AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 130 ದಿನಗಳಲ್ಲಿ 20 ಕೋಟಿ ಕೋವಿಡ್ ಲಸಿಕೆ: ಈ ಸಾಧನೆ ಮಾಡಿದ ವಿಶ್ವದ 2ನೇ ದೇಶ ಭಾರತ

ಆರೋಗ್ಯ ಸಚಿವಾಲಯವು ಒದಗಿಸಿರುವ ಅಂಕಿ-ಅಂಶಗಳ ಪ್ರಕಾರ ಅಮೇರಿಕ 20 ಕೋಟಿ ಡೋಸುಗಳನ್ನು ಸಂಪೂರ್ಣಗೊಳಿಸಲು 124 ದಿನಗಳ ಕಾಲಾವಕಾಶ ತೆಗೆದುಕೊಂಡರೆ ಭಾರತ 130 ದಿನಗಳಲ್ಲಿ ಅಷ್ಟು ಸಂಖ್ಯೆಯ ಡೋಸುಗಳನ್ನು ನೀಡಿದೆ.

ಕೇವಲ 130 ದಿನಗಳಲ್ಲಿ 20 ಕೋಟಿ ಕೋವಿಡ್ ಲಸಿಕೆ: ಈ ಸಾಧನೆ ಮಾಡಿದ ವಿಶ್ವದ 2ನೇ ದೇಶ ಭಾರತ
ಕೊವಿಡ್-19 ಲಸಿಕಾ ಅಭಿಯಾನ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ| Edited By: |

Updated on: May 26, 2021 | 8:46 PM

Share

ನವದೆಹಲಿ: ಕೇಂದ್ರ ಸರ್ಕಾರ ಕೋವಿಡ್-19 ವಿರುದ್ಧ ಲಸಿಕಾ ಅಭಿಯಾನವನ್ನು ಆರಂಭಿಸಿದ 130 ದಿನಗಳ ನಂತರ ದೇಶದಾದ್ಯಂತ ಲಸಿಕೆಯ 20 ಕೋಟಿ ಡೋಸುಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. ಅಮೆರಿಕ ನಂತರ ಕಡಿಮೆ ಅತಿ ಕಡಿಮೆ ಅವಧಿಯಲ್ಲಿ 20 ಕೋಟಿ ಡೋಸುಗಳನ್ನು ನೀಡಿರುವ ಎರಡನೇ ರಾಷ್ಟ್ರ ಭಾರತವಾಗಿದೆ ಎಂದು ಸಹ ಅರೋಗ್ಯ ಇಲಾಖೆ ತಿಳಿಸಿದೆ. ಭಾರತದಲ್ಲಿ ಜನವರಿ 16ರಿಂದ ಲಸಿಕೆ ಅಭಿಯಾನ ನಡೆಯುತ್ತಿದೆ.

ಆರೋಗ್ಯ ಸಚಿವಾಲಯವು ಒದಗಿಸಿರುವ ಅಂಕಿ-ಅಂಶಗಳ ಪ್ರಕಾರ ಅಮೇರಿಕ 20 ಕೋಟಿ ಡೋಸುಗಳನ್ನು ಸಂಪೂರ್ಣಗೊಳಿಸಲು 124 ದಿನಗಳ ಕಾಲಾವಕಾಶ ತೆಗೆದುಕೊಂಡರೆ ಭಾರತ 130 ದಿನಗಳಲ್ಲಿ ಅಷ್ಟು ಸಂಖ್ಯೆಯ ಡೋಸುಗಳನ್ನು ನೀಡಿದೆ. ಬೇರೆ ದೇಶಗಳ ವಿವರಗಳನ್ನು ನೋಡಿದ್ದೇಯಾದರೆ, 6 ಕೋಟಿ ಡೋಸುಗಳನ್ನು ನೀಡಲು ಯುನೈಟೆಡ್ ಕಿಂಗ್​ಡಮ್168 ದಿಗಳನ್ನು ತೆಗೆದುಕೊಂಡರೆ, ಬ್ರೆಜಿಲ್ 128 ದಿನಗಳಲ್ಲಿ 5.9 ಕೋಟಿ ಡೋಸುಗಳನ್ನು ನೀಡಿದೆ. ಹಾಗೆಯೇ, ಜರ್ಮನಿ, ಫ್ರಾನ್ಸ್ ಮತ್ತು ಇಟಲಿ ದೇಶಗಳು ಕ್ರಮವಾಗಿ 4.5 ಕೋಟಿ, 3.3 ಕೋಟಿ ಮತ್ತು 3.1 ಕೋಟಿ ಡೋಸುಗಳನ್ನು ನೀಡಲು 149 ದಿನಗಳ ಸಮಯವನ್ನು ತೆಗೆದುಕೊಂಡಿವೆ.

ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯವು, ಬುಧವಾರ ಬೆಳಗ್ಗೆ 7 ಗಂಟೆಯ ಸಮಯದವರೆಗೆ 200,662,456 ಕೋವಿಡ್​ ಲಸಿಕೆಯ ಡೋಸುಗಳನ್ನು ವಿತರಿಸಲಾಗಿದ್ದು ಇದರಲ್ಲಿ 157,149,593 ಮೊದಲ ಡೋಸು ಮತ್ತು 43,512,863 ಎರಡನೇ ಡೋಸುಗಳಾಗಿವೆ ಎಂದು ತಿಳಿಸಿದೆ.‘ಕೇಂದ್ರ ಅರೋಗ್ಯ ಸಚಿವಾಲಯದಲ್ಲಿ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ 45ಕ್ಕಿಂತ ಹೆಚ್ಚಿನ ವಯೋಮಿತಿ ಜನಸಂಖ್ಯೆಯ ಶೇಕಡಾ 34 ರಷ್ಟು ಜನ ಕನಿಷ್ಟ ಕೊವಿಡ್-19 ಲಸಿಕೆಯ ಪ್ರಥಮ ಡೋಸ್ ಪಡೆದುಕೊಂಡಿದ್ದಾರೆ.

ಹಾಗೆಯೇ 60 ಕ್ಕಿಂತ ಹೆಚ್ಚಿನ ವಯೋಮಿತಿ ಜನಸಂಖ್ಯೆಯ ಶೇಕಡಾ 42 ಜನ ಕೊವಿಡ್-19 ಲಸಿಕೆಯ ಕನಿಷ್ಟ ಮೊದಲ ಡೋಸನ್ನು ಪಡೆದಿದ್ದಾರೆ, ಎಂದು ಸಚಿವಾಲಯದ ಪ್ರಕಟಣೆ ತಿಳಿಸುತ್ತದೆ.

ತನ್ನ ಬೃಹತ್ ಕೊವಿಡ್-19 ಲಸಿಕಾ ಅಭಿಯಾನದಲ್ಲಿ ಭಾರತವು ಮೂರು ಲಸಿಕೆಗಳನ್ನು ಉಪಯೋಗಿಸುತ್ತಿದೆ-ಪುಣೆತಯಲ್ಲಿರುವ ಸಿರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಷೀಲ್ಡ್ ಮತ್ತು ಹೈದರಾಬಾದ್ ಭರತ್ ಬಯೋಟೆಕ್​ ಸಂಸ್ಥೆಯ ಕೋವ್ಯಾಕ್ಸಿನ್. ‘ರಷ್ಯಾದಲ್ಲಿ ತಯಾರಾಗಿರುವ ಸ್ಫುಟ್ನಿಕ್ ವಿ ಲಸಿಕೆಯು ಭಾರತದ ಔಷಧ ಮಹಾನಿಯಂತ್ರಕರಿಂದ (ಡಿಜಿಸಿಐ) ತುರ್ತು ಸಂದರ್ಭಗಳಲ್ಲಿ ಪಡೆಯಲು ಅನುಮೋದನೆ ಪಡೆದಿರುವ ಲಸಿಕೆಯಾಗಿದೆ. ಇದನ್ನು ಕೆಲ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದ್ದು ಮುಂಬರುವ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ,’ ಎಂದು ಸಚಿವಾಲಯ ತಿಳಿಸಿದೆ.

ಮೇ 1ರಂದು ಭಾರತದ ಲಸಿಕಾ ಅಭಿಯಾನವು ಮೂರನೇ ಹಂತವನ್ನು ಪ್ರವೇಶಿಸಿದ್ದು ಇದರಲ್ಲಿ 18ಕ್ಕಿಂತ ಜಾಸ್ತಿ ವಯಸ್ಸಿನವರಿಗೆ ಸೇರಿಸಿಕೊಳ್ಳುವ ಪ್ರಸ್ತಾಪ ಮಾಡಲಾಗಿದೆ. ಮೊದಲ ಹಂತದಲ್ಲಿ ಆದ್ಯತೆಯ ಆಧಾರದಲ್ಲಿ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಮುಂಚೂಣೀಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ಮಾರ್ಚ್​ ಒಂದರಂದು ಶುರುವಾದ ಎರಡನೇ ಅಭಿಯಾನದಲ್ಲಿ 60ಕ್ಕಿಂತ ಜಾಸ್ತಿ ವಯಸ್ಸಿನವರಿಗೆ ಮತ್ತು ಕಾಯಿಲೆಗಳಿಗೆ ತುತ್ತಾಗಿರುವ 45 ರಿಂದ 59 ವರ್ಷ ವಯೋಮಿತಿಯಲ್ಲಿರಿವವರಿಗೆ ಲಸಿಕೆ ನೀಡಲು ಆಯ್ಕೆ ಮಾಡಿಕೊಳ್ಳಲಾಯಿತು. ಮೇ 1ರಂದು ಅಭಿಯಾನವು ಮೂರನೇ ಹಂತಕ್ಕೆ ವಿಸ್ತರಣೆಗೊಂಡಿದ್ದು ಇದರಲ್ಲಿ 45 ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತಿದೆ.

ಇದನ್ನೂ ಓದಿ: 18-44 Vaccination in Karnataka: ಮೇ 22ರಿಂದಲೇ 18 ರಿಂದ 44 ವರ್ಷದವರಿಗೆ ಕೊವಿಡ್ ಲಸಿಕೆ; ಕೊವಿಡ್ ಸೇನಾನಿಗಳಿಗೆ ಮೊದಲ ಆದ್ಯತೆ

Follow Us
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್