕಿನ ಹೊಸ ಪ್ರಕರಣಗಳು ದಿನಂಪ್ರತಿ ಹೆಚ್ಚುತ್ತಿರುವುದರಿಂದ ಕೆಲ ದಿನಗಳ ಕಾಲ ಕರ್ಫ್ಯೂ ಘೋಷಿಸುವ ಬಗ್ಗೆ ಪರಾಮರ್ಶೆ ನಡೆಸುವಂತೆ ಗುಜರಾತ್​ನ ಹೈಕೋರ್ಟ್ ಅಲ್ಲಿನ ಸರ್ಕಾರಕ್ಕೆ ತಿಳಿಸಿದೆ. ಸೋಮಾವಾರ ಗುಜರಾತ್​ನಲ್ಲಿ 3000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಮಂಗಳವಾರದಂದು ವಿಷಯಕ್ಕೆ ಸಂಬಂಧಿಸಿದ ವಿಚಾರಣೆಯೊಂದನ್ನು ಆನ್​ಲೈನ್​ನಲ್ಲಿ ನಡೆಸಿದ ಮುಖ್ಯ ನಾಯಾಧೀಶ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಭಾರ್ಗವ್ ಕಾರಿಯಾ ಅವರನ್ನೊಳಗೊಂಡ ಪೀಠವು ಸೋಂಕು ಹಬ್ಬುವುದನ್ನು ತಡೆಯಲು 3-4 ದಿನಗಳ ಕರ್ಫ್ಯೂನ ಅವಶ್ಯಕತೆ ಇದೆಯೆಂಬ ಅಭಿಪ್ರಾಯ ವ್ಯಕ್ತಪಡಿಸಿತು.

‘ಸೋಂಕನ್ನು ತಡೆಗಟ್ಟಲು, ತುರ್ತು ಮತ್ತು ಗಂಭೀರ ಸ್ವರೂಪದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದರೆ ಕೊವಿಡ್​ ಸ್ಥಿತಿ ಕೈ ಮೀರಲಿದೆ. ಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಲು 3-4 ದಿನಗಳ ಕರ್ಫ್ಯೂ ಹೇರಬಹುದು’ ಎಂದು ಮುಖ್ಯ ನ್ಯಾಯಧೀಶ ನಾಥ್ ಹೇಳಿದರು.

ಗುಜರಾತಿನ ನಾಲ್ಕು ಪ್ರಮುಖ ನಗರಗಳಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಿಧಿಸಿರುವ ಕರ್ಫ್ಯೂನಿಂದ ಯಾವ ಪ್ರಯೋಜನವೂ ಆಗುತ್ತಿಲ್ಲವೆಂದು ಮುಖ್ಯ ನ್ಯಾಯಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದರು. ಮಾರ್ಚ್​ 31ರಂದು ಅಹಮದಾಬಾದ್, ಸೂರತ್, ವಡೋದರ ಮತ್ತು ರಾಜ್​ಕೋಟ್​ ನಗರಗಳಲ್ಲಿ ಹೇರಿರುವ ರಾತ್ರಿ ಕರ್ಫ್ಯೂ ಅನ್ನು ಏಪ್ರಿಲ್ 15ವರೆಗೆ ವಿಸ್ತರಿಸಲಾಗಿದೆ. ದೀಪಾವಳಿ ಹಬ್ಬದ ನಂತರ ಸೋಂಕಿನ ಪ್ರಕರಣಗಳು ಹೆಚ್ಚಾಲಾರಂಭಿಸದ ನಂತರ ರಾತ್ರಿ ಕರ್ಫ್ಯೂ ಹೇರಿ ವಿಸ್ತರಿಸುತ್ತಿರುವುದು ಇದು ಏಳನೇ ಬಾರಿಯಾಗಿದೆ.

‘ಒಮ್ಮೆ ಕರ್ಫ್ಯೂ ಹೇರಿ 3-4 ದಿನಗಳ ನಂತರ ನೀವು ಅದನ್ನು ಹಿಂತೆಗೆದುಕೊಳ್ಳುವ ಆವಕಾಶ ಇದ್ದೇ ಇದೆ, ಆದರೆ ಈ ಕರ್ಫ್ಯೂ ಖಂಡಿತವಾಗಿಯೂ ನೆರವಾಗಲಿದೆ. 2020 ಮಾರ್ಚ್​ನಲ್ಲಿ 2-3 ದಿನಗಳ ಕರ್ಫ್ಯೂ ನಂತರ ಅದನ್ನು ಸಡಲಿಸಲಾಗಿತ್ತು’ ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು. ಸೋಂಕಿನ ಸರಪಣಿಯನ್ನು ಮುರಿಯಲು ಆಫೀಸ್​ಗಳಿಗೆ ಹೋಗುವವರ ಸಂಖ್ಯೆಯನ್ನು ತಗ್ಗಿಸಬೇಕು ಎಂದು ನ್ಯಾಯಮೂರ್ತಿ ಕಾರಿಯಾ ಅಭಿಪ್ರಾಯ ವ್ಯಕ್ತಪಡಿಸಿದರು. ಕಡಿಮೆ ಜನ ಪರಸ್ಪರ ಸಂಪರ್ಕದಲ್ಲಿ ಬರುವುದನ್ನು ಖಾತರಿಪಡಿಸಿಕೊಳ್ಳಬೇಕು. ಆಫೀಸು ಮತ್ತು ವಾಣಿಜ್ಯ ಮಳಿಗೆಗಳಿಗೆ ಹೋಗುವವರ ಸಂಖ್ಯೆಯನ್ನು ಕಡಿತಗೊಳಿಸಬೇಕು ಎಂದು ಅವರು ಹೇಳಿದರು.

ಪೀಠವು ನೀಡಿರುವ ಸಲಹೆಗಳನ್ನು ಸರ್ಕಾರಕ್ಕೆ ತಿಳಿಸಿ ಅದು ತೆಗೆದುಕೊಳ್ಳಲಿರುವ ಕ್ರಮಗಳನ್ನು ಪೀಠದ ಗಮನಕ್ಕೆ ತರಲಾಗುವುದೆಂದು ಅಡ್ವೋಕೇಟ್ ಜನರಲ್ ಕಮಲ್ ತ್ರಿವೇದಿ ಕೋರ್ಟಿನಲ್ಲಿ ಹೇಳಿದರೆಂದು ಪಿಟಿಐ ವರದಿ ಮಾಡಿದೆ. ‘ಎರಡು ದಿನಗಳ ಹಿಂದೆ ಸರ್ಕಾರವು ಲಾಕ್​ಡೌನ್ ಘೋಷಿಸುವ ಬಗ್ಗೆ ಗಂಭೀರ ಆಲೋಚನೆ ಮಾಡಿತ್ತು. ಆದರೆ ಲಾಕ್​ಡೌನ್ ಬಡವರ ಬದುಕನ್ನು ದಿಕ್ಕೆಡಿಸುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದರಿಂದ ಯೋಚನೆಯನ್ನು ಕೈಬಿಡಲಾಯಿತು. ಹೀಗಾಗಿ, ಯಾವುದೇ ನಿರ್ಧಾರ ತೆಗೆದುಕೊಳ್ಳದ ತ್ರಿಶಂಕು ಸ್ಥಿತಿಯಲ್ಲಿ ಸರ್ಕಾರವಿದೆ’ ಎಂದು ತ್ರಿವೇದಿ ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: Covid-19 Prevention: ಜಗತ್ತಿನಾದ್ಯಂತ ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕು; ಡೂಡಲ್​ ಮೂಲಕ ಮಾಸ್ಕ್​​ನ​ ಮಹತ್ವ ಸಾರಿದ ಗೂಗಲ್​

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಹೊಸದಾಗಿ 6,150 ಮಂದಿಗೆ ಕೊರೊನಾ ದೃಢ

Published On - 9:34 pm, Tue, 6 April 21

ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್
ಕಾರ್ಮಿಕರ ಹೊತ್ತೊಯ್ಯುತ್ತಿದ್ದ 2 ಲೋಕೊ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ
ಕಾರ್ಮಿಕರ ಹೊತ್ತೊಯ್ಯುತ್ತಿದ್ದ 2 ಲೋಕೊ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ
ಮೊಬೈಲ್ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಹಣ ಕದ್ದ ಮಹಿಳೆ
ಮೊಬೈಲ್ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಹಣ ಕದ್ದ ಮಹಿಳೆ