ಕೆಲಸ ಮತ್ತು ಜೀವನದ ಸಮತೋಲನ ಹೇಗೆ? ನಾರಾಯಣ ಮೂರ್ತಿ 70 ಗಂಟೆ ಕೆಲಸದ ಹೇಳಿಕೆಗೆ ಗೌತಮ್ ಅದಾನಿ ಹೇಳೋದೇನು?
ಕೆಲಸ ಮತ್ತು ಜೀವನದ ಸಮತೋಲನದ ಬಗ್ಗೆ ಗೌತಮ್ ಅದಾನಿ ಅವರು ವ್ಯಂಗ್ಯವಾಗಿ ಮಾತನಾಡಿದ್ದಾರೆ. ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ನಾರಾಯಣ ಮೂರ್ತಿ ಹೇಳಿಕೆಗೆ ಅದಾನಿ ಅವರು ಮಾತನಾಡಿದ್ದಾರೆ. ಇದೀಗ ಈ ವಿಚಾರವಾಗಿ ಭಾರೀ ಗ್ರಾಸವಾಗಿದೆ. ಅಷ್ಟು ನಾರಾಯಣ ಮೂರ್ತಿ ಅವರ ಹೇಳಿಕೆ ಬಗ್ಗೆ ಅದಾನಿ ಮಾತನಾಡಿದ್ದೇನು? ಇನ್ನು ಕೆಲಸ ಮತ್ತು ಜೀವನ ಸಮತೋಲನದ ಬಗ್ಗೆ ಗೌತಮ್ ಅದಾನಿ ಅವರು ಅಭಿಪ್ರಾಯವೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಈ ಹಿಂದೆ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಯವಕರು 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ಹೇಳಿಕೆ ಭಾರೀ ಚರ್ಚೆ ಕಾರಣವಾಗಿತ್ತು. ಅನೇಕ ವಿಚಾರಗಳನ್ನು ಇಟ್ಟುಕೊಂಡು ಅವರು ಈ ಹೇಳಿಕೆಯನ್ನು ನೀಡಿದರು. ಆದರೆ ಇದರು ಸಾಮಾಜಿಕ ಜಾಲತಾಣ ಹಾಗೂ ಅನೇಕ ಉದ್ಯಮಿಗಳಿಗೂ ಬಾಯಿಗೆ ಆಹಾರವಾಗಿತ್ತು. ಇದೀಗ ದೇಶದ ಎರಡನೇ ಶ್ರೀಮಂತ ಗೌತಮ್ ಅದಾನಿ ಅವರು ಕೆಲಸ ಮತ್ತು ಜೀವನದ ಸಮತೋಲನದ ಬಗ್ಗೆ ಹಾಸ್ಯಯುತವಾಗಿ ಹೇಳಿಕೆಯನ್ನು ನೀಡಿದ್ದಾರೆ. ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಭಾರತೀಯ ಕಾರ್ಪೊರೇಟ್ ಜಗತ್ತಿನಲ್ಲಿ ಕೆರಳಿಸುತ್ತಿರುವ ಕೆಲಸ-ಜೀವನದ ಸಮತೋಲನದ ಬಗ್ಗೆ ಹೆಚ್ಚು ಚರ್ಚಾಸ್ಪದ ವಿಷಯದ ಬಗ್ಗೆ ಹಾಸ್ಯಮಯವಾದ ಅಭಿಪ್ರಾಯವನ್ನು ನೀಡಿದ್ದಾರೆ .
ಕೆಲಸ-ಜೀವನದ ಸಮತೋಲನವನ್ನು ಸಾಧಿಸಲು ಒಬ್ಬರ ಕೆಲಸವನ್ನು ಆನಂದಿಸುವುದು ಅತ್ಯಗತ್ಯ ಎಂದು ಮಾಧ್ಯಮ ಸಂದರ್ಶವೊಂದರಲ್ಲಿ ಹೇಳಿದ್ದಾರೆ. ಕುಟುಂಬದೊಂದಿಗೆ ಎಂಟು ಗಂಟೆ ಕಳೆದರೆ ಹೆಂಡತಿ ಓಡಿಹೋಗುತ್ತಾಳೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಆ ಕಾರಣದಿಂದ ಕೆಲಸ-ಜೀವನದ ಸಮತೋಲನವು ವೈಯಕ್ತಿಕ ಆಯ್ಕೆಯ ವಿಷಯವಾಗಿದೆ ಎಂದು ಹೇಳಿದರು. ಕೆಲಸ-ಜೀವನದ ಸಮತೋಲನದ ನಿಮ್ಮ ಕಲ್ಪನೆಯನ್ನು ನನ್ನ ಮೇಲೆ ಹೇರಬಾರದು. ಯಾರಾದರೂ ಕುಟುಂಬದೊಂದಿಗೆ 4 ಗಂಟೆಗಳ ಕಾಲ ಕಳೆಯುತ್ತಾರೆ ಮತ್ತು ಅದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ, ಅಥವಾ ಇನ್ನು ಹೆಚ್ಚಿನವರು 8 ಗಂಟೆಗಳ ಕಾಲ ಕಳೆದು ಆನಂದಿಸಿದರೆ, ಅದು ಅವರ ಕೆಲಸ-ಜೀವನದ ಸಮತೋಲನ ಎಂದು ಹೇಳಿದ್ದಾರೆ.
ಅದಾನಿಯ ಈ ಹೇಳಿಕೆ ಈ ಹಿಂದೆ ಇನ್ಫೋಸಿಸ್ ಸಹ-ಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ 70 ಗಂಟೆಗಳ ಕೆಲಸಕ್ಕೆ ಸಂಬಂಧಕ್ಕೆ ಉತ್ತರವಾಗಿತ್ತು. ನಾರಾಯಣ ಮೂರ್ತಿ ಅವರು ಈ ಹಿಂದೆ ತಮ್ಮ ವೃತ್ತಿಜೀವನದಲ್ಲಿ ವಾರಕ್ಕೆ 90 ಗಂಟೆಗಳವರೆಗೆ ಕೆಲಸ ಮಾಡುವ ಬಗ್ಗೆ ಮಾತನಾಡಿದ್ದಾರೆ ಮತ್ತು ಸರ್ಕಾರಿ-ಅನುದಾನಿತ ಶಿಕ್ಷಣದಿಂದ ಪ್ರಯೋಜನ ಪಡೆದವರಿಗೆ ಕಠಿಣ ಪರಿಶ್ರಮವನ್ನು ಜವಾಬ್ದಾರಿಯಾಗಿದೆ ಎಂದು ಹೇಳಿದ್ದರು. ಯಾರೇ ಒಬ್ಬ ವ್ಯಕ್ತಿ ಒಂದು ವಿಚಾರವನ್ನು ಅಥವಾ ಕೆಲಸವನ್ನು ಆನಂದಿಸಿದಾಗ, ಆತ ಕೆಲಸ ಮತ್ತು ಜೀವನವನ್ನು ಸಮತೋಲನೆ ಮಾಡಲು ಸಾಧ್ಯ.
ಇದನ್ನೂ ಓದಿ: ಕುಗ್ಗದ ಅದಾನಿ; ವಾಯುಯಾನ ಕ್ಷೇತ್ರಕ್ಕೆ ಇನ್ನೊಂದು ಹೆಜ್ಜೆ; ಬೃಹತ್ ಸೂಪರ್ ವಿದ್ಯುತ್ ಸ್ಥಾವರ ಸ್ಥಾಪನೆಗೂ ಯೋಜನೆ
ನಮಗೆ ಅದು ಕುಟುಂಬವಾಗಲಿ ಅಥವಾ ಕೆಲಸವಾಗಲಿ, ಅದಕ್ಕಿಂತ ಬೇರೆ ಪ್ರಪಂಚವಿಲ್ಲ. ನಮ್ಮ ಮಕ್ಕಳೂ ಅದನ್ನೇ ಗಮನಿಸಿ, ಅದರಂತೆ ನಡೆದುಕೊಳ್ಳುತ್ತಾರೆ. ನಾವು ಬಂದ ಹಾದಿಯನ್ನು ನೋಡಿ ಅವರು ಕೂಡ ಅಷ್ಟೇ ಕಷ್ಟಪಟ್ಟು ದುಡಿಯುತ್ತಾರೆ ಎಂದು ಅದಾನಿ ಹೇಳಿದರು. ಒಬ್ಬ ಜೀವನದಲ್ಲಿ ವೈಯಕ್ತಿಕ ಪಾತ್ರ ಮತ್ತು ನಮ್ರತೆ ಅತ್ಯಂತ ಮುಖ್ಯವಾದ ವಿಷಯಗಳು, ಹಾಗಾಗಿ ನಿಮ್ಮ ಸಂಪತ್ತು ಸೇರಿದಂತೆ ಎಲ್ಲವೂ ಕೃತಕವಾಗಿದೆ. ನಿಮ್ಮ ಜೀವನದಲ್ಲಿ ನೀವೇ ಗೆಲ್ಲಬೇಕು. ಹಾಗಾಗಿ ಶ್ರಮ ಮತ್ತು ಜೀವನ ಎರಡನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು.
ರಾಷ್ಟ್ರೀಯ ಸುಸ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:31 pm, Wed, 1 January 25