ಹಿಜಾಬ್​ ಇಸ್ಲಾಂನಲ್ಲಿ ಅತ್ಯಂತ ಮುಖ್ಯವೆಂದು ಕುರಾನ್​ ಹೇಳಿಲ್ಲ, ಸುಮ್ಮನೆ ಹೋಗಿ ವಿದ್ಯೆ ಕಲಿಯಿರಿ: ಕೇರಳ ರಾಜ್ಯಪಾಲ ಆರಿಫ್​ ಮೊಹಮ್ಮದ್ ಖಾನ್

ಎಲ್ಲ ಧರ್ಮಗಳ, ಎಲ್ಲ ಹೆಣ್ಣುಮಕ್ಕಳೂ ಕೂಡ ತಮಗೆ ಬೇಕಾದಂತೆ ವಸ್ತ್ರ ಧರಿಸಬಹುದು. ಆದರೆ ಶಿಕ್ಷಣ ಎಂದು ಬಂದಾಗ, ಅವರು ಓದುತ್ತಿರುವ ಶಿಕ್ಷಣ ಸಂಸ್ಥೆಯ ನಿಯಮಗಳನ್ನು ಪಾಲಿಸಲೇಬೇಕು ಎಂದು ಆರಿಫ್​ ಮೊಹಮ್ಮದ್ ಖಾನ್ ಹೇಳಿದ್ದಾರೆ.

ಹಿಜಾಬ್​ ಇಸ್ಲಾಂನಲ್ಲಿ ಅತ್ಯಂತ ಮುಖ್ಯವೆಂದು ಕುರಾನ್​ ಹೇಳಿಲ್ಲ, ಸುಮ್ಮನೆ ಹೋಗಿ ವಿದ್ಯೆ ಕಲಿಯಿರಿ: ಕೇರಳ ರಾಜ್ಯಪಾಲ ಆರಿಫ್​ ಮೊಹಮ್ಮದ್ ಖಾನ್
ಆರಿಫ್​ ಮೊಹಮದ್​ ಖಾನ್​
Follow us
TV9 Web
| Updated By: Lakshmi Hegde

Updated on: Feb 13, 2022 | 12:51 PM

ದೆಹಲಿ: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್​ ವಿವಾದಕ್ಕೆ (Hijab Row) ರಾಷ್ಟ್ರಾದ್ಯಂತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದರೂ, ಬಹುತೇಕ ಮುಸ್ಲಿಂ ನಾಯಕರೆಲ್ಲ ಹಿಜಾಬ್​ ಪರವಾಗಿಯೇ ಧ್ವನಿ ಎತ್ತಿದ್ದಾರೆ. ಹೀಗಿರುವಾಗ ಕೇರಳದ ರಾಜ್ಯಪಾಲ, ಹಿರಿಯ ಮುಸ್ಲಿಂ ಮುಖಂಡರಾದ ಆರಿಫ್​ ಮೊಹಮ್ಮದ್ ಖಾನ್​ ಅವರೊಂದು ವಿಭಿನ್ನ ಹೇಳಿಕೆ ನೀಡಿದ್ದಾರೆ. ಹಿಜಾಬ್​ ಎಂಬುದು ಇಸ್ಲಾಮ್​ನ ಅವಿಭಾಜ್ಯ ಅಂಗವಲ್ಲ. ಸಿಖ್ಖರಿಗೆ ಟರ್ಬನ್​ ತುಂಬ ಮುಖ್ಯ. ಹಾಗಂತ ಇಸ್ಲಾಂನಲ್ಲಿ ಹಿಜಾಬ್ ಅಷ್ಟೇ ಮುಖ್ಯ ಎಂದು ಭಾವಿಸಬೇಕಿಲ್ಲ ಎಂದು ಹೇಳಿದ್ದಾರೆ.  ಕುರಾನ್​​ನಲ್ಲಿ ಹಿಜಾಬ್​​ನ್ನು ಏಳು ಬಾರಿ ಉಲ್ಲೇಖಿಸಲಾಗಿದೆ. ಆದರೆ ಅದನ್ನೆಲ್ಲೂ ಮುಸ್ಲಿಂ ಮಹಿಳೆಯರ ಉಡುಪು ಸಂಹಿತೆಯಲ್ಲಿ ಕಡ್ಡಾಯ ಎಂದು ಹೇಳಿಲ್ಲ. ಇದು ಪರದಾ ಪದ್ಧತಿಗೆ ಸಂಬಂಧಿಸಿದ ವಿಚಾರ ಎಂದು ಮಾಹಿತಿ ನೀಡಿದ್ದಾರೆ.

ಹಿಜಾಬ್​ ವಿವಾದ ಮಿತಿಮೀರಿದೆ. ಅನೇಕರು ವಿವಿಧ ವಾದವನ್ನು ಮಂಡಿಸುತ್ತಿದ್ದಾರೆ. ಅದರಲ್ಲಿ ಒಂದು ವರ್ಗದ ಜನರು, ಸಿಖ್​ ಸಮುದಾಯದ ವಿದ್ಯಾರ್ಥಿಗಳು ಟರ್ಬನ್​ ಇಟ್ಟುಕೊಂಡೇ ಕ್ಲಾಸ್​ ರೂಮಿಗೆ ಬರುತ್ತಾರೆ. ಆದರೆ ಮುಸ್ಲಿಂ ಹುಡುಗಿಯರಿಗೇಕೆ ಹಿಜಾಬ್​ ಧರಿಸಿ ಬರಲು ಅವಕಾಶ ಕೊಡುತ್ತಿಲ್ಲ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಇದು ಸರಿಯಾದ ವಾದವಲ್ಲ. ಸಿಖ್ಖರಿಗೆ ಟರ್ಬನ್​ ಅತ್ಯಂತ ಮುಖ್ಯ. ಆದರೆ ಹಿಜಾಬ್​ನ್ನು ಅದಕ್ಕೆ ಹೋಲಿಸುವಂತಿಲ್ಲ. ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಕಡ್ಡಾಯವೆಂದು ಕುರಾನ್​​ನಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ ಎಂದು ಕೇರಳ ರಾಜ್ಯಪಾಲರು ವಿವರಿಸಿದ್ದಾರೆ.

ಎಲ್ಲ ಧರ್ಮಗಳ, ಎಲ್ಲ ಹೆಣ್ಣುಮಕ್ಕಳೂ ಕೂಡ ತಮಗೆ ಬೇಕಾದಂತೆ ವಸ್ತ್ರ ಧರಿಸಬಹುದು. ಆದರೆ ಶಿಕ್ಷಣ ಎಂದು ಬಂದಾಗ, ಅವರು ಓದುತ್ತಿರುವ ಶಿಕ್ಷಣ ಸಂಸ್ಥೆಯ ನಿಯಮಗಳನ್ನು ಪಾಲಿಸಲೇಬೇಕು. ಆ ಸಂಸ್ಥೆಯಲ್ಲಿ ವಸ್ತ್ರ ಸಂಹಿತೆ ಏನಿದೆಯೋ ಅದರಂತೆ ನಡೆದುಕೊಳ್ಳಬೇಕಾಗುತ್ತದೆ.  ಇದೀಗ ಶುರುವಾಗಿರುವ ಹಿಜಾಬ್​ ವಿವಾದವೆಂಬುದು ಬಹುದೊಡ್ಡ ಪಿತೂರಿ. ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆ, ಅಭಿವೃದ್ಧಿಯಾಗುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದವರು ಮಾಡುತ್ತಿರುವ ಕೆಲಸ ಇದು.  ಇಂಥ ಪಿತೂರಿಗೆಲ್ಲ ಹೆಣ್ಣುಮಕ್ಕಳು ಬಲಿಯಾಗಬಾರದು ಎಂದು ಹೇಳಿದ ಕೇರಳ ರಾಜ್ಯಪಾಲರು, ವಿದ್ಯಾಭ್ಯಾಸ ಬಹಿಷ್ಕರಿಸಿ, ಪ್ರತಿಭಟನೆಗೆ ಇಳಿದಿರುವ ಹಿಜಾಬ್​ ಹೋರಾಟಗಾರ್ತಿಯರಿಗೆ ವಾಪಸ್​ ಕ್ಲಾಸ್​ರೂಮಿಗೆ ಹೋಗಿ, ಶಿಕ್ಷಣ ಕಲಿಯುವಂತೆ ಸಲಹೆ ನೀಡಿದ್ದಾರೆ.

ಈ ಹಿಂದೆ ತಾಲಿಬಾನಿಗಳ ವಿರುದ್ಧ ಕೂಡ ಆರಿಫ್​ ಮೊಹಮ್ಮದ್ ಖಾನ್ ಕಿಡಿಕಾರಿದ್ದರು. ತಾಲಿಬಾನಿಗಳೇ ರೂಪಿಸಿಕೊಂಡ ಕಾನೂನಿಗೆ ಷರಿಯತ್ ಎಂದು ಕರೆಯಲು ಸಾಧ್ಯವಿಲ್ಲ. ನಿಜಕ್ಕೂ ಕುರಾನ್​ಗೆ ಷರಿಯತ್ ಕಾನೂನು ಎನ್ನಲಾಗುತ್ತದೆ. ಆದರೆ ಈಗೀಗ ಕಂಡವರೆಲ್ಲ ಕಾನೂನು ರಚಿಸಿ, ಅದಕ್ಕೆ ಷರಿಯತ್​ ಎಂದು ನಾಮಕರಣ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ದೇಶದಲ್ಲಿ ಮುಸ್ಲಿಂ ನಾಯಕತ್ವವನ್ನು ಮುಂಚೂಣಿಗೆ ತರಲು ಪ್ರಯತ್ನ ಮಾಡುತ್ತಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದ ಆರೀಫ್​ ಮೊಹಮ್ಮದ್​ ಖಾನ್​, ಈ ಜನರು ತಮಗೆ ಪ್ರತ್ಯೇಕ ಗುರುತು ಬೇಕು ಎಂಬ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ನಾನೊಬ್ಬ ಭಾರತೀಯ ಎಂಬುದೇ ಪ್ರತಿಯೊಬ್ಬನ ಗುರುತಾಗಿರಬೇಕು ಎಂದಿದ್ದರು.

ಇದನ್ನೂ ಓದಿ: Valentine’s Day 2022 : ವ್ಯಾಲೆಂಟೈನ್ಸ್‌ ಡೇ ಇತಿಹಾಸ ಹೇಗಿದೆ ಗೊತ್ತಾ? “ಲುಪರ್ಕಾಲಿಯಾ” ಹಬ್ಬವೇ ವ್ಯಾಲೆಂಟೈನ್ಸ್‌ ಡೇ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ