ಭಾರತದಲ್ಲಿ ಕೊರೊನಾ ಸೋಂಕಿನ ಕೇಸ್​ಗಳು ನಿನ್ನೆಗಿಂತ ಇಂದು ಕಡಿಮೆ, ಪಾಸಿಟಿವಿಟಿ ರೇಟ್​ನಲ್ಲೂ ಇಳಿಕೆ; 24ಗಂಟೆಯಲ್ಲಿ 385 ಮಂದಿ ಸಾವು

ಒಂದೆಡೆ ಕೊವಿಡ್​ 19 ಕೇಸ್​ನಲ್ಲಿ ಇಳಿಕೆಯಾಗಿದ್ದರೆ, ಇನ್ನೊಂದೆಡೆ ಒಮಿಕ್ರಾನ್​ ಸೋಂಕಿತರ ಸಂಖ್ಯೆ ಹೆಚ್ಚಿದೆ. ಭಾನುವಾರ 7743 ಇದ್ದ ಒಮಿಕ್ರಾನ್​ ಸೋಂಕಿತರ ಸಂಖ್ಯೆ ಇಂದು 8209ಕ್ಕೆ ಏರಿದೆ. ಇದರಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದು, 1738 ಮಂದಿ ಒಮಿಕ್ರಾನ್ ಸೋಂಕಿತರು ಇದ್ದಾರೆ.

ಭಾರತದಲ್ಲಿ ಕೊರೊನಾ ಸೋಂಕಿನ ಕೇಸ್​ಗಳು ನಿನ್ನೆಗಿಂತ ಇಂದು ಕಡಿಮೆ, ಪಾಸಿಟಿವಿಟಿ ರೇಟ್​ನಲ್ಲೂ ಇಳಿಕೆ; 24ಗಂಟೆಯಲ್ಲಿ 385 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Jan 17, 2022 | 11:06 AM

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 2,58,098 ಹೊಸ ಕೊವಿಡ್ 19 ಕೇಸ್​ಗಳು ದಾಖಲಾಗಿವೆ. ಹಾಗೇ, 385 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.19.65 ಮತ್ತು ವಾರದ ಪಾಸಿಟಿವಿಟಿ ದರ ಶೇ.14.41ರಷ್ಟಿದೆ. ಇನ್ನು ಒಂದು ದಿನದಲ್ಲಿ 1,51,740 ಮಂದಿ ಚೇತರಿಸಿಕೊಂಡಿದ್ದು, ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 16,56,341ಕ್ಕೆ ತಲುಪಿದೆ. ಒಟ್ಟಾರೆ ಕೊರೊನಾದಿಂದ ಚೇತರಿಕೆ ಕಂಡವರ ಸಂಖ್ಯೆ 3,52,37,461 ಆಗಿದ್ದು, ಚೇತರಿಕೆ ದರ ಶೇ.94.27 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಆದರೆ ದೇಶದಲ್ಲಿ ನಿನ್ನೆಗಿಂತ ಇಂದು 13,113 ಕೇಸ್​ಗಳು ಕಡಿಮೆ ದಾಖಲಾಗಿದ್ದು ಸ್ವಲ್ಪಮಟ್ಟಿಗೆ ಸಮಾಧಾನ ತಂದಿದೆ. 

ಇನ್ನೊಂದೆಡೆ ಮೂರು ಹಂತದ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ನಡೆಯುತ್ತಿದೆ. ಕಳೆದವರ್ಷ ಜನವರಿ 16ರಿಂದ ವಯಸ್ಕರಿಗೆ ಕೊವಿಡ್​ 19 ಲಸಿಕೆ ನೀಡುತ್ತಿದ್ದು, ಇದುವರೆಗೆ ಸುಮಾರು 157.20 ಕೋಟಿ ಡೋಸ್​​ ನೀಡಲಾಗಿದೆ. 15-18ವರ್ಷದವರಿಗೆ ಈಗಾಗಲೇ 3 ಕೋಟಿ ಡೋಸ್ ನೀಡಿಕೆಯಾಗಿದೆ. ಹಾಗೇ, 24ಗಂಟೆಯಲ್ಲಿ 13,13,444 ಜನರಿಗೆ ಕೊವಿಡ್ 19 ತಪಾಸಣೆ ಮಾಡಲಾಗಿದ್ದು, ಒಟ್ಟಾರೆ ಇದುವರೆಗೆ ಟೆಸ್ಟ್ ಮಾಡಿದ್ದು  70.37 ಕೋಟಿ ಜನರಿಗೆ. ಭಾರತದ ಆರ್​ ವ್ಯಾಲ್ಯೂ (ಅಂದರೆ, ಕೊವಿಡ್ 19 ಎಷ್ಟರ ಮಟ್ಟಿಗೆ ಕ್ಷಿಪ್ರವಾಗಿ ಹರಡುತ್ತಿದೆ ಎಂಬುದನ್ನು ತೋರಿಸುವ ಮೌಲ್ಯಮಾಪನ) 2.2ಕ್ಕೆ ಇಳಿದಿದೆ ಎಂದು ಐಐಟಿ ಮದ್ರಾಸ್​ ಹೇಳಿದೆ.

ಒಂದೆಡೆ ಕೊವಿಡ್​ 19 ಕೇಸ್​ನಲ್ಲಿ ಇಳಿಕೆಯಾಗಿದ್ದರೆ, ಇನ್ನೊಂದೆಡೆ ಒಮಿಕ್ರಾನ್​ ಸೋಂಕಿತರ ಸಂಖ್ಯೆ ಹೆಚ್ಚಿದೆ. ಭಾನುವಾರ 7743 ಇದ್ದ ಒಮಿಕ್ರಾನ್​ ಸೋಂಕಿತರ ಸಂಖ್ಯೆ ಇಂದು 8209ಕ್ಕೆ ಏರಿದೆ. ಇದರಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದು, 1738 ಮಂದಿ ಒಮಿಕ್ರಾನ್ ಸೋಂಕಿತರು ಇದ್ದಾರೆ. ಹಾಗೇ ಎರಡನೇ ಸ್ಥಾನದಲ್ಲಿರುವ ಪಶ್ಚಿಮ ಬಂಗಾಳದಲ್ಲಿ 1672 ಮತ್ತು ಮೂರನೇ ಸ್ಥಾನದಲ್ಲಿರುವ ರಾಜಸ್ಥಾನದಲ್ಲಿ 1276 ಸೋಂಕಿತರು ಇದ್ದಾರೆ. ಅದು ಬಿಟ್ಟರೆ ದೆಹಲಿ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಒಮಿಕ್ರಾನ್​ ಸೋಂಕಿತರ ಸಂಖ್ಯೆ 500 ಗಡಿ ದಾಟಿದೆ.

ಭಾರತದಲ್ಲಿ 8 ಲಸಿಕೆಗಳಿಗೆ ಅನುಮತಿ ಹೆಚ್ಚುತ್ತಿರುವ ಕೊವಿಡ್ 19 ಸೋಂಕಿನ ವಿರುದ್ಧ ಹೋರಾಡಲು ಲಸಿಕೆಗಳೇ ಅಸ್ತ್ರ ಎಂಬ ಮಂತ್ರವನ್ನು ಇದೀಗ ಜಗತ್ತು ನಂಬಿದೆ. ಭಾರತದಲ್ಲಿ ಒಟ್ಟು 8 ಕೊವಿಡ್​ 19 ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ. ಅದರಲ್ಲಿ ಪ್ರಮುಖವಾಗಿ ಸೀರಮ್ ಇನ್​ಸ್ಟಿಟ್ಯೂಟ್​​ನ ಕೊವಿಶೀಲ್ಡ್​, ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್​, ರಷ್ಯಾದ ಸ್ಪುಟ್ನಿಕ್​ ವಿ, ಅಮೆರಿಕದ ಮಾಡೆರ್ನಾ, ಜಾನ್ಸನ್​ ಆ್ಯಂಡ್ ಜಾನ್ಸನ್​, ಜೈಡೆಸ್​ ಕ್ಯಾಡಿಲಾದ ZyCoV-D, ಸೀರಮ್​ ಇನ್​ಸ್ಟಿಟ್ಯೂಟ್​ನ ಕೊವ್ಯಾವ್ಯಾಕ್ಸ್ ಮತ್ತು ಬಯಾಲಜಿಕಲ್​ ಇ ಸಂಸ್ಥೆಯ ಕಾರ್ಬೆವ್ಯಾಕ್ಸ್​ಗಳ ಬಳಕೆಗೆ ದೇಶದಲ್ಲಿ ಅನುಮತಿಸಲಾಗಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತಿರುವ ಲಸಿಕೆಗಳು ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್​ ಆಗಿದೆ.

ಇನ್ನೊಂದೆಡೆ ಅನೇಕ ರಾಜ್ಯಗಳಲ್ಲಿ ಕೊವಿಡ್ 19 ನಿಯಂತ್ರಣ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಶಾಲಾ-ಕಾಲೇಜುಗಳು, ಮನರಂಜನಾ ಸ್ಥಳಗಳೆಲ್ಲ ಬಂದ್ ಆಗಿವೆ. ಇನ್ನುಳಿದಂತೆ ಬಸ್​, ಮೆಟ್ರೋಗಳನ್ನೆಲ್ಲ ಶೇ.50ರ ಸಾಮರ್ಥ್ಯದ ನಿಯಮದಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನೈಟ್​ಕರ್ಫ್ಯೂ, ವೀಕೆಂಡ್ ಕರ್ಫ್ಯೂಗಳನ್ನೂ ಹೇರಲಾಗಿದೆ. ಆದರೂ ಕೂಡ ಕೊವಿಡ್​ 19 ಸೋಂಕು ತೀವ್ರವಾಗಿ ಹರಡುತ್ತಿದ್ದು, ಇದು ಮೂರನೇ ಅಲೆಯ ಪ್ರಾರಂಭ ಎಂದು ಆರೋಗ್ಯತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಲಸಿಕೆ ಹಾಕಿಸಿಕೊಳ್ಳಲು ವ್ಯಕ್ತಿಯನ್ನು ಒತ್ತಾಯಿಸುವಂತಿಲ್ಲ: ಸುಪ್ರೀಂಕೋರ್ಟ್‌ಗೆ ಕೇಂದ್ರ

Published On - 11:05 am, Mon, 17 January 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ