ಕೊಲ್ಕತ್ತಾ: ಸೌರವ್ ಗಂಗೂಲಿ ಮನೆಯಲ್ಲಿ ರಾತ್ರಿ ಭೋಜನ ಸವಿದ ಅಮಿತ್ ಶಾ

ಕೊಲ್ಕತ್ತಾ: ಸೌರವ್ ಗಂಗೂಲಿ ಮನೆಯಲ್ಲಿ ರಾತ್ರಿ ಭೋಜನ ಸವಿದ ಅಮಿತ್ ಶಾ
ಸೌರವ್ ಮನೆಯಲ್ಲಿ ಭೋಜನ ಸವಿದ ಅಮಿತ್ ಶಾ

ಕೇಂದ್ರ ಸಚಿವರ ಪುತ್ರ ಜಯ್ ಶಾ ಅವರು ಮಾಜಿ ಕ್ರಿಕೆಟಿಗನ ಸಹೋದ್ಯೋಗಿಯಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಥವಾ ಬಿಸಿಸಿಐನಲ್ಲಿ ಗೌರವ ಕಾರ್ಯದರ್ಶಿಯಾಗಿರುವುದರಿಂದ ಈ ಭೇಟಿಯನ್ನು ಸೌಜನ್ಯದ ಭೇಟಿ ಎಂದು...

TV9kannada Web Team

| Edited By: Rashmi Kallakatta

May 06, 2022 | 9:49 PM

ಕೊಲ್ಕತ್ತಾ: ಕೊಲ್ಕತ್ತಾ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ (Amit Shah) ಶುಕ್ರವಾರ (ಇಂದು) ರಾತ್ರಿ ಭಾರತೀಯ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಸೌರವ್ ಗಂಗೂಲಿ (Sourav Ganguly) ಅವರ ಮನೆಯಲ್ಲಿ ಭೋಜನ ಸವಿದರು. ಕೇಂದ್ರ ಸಚಿವರ ಪುತ್ರ ಜಯ್ ಶಾ (Jay Shah) ಅವರು ಮಾಜಿ ಕ್ರಿಕೆಟಿಗನ ಸಹೋದ್ಯೋಗಿಯಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಥವಾ ಬಿಸಿಸಿಐನಲ್ಲಿ ಗೌರವ ಕಾರ್ಯದರ್ಶಿಯಾಗಿರುವುದರಿಂದ ಈ ಭೇಟಿಯನ್ನು ಸೌಜನ್ಯದ ಭೇಟಿ ಎಂದು ಹೇಳಲಾಗಿದೆ. ಗೃಹ ಸಚಿವರು ಗಂಗೂಲಿ ಅವರ ಮನೆಗೆ ಬಿಳಿ ಎಸ್​​ಯುವಿಯಲ್ಲಿ ಆಗಮಿಸಿದರು. ಅಮಿತ್ ಶಾ ಅವರನ್ನು ನೋಡಲು ಹೊರಗಿನ ಕಿರಿದಾದ ರಸ್ತೆಯಲ್ಲಿ ಜನ ಜಮಾಯಿಸಿದ್ದರು. ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತು ನಮಸ್ತೆ ಅವರು ಜನರಿಗೆ ಕೈ ಮುಗಿದಿದ್ದಾರೆ . ನಂತರ ಗಂಗೂಲಿ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಊಟ ಮಾಡುತ್ತಿರುವ ಶಾ ಕಾಣಿಸಿಕೊಂಡರು. 49 ವರ್ಷದ ಗಂಗೂಲಿ ಅವರು ಈ ಔತಣಕೂಟದವನ್ನು ರಾಜಕೀಯವಾಗಿ ನೋಡಬಾರದು ಎಂದು ಸುದ್ದಿಗಾರರಿಗೆ ತಿಳಿಸಿದರು. ನಾನು ಅವರನ್ನು ಒಂದು ದಶಕದಿಂದ ಬಲ್ಲೆ ಮತ್ತು ಹಲವಾರು ಬಾರಿ ಭೇಟಿಯಾಗಿದ್ದೇನೆ ಎಂದು ಗಂಗೂಲಿ ಹೇಳಿದ್ದಾರೆ.

ನಮಗೆ ಮಾತನಾಡಲು ಬಹಳಷ್ಟು ಇದೆ. ನಾನು ಅವರನ್ನು 2008 ರಿಂದ ಬಲ್ಲೆ. ನಾನು ಆಟವಾಡುತ್ತಿದ್ದಾಗ, ನಾವು ಭೇಟಿಯಾಗಿದ್ದೆವು. ನಾನು ಪ್ರವಾಸದಲ್ಲಿರುತ್ತಿದ್ದ ಕಾರಣ ಅಷ್ಟೊಂದು ಇರುತ್ತಿರಲಿಲ್ಲ ಎಂದು ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗೂಲಿ ಹೇಳಿದ್ದಾರೆ. “ನಾನು ಅವರ ಮಗನೊಂದಿಗೆ ಕೆಲಸ ಮಾಡುತ್ತೇನೆ. ಇದು ಹಳೆಯ ಸಂಬಂಧ ಎಂದು ಅವರು ಹೇಳಿದರು. ಮೆನುವಿನಲ್ಲಿ ಏನಿದೆ ಎಂಬ ಪ್ರಶ್ನೆಗೆ ಮುಗುಳ್ನಕ್ಕ ಗಂಗೂಲಿ ಮನೆಗೆ ಹೋಗಿ ನೋಡುತ್ತೇನೆ. ಅವರು ಸಸ್ಯಾಹಾರಿ” ಎಂದು ಉತ್ತರಿಸಿದರು.

ಗಂಗೂಲಿ ಅವರು ಅಮಿತ್ ಶಾ ಅವರೊಂದಿಗಿನ ಭೇಟಿಯ ರಾಜಕೀಯ ಕೋನವನ್ನು ನಿರಾಕರಿಸುವುದು ಇದೇ ಮೊದಲಲ್ಲ. ಕಳೆದ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ, ಅವರು ಅಮಿತ್ ಶಾ ಅವರೊಂದಿಗಿನ ಭೇಟಿಯ ಊಹಾಪೋಹ ಹಬ್ಬಿದ್ದು, ಬಿಜೆಪಿಗೆ ಸೇರುತ್ತಿದ್ದಾರೆ ಎಂಬ ವದಂತಿಯನ್ನು ಗಂಗೂಲಿ ತಳ್ಳಿದ್ದರು.

ಗಂಗೂಲಿ ಅವರು ಬಿಜೆಪಿಗೆ ಸೇರುತ್ತಾರೆಯೇ ಎಂಬ ಊಹಾಪೋಹಗಳು 2015 ರ ಹಿಂದೆ ಮತ್ತು ಬಂಗಾಳದ ಪ್ರತಿ ಪ್ರಮುಖ ಚುನಾವಣೆಯ ಮೊದಲು ಹೊಮ್ಮಿದ್ದವು. ಆಗ “ದಾದಾ ವರ್ಸಸ್ ದೀದಿ” ಎಂಬುದು ಸುದ್ದಿಯಾಗಿತ್ತು. ಬಿಜೆಪಿಗೆ ಸೇರಲು ಗಂಗೂಲಿ ಜತೆ ಪಕ್ಷ ಮಾತುಕತೆ ನಡೆಸಿತ್ತು ಎಂಬುದೂ ವರದಿ ಆಗಿತ್ತು.  ಕಳೆದ ವರ್ಷ ಜನವರಿಯಲ್ಲೂ, ಬಂಗಾಳ ವಿಧಾನಸಭಾ ಚುನಾವಣೆಗೆ ಮೂರು ತಿಂಗಳ ಮೊದಲು, ಅವರು ಬಿಜೆಪಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವ್ಯಾಪಕವಾಗಿ ಸುದ್ದಿಯಾಗಿತ್ತು . ಅದೇ ತಿಂಗಳು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿಗೆ ಲಘು ಹೃದಯಾಘಾತವಾಯಿತು. ರಾಜಕೀಯ ಸೇರುವ ಬಗ್ಗೆ ಬಂದಿರುವ ಸುದ್ದಿಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಇದನ್ನೂ ಓದಿ

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada