ಹಿಂದೂ-ಮುಸ್ಲಿಂ ಡಿಎನ್‌ಎ ಒಂದೇ ಎಂದಮೇಲೆ ಅಸಮತೋಲನ ಎಲ್ಲಿದೆ?; ಮೋಹನ್ ಭಾಗವತ್ಗೆ ಓವೈಸಿ ತಿರುಗೇಟು
ಹಿಂದೂ- ಮುಸ್ಲಿಮರಲ್ಲಿ ಒಂದೇ ಡಿಎನ್‌ಎ ಇರುವುದು ನಿಜವಾದರೆ ಅಸಮತೋಲನದ ಪ್ರಶ್ನೆಯೇ ಬರುವುದಿಲ್ಲ. ಆಗ ಜನಸಂಖ್ಯೆ ನಿಯಂತ್ರಣದ ಅಗತ್ಯವೂ ಇರುವುದಿಲ್ಲ ಎಂದು ಅಸಾದುದ್ದೀನ್ ಓವೈಸಿ
ನವದೆಹಲಿ: ಮತಾಂತರ, ಧರ್ಮಾಧಾರಿತ ಜನಸಂಖ್ಯೆಯ ಅಸಮತೋಲನದ ಬಗ್ಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಿದ್ದರು. ಎಲ್ಲರಿಗೂ ಸಮಾನವಾಗಿ ಅನ್ವಯವಾಗುವ ಪರಿಣಾಮಕಾರಿ ಜನಸಂಖ್ಯಾ ನಿಯಂತ್ರಣ ನೀತಿ ಬೇಕಿದೆ. ಅದು ಒಮ್ಮೆ ಅಸ್ತಿತ್ವಕ್ಕೆ ಬಂದರೆ, ಯಾರಿಗೂ ವಿನಾಯಿತಿ ಸಿಗಬಾರದು ಎಂದು ಮೋಹನ್ ಭಾಗವತ್ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ, ದೇಶದಲ್ಲಿ ಜನಸಂಖ್ಯೆ ನಿಯಂತ್ರಣದ ಅವಶ್ಯಕತೆ ಇಲ್ಲ. ಹಿಂದೂ- ಮುಸ್ಲಿಮರಲ್ಲಿ ಒಂದೇ ಡಿಎನ್‌ಎ ಇರುವುದು ನಿಜವಾದರೆ ಅಸಮತೋಲನದ ಪ್ರಶ್ನೆಯೇ ಬರುವುದಿಲ್ಲ. ಆಗ ಜನಸಂಖ್ಯೆ ನಿಯಂತ್ರಣದ ಅಗತ್ಯವೂ ಇರುವುದಿಲ್ಲ. ನಾವೀಗ ತಲೆಕೆಡಿಸಿಕೊಳ್ಳಬೇಕಾಗಿರುವುದು ವೃದ್ಧರ ಜನಸಂಖ್ಯೆ ಹೆಚ್ಚಳವಾಗುತ್ತಿರುವುದರ ಬಗ್ಗೆ ಮತ್ತು ನಿರುದ್ಯೋಗಿ ಯುವಕರು ತಮ್ಮ ಹಿರಿಯರಿಗೆ ಸಹಾಯ ನೀಡಲು ಆಗದಿರುವುದರ ಬಗ್ಗೆ. ಮುಸ್ಲಿಮರ ಫಲವತ್ತತೆ ದರದಲ್ಲಿ ಅತ್ಯಂತ ಶೀಘ್ರ ಕುಸಿತವಾಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಜನಸಂಖ್ಯಾ ನೀತಿಯ ಕುರಿತಾದ ಭಾಗವತ್ ಅವರ ಹೇಳಿಕೆಯನ್ನು ಟೀಕಿಸಿದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, “ಮೋಹನ್ ಭಾಗವತ್ ಅವರಿಗೆ ಇದು ದ್ವೇಷ ಭಾಷಣದ ದಿನವಾಗಿದೆ. ಜನಸಂಖ್ಯಾ ಅಸಮತೋಲದ ಭಯವು ನರಮೇಧಕ್ಕೆ ಕಾರಣವಾಗಿದೆ. “ಹಿಂದೂಗಳು ಮತ್ತು ಮುಸ್ಲಿಮರು ಒಂದೇ ಡಿಎನ್‌ಎ ಹೊಂದಿದ್ದರೆ, “ಅಸಮತೋಲನ” ಎಲ್ಲಿದೆ? ವಿನಾಕಾರಣ ಏನೇನೋ ಹೇಳಿಕೆ ನೀಡಿ ಜನರ ಹಾದಿ ತಪ್ಪಿಸಬಾರದು ಎಂದಿದ್ದಾರೆ.
If Hindus & Muslims have “same DNA” then where’s the “imbalance”? There’s no need for population control as we’ve already achieved replacement rate. The worry is an ageing population & unemployed youth who cannot support elderly. Muslims have sharpest decline in fertility rate2/2
— Asaduddin Owaisi (@asadowaisi) October 5, 2022
ಇದನ್ನೂ ಓದಿ: Mohan Bhagwat: ಅಖಂಡ ಭಾರತ ನಿರ್ಮಾಣ, ಹಿಂದೂರಾಷ್ಟ್ರದ ನಿಲುವು, ನೂತನ ಜನಸಂಖ್ಯಾ ನೀತಿಯ ಬಗ್ಗೆ ಮೋಹನ್ ಭಾಗವತ್ ಪ್ರಸ್ತಾಪ
ಇದಕ್ಕೂ ಮುನ್ನ ಮೋಹನ್ ಭಾಗವತ್ ಅವರು ಭಾರತದ ಜನಸಂಖ್ಯಾ ಸ್ಫೋಟದ ಸಾಧಕ-ಬಾಧಕಗಳನ್ನು ಎತ್ತಿ ತೋರಿಸಿದರು. ಉದಾಹರಣೆಗೆ, ಒಂದು ಮಗುವಿನ ನೀತಿಯನ್ನು ಅಳವಡಿಸಿಕೊಂಡ ಚೀನಾಕ್ಕೆ ಹೋಲಿಸಿದರೆ ಭಾರತವು ಜನಸಂಖ್ಯಾ ಲಾಭಾಂಶವನ್ನು ಹೊಂದಿದೆ. ದೇಶದ ಒಟ್ಟು ಫಲವತ್ತತೆ ದರ (ಟಿಎಫ್‌ಆರ್) ಪ್ರತಿ ಮಹಿಳೆಗೆ ಎರಡು ಮಕ್ಕಳಿಗೆ ಇಳಿಕೆಯಾಗಿದೆ. ಜನಸಂಖ್ಯೆಯನ್ನು ಕಡಿಮೆ ಮಾಡದ ಹೊರತು ಏನೂ ಆಗುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಈ ಮಾತು ಸಂಪೂರ್ಣವಾಗಿ ನಿಜವಲ್ಲ. ಜನಸಂಖ್ಯೆ ಹೆಚ್ಚಾದಷ್ಟೂ ಹೊರೆ ಹೆಚ್ಚಾಗುತ್ತದೆ ಎಂಬುದು ನಿಜ. ಜನಸಂಖ್ಯೆಯನ್ನು ಹೊರೆಯಾಗಿ ನೋಡಿದಾಗ ಅದು ಆಗಬಹುದು. ಸರಿಯಾಗಿ ಬಳಸಿಕೊಂಡರೆ ಜನಸಂಖ್ಯೆ ನಮ್ಮ ಆಸ್ತಿಯಾಗುತ್ತದೆ. ನಮ್ಮಲ್ಲಿ ಅಪಾರ ಜನಸಂಖ್ಯೆ ಇದೆ. ಅದನ್ನು ಹೊರೆ ಎಂದು ಹೇಳಬಹುದು. ಆದರೆ ನಾವು ಇಂದು ಜನಸಂಖ್ಯಾ ಲಾಭಾಂಶದ ಸ್ಥಾನದಲ್ಲಿ ಇದ್ದೇವೆ. ಯಾವುದೇ ದೇಶವು 57 ಕೋಟಿ ಯುವಕರನ್ನು ಹೊಂದಿಲ್ಲ. ನಮ್ಮ ನೆರೆಯ ಚೀನಾದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿದೆ. ಆದರೆ, ಭಾರತದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ ಎಂದಿದ್ದರು.
ಇದನ್ನೂ ಓದಿ:Mohan Bhagwat: ಅಸ್ಪೃಶ್ಯತೆ, ಜಾತಿ ತಾರತಮ್ಯ ಅಧರ್ಮ; ವಿಜಯದಶಮಿ ಭಾಷಣದಲ್ಲಿ ಮೋಹನ್ ಭಾಗವತ್
ಜನಸಂಖ್ಯೆಯ ಅಸಮತೋಲನವು ಭೌಗೋಳಿಕ ಗಡಿಗಳಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಜನನ ದರದಲ್ಲಿನ ವ್ಯತ್ಯಾಸಗಳ ಜೊತೆಗೆ, ಬಲ, ಆಮಿಷ ಅಥವಾ ದುರಾಸೆ ಮತ್ತು ಧಾರ್ಮಿಕ ಒಳನುಸುಳುವಿಕೆಯಿಂದ ಮತಾಂತರಗಳು ಸಹ ದೊಡ್ಡ ಕಾರಣವಾಗುತ್ತವೆ. ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವ ಪರಿಣಾಮಕಾರಿ ಜನಸಂಖ್ಯಾ ನಿಯಂತ್ರಣ ನೀತಿಯನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಮೋಹನ್ ಭಾಗವತ್ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:36 pm, Wed, 5 October 22