Old Parliament History: ಹೊಸ ಸಂಸತ್ ಉದ್ಘಾಟನೆಗೆ ದಿನಗಣನೆ; ಇತಿಹಾಸದ ಪುಟ ಸೇರಲಿರುವ ಹಳೆ ಸಂಸತ್ ವಿಶೇಷಗಳು ಇಲ್ಲಿವೆ

ಹಳೆ ಸಂಸತ್ ಭವನದ ಕಟ್ಟಡ ಯಾವಾಗ ನಿರ್ಮಾಣವಾಗಿತ್ತು? ಅದರ ವಿನ್ಯಾಸ ಸಿದ್ಧಪಡಿಸಿದವರು ಯಾರು? ಹೊಸದಕ್ಕೂ ಹಳೆಯದಕ್ಕೂ ಇರುವ ವ್ಯತ್ಯಾಸವೇನು? ಇಲ್ಲಿದೆ ಮಾಹಿತಿ

Old Parliament History: ಹೊಸ ಸಂಸತ್ ಉದ್ಘಾಟನೆಗೆ ದಿನಗಣನೆ; ಇತಿಹಾಸದ ಪುಟ ಸೇರಲಿರುವ ಹಳೆ ಸಂಸತ್ ವಿಶೇಷಗಳು ಇಲ್ಲಿವೆ
ಈಗಿನ ಅಥವಾ ಹಳೆ ಸಂಸತ್ ಕಟ್ಟಡ
Follow us
|

Updated on: May 24, 2023 | 3:48 PM

ಸಂಸತ್ ಭವನದ ನೂತನ ಕಟ್ಟಡವನ್ನು (New Parliament Building) ಪ್ರಧಾನಿ ನರೇಂದ್ರ ಮೋದಿ ಮೇ 28 ರಂದು ಉದ್ಘಾಟಿಸಲಿದ್ದಾರೆ. 971 ಕೋಟಿ ರೂ. ವೆಚ್ಚದಲ್ಲಿ ತ್ರಿಕೋನ ಆಕಾರದ ನೂತನ ಸಂಸತ್ ಭವನದ ಕಟ್ಟಡವನ್ನು ನಿರ್ಮಿಸಲಾಗಿದೆ. ಇದು ಈಗಿನ ಸಂಸತ್ ಭವನಕ್ಕಿಂತ (Old Parliment Building) ಹಲವು ವಿಷಯಗಳಲ್ಲಿ ಭಿನ್ನವಾಗಿದೆ. ಹೊಸ ಸಂಸತ್ ಭವನದಲ್ಲಿ ಕಾರ್ಯಾರಂಭ ಆಗುತ್ತಿದ್ದಂತೆಯೇ ಈಗಿರುವ ಸಂಸತ್ ಭವನ ಇತಿಹಾಸದ ಪುಟ ಸೇರಲಿದೆ. ಈಗಿನ ಸಂಸತ್​​ ಭವನದ ಲೋಕಸಭೆ 550 ಸಂಸದರ ಆಸನ ಸಾಮರ್ಥ್ಯವನ್ನು ಹೊಂದಿದೆ ಮತ್ತು ಹೊಸ ಕಟ್ಟಡದ ಲೋಕಸಭೆ 888 ಆಸನಗಳ ಸಾಮರ್ಥ್ಯ ಹೊಂದಿದೆ. ಹೊಸ ಸಂಸತ್ ಭವನದಲ್ಲಿ ರಾಜ್ಯಸಭಾ ಸಂಸದರಿಗೆ ಆಸನದ ಸ್ಥಳವನ್ನೂ ಹೆಚ್ಚಿಸಲಾಗಿದೆ. ಪ್ರಸ್ತುತ, ರಾಜ್ಯಸಭೆಯಲ್ಲಿ 250 ಸ್ಥಾನಗಳ ಆಸನಗಳಿದ್ದರೆ, ಹೊಸ ಸಂಸತ್​ನ ರಾಜ್ಯಸಭೆಯು 384 ಆಸನ ಸಾಮರ್ಥ್ಯವನ್ನು ಹೊಂದಿರುತ್ತದೆ.

ಸಂಸತ್ ಭವನ ಯಾವಾಗ ನಿರ್ಮಾಣವಾಯಿತು?

ಒಂದು ಕಡೆ ದೇಶದಲ್ಲಿ ಸ್ವಾತಂತ್ರ್ಯ ಚಳವಳಿ ಶುರುವಾಗಿತ್ತು. ಆದರೆ ಇನ್ನೊಂದು ಕಡೆ ಬ್ರಿಟಿಷ್ ಸರ್ಕಾರ ದೆಹಲಿಯಲ್ಲಿ ಸಂಸತ್ ಭವನವನ್ನು ನಿರ್ಮಿಸುತ್ತಿತ್ತು. ಬ್ರಿಟಿಷರು ದೆಹಲಿಯಲ್ಲಿ ರಾಜಧಾನಿ ಮಾಡುವ ಉದ್ದೇಶದಿಂದ ಆಡಳಿತ ರಚನೆಯ ಕಾರ್ಯಾಚರಣೆಗಾಗಿ ಇದನ್ನು ನಿರ್ಮಿಸಲು ಪ್ರಾರಂಭಿಸಿದರು. ಡ್ಯೂಕ್ ಆಫ್ ಕನಾಟ್ 1921ರ ಫೆಬ್ರವರಿ 12 ರಂದು ಈ ಕಟ್ಟಡದ ಅಡಿಪಾಯವನ್ನು ಹಾಕಿದರು.

ಇದು ದೆಹಲಿಯ ಹೃದಯಭಾಗದಲ್ಲಿದೆ. ಸಂಸತ್ ಭವನವು ಇಂಡಿಯಾ ಗೇಟ್ ಬಳಿ ಮತ್ತು ರಾಷ್ಟ್ರಪತಿ ಭವನದಿಂದ ಸುಮಾರು 750 ಮೀಟರ್ ದೂರದಲ್ಲಿದೆ. ದೇಶವು ಸ್ವತಂತ್ರಗೊಂಡಾಗ, ಸಂವಿಧಾನ ಸಭೆಯು ಅದನ್ನು ತನ್ನ ಅಧಿಕಾರಕ್ಕೆ ತೆಗೆದುಕೊಂಡಿತು. 1950 ರಲ್ಲಿ ಸಂವಿಧಾನವು ಜಾರಿಗೆ ಬಂದ ನಂತರ, ಅದಕ್ಕೆ ಭಾರತೀಯ ಸಂಸತ್ತಿನ ರೂಪವನ್ನು ನೀಡಲಾಯಿತು.

ಸಂಸತ್ ನಿರ್ಮಾಣಕ್ಕೆ ತಗಲಿದೆ ವೆಚ್ಚವೆಷ್ಟು? ವಿನ್ಯಾಸ ಸಿದ್ಧಪಡಿಸಿದವರು ಯಾರು?

ಸಂಸತ್ ಭವನದ ಹೊರಗೆ 144 ಕಂಬಗಳನ್ನು ನಿರ್ಮಿಸಲಾಗಿದೆ. ಸಂಪೂರ್ಣ ಕಟ್ಟಡವನ್ನು ನಿರ್ಮಿಸಲು ಸುಮಾರು 6 ವರ್ಷಗಳನ್ನು ತೆಗೆದುಕೊಂಡಿತು ಮತ್ತು ಅದರ ನಿರ್ಮಾಣದ ವೆಚ್ಚ 83 ಲಕ್ಷ ರೂ. ಆದರೆ, ಅಡಿಪಾಯ ಹಾಕುವುದಕ್ಕೂ ಸುಮಾರು 10 ವರ್ಷಗಳ ಮೊದಲು ಕಟ್ಟಡದ ವಿನ್ಯಾಸವನ್ನು ಸಿದ್ಧಪಡಿಸಲಾಗಿತ್ತು.

ಇದನ್ನೂ ಓದಿ: New Parliament Inauguration Row: ನೂತನ ಸಂಸತ್ ಭವನವನ್ನು ಯಾರು ಉದ್ಘಾಟಿಸಬೇಕೆಂಬ ವಿವಾದ: ಸಂವಿಧಾನ ಹೇಳುವುದೇನು? ಇಲ್ಲಿದೆ ಮಾಹಿತಿ

ಇದನ್ನು ಪ್ರಸಿದ್ಧ ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಎಡ್ವಿನ್ ಕೆ ಲುಟ್ಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ್ದಾರೆ. ಆದರೆ ಕಟ್ಟಡದ ವೃತ್ತಾಕಾರದ ಆಕಾರವು ಮಧ್ಯಪ್ರದೇಶದ ಮೊರೆನಾದಲ್ಲಿರುವ ಚೌಸತ್ ಯೋಗಿನಿ ದೇವಾಲಯದಿಂದ ಪ್ರೇರಿತವಾಗಿದೆ. ಅಂದರೆ, ವಾಸ್ತುಶಿಲ್ಪಿಗಳು ಬ್ರಿಟನ್‌ನವರಾಗಿದ್ದರೂ, ಅವರು ಭಾರತೀಯ ಕಾರ್ಮಿಕರ ಸಹಾಯದಿಂದ ಭಾರತೀಯ ಸಂಪ್ರದಾಯವನ್ನು ಅನುಸರಿಸಿದ್ದರು.

ಯಾವಾಗ, ಯಾರಿಂದ ಉದ್ಘಾಟನೆಯಾಯಿತು?

ಈ ಕಟ್ಟಡವು ವಿಶ್ವದ ಅತ್ಯುತ್ತಮ ವಾಸ್ತುಶಿಲ್ಪದ ಮಾದರಿಯಾಗಿದೆ. ಇದು 12 ಬಾಗಿಲುಗಳನ್ನು ಹೊಂದಿದೆ. ಹೌಸ್ ಆಫ್ ಪಾರ್ಲಿಮೆಂಟ್ ಅಂದರೆ ಪಾರ್ಲಿಮೆಂಟ್ ಹೌಸ್ ಕಾಮಗಾರಿ 1921 ರಲ್ಲಿ ಪೂರ್ಣಗೊಂಡಿತು. ಆ ಸಮಯದಲ್ಲಿ ಭಾರತದ ವೈಸರಾಯ್ ಆಗಿದ್ದವರು ಲಾರ್ಡ್ ಇರ್ವಿನ್. ಈ ಕಟ್ಟಡವನ್ನು 18 ಜನವರಿ 1927 ರಂದು ಲಾರ್ಡ್ ಇರ್ವಿನ್ ಉದ್ಘಾಟಿಸಿದರು. ಬ್ರಿಟಿಷ್ ಲೆಜಿಸ್ಲೇಟಿವ್ ಕೌನ್ಸಿಲ್ ಅದರ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಅದರ ಹೆಸರನ್ನು ಸಂಸತ್ತಿನ ಭವನಕ್ಕೆ ನೀಡಲಾಯಿತು.

ಹಳೆ ಸಂಸತ್ ಭವನದ ವಿಶೇಷತೆ ಏನು?

ಸ್ಥಳಾವಕಾಶದ ಕೊರತೆಯಿಂದಾಗಿ ಸಂಸತ್ ಭವನದ ಕಟ್ಟದ ವಿಸ್ತರಣೆ ಕಾರ್ಯವನ್ನು ನಂತರ ಮಾಡಲಾಯಿತು. 1956 ರಲ್ಲಿ, ಈ ಕಟ್ಟಡಕ್ಕೆ ಎರಡು ಹೊಸ ಮಹಡಿಗಳನ್ನು ಸೇರಿಸಲಾಯಿತು. ಕಟ್ಟಡದ ಕೇಂದ್ರ ಸಭಾಂಗಣವು ಸಾಕಷ್ಟು ಪ್ರಸಿದ್ಧವಾಗಿದೆ ಮತ್ತು ಆಕರ್ಷಕವಾಗಿದೆ. ಇದು ವೃತ್ತಾಕಾರವಾಗಿದೆ. ಉದ್ಯಾನಗಳು ಮತ್ತು ಕಾರಂಜಿಗಳು ಇಲ್ಲಿನ ವಿಶೇಷ ಆಕರ್ಷಣೆಗಳಾಗಿವೆ. ವಸ್ತುಸಂಗ್ರಹಾಲಯವನ್ನು ಸಹ ನಿರ್ಮಿಸಲಾಯಿತು ಮತ್ತು 2002 ರಲ್ಲಿ ಗ್ರಂಥಾಲಯವನ್ನು ಸಹ ನಿರ್ಮಿಸಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ