ನಾನೇನು ತಿನ್ನಬೇಕು ಎಂಬುದನ್ನು ನೀವು ಹೇಗೆ ನಿರ್ಧರಿಸುತ್ತೀರಿ?: ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್​​ಗೆ ಹೈಕೋರ್ಟ್ ತರಾಟೆ

Gujarat High Court ನಿಮ್ಮ ಸಮಸ್ಯೆ ಏನು? ನೀವು ಮಾಂಸಾಹಾರ ಇಷ್ಟಪಡುವುದಿಲ್ಲ, ಅದು ನಿಮಗೆ ಸಂಬಂಧಿಸಿದ್ದು, ನಾನು ಹೊರಗೆ ಏನು ತಿನ್ನಬೇಕು ಎಂಬುದನ್ನು ನೀವು ನಿರ್ಧರಿಸುವುದು ಹೇಗೆ? ನಾಳೆ ನೀವು ಮನೆಯ ಹೊರಗೆ ನಾನು ಏನು ತಿನ್ನಬೇಕು ಎಂಬುದನ್ನು ನಿರ್ಧರಿಸುತ್ತೀರಿ.

ನಾನೇನು ತಿನ್ನಬೇಕು ಎಂಬುದನ್ನು ನೀವು ಹೇಗೆ ನಿರ್ಧರಿಸುತ್ತೀರಿ?: ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್​​ಗೆ ಹೈಕೋರ್ಟ್ ತರಾಟೆ
ಗುಜರಾತ್ ಹೈಕೋರ್ಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 10, 2021 | 11:42 AM

ಅಹಮದಾಬಾದ್: ಮಾಂಸಾಹಾರ ಮಾರಾಟಕ್ಕೆ ಕೌನ್ಸಿಲರ್‌ಗಳಿಂದ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (Ahmedabad Municipal Corporation) ತಮ್ಮ ಗಾಡಿಗಳನ್ನು ವಶಪಡಿಸಿಕೊಂಡಿದೆ ಎಂದು 25 ಬೀದಿ ವ್ಯಾಪಾರಿಗಳ ಮನವಿಯನ್ನು ಆಲಿಸಿದ ಗುಜರಾತ್ ಹೈಕೋರ್ಟ್  (Gujarat High Court)ಗುರುವಾರ ಎಎಂಸಿಯನ್ನು ತರಾಟೆಗೆ ತೆಗೆದುಕೊಂಡಿದೆ. ಅದೇ ವೇಳೆ ಅರ್ಜಿದಾರರ ಗಾಡಿಗಳನ್ನು 24 ಗಂಟೆಗಳೊಳಗೆ ಬಿಟ್ಟಕೊಡಬೇಕು ಎಂದು ಎಎಂಸಿಗೆ(AMC) ನಿರ್ದೇಶಿಸಿದೆ.  ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಬಿರೇನ್ ವೈಷ್ಣವ್ ನಗರ ಸಭೆಗೆ ಏನು ತೊಂದರೆಯಾಗಿದೆ ಎಂದು ಪ್ರಶ್ನಿಸಿದ್ದಾರೆ.  “ನಿಮ್ಮ ಸಮಸ್ಯೆ ಏನು? ನೀವು ಮಾಂಸಾಹಾರ ಇಷ್ಟಪಡುವುದಿಲ್ಲ, ಅದು ನಿಮಗೆ ಸಂಬಂಧಿಸಿದ್ದು, ನಾನು ಹೊರಗೆ ಏನು ತಿನ್ನಬೇಕು ಎಂಬುದನ್ನು ನೀವು ನಿರ್ಧರಿಸುವುದು ಹೇಗೆ? ನಾಳೆ ನೀವು ಮನೆಯ ಹೊರಗೆ ನಾನು ಏನು ತಿನ್ನಬೇಕು ಎಂಬುದನ್ನು ನಿರ್ಧರಿಸುತ್ತೀರಿ. ಪಾಲಿಕೆ ಆಯುಕ್ತರಿಗೆ ಫೋನ್ ಮಾಡಿ ಏನು ಮಾಡುತ್ತಿದ್ದೀರಿ ಎಂದು ಕೇಳಿ. ಸಕ್ಕರೆ ಕಾಯಿಲೆ ಬರುತ್ತದೆ ಎಂದು ನಾಳೆ ಅವರು ಕಬ್ಬಿನ ರಸವನ್ನು ಸೇವಿಸಬಾರದು ಎಂದು ಹೇಳುತ್ತಾರೆಯೇ? ಅಥವಾ ಕಾಫಿ ಆರೋಗ್ಯಕ್ಕೆ ಹಾನಿಕಾರಕ ಎಂದು ಬೇಡ ಅಂತಾರೆಯೇ? ಎಂದು ನ್ಯಾಯಾಲಯ ಸರ್ಕಾರಿ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.

ಯಾವುದೇ ಅಧಿಕೃತ ಆದೇಶವಿಲ್ಲದೆ ಮತ್ತು ವಡೋದರಾ, ಸೂರತ್, ಭಾವನಗರ, ಜುನಾಗಢ ಮತ್ತು ಅಹಮದಾಬಾದ್‌ನಲ್ಲಿ ನಾಗರಿಕ ಸಂಸ್ಥೆಗಳು ಪ್ರತಿಕೂಲ ನಿಲುವುಗಳನ್ನು ತೆಗೆದುಕೊಂಡಿದ್ದರಿಂದ ಅವರ ಗಾಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರ್ಜಿದಾರರ ವಕೀಲ ರೋನಿತ್ ಜಾಯ್ ಸಲ್ಲಿಸಿದ ಅರ್ಜಿಗೆ ನ್ಯಾಯಾಲಯ ಈ ರೀತಿ ಪ್ರತಿಕ್ರಿಯಿಸಿದೆ. ಮಾಂಸಾಹಾರ ಮಾರಾಟ ಮಾಡುವ ಗಾಡಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿವೆ ಎಂದು ರಾಜ್‌ಕೋಟ್ ಮೇಯರ್ ಕಳೆದ ತಿಂಗಳು ಹೇಳಿದ್ದರು.  ರಾಜ್ಯದ ಹೊರತಾಗಿ, ಸರ್ಕಾರಿ ವಕೀಲರು ನಗರ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನು ಪ್ರತಿನಿಧಿಸುತ್ತಿದ್ದರು, ಅವರನ್ನೂ ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಹೆಸರಿಸಲಾಗಿದೆ.

ಇದನ್ನು ಮೊದಲ  ಕಲಾಪದಲ್ಲಿ ಅರ್ಜಿ ಕೈಗೆತ್ತಿಕೊಂಡ ನಂತರ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಸ್ಥಾಯಿ ವಕೀಲ ಸತ್ಯಂ ಛಾಯಾ ಅವರಿಗೆ ನ್ಯಾಯಾಲಯವು ಅದರ ಮುಂದೆ ಹಾಜರಾಗುವಂತೆ ಸೂಚಿಸುವುದರೊಂದಿಗೆ, ಪ್ರಕರಣವನ್ನು ದ್ವಿತೀಯಾರ್ಧದಲ್ಲಿ ಹೆಚ್ಚಿನ ವಿಚಾರಣೆಗೆ ಮಂದೂಡಿತ್ತು.

“ಕೆಲವು ತಪ್ಪು ಕಲ್ಪನೆಯಡಿಯಲ್ಲಿ” ಅರ್ಜಿಯನ್ನು ಸಲ್ಲಿಸಲಾಗಿದೆ ಮತ್ತು “ಎಲ್ಲಾ ಮಾಂಸಾಹಾರ (ಗಾಡಿಗಳು) ತೆಗೆದುಹಾಕಲು ಯಾವುದೇ ತೆರವು ಕಾರ್ಯ ನಡೆದಿಲ್ಲ ಇಲ್ಲ” ಎಂದು ವಕೀಲ ಛಾಯಾ ವಾದಿಸಿದರು. ಎಎಂಸಿ ಸೂಚನೆ ಪ್ರಕಾರ “ರಸ್ತೆಯ ಮೇಲಿನ ಅತಿಕ್ರಮಣ ಮಾಡಿರುವ ಗಾಡಿಗಳಿಂದ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿದೆ ಅಥವಾ ಪಾದಚಾರಿಗಳಿಗೆ ತೊಂದರೆಯಾಗಿರುವ ಗಾಡಿಗಳನ್ನು ತೆರವು ಮಾಡಲಾಗಿದೆ ಎಂದು ಛಾಯಾ ಹೇಳಿದರು. ಆದರೆ, ಮಾಂಸಾಹಾರ ಮಾರಾಟಗಾರರನ್ನು ಗುರಿಯಾಗಿಸಿಕೊಂಡು ಅತಿಕ್ರಮಣ ತೆರವು ಕಾರ್ಯ ಕೈಗೊಳ್ಳಲಾಗುತ್ತಿದೆಯೇ ಎಂದು ನ್ಯಾಯಮೂರ್ತಿ ವೈಷ್ಣವ್ ಪ್ರಶ್ನಿಸಿದರು.  ಯಾವುದೊ ವಿಷಯವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಉದಾಹರಣೆಗೆ, ನಾವು ತುಂಬಾ ಪ್ರಾಮಾಣಿಕವಾಗಿ ಹೇಳೋಣ, ವಸ್ತ್ರಾಪುರ ಕೆರೆಯ ಸುತ್ತ, ಯಾರಾದರೂ ಮೊಟ್ಟೆ ಮತ್ತು ಆಮ್ಲೆಟ್ ಮಾರುತ್ತಿದ್ದರೆ ರಾತ್ರೋರಾತ್ರಿ ನೀವು ಅವರನ್ನು ತೆರವು ಮಾಡಲು ನಿರ್ಧರಿಸುತ್ತೀರಿ.ಯಾಕೆಂದರೆ ನಾವು ಮೊಟ್ಟೆ ತಿನ್ನಲ್ಲ, ಅವರನ್ನು ನಿಲ್ಲಿಸಬೇಕು ಎಂದು ಅಧಿಕಾರದಲ್ಲಿರುವ ಪಕ್ಷ ಹೇಳುತ್ತದೆ. ಆಗ ನೀವು ಅವರನ್ನು ಅಲ್ಲಿಂದ ತೆರವು ಮಾಡುತ್ತೀರಾ? ಅಂಥ ಕೆಲಸವನ್ನೇಕೆ ಮಾಡುತ್ತೀರಿ? ನಿಮ್ಮ ಕಾರ್ಪೊರೇಷನ್ ಕಮಿಷನರ್ ಇಲ್ಲಿಗೆ ಹಾಜರಾಗಲು ಹೇಳಿ. ಈ ರೀತಿಯ ಜನರನ್ನು ತೆರವುಗೊಳಿಸಲು ನಿಮಗೆಷ್ಟು ಧೈರ್ಯ ಎಂದು ನ್ಯಾಯಮೂರ್ತಿ ವೈಷ್ಣವ್ ಹೇಳಿದ್ದಾರೆ.

ಛಾಯಾ ಇದನ್ನು ನಿರಾಕರಿಸಿದರು ಮತ್ತು ಅರ್ಜಿಯ ಪ್ರತಿಗೆ ಲಗತ್ತಿಸಲಾದ ನಿರ್ಬಂಧಿಸಲಾದ ಫುಟ್‌ಪಾತ್‌ಗಳ ಫೋಟೋಗಳನ್ನು ಉಲ್ಲೇಖಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ವೈಷ್ಣವ್, “ಅತಿಕ್ರಮಣಗಳಿದ್ದರೆ, ಇದು ಹೋಗಬೇಕು. ಇಂದು ಬೆಳಿಗ್ಗೆ ಯಾರಾದರೂ ‘ನಾಳೆಯಿಂದ ನನ್ನ ಸುತ್ತಲೂ ಮೊಟ್ಟೆಯ ತಿನಿಸುಗಳು ಬೇಡ’ ಎಂದು ಹೇಳಿಕೆ ನೀಡುತ್ತಾರೆ ಎಂದ ಮಾತ್ರಕ್ಕೆ ಜಪ್ತಿ ಮಾಡುವುದು ಬೇಡ ಎಂದಿದ್ದಾರೆ.

ಛಾಯಾ ಅವರ ವಿವರವಾದ ಸಲ್ಲಿಕೆಯನ್ನು ದಾಖಲಿಸುವಾಗ ಆದೇಶವನ್ನು ಅಂಗೀಕರಿಸಿದ ನ್ಯಾಯಾಲಯವು “ಅರ್ಜಿದಾರರು ತಮ್ಮ ಸರಕು ಮತ್ತು ವಸ್ತುಗಳನ್ನು ಬಿಡುಗಡೆ ಮಾಡಲು 24 ಗಂಟೆಗಳ ಒಳಗೆ ನಿಗಮವನ್ನು ಸಂಪರ್ಕಿಸಿದರೆ, ನೀತಿಯ ಆಧಾರದ ಮೇಲೆ ಮತ್ತು ಕಾನೂನಿನ ಪ್ರಕಾರ, ಅವರ ಪ್ರಕರಣಗಳನ್ನು ಸಾಧ್ಯವಾದಷ್ಟು ಬೇಗ ಪರಿಗಣಿಸಬೇಕು ಎಂದು ಹೇಳಿದೆ.

ಇದನ್ನೂ ಓದಿ: ಶಾಲೆಗಳಲ್ಲಿ ಮೊಟ್ಟೆ ನೀಡಿಕೆಗೆ ಪೇಜಾವರ ಶ್ರೀ ವಿರೋಧ, ಮತಾಂತರ ನಿಷೇಧ ಕಾನೂನು ಜಾರಿಗೆ ಆಗ್ರಹ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು