ರೆಮ್​ಡೆಸಿವಿರ್ ಔಷಧ, ಇಂಜೆಕ್ಷನ್ ರಫ್ತು ನಿಷೇಧ: ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಳ

India bans export of Remdesivir: ರೆಮ್​ಡೆಸಿವಿರ್​ ಇಂಜೆಕ್ಷನ್​ಗಳ ರಫ್ತು ಮತ್ತು ರೆಮ್​ಡೆಸಿವಿರ್​ ಇಂಜೆಕ್ಷನ್​​ಗೆ ಬಳಕೆಯಾಗುವ ಎಪಿಐಗಳ ರಫ್ತನ್ನು ಕೋವಿಡ್-19 ಪರಿಸ್ಥಿತಿ ಸುಧಾರಿಸುವವರೆಗೆ ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ರೆಮ್​ಡೆಸಿವಿರ್ ಔಷಧ, ಇಂಜೆಕ್ಷನ್ ರಫ್ತು ನಿಷೇಧ: ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಳ
ರೆಮ್‌ಡಿಸಿವಿರ್ ಇಂಜೆಕ್ಷನ್
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: guruganesh bhat

Updated on:Apr 11, 2021 | 9:37 PM

ದೆಹಲಿ: ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಭಾನುವಾರ ಕೊರೊನಾ ಸೋಂಕು ಚಿಕಿತ್ಸೆಗೆ ಬಳಸುವ ರೆಮ್​ಡೆಸಿವಿರ್ (Remdesivir) ಔಷಧ ಮತ್ತು ಇಂಜೆಕ್ಷನ್​ಗಳ ರಫ್ತ ನಿಷೇಧಿಸಿ ಆದೇಶಿಸಿದೆ. ದೇಶದಲ್ಲಿ ಸೋಂಕು ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ.

ರೆಮ್​ಡೆಸಿವಿರ್​ ಇಂಜೆಕ್ಷನ್​ಗಳ ರಫ್ತು ಮತ್ತು ರೆಮ್​ಡೆಸಿವಿರ್​ ಇಂಜೆಕ್ಷನ್​​ಗೆ ಬಳಕೆಯಾಗುವ ಆ್ಯಕ್ಟೀವ್ ಫಾರ್ಮಾಸೆಟಿಕಲ್ ಇನ್​ಗ್ರೀಡಿಯಂಟ್ಸ್​ (ಎಪಿಐ) ರಫ್ತನ್ನು ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಿಸುವವರೆಗೆ ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಇದೀಗ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಏಪ್ರಿಲ್ 11ರವರೆಗೆ ದೇಶದಲ್ಲಿ ಒಟ್ಟು 11.08 ಲಕ್ಷ ಸಕ್ರಿಯ ಕೋವಿಡ್ ಪ್ರಕರಣಗಳಿದ್ದವು. ಸೋಂಕು ಪ್ರಕರಣಗಳ ಸಂಖ್ಯೆಯೂ ಒಂದೇ ಸಮ ಹೆಚ್ಚಾಗುತ್ತಿದೆ. ಇದರಿಂದಾಗಿ ದೇಶೀಯ ಬಳಕೆಗೆ ರೆಮ್​ಡೆಸಿವಿರ್ ಚುಚ್ಚುಮದ್ದಿಗೆ ಹೆಚ್ಚು ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಈ ಔಷಧಿಯ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ರೆಮ್​ಡೆಸಿವಿರ್ ಚುಚ್ಚುಮದ್ದು ರಫ್ತು ನಿಷೇಧಿಸಲಾಗಿದೆ’ ಎಂದು ಸರ್ಕಾರವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ರೆಮ್​ಡೆಸಿವಿರ್​ ಉತ್ಪಾದನೆಯನ್ನು ತ್ವರಿತಗತಿಯಲ್ಲಿ ಹೆಚ್ಚಿಸುವ ಸಂಬಂಧ ಔಷಧ ಇಲಾಖೆ ದೇಶೀ ಉತ್ಪಾದಕರೊಂದಿಗೆ ನಿಯಮಿತ ಸಂಪರ್ಕದಲ್ಲಿದೆ. ಎಲ್ಲ ರೆಮ್​ಡೆಸಿವಿರ್ ಉತ್ಪಾದಕ ಕಂಪನಿಗಳು ತಮ್ಮಲ್ಲಿ ಲಭ್ಯವಿರುವ ಸರಕು, ದಾಸ್ತಾನುಗಾರರು ಮತ್ತು ವಿತರಕರ ವಿವರಗಳನ್ನು ವೆಬ್​ಸೈಟ್​ಗಳಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು. ಈ ಮೂಲಕ ಔಷಧಿಯು ಸುಲಭವಾಗಿ ಅಗತ್ಯವಿರುವವರಿಗೆ ಸಿಗಲು ನೆರವಾಗಬೇಕು ಎಂದು ಹೊಸ ಆದೇಶವು ತಿಳಿಸಿದೆ. ಔಷಧ ಪರೀಕ್ಷಕರು ಮತ್ತು ಇತರ ಅಧಿಕಾರಿಗಳು ರೆಮ್​ಡೆಸಿವಿರ್​ ಲಭ್ಯತೆಯನ್ನು ನಿಯಮತಿವಾಗಿ ಪರಿಶೀಲಿಸಬೇಕು. ಅಕ್ರಮ ದಾಸ್ತಾನು ಮತ್ತು ದುಬಾರಿ ಬೆಲೆಗೆ ಮಾರಾಟದ ಸಂಚಿಗೆ ಕಡಿವಾಣ ಹಾಕಬೇಕು ಎಂದು ಆದೇಶವು ಹೇಳಿದೆ.

ಕೋವಿಡ್-19 ಕಾಯಿಲೆಗೆ ಚಿಕಿತ್ಸೆ ನೀಡಲು ರೆಮ್​ಡೆಸಿವಿರ್​ ಅತಿಪ್ರಮುಖ ಆ್ಯಂಟಿ ವೈರಲ್ ಔಷಧವಾಗಿದೆ. ತೀವ್ರ ಸಮಸ್ಯೆ ಎದುರಾದ ವಯಸ್ಕರಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ 7 ಕಂಪೆನಿಗಳು ರೆಮ್​ಡೆಸಿವಿರ್​ ಚುಚ್ಚುಮದ್ದನ್ನು ಅಮೆರಿಕದ ಗಿಲಿಯಾಡ್​ ಸೈನ್ಸಸ್​ ಕಂಪನಿಯಿಂದ ಲೈಸೆನ್ಸ್​ ಪಡೆದು ಉತ್ಪಾದಿಸುತ್ತಿವೆ. ನಮ್ಮ ದೇಶಕ್ಕೆ ಒಂದು ತಿಂಗಳಿಗೆ 38.80 ಲಕ್ಷ ಯೂನಿಟ್ ರೆಮ್​ಡೆಸಿವರ್ ಉತ್ಪಾದನಾ ಸಾಮರ್ಥ್ಯವಿದೆ.

ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಆದೇಶವನ್ನು ರವಾನಿಸಲಾಗಿದೆ. ಎಲ್ಲ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಈ ಸಂಬಂಧ ಮಾಹಿತಿ ನೀಡಬೇಕು. ಔಷಧಿಯ ಲಭ್ಯತೆಯನ್ನು ಗಮನಿಸಬೇಕು ಎಂದು ಸೂಚಿಸಲಾಗಿದೆ. ಕೆಲ ರಾಜ್ಯಗಳು ಆ್ಯಂಟಿ ವೈರಲ್ ಔಷಧಿಗಳು ಕೊರತೆಯಿರುವುದರ ಬಗ್ಗೆ ಮಾಹಿತಿ ನೀಡಿದ ನಂತರ ಕೇಂದ್ರ ಸರ್ಕಾರ ರಫ್ತು ನಿಷೇಧದ ನಿರ್ಧಾರ ಪ್ರಕಟಿಸಿದೆ. ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕು ಪ್ರಮಾಣ ತೀವ್ರಗತಿಯಲ್ಲಿ ಏರಿಕೆ ಕಂಡ ನಂತರ ಹಲವು ರಾಜ್ಯಗಳಲ್ಲಿ ಜನರು ಮೆಡಿಕಲ್ ಸ್ಟೋರ್​ಗಳ ಎದುರು ಔಷಧಿಗಾಗಿ ಕ್ಯೂನಲ್ಲಿ ನಿಲ್ಲುತ್ತಿದ್ದರು.

ಈ ಕುರಿತು ಮಾತನಾಡಿದ್ದ ಮಹಾರಾಷ್ಟ್ರದ ಕಂದಾಯ ಸಚಿವ ಬಾಳಾಸಾಹೆಬ್ ಥೋರಟ್, ರೆಮ್​ಡೆಸಿವಿರ್ ಇಂಜೆಕ್ಷನ್ ಮತ್ತು ಲಸಿಕೆ ಪೂರೈಕೆ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಇಲ್ಲ ಎಂದು ಹೇಳಿದ್ದರು. ರೆಮ್​ಡೆಸಿವಿರ್​ನ ಪ್ರತಿ ಬಾಟಲಿಗೆ ₹ 1,100ರಿಂದ ₹1,400 ನಿಗದಿಪಡಿಸಿತ್ತು. ಈ ಔಷಧದ ದಾಸ್ತಾನು ಮತ್ತು ಬ್ಲಾಕ್​ಮಾರ್ಕೆಟ್​ ವಿರುದ್ಧ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಿತ್ತು. ಈ ನಡುವೆ ಭಾನುವಾರ ಮಧ್ಯಪ್ರದೇಶದ ಅಧಿಕಾರಿಗಳು ಪ್ರತಿಕ್ರಿಯಿಸಿ, ದೊಡ್ಡಮಟ್ಟದಲ್ಲಿ ಔಷಧ ಬಂದಿದೆ. ಶೀಘ್ರ ಅದನ್ನು ಅವಶ್ಯಕತೆಯಿರುವ ಕಡೆಗೆ ರವಾನಿಸಲಾಗುವುದು ಎಂದು ಹೇಳಿದ್ದಾರೆ.

ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ 24 ಗಂಟೆಗಳಲ್ಲಿ 1,52,879 ಮಂದಿಯಲ್ಲಿ ಕೋವಿಡ್-19 ದೃಢಪಟ್ಟಿದೆ ಎಂದು ಭಾನುವಾರ ಮುಂಜಾನೆ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿತ್ತು. ಕಳೆದ ಐದು ದಿನಗಳಿಂದ ಪ್ರತಿದಿನ ದೇಶದ ಒಟ್ಟು ಸೋಂಕಿತರ ಸಂಖ್ಯೆ 1 ಲಕ್ಷ ದಾಟುತ್ತಿದೆ. ಕೊರೊನಾ 2ನೇ ಅಲೆ ಕಾಣಿಸಿಕೊಂಡ ನಂತರ ದೊಡ್ಡಮಟ್ಟದಲ್ಲಿ ಸೋಂಕು ಪತ್ತೆಯಾಗುತ್ತಿದೆ.

(India bans export of Remdesivir drug injection APIs till Covid-19 situation improves)

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 10,250 ಮಂದಿಗೆ ಕೊರೊನಾ ಸೋಂಕು, 40 ಸಾವು

ಇದನ್ನೂ ಓದಿ: ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್​ಗೌಡ ಪಾಟೀಲ್​ಗೆ ಕೊರೊನಾ ಸೋಂಕು

Published On - 9:35 pm, Sun, 11 April 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್