ದೇಶದಲ್ಲಿ 7,200ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣ; ದೆಹಲಿ ಹೈಕೋರ್ಟ್ಗೆ ಕೇಂದ್ರ ಸರ್ಕಾರದಿಂದ ಅಫಿಡವಿಟ್
ದೇಶದಲ್ಲಿ ಬ್ಲ್ಯಾಕ್ ಫಂಗಸ್ನಿಂದ ಸಾವಿಗೀಡಾಗಿರುವ 219ಕ್ಕೂ ಅಧಿಕ ಮಂದಿ ಪೈಕಿ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 90 ಜನ ಮೃತಪಟ್ಟಿದ್ದಾರೆ. ಗುಜರಾತ್ನಲ್ಲಿ 61, ಮಧ್ಯಪ್ರದೇಶದಲ್ಲಿ 31, ತೆಲಂಗಾಣದಲ್ಲಿ 10, ಹರಿಯಾಣದಲ್ಲಿ 8, ಉತ್ತರ ಪ್ರದೇಶದಲ್ಲಿ 8, ಬಿಹಾರದಲ್ಲಿ 2, ಚತ್ತೀಸ್ಗಡ 1 ಹಾಗೂ ದೆಹಲಿ 1 ಸಾವು ಸಂಭವಿಸುವುದು ಖಾತರಿಯಾಗಿದೆ.
ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಜತೆಗೆ ಬ್ಲ್ಯಾಕ್ ಫಂಗಸ್ ಸೋಂಕು ಸಹ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವುದು ಆರೋಗ್ಯ ಇಲಾಖೆ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ದೆಹಲಿ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದು ದೇಶದಲ್ಲಿ 7,200ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದಾಗಿ ತಿಳಿಸಿದೆ. ಸೋಂಕಿತರ ಪೈಕಿ ಸುಮಾರು 219ಕ್ಕೂ ಅಧಿಕ ಮಂದಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು ರಾಜಸ್ಥಾನ ಸೇರಿದಂತೆ ಕೆಲವು ಕಡೆ ಬ್ಲ್ಯಾಕ್ ಫಂಗಸ್ ಸೋಂಕನ್ನು ಸಾಂಕ್ರಾಮಿಕ ರೋಗವೆಂದು ಆಯಾ ರಾಜ್ಯದ ಸರ್ಕಾರಗಳು ಘೋಷಿಸಿವೆ.
ದೇಶದಲ್ಲಿ ಬ್ಲ್ಯಾಕ್ ಫಂಗಸ್ನಿಂದ ಸಾವಿಗೀಡಾಗಿರುವ 219ಕ್ಕೂ ಅಧಿಕ ಮಂದಿ ಪೈಕಿ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 90 ಜನ ಮೃತಪಟ್ಟಿದ್ದಾರೆ. ಗುಜರಾತ್ನಲ್ಲಿ 61, ಮಧ್ಯಪ್ರದೇಶದಲ್ಲಿ 31, ತೆಲಂಗಾಣದಲ್ಲಿ 10, ಹರಿಯಾಣದಲ್ಲಿ 8, ಉತ್ತರ ಪ್ರದೇಶದಲ್ಲಿ 8, ಬಿಹಾರದಲ್ಲಿ 2, ಚತ್ತೀಸ್ಗಡ 1 ಹಾಗೂ ದೆಹಲಿ 1 ಸಾವು ಸಂಭವಿಸುವುದು ಖಾತರಿಯಾಗಿದೆ.
ನಿನ್ನೆ (ಮೇ 20) ಬ್ಲ್ಯಾಕ್ ಫಂಗಸ್ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳಿಗೆ ಪ್ರಮುಖ ಸೂಚನೆಯೊಂದನ್ನು ನೀಡಿರುವ ಕೇಂದ್ರ ಸರ್ಕಾರ 1897ರ ಸಾಂಕ್ರಾಮಿಕ ಕಾಯಿಲೆ ಕಾಯ್ದೆಯಡಿ ಮ್ಯೂಕೋರ್ಮೈಕೋಸಿಸ್ ಸೋಂಕನ್ನು ಗುರುತಿಸುವಂತೆ ತಿಳಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿರುವ ಲೋಕ ನಾಯಕ್ ಆಸ್ಪತ್ರೆ, ಜಿಟಿಬಿ ಆಸ್ಪತ್ರೆ ಹಾಗೂ ರಾಜೀವ್ ಗಾಂಧಿ ಆಸ್ಪತ್ರೆಗಳನ್ನು ಬ್ಲ್ಯಾಕ್ ಫಂಗಸ್ ಚಿಕಿತ್ಸಾ ಕೇಂದ್ರಗಳೆಂದು ತಿಳಿಸಿದ್ದಾರೆ.
ಯಾವ ಯಾವ ರಾಜ್ಯಗಳಲ್ಲಿ ಅತಿ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳಿವೆ ಮಹಾರಾಷ್ಟ್ರ: 1,500 ಪ್ರಕರಣಗಳು, 90 ಸಾವು ಗುಜರಾತ್: 1,163 ಪ್ರಕರಣಗಳು, 61ಸಾವು ಮಧ್ಯಪ್ರದೇಶ: 575 ಪ್ರಕರಣಗಳು, 31 ಸಾವು ಹರಿಯಾಣ: 268 ಪ್ರಕರಣಗಳು, 08 ಸಾವು ದೆಹಲಿ: 203 ಪ್ರಕರಣಗಳು, 01 ಸಾವು ಉತ್ತರ ಪ್ರದೇಶ: 169 ಪ್ರಕರಣಗಳು, 08 ಸಾವು ಬಿಹಾರ: 103ಪ್ರಕರಣಗಳು, 02 ಸಾವು ಚತ್ತೀಸ್ಗಡ: 101 ಪ್ರಕರಣಗಳು, 01 ಸಾವು ಕರ್ನಾಟಕ: 97 ಪ್ರಕರಣಗಳು, 00 ಸಾವು ತೆಲಂಗಾಣ: 90 ಪ್ರಕರಣಗಳು, 10 ಸಾವು
(India has more than 7200 Black fungus cases Union Government affidavit to Delhi High Court clarifies)
ಇದನ್ನೂ ಓದಿ: ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳು ಇವೆ..ಸಾವಿನ ವರದಿಯಾಗಿಲ್ಲ: ಡಿಸಿಎಂ ಅಶ್ವತ್ಥ ನಾರಾಯಣ್
ನಿಮಗೆ ಬ್ಲ್ಯಾಕ್ ಫಂಗಸ್ ಇದೆಯೋ, ಇಲ್ಲವೋ ಗುರುತಿಸುವುದು ಹೇಗೆ? ಏನು ಕ್ರಮ ತೆಗೆದುಕೊಳ್ಳಬೇಕು? ಚಿಕಿತ್ಸಾ ವಿಧಾನವೇನು?
Published On - 8:51 am, Fri, 21 May 21