ಲೋಕಸಭಾ ಸ್ಪೀಕರ್​ ಆಯ್ಕೆಗೆ ಈವರೆಗೆ ಎಷ್ಟು ಬಾರಿ ನಡೆದಿದೆ ಚುನಾವಣೆ, ಪ್ರಕ್ರಿಯೆ ಏನು?

Lok Sabha Speaker Election: ದೇಶದ ಇತಿಹಾಸದಲ್ಲಿ ಲೋಕಸಭೆಯ ಸ್ಪೀಕರ್ ಹುದ್ದೆಗೆ ಮೊದಲ ಚುನಾವಣೆ 1952ರಲ್ಲಿ ನಡೆಯಿತು. ಆಗ ಕಾಂಗ್ರೆಸ್​ ಪರವಾಗಿ ಆಗಿನ ಪ್ರಧಾನಿ ಜವಾಹರ್​ಲಾಲ್ ನೆಹರು ಜಿವಿ ಪಾಲವಂಕರ್​ ಅವರನ್ನು ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯಾಗಿ ಹೆಸರಿಸಿದ್ದರು. ಇದೇ ವೇಳೆ ಎಕೆ ಗೋಪಾಲನ್ ಅವರು ಸ್ಪೀಕರ್ ಸ್ಥಾನಕ್ಕೆ ಶಂಕರ್ ಶಾಂತಾರಾಮ್ ಮೋರೆ ಅವರ ಹೆಸರನ್ನು ಪ್ರಸ್ತಾಪಿಸಿದ್ದರು.

ಲೋಕಸಭಾ ಸ್ಪೀಕರ್​ ಆಯ್ಕೆಗೆ ಈವರೆಗೆ ಎಷ್ಟು ಬಾರಿ ನಡೆದಿದೆ ಚುನಾವಣೆ, ಪ್ರಕ್ರಿಯೆ ಏನು?
ಓಂ ಬಿರ್ಲಾ
Follow us
ನಯನಾ ರಾಜೀವ್
|

Updated on: Jun 26, 2024 | 2:16 PM

18ನೇ ಲೋಕಸಭೆಯ ಸ್ಪೀಕರ್​ ಆಗಿ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ. ಧ್ವನಿ ಮತದ ಮೂಲಕ ಅವರನ್ನು ಆಯ್ಕೆ ಮಾಡಲಾಗಿದೆ. ಎನ್​ಡಿಎಯಿಂದ ಓಂ ಬಿರ್ಲಾ, ಇಂಡಿಯಾ ಒಕ್ಕೂಟದಿಂದ ಕೆ ಸುರೇಶ್​ ಮಂಗಳವಾರ ನಾಮಪತ್ರ ಸಲ್ಲಿಸಿದ್ದರು.

ಸ್ಪೀಕರ್​ ಆಯ್ಕೆ ಹೇಗಾಗುತ್ತೆ? ಸಂವಿಧಾನದ 93ನೇ ವಿಧಿ ಸ್ಪೀಕರ್​ ಆಯ್ಕೆ ಬಗ್ಗೆ ಹೇಳುತ್ತೆ, ಹೊಸ ಲೋಕಸಭೆ ಮತಚನೆಯಾದ ನಂತರವೇ ಈ ಹುದ್ದೆ ತೆರವಾಗುತ್ತದೆ. ಅಧಿವೇಶನ ಪ್ರಾರಂಭವಾದ ನಂತರ ರಾಷ್ಟ್ರಪತಿ ಹಂಗಾಮಿ ಸ್ಪೀಕರ್ ನೇಮಕ ಮಾಡುತ್ತಾರೆ, ಇದರಿಂದ ಲೋಕಸಭೆಯ ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಬಹುದು.

ವಿಶೇಷವೆಂದರೆ ಲೋಕಸಭೆಯ ಸ್ಪೀಕರ್​ ಅನ್ನು ಬಹುಮತದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಒಟ್ಟು ಸದಸ್ಯರಲ್ಲಿ ಹೆಚ್ಚು ಮತ ಪಡೆದವರು ಸ್ಪೀಕರ್ ಆಗುವ ಅವಕಾಶ ಪಡೆಯುತ್ತಾರೆ.

ದೇಶದಲ್ಲಿ ಮೂರು ಬಾರಿ ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು ದೇಶದಲ್ಲಿ ಸ್ಪೀಕರ್ ಚುನಾವಣೆ ನಡೆದಿರುವುದು ಇದೇ ಮೊದಲಲ್ಲ, ಇದಕ್ಕೂ ಮುನ್ನ ಮೂರು ಬಾರಿ ಚುನಾವಣೆ ನಡೆದಿತ್ತು. ಆದರೆ ಎರಡು ಬಾರಿ ವಿರೋಧ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೂ ಧ್ವನಿ ಮತದ ಮೂಲಕ ಸ್ಪೀಕರ್ ಆಯ್ಕೆಯಾಗಿದ್ದರು.

1952ರಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದಿತ್ತು, ಆಗ ಕಾಂಗ್ರೆಸ್​ ಪರವಾಗಿ ಜವಾಹರ್​ಲಾಲ್ ನೆಹರೂ ಅವರು ಜಿವಿ ಮಾವಲಂಕರ್ ಅವರನ್ನು ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯಾಗಿ ಹೆಸರಿಸಿದ್ದರು. ಇದೇ ವೇಳೆ ಎಕೆ ಗೋಪಾಲನ್ ಅವರು ಸ್ಪೀಕರ್ ಸ್ಥಾನಕ್ಕೆ ಶಂಕರ್ ಶಾಂತಾರಾಮ್ ಮೋರೆ ಅವರ ಹೆಸರನ್ನು ಪ್ರಸ್ತಾಪಿಸಿದ್ದರು.

ನಂತರ ಮತ ವಿಭಜನೆಯಾಯಿತು. ಆ ಅವಧಿಯಲ್ಲಿ ಮಾವಲಂಕರ್ ಪರವಾಗಿ 394 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 55 ಮತಗಳು ಚಲಾಣೆಗೊಂಡಿತ್ತು.

ಶಂಕರ್ ಶಾಂತಾರಾಮ್ ಮೋರೆ ಕೂಡ ಮಾವಲಂಕರ್ ಪರವಾಗಿ ಮತ ಚಲಾವಣೆ ಮಾಡಿದ್ದು ಕುತೂಹಲಕರ ಸಂಗತಿ. ಅವರು ಅದಕ್ಕೂ ಮೊದಲು 1949ರ ನವೆಂಬರ್ 26 ರಂದು ತಾತ್ಕಾಲಿಕ ಸಂಸತ್ತಿನ ಸ್ಪೀಕರ್ ಆಗಿ ಚುನಾಯಿತರಾಗಿದ್ದರು ಮತ್ತು 1952ರವರೆಗೆ ಈ ಹುದ್ದೆಯಲ್ಲಿದ್ದರು.

1967ರಲ್ಲೂ ನಡೆದಿತ್ತು ಚುನಾವಣೆ

1967ರಲ್ಲಿ ಕಾಂಗ್ರೆಸ್​ನ ನೀಲಂ ಸಂಜೀವ್​ರೆಡ್ಡಿ ಅವರು ಟಿ ವಿಶ್ವನಾಥನ್ ಅವರನ್ನು ಎದುರಿಸಿದರು. ರೆಡ್ಡಿ 278 ಮತಗಳನ್ನು ಪಡೆದರೆ, ವಿಶ್ವನಾಥನ್ 207 ಮತಗಳನ್ನು ಪಡೆದಿದ್ದರು.

1976ರಲ್ಲೂ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆದಿತ್ತು ಇದು ಎರಡನೇ ಸಂದರ್ಭ, 1976ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸ್ಪೀಕರ್ ಚುನಾವಣೆ ನಡೆದಿತ್ತು. ಆ ವೇಳೆ ಲೋಕಸಭೆ ಸ್ಪೀಕರ್ ಹುದ್ದೆಗೂ ಚುನಾವಣೆ ನಡೆದಿತ್ತು, ಬಲಿರಾಮ್ ಭಗತ್ ಹಾಗೂ ಜಗನ್ನಾಥ ರಾವ್ ನಡುವೆ ಚುನಾವಣೆ ನಡೆದು ಬಲಿರಾಮ್ ಗೆದ್ದಿದ್ದರು. 1976 ಜನವರಿ 5ರಂದು ಸ್ಪೀಕರ್ ಆಗಿ ಆಯ್ಕೆಯಾದರು.

18ನೇ ಲೋಕಸಭೆ ಸ್ಪೀಕರ್ ಆಯ್ಕೆ ವಿಚಾರದಲ್ಲಿ ವಿವಾದ ಎದ್ದಿತ್ತು ಲೋಕಸಭಾ ಸ್ಪೀಕರ್ ಹುದ್ದೆಗೆ ಸಂಬಂಧಿಸಿದಂತೆ ಎನ್​ಡಿಎ ಹಾಗೂ ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡಿರಲಿಲ್ಲ. ಎನ್​ಡಿಎ ಲೋಕಸಭಾ ಸ್ಪೀಕರ್ ಬೆಂಬಲಕ್ಕೆ ಬದಲಾಗಿ ಪ್ರತಿಪಕ್ಷಗಳ ಮೈತ್ರಿಕೂಟ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಎನ್​ಡಿಎಯಿಂದ ಓಂ ಬಿರ್ಲಾ, ಇಂಡಿಯಾ ಒಕ್ಕೂಟದಿಂದ ಕೆ ಸುರೇಶ್​ ನಾಮಪತ್ರ ಸಲ್ಲಿಸಿದ್ದರು. ಈಗ ಧ್ವನಿಮತದ ಮೂಲಕ ಓಂ ಬಿರ್ಲಾ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು