Explainer: ಲಸಿಕೆ ವಿಚಾರದಲ್ಲಿ ಡಬ್ಲ್ಯೂಎಚ್​ಓ ನಿಯಮ ಪಾಲನೆಯಲ್ಲಿ ಮೊದಲ ಸ್ಥಾನದಲ್ಲಿ ಭಾರತ, ಶ್ರೀಮಂತ ರಾಷ್ಟ್ರಗಳ ಸಣ್ಣತನ ಬಯಲು

ಭಾರತದಲ್ಲಿ ತಯಾರಾದ ಕೊವಿಶೀಲ್ಡ್ ಲಸಿಕೆಯನ್ನು ಅಗತ್ಯ ಇರುವ ದೇಶಗಳಿಗೆ ನೀಡಲು ಸಿದ್ಧರಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು. ಅದರಂತೆ ನಡೆದುಕೊಂಡಿದ್ದರು. ಆದರೆ ಮೋದಿಯವರ ಈ ನಿರ್ಧಾರಕ್ಕೆ ಕಾಂಗ್ರೆಸ್ ಸೇರಿ ಹಲವು ಪಕ್ಷಗಳಿಂದ ವಿರೋಧ ವ್ಯಕ್ತವಾಗಿತ್ತು.

Explainer: ಲಸಿಕೆ ವಿಚಾರದಲ್ಲಿ ಡಬ್ಲ್ಯೂಎಚ್​ಓ ನಿಯಮ ಪಾಲನೆಯಲ್ಲಿ ಮೊದಲ ಸ್ಥಾನದಲ್ಲಿ ಭಾರತ, ಶ್ರೀಮಂತ ರಾಷ್ಟ್ರಗಳ ಸಣ್ಣತನ ಬಯಲು
ಪ್ರಾತಿನಿಧಿಕ ಚಿತ್ರ

ಕೊರೊನಾ ಜಾಗತಿಕವಾಗಿ ಪಸರಿಸಿದೆ. ವಿಶ್ವದ ಮೂಲೆಮೂಲೆಯ ರಾಷ್ಟ್ರಗಳಲ್ಲೂ ಸೋಂಕು ಸಂಕಷ್ಟತಂದೊಡ್ಡಿದೆ. ಶ್ರೀಮಂತ, ಬಡ, ಮಧ್ಯಮ ದೇಶಗಳೆಂಬ ಬೇಧ ಅದಕ್ಕೆಲ್ಲಿ ಗೊತ್ತಾಗಬೇಕು? ಸಾವು-ನೋವು, ಆರ್ಥಿಕ ಸಂಕಷ್ಟಗಳು ದೇಶಗಳನ್ನು ಕಿತ್ತುತಿನ್ನುತ್ತಿವೆ. ಅಭಿವೃದ್ಧಿ ಹೊಂದಿದ ಕೆಲ ರಾಷ್ಟ್ರಗಳು ಲಸಿಕೆಯನ್ನು ಉತ್ಪಾದಿಸಿ ಬಳಕೆ ಮಾಡುತ್ತಿವೆ. ಆದರೆ ಬಡ ಮತ್ತು ಕೆಲವ ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳಿಗೆ ಇದು ಸಾಧ್ಯವಾಗಿಲ್ಲ. ಆಫ್ರಿಕಾದ ಅಲ್ಜೇರಿಯಾ, ಮಾಲಾವ, ಉಗಾಂಡಾ, ಮಧ್ಯಪ್ರಾಚ್ಯದ ಅಫ್ಘಾನಿಸ್ತಾನ, ಇರಾನ್, ಇರಾಕ್​ ಹಾಗೂ ಅಮೆರಿಕದ ಬಾರ್ಬಾಡೋಸ್, ಇಎಲ್​ ಸಾಲ್ವಾಡೋರ್, ನಿಕಾರಾಗ್ವಾಗಳು ಲಸಿಕೆಗಾಗಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿವೆ.

ಹೀಗಿರುವಾಗ ವಿಶ್ವ ಆರೋಗ್ಯ ಸಂಸ್ಥೆ (WHO) ಬಡ ರಾಷ್ಟ್ರಗಳ ಬಗ್ಗೆ ಕಳಕಳಿ ವ್ಯಕ್ತಪಡಿಸಿ, ಲಸಿಕೆ ಉತ್ಪಾದನೆ ಮಾಡುವ ರಾಷ್ಟ್ರಗಳು, ಲಸಿಕೆ ಉತ್ಪಾದನೆ ಇಲ್ಲದ ಬಡ ರಾಷ್ಟ್ರಗಳಿಗೂ ಲಸಿಕೆ ರಫ್ತು ಮಾಡಬೇಕು. ಲಸಿಕೆಯನ್ನು ಹಂಚೋಣ, ಈ ಮೂಲಕ ಕೊರೊನಾ ವೈರಸ್​ ವಿರುದ್ಧ ಅಂತಾರಾಷ್ಟ್ರೀಯವಾಗಿ ಒಗ್ಗಟ್ಟು ತೋರಿಸೋಣ ಎಂದು ಹೇಳಿದೆ. ಆದರೆ ಈ ಹಂಚಿಕೆ ನಿಜಕ್ಕೂ ಎಷ್ಟರಮಟ್ಟಿಗೆ ಆಗಿದೆ?ಬಡ, ಹಿಂದುಳಿದ ರಾಷ್ಟ್ರಗಗಳಿಗೆ, ಲಸಿಕೆ ಉತ್ಪಾದನಾ ರಾಷ್ಟ್ರಗಳು ನಿಜಕ್ಕೂ ಎಷ್ಟು ಪ್ರಮಾಣದಲ್ಲಿ ವ್ಯಾಕ್ಸಿನ್ ರಫ್ತು ಮಾಡಿವೆ ಎಂಬುದರ ಮಾಹಿತಿಯನ್ನು ವಿವಿಧ ಸಂಶೋಧನಾ ಸಂಸ್ಥೆಗಳು ಬಹಿರಂಗಪಡಿಸಿವೆ.

ಅವರ್​ ವರ್ಲ್ಡ್ ಇನ್​ ಡಾಟಾ(OurWorldInData), ಬ್ಲೂಮ್​ಬರ್ಗ್​ (Bloomberg) ಮತ್ತು ಜಾನ್ ಹಾಪ್​ಕಿನ್ಸ್ ಯೂನಿವರ್ಸಿಟಿ (John Hopkins University)ಗಳು ನೀಡಿದ ಮಾಹಿತಿ ಅನ್ವಯ, ಇದುವರೆಗೂ ಸುಮಾರು 79 ಬಡ ಹಾಗೂ ಸುಮಾರು 47 ಮಧ್ಯಮ ಆದಾಯದ ರಾಷ್ಟ್ರಗಳಿಗೆ ಇನ್ನೂ ಕೊರೊನಾ ವ್ಯಾಕ್ಸಿನ್ ಸಿಕ್ಕೇಇಲ್ಲ ! ಇದು ಮಾರ್ಚ್ 4ರಂದು ಹೊರಬಿದ್ದ ದತ್ತಾಂಶ.

2021ರ ಪ್ರಾರಂಭದಿಂದ ಭಾರತ ಸೇರಿ ಹಲವು ಮುಂದುವರಿದ ರಾಷ್ಟ್ರಗಳು ತಮ್ಮ ನಾಗರಿಕರಿಗೆ ಲಸಿಕೆ ನೀಡುತ್ತಿವೆ. ಸುಮಾರು 68 ಮುಂದುವರಿದ ರಾಷ್ಟ್ರಗಳು ತಮ್ಮ ನಾಗರಿಕರಿಗೆ ಸರಾಸರಿ 1.1 ಡೋಸ್​​ ಲಸಿಕೆ ನೀಡುತ್ತಿವೆ. ಅಂದರೆ ನಿಮಿಷಕ್ಕೆ 66 ಡೋಸ್​. ವಿಶ್ವಬ್ಯಾಂಕ್​ನಿಂದ ಶ್ರೀಮಂತ ರಾಷ್ಟ್ರಗಳು ಎಂದು ಗುರುತಿಸಲ್ಪಟ್ಟ ರಾಷ್ಟ್ರಗಳೆಂದು ಗುರುತಿಸಲ್ಪಟ್ಟ ಯುಎಸ್​, ಫ್ರಾನ್ಸ್, ಜರ್ಮನಿ, ಲಂಡನ್​ ಗಳೆಲ್ಲ ಈಗಾಗಲೇ ಲಸಿಕೆ ವಿತರಣೆ ಶುರುಮಾಡಿವೆ. ಆದರೆ ಅಮೆರಿಕಾ, ಲಂಡನ್​ಗಳು ತಮ್ಮಲ್ಲಿನ ಲಸಿಕೆಯನ್ನು ಬೇರೆ ಬಡರಾಷ್ಟ್ರಗಳಿಗೆ ರಫ್ತು ಮಾಡಲು ಅಷ್ಟೊಂದು ಒಲವು ತೋರಿಸುತ್ತಿಲ್ಲ ಎಂಬುದು ದತ್ತಾಂಶಗಳಿಂದ ಬಹಿರಂಗಗೊಂಡಿದೆ.

ಅವರ್​ ವರ್ಲ್ದ್​ ಇನ್ ಡಾಟಾ ಬಿಡುಗಡೆ ಮಾಡಿದ ಅಂಕಿಸಂಖ್ಯೆ ಅನ್ವಯ ಜಗತ್ತಿನಾದ್ಯಂತ ಅತ್ಯಂತ ಹೆಚ್ಚಾಗಿ ಬಳಕೆಯಾಗುತ್ತಿರುವುದು ಆಕ್ಸ್​ಫರ್ಡ್​ ಆಸ್ಟ್ರಾಜೆನಿಕಾದ ಕೊವಿಶೀಲ್ಡ್​ ಲಸಿಕೆ. ಇದು ಭಾರತದಲ್ಲಿ ತಯಾರಾದ ಲಸಿಕೆ. ಇದು ಸದ್ಯ ಜಾಗತಿಕವಾಗಿ 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಇನ್ನುಳಿದಂತೆ ಫೈಜರ್​ 77 ರಾಷ್ಟ್ರಗಳಲ್ಲಿ, ಮಾಡರ್ನಾ 35, ಚೀನಾದ ಸಿನೋಫಾರ್ಮಾ 26, ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ 20, ಚೀನಾದ ಸಿನೋವ್ಯಾಕ್​ 17 ರಾಷ್ಟ್ರಗಳಲ್ಲಿ ಬಳಕೆಯಾಗುತ್ತಿದೆ. ಅಂದರೆ ಅಲ್ಲಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾತಿಗೆ ಬೆಲೆ ಕೊಟ್ಟು ಬಡರಾಷ್ಟ್ರಗಳು ಸೇರಿ, ಅಗತ್ಯ ಇರುವ ಹೆಚ್ಚಿನ ರಾಷ್ಟ್ರಗಳಿಗೆ ಲಸಿಕೆ ನೀಡಿ, ಕೊರೊನಾ ವಿರುದ್ಧ ಹೋರಾಟ ಮಾಡಲು ಸಹಾಯ ಮಾಡಿದ್ದು ಭಾರತ.

ಪ್ರಧಾನಿ ಮೋದಿ ವಿರುದ್ಧ ಪ್ರತಿಪಕ್ಷಗಳ ಅಸಮಾಧಾನ ಭಾರತದಲ್ಲಿ ತಯಾರಾದ ಕೊವಿಶೀಲ್ಡ್ ಲಸಿಕೆಯನ್ನು ಅಗತ್ಯ ಇರುವ ದೇಶಗಳಿಗೆ ನೀಡಲು ಸಿದ್ಧರಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು. ಅದರಂತೆ ನಡೆದುಕೊಂಡಿದ್ದರು. ಆದರೆ ಮೋದಿಯವರ ಈ ನಿರ್ಧಾರಕ್ಕೆ ಕಾಂಗ್ರೆಸ್ ಸೇರಿ ಹಲವು ಪಕ್ಷಗಳಿಂದ ವಿರೋಧ ವ್ಯಕ್ತವಾಗಿತ್ತು. ವಿದೇಶಗಳಿಗೆ ಯಾಕೆ ಲಸಿಕೆ ನೀಡಬೇಕು? ಅದರ ಬದಲು ಭಾರತದಲ್ಲಿ ಅತಿವೇಗವಾಗಿ ಲಸಿಕೆ ನೀಡಬಹುದಲ್ಲ? ಎಂದು ರಾಹುಲ್ ಗಾಂಧಿಯವರೂ ಪ್ರಶ್ನಿಸಿದ್ದರು.

ಅದರ ಹೊರತಾಗಿ ಕೂಡ ಭಾರತದಲ್ಲಿ ಉತ್ಪಾದನೆಯಾದ ಲಸಿಕೆಗೆ ರಾಜಕೀಯ ಮಿಶ್ರಣ ಮಾಡಲಾಗಿತ್ತು. ಲಸಿಕೆ ಹೆಸರಲ್ಲಿ ಬಿಜೆಪಿ ಸರ್ಕಾರ ಕ್ರೆಡಿಟ್​ ಪಡೆಯುತ್ತಿದೆ. ವಿದೇಶಗಳಿಗೆ ಕಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಇದು ತಮ್ಮ ಸಾಧನೆಯೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದೂ ಹಲವು ರಾಜಕೀಯ ನಾಯಕರು ವ್ಯಂಗ್ಯವಾಡಿದ್ದರು.

ಭೂತಾನ್​, ಕೆನಡಾ ಸೇರಿ ಅನೇಕ ರಾಷ್ಟ್ರಗಳಿಗೆ ಜನವರಿ-ಫೆಬ್ರವರಿಯಲ್ಲಿ ಲಸಿಕೆ ಕಳಿಸಿರುವ ಭಾರತ ಇದೀಗ ರಫ್ತು ಪ್ರಮಾಣವನ್ನು ತಗ್ಗಿಸಿದೆ. ಕಾರಣ ದೇಶದಲ್ಲಿ ಕೊರೊನಾ ವೈರಸ್​ ಪ್ರಮಾಣ ಹೆಚ್ಚುತ್ತಿದ್ದು, ಲಸಿಕೆ ಅಭಾವ ಎದುರಾಗಿದೆ. ಹೀಗಾಗಿ ಸ್ವಲ್ಪ ದಿನಗಳ ಮಟ್ಟಿಗೆ ತಡೆದಿದೆ.

ಇದನ್ನೂ ಓದಿ: ನಾಸಿಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ: 22 ಕೊವಿಡ್ ರೋಗಿಗಳ ದುರ್ಮರಣ

ವಿಶ್ಲೇಷಣೆ: ಪಶ್ಚಿಮ ಬಂಗಾಳ ಕದನ ಕಣ; ಈ ಬಾರಿ ಯಾರ ಕೈ ಹಿಡಿಯಲಿದ್ದಾರೆ ಮಹಿಳಾ ಮತದಾರರು?

(India Made Oxford Astrazeneca vaccine widely use in World)

Published On - 3:24 pm, Wed, 21 April 21

Click on your DTH Provider to Add TV9 Kannada