ಹಳೆಯ ಪಿಂಚಣಿ ಯೋಜನೆ ಮರುಸ್ಥಾಪಿಸಿದ ಹಿಮಾಚಲ ಪ್ರದೇಶ ಸರ್ಕಾರ
ಹಳೆ ಪಿಂಚಣಿ ಯೋಜನೆಯ ಲಾಭವನ್ನು ಇಂದಿನಿಂದ ನೀಡಲಾಗುವುದು ಮತ್ತು ಈ ಬಗ್ಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಖು ಹೇಳಿದರು.
ಶಿಮ್ಲಾ: ತನ್ನ ಚುನಾವಣಾ ಭರವಸೆಯನ್ನು ಉಳಿಸಿಕೊಂಡಿರುವ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು(Sukhvinder Singh Sukhu) ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರ ಶುಕ್ರವಾರ ತನ್ನ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲು ಅನುಮೋದನೆ ನೀಡಿದೆ. ಹೊಸ ಪಿಂಚಣಿ ಯೋಜನೆ (NPS) ಅಡಿಯಲ್ಲಿ ನೌಕರರು ಮತ್ತು ಪಿಂಚಣಿದಾರರು ಸೇರಿದಂತೆ 1.36 ಲಕ್ಷ ಉದ್ಯೋಗಿಗಳಿದ್ದಾರೆ. ಕಾಂಗ್ರೆಸ್ ಪಕ್ಷವು ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು (OPS) ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದು, ಅದನ್ನು ಪೂರೈಸಿದೆ. ಹಳೆ ಪಿಂಚಣಿ ಯೋಜನೆಯ ಲಾಭವನ್ನು ಇಂದಿನಿಂದ ನೀಡಲಾಗುವುದು ಮತ್ತು ಈ ಬಗ್ಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಖು ಹೇಳಿದರು.
ಮಹಿಳೆಯರಿಗೆ ಮಾಸಿಕ ₹ 1,500 ನೀಡುವ ಭರವಸೆಯನ್ನು ಈಡೇರಿಸುತ್ತೇವೆ ಎಂದ ಅವರು, 30 ದಿನಗಳಲ್ಲಿ ತಿಂಗಳಿಗೆ ₹ 1,500 ವಿತರಣೆ ಮಾಡುವುದಕ್ಕಾಗಿ ಮಾರ್ಗಸೂಚಿ ತಯಾರಿಸಲು ಚಂದರ್ ಕುಮಾರ್, ಧನಿ ರಾಮ್ ಶಾಂಡಿಲ್, ಅನಿರುದ್ಧ್ ಸಿಂಗ್ ಮತ್ತು ಜಗತ್ ನೇಗಿ ಸೇರಿದಂತೆ ಸಂಪುಟ ಸಚಿವರ ಉಪ ಸಮಿತಿಯನ್ನು ರಚಿಸಲಾಗಿದೆ.
ಒಂದು ಲಕ್ಷ ಉದ್ಯೋಗಗಳ ಸಾಧ್ಯತೆಯನ್ನು ಅನ್ವೇಷಿಸಲು ಸಮಿತಿಯನ್ನು ಸಹ ರಚಿಸಲಾಗಿದೆ. ಈ ವರ್ಷದ ಓಪಿಎಸ್ ಅಡಿಯಲ್ಲಿನ ಹೊಣೆಗಾರಿಕೆಯು ಸುಮಾರು ₹ 800 ರಿಂದ ₹ 900 ಕೋಟಿಗಳಷ್ಟಿದ್ದು, ಡೀಸೆಲ್ ಮೇಲಿನ ವ್ಯಾಟ್ ಮೇಲಿನ ₹ 3 ಹೆಚ್ಚಳದಂತಹ ಸಂಪನ್ಮೂಲ ಸಂಗ್ರಹಣೆಯಿಂದ ಭರಿಸಲಾಗುವುದು. ರಾಜ್ಯ ಸರ್ಕಾರವು ಓಪಿಎಸ್ ಅನ್ನು ಮತಕ್ಕಾಗಿ ಮರುಸ್ಥಾಪಿಸಿಲ್ಲ ಆದರೆ ಹಿಮಾಚಲದ ಅಭಿವೃದ್ಧಿಯ ಇತಿಹಾಸವನ್ನು ಬರೆದ ಉದ್ಯೋಗಿಗಳ ಸಾಮಾಜಿಕ ಭದ್ರತೆ ಮತ್ತು ಸ್ವಾಭಿಮಾನವನ್ನು ಕಾಪಾಡುವುದಕ್ಕಾಗಿ ಎಂದು ಸುಖು ಪುನರುಚ್ಚರಿಸಿದರು.
ಇದನ್ನೂ ಓದಿ: SpiceJet ಸ್ಪೈಸ್ ಜೆಟ್ ವಿಮಾನಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ಬ್ರಿಟಿಷ್ ಏರ್‌ವೇಸ್ ಟ್ರೈನಿ ಬಂಧನ
ವಿಷಯವನ್ನು ಆಳವಾಗಿ ಅಧ್ಯಯನ ಮಾಡಲಾಗಿದೆ ಮತ್ತು ಹಣಕಾಸು ಅಧಿಕಾರಿಗಳು ಕೆಲವು ಮೀಸಲಾತಿಗಳ ಹೊರತಾಗಿಯೂ, ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗಿದೆ. ಹೊಸ ಪಿಂಚಣಿ ಯೋಜನೆಯಡಿಯಲ್ಲಿ ಎಲ್ಲಾ ನೌಕರರು OPS ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಅವರು ಹೇಳಿದರು. ಹಿಂದಿನ ಬಿಜೆಪಿ ಸರ್ಕಾರವು ನೌಕರರಿಗೆ ₹ 4,430 ಕೋಟಿ, ಪಿಂಚಣಿದಾರರಿಗೆ ₹ 5,226 ಕೋಟಿ ಮತ್ತು ಆರನೇ ವೇತನ ಆಯೋಗದ ₹ 1,000 ಕೋಟಿ ತುಟ್ಟಿಭತ್ಯೆ ಸೇರಿದಂತೆ ಅಂದಾಜು ₹ 11,000 ಕೋಟಿ ಮೊತ್ತದ ಬಾಕಿಯನ್ನು ನೀಡಿಲ್ಲ ಎಂದು ಸುಖು ಹೇಳಿದರು. ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ದುರುಪಯೋಗ ಮತ್ತು ವ್ಯರ್ಥ ವೆಚ್ಚಗಳಿಂದ ರಾಜ್ಯವು ₹ 75,000 ಕೋಟಿ ಸಾಲದಲ್ಲಿದೆ ಎಂದಿದ್ದಾರೆ ಸುಖು.
ಹಿಂದಿನ ಬಿಜೆಪಿ ಸರ್ಕಾರವು ಬಜೆಟ್ ಇಲ್ಲದೆ ತೆರೆಯಲಾದ 900 ಕ್ಕೂ ಹೆಚ್ಚು ಸಂಸ್ಥೆಗಳನ್ನು ಕಾರ್ಯಗತಗೊಳಿಸಲು ₹ 5,000 ಕೋಟಿಗಳ ಅಗತ್ಯವಿದ್ದುದರಿಂದ ಸರ್ಕಾರವು ಡಿನೋಟಿಫೈ ಮಾಡಿದೆ. ಸರ್ಕಾರವು ದೊಡ್ಡ ಸಾಲದ ಅಡಿಯಲ್ಲಿ ನಡೆಯಲು ಸಾಧ್ಯವಿಲ್ಲದ ಕಾರಣ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು. ಅಂದಹಾಗೆ ಜನವರಿ 1, 2004 ರಿಂದ ಸರ್ಕಾರಿ ಸೇವೆಗೆ ಸೇರಿದ ನೌಕರರು ಹೊಸ ಪಿಂಚಣಿ ನೀತಿ (NPS) ವ್ಯಾಪ್ತಿಗೆ ಒಳಪಡುತ್ತಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ