SpaceX: ಉಪಗ್ರಹದಿಂದ ನೇರವಾಗಿ ಮನೆಮನೆಗೂ ಅಂತರ್ಜಾಲ; ಭಾರತದಲ್ಲೂ ದೊರೆಯಲಿದೆಯಾ ಎಲಾನ್ ಮಸ್ಕ್ ಹೊಸ ಸೇವೆ?

SpaceX: ಉಪಗ್ರಹದಿಂದ ನೇರವಾಗಿ ಮನೆಮನೆಗೂ ಅಂತರ್ಜಾಲ; ಭಾರತದಲ್ಲೂ ದೊರೆಯಲಿದೆಯಾ ಎಲಾನ್ ಮಸ್ಕ್ ಹೊಸ ಸೇವೆ?
ಎಲಾನ್ ಮಸ್ಕ್ (ಸಂಗ್ರಹ ಚಿತ್ರ)

ಜಾಲತಾಣವೊಂದರ ವರದಿ ಪ್ರಕಾರ ಈಗಾಗಲೇ ಅಮೆರಿಕ, ಆಸ್ಟ್ರೇಲಿಯಾ ಮತ್ತು ಮೆಕ್ಸಿಕೋಗಳಲ್ಲಿ ಸ್ಪೇಸ್​ಎಕ್ಸ್​ನ ಸ್ಟಾರ್​ಲಿಂಕ್​ನ ಉಪಗ್ರಹ ಆಧರಿತ ಅಂತರ್ಜಾಲ ಸೇವೆ ಒದಗಿಸುವ ಕಿಟ್ ಮುಂಚಿತವಾಗಿ ಪಾವತಿಸಿದ್ದ ಗ್ರಾಹಕರಿಗೆ ದೊರೆತಿದೆ. ಮುಂದೆ ಅಂದರೆ 2022ರಲ್ಲಿ ಭಾರತದಲ್ಲೂ ಈ ಸೇವೆ ದೊರೆಯುವ ಎಲ್ಲ ಸಾಧ್ಯತೆಗಳಿದ್ದು ಭಾರತದ ಟೆಕ್ ಪ್ರೇಮಿಗಳು ಚಾತಕ ಪಕ್ಷಿಗಳಂತೆ ಕಾದುಕುಳಿತಿದ್ದಾರೆ.

guruganesh bhat

| Edited By: sadhu srinath

Feb 20, 2021 | 11:40 AM

ಎಲಾನ್ ಮಸ್ಕ್! (Elon Musk)  ಈ ಹೆಸರು ಈ ವಿಶ್ವದಾದ್ಯಂತ ಚಿರಪರಿಚಿತ.  ಟೆಸ್ಲಾ (Tesla) ಮತ್ತು ಸ್ಪೇಸ್​ಎಕ್ಸ್​ಗಳ   (SpaceX) ಜನಕ. ಟೆಸ್ಲಾ ಬೆಂಗಳೂರಲ್ಲಿ ತನ್ನ ಘಟಕ ಸ್ಥಾಪಿಸಲಿದೆ ಎಂಬ ಸುದ್ದಿ ಹೊರಬಿದ್ದಾಗಿಂದ ಬೀದಿ ಮೇಲೆ ಕುಳಿತು ಕಾಲ ಕಳೆಯುವ ಪಡ್ಡೆಗಳಿಗೂ ಈತನ ಹೆಸರು ನಾಲಿಗೆ ತುದಿಮೇಲೆಯೇ ಇದೆ. ಎಲಾನ್ ಮಸ್ಕ್​ನ ಕಂಪನಿ ಸ್ಪೇಸ್​ಎಕ್ಸ್ ನೀಡುವ ಸೇವೆಗಳಲ್ಲೊಂದಾದ ಸ್ಟಾರ್​ಲಿಂಕ್ ಸ್ಯಾಟಲೈಟ್ ಅಂತರ್ಜಾಲ ಸೇವೆ (Starlink satellite Based Internet Service) ಇದೀಗ ಭಾರತದಲ್ಲೂ ತನ್ನ ಕಾರ್ಯಕ್ಷೇತ್ರ ವಿಸ್ತರಿಸಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಸ್ಟಾರ್​ಲಿಂಕ್ ಯಾವ ಸೇವೆ ನೀಡಲಿದೆ? ಏನಿದು ಉಪಗ್ರಹ ಆಧರಿತ ಅಂತರ್ಜಾಲ ಸೇವೆ ಎಂದು ಚಕಿತರಾದಿರಾ? ಈ ಬರಹ ನಿಮಗಾಗೇ ಇದೆ.

ಸ್ಟಾರ್​ಲಿಂಕ್ ಸ್ಪೇಸ್​ಎಕ್ಸ್​ ಸಂಸ್ಥೆ ಒದಗಿಸುವ ಉಪಗ್ರಹ ಆಧರಿತ ಅಂತರ್ಜಾಲ ಸೇವೆ. ಸದ್ಯ ಬೇಟಾ ಆವೃತ್ತಿಯ ಹಂತದಲ್ಲಿರುವ ಈ ಸೇವೆ ಮುಂದಿನ ದಿನಗಳಲಿ ವಿಶ್ವದಾದ್ಯಂತ ಒದಗಿಸುವ ಕನಸು ಎಲಾನ್ ಮಸ್ಕ್​ರ ಸ್ಪೇಸ್​ಎಕ್ಸ್​ದು. ಬಾಹ್ಯಾಕಾಶ ಆಧಾರಿತ ಸೇವೆಗಳನ್ನು ಒಗಿಸುವುದೇ ಸ್ಪೇಸ್​ಎಕ್ಸ್​ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ ಎಲಾನ್ ಮಸ್ಕ್. ಇಂದು ಈ ಸಂಸ್ಥೆ ಜಾಗತಿಕ ಟೆಕ್ ದಿಗ್ಗಜರ ಸಾಲಲ್ಲಿ ಮುಂದಿನ ಸಾಲಲ್ಲಿ ನಿಲ್ಲುತ್ತದೆ. ಈಗ ಬಾಹ್ಯಾಕಾಶ ಆಧಾರಿತ ಅಂತರ್ಜಾಲ ಸೇವೆಯನ್ನೂ ಒದಗಿಸಲು ಮುಂದೆ ಬಂದಿರುವ ಸ್ಪೇಸ್​ಎಕ್ಸ್, ಈ ಸೇವೆಯನ್ನು ಆರಂಭಿಸುವ ಮುಂಚೆಯೇ ಬುಕ್ ಮಾಡುವ ಸೌಲಭ್ಯವನ್ನು ಕಲ್ಪಿಸಿದೆ. ಅದರಲ್ಲೂ ಭಾರತದ ಪ್ರಮುಖ ನಗರಗಳಲ್ಲೂ ಈ ಸೇವೆ ಲಭ್ಯವಾಗಲಿದೆ ಎಂದು ಕೆಲವು ಜಾಲತಾಣಗಳು ವರದಿ ಮಾಡಿವೆ.

ನೀವೂ ಈ ಸೇವೆ ಪಡೆಯಬಹುದೇ? ಖಂಡಿತ ಎನ್ನುತ್ತದೆ ಕೆಲ ಆನ್​ಲೈನ್ ತಾಣಗಳ ವರದಿ. ಸ್ಪೇಸ್​ಎಕ್ಸ್​ನ ಜಾಲತಾಣದಲ್ಲಿ ನಿಮ್ಮ ಇ ಮೇಲ್ ಮತ್ತು ನೀವು ವಾಸಿಸುವ ವಿಳಾಸವನ್ನು ನಮೂದಿಸಿ ನೋಂದಾಯಿಸಿಕೊಳ್ಳುವ ಮೂಕಲಕ ನೀವು ವಾಸಿಸುವ ಪ್ರದೇಶದಲ್ಲಿ ಈ ಸೇವೆ ದೊರೆಯಬಹುದೇ ಎಂಬುದನ್ನು ಪರೀಕ್ಷಿಸಬಹುದು. ಸದ್ಯ ದೇಶದ ಪ್ರಮುಖ ಮಹಾನಗರಗಳಲ್ಲಷ್ಟೇ ಈ ಸೇವೆ ಲಭ್ಯವಾಗಬಹುದು ಎಂಬ ಊಹೆ ಮಾಡಲಾಗಿದ್ದು, ದೆಹಲಿ, ಗುರಗಾಂವ್, ನೋಯ್ಡಾಗಳಲ್ಲಿ 2022ರಲ್ಲಿ ಮೊದಲ ಹಂತದಲ್ಲಿ ಲಭ್ಯವಾಗಲಿದೆ ಎಂದು ಟೆಕ್ ಸಂಬಂಧಿ ಜಾಲತಾಣವೊಂದು ವರದಿ ಮಾಡಿದೆ. ಜಾಗತಿಕವಾಗಿ ಟೆಕ್ ಉದ್ಯಮದಲ್ಲಿ ಹೆಸರು ಗಳಿಸಿರುವ ಬೆಂಗಳೂರನ್ನು ಮರೆಯದೇ ಆದಷ್ಟು ಬೇಗ ಈಪಟ್ಟಿಗೆ ಸೇರಿಸಬೇಕು ಎಂದು ಟೆಕ್ ಪ್ರೇಮಿಗಳು ಆಗ್ರಹಿಸಬಹುದು.

ವಿಳಾಸ ನೋಂದಾಯಿಸುವಾಗ ಎಚ್ಚರ, ನೀವು ಕೇವಲ ಬೆಂಗಳೂರು, ಮುಂಬೈ ಎಂದು ನಗರದ ಹೆಸರನ್ನು ನಮೂದಿಸಿದರೆ ಮಾಹಿತಿ ಲಭ್ಯವಾಗದು. ಬದಲಿಗೆ ನೀವು ವಾಸಿಸುವ ನಿಖರ ವಿಳಾಸವನ್ನು ನಮೂದಿಸಬೇಕು. ಆಗಲೇ ನಿಮ್ಮ ವಿಳಾಸಕ್ಕೆ ಉಪಗ್ರಹ ಆಧರಿತ ಅಂತರ್ಜಾಲ ಸೇವೆ ದೊರೆಯಬಹುದೇ ಇಲ್ಲವೇ ಎಂಬುದು ತಿಳಿಯಲಿದೆ.

ಪಾವತಿಸಬೇಕಾದ ಮೊತ್ತವೆಷ್ಟು? ನೀವು ಮುಂಚಿತವಾಗಿ ಭಾರತೀಯ ರೂಪಾಯಿಗಳಲ್ಲಿ ₹ 7200ನ್ನು ಪಾವತಿಸಬೇಕು. ನಿಮ್ಮ ವಿಳಾಸಕ್ಕೆ ಉಪಗ್ರಹ ಆಧರಿತ ಅಂತರ್ಜಾಲ ಸೇವೆ ದೊರೆಯುವುದೇ ಹೌದಾದರೇ ಈ ಮೊತ್ತವನ್ನು ನೀವು ಮುಂಚಿತವಾಗಿ ಪಾವತಿಸಿ ನಿಮ್ಮ ಬುಕಿಂಗ್​ನ್ನು ಖಚಿತಪಡಿಸಬೇಕು. ನಿಮಗೆ ಈ ಸೌಲಭ್ಯ ದೊರಕದಿರುವ ಸಾಧ್ಯತೆಯೂ ಇರುವ ಕಾರಣ ಕಂಪನಿ ನಿಮಗೆ ‘ರಿಫಂಡಬೇಲ್’ಅವಕಾಶ ಒದಗಿಸಿದೆ. ಅಂದರೆ ದೇಶದ ಕಾನೂನು, ನೀತಿ ನಿಯಮಗಳಿಗೆ ಅನುಸಾರವಾಗಿ ಈ ಸೇವೆಯನ್ನು ಒದಗಿಸಲು ಸಾಧ್ಯವಾಗದಿದ್ದರೆ ನೀವು ಪಾವತಿಸಿದ ಮೊತ್ತ ನಿಮಗೆ ಮರು ಸಂದಾಯವಾಗಲಿದೆ.

ಜಾಲತಾಣವೊಂದರ ವರದಿ ಪ್ರಕಾರ ಈಗಾಗಲೇ ಅಮೆರಿಕ, ಆಸ್ಟ್ರೇಲಿಯಾ ಮತ್ತು ಮೆಕ್ಸಿಕೋಗಳಲ್ಲಿ ಸ್ಪೇಸ್​ಎಕ್ಸ್​ನ ಸ್ಟಾರ್​ಲಿಂಕ್​ನ ಉಪಗ್ರಹ ಆಧರಿತ ಅಂತರ್ಜಾಲ ಸೇವೆ ಒದಗಿಸುವ ಕಿಟ್ ಮುಂಚಿತವಾಗಿ ಪಾವತಿಸಿದ್ದ ಗ್ರಾಹಕರಿಗೆ ದೊರೆತಿದೆ. ಮುಂದೆ ಅಂದರೆ 2022ರಲ್ಲಿ ಭಾರತದಲ್ಲೂ ಈ ಸೇವೆ ದೊರೆಯುವ ಎಲ್ಲ ಸಾಧ್ಯತೆಗಳಿದ್ದು ಭಾರತದ ಟೆಕ್ ಪ್ರೇಮಿಗಳು ಚಾತಕ ಪಕ್ಷಿಗಳಂತೆ ಕಾದುಕುಳಿತಿದ್ದಾರೆ.

ಪ್ರತಿಸ್ಪರ್ಧಿಗಳಿಗೆ ಏನಾಗಬಹುದು? ಉಪಗ್ರಹ ಆಧರಿತ ಅಂತರ್ಜಾಲ ಸೇವೆ ಭಾರತದಲ್ಲಿ ಲಭ್ಯವಾದದ್ದೇ ಹೌದಾದಲ್ಲಿ ಅಂತರ್ಜಾಲ ಸೇವೆ ಒದಗಿಸುವ ಇತರ ಕಂಪನಿಗಳಿಗೆ ಒಂದು ಮಟ್ಟಿನ ಪೆಟ್ಟು ಬೀಳುವ ಸಾಧ್ಯತೆಗಳಿವೆ. ಆದರೆ ಎಷ್ಟು ಮಟ್ಟಿಗೆ ಭಾರತಯರು ಈ ಸೇವೆಯನ್ನು ಬಳಸಲು ತಯಾರಾಗುತ್ತಾರೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ. ಅಲ್ಲದೇ, ಅಂತರ್ಜಾಲ ಸೇವೆ ಒದಗಿಸುವ ಇತರ ಕಂಪನಿಗಳು ಈವರೆಗೆ ಈಕುರಿತು ತುಟಿ ಪಿಟಕ್ ಎಂದಿಲ್ಲ.

ಇದನ್ನೂ ಓದಿ: ಭಾರತಕ್ಕೆ ಕಾಲಿಡೋಕೆ ಸಿದ್ಧವಾಯ್ತು ಟೆಸ್ಲಾ ಕಾರು: ಇದರ ಬೆಲೆ ಎಷ್ಟು ಗೊತ್ತಾ?

Tv9 Digital Live | ಬಿಟ್​ ಕಾಯಿನ್​ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್​ ಕರೆನ್ಸಿ?

Follow us on

Related Stories

Most Read Stories

Click on your DTH Provider to Add TV9 Kannada