Sign In

By signing in or creating an account, you agree with Associated Broadcasting Company's Terms & Conditions and Privacy Policy.

Coronavirus Cases in India: ದೇಶದಲ್ಲಿ 2.08 ಲಕ್ಷ ಹೊಸ ಕೊವಿಡ್ ಪ್ರಕರಣ, 4157 ಮಂದಿ ಸಾವು

Covid 19: ದೇಶದ ಒಟ್ಟಾರೆ ಪ್ರಕರಣಗಳ ಸಂಖ್ಯೆ 2,71,57,795 ಕ್ಕೆ ಏರಿದ್ದು, ಸಾವಿನ ಸಂಖ್ಯೆ ಪ್ರಸ್ತುತ 3,11,388 ರಷ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ ದೇಶದ ಸಕ್ರಿಯ ಪ್ರಕರಣಗಳು 24.95 ಲಕ್ಷಕ್ಕೆ ಇಳಿದಿದೆ.

Coronavirus Cases in India: ದೇಶದಲ್ಲಿ 2.08 ಲಕ್ಷ ಹೊಸ ಕೊವಿಡ್ ಪ್ರಕರಣ, 4157 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:May 26, 2021 | 11:22 AM

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,08,921 ಹೊಸ ಕೊವಿಡ್ -19 ಪ್ರಕರಣಗಳು ಮತ್ತು 4,157 ಸಾವು ವರದಿ ಆಗಿದೆ. ದೇಶದ ಒಟ್ಟಾರೆ ಪ್ರಕರಣಗಳ ಸಂಖ್ಯೆ 2,71,57,795 ಕ್ಕೆ ಏರಿದ್ದು, ಸಾವಿನ ಸಂಖ್ಯೆ ಪ್ರಸ್ತುತ 3,11,388 ರಷ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ ದೇಶದ ಸಕ್ರಿಯ ಪ್ರಕರಣಗಳು 24.95 ಲಕ್ಷಕ್ಕೆ ಇಳಿದಿದೆ. 2,95 ಲಕ್ಷಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡಿದ್ದಾರೆ. ಚೇತರಿಕೆ ದರ ಶೇ 89.66 ಕ್ಕೆ ಏರಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರಕಾರ  ಮೇ 25ರವರೆಗೆ  33,48,11,496 ಮಾದರಿಗಳನ್ನು  ಪರೀಕ್ಷಿಸಲಾಗಿದೆ.  ನಿನ್ನೆ 22,17,320 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಲಸಿಕೆ ವ್ಯರ್ಥವನ್ನು 1% ಕ್ಕಿಂತ ಕಡಿಮೆ ಇಡಲು ರಾಜ್ಯಗಳಿಗೆ ಒತ್ತಾಯ ಕೊರೊನಾವೈರಸ್ ಲಸಿಕೆಗಳ ತೀವ್ರ ಕೊರತೆಯನ್ನು ಭಾರತ ಎದುರಿಸುತ್ತಿರುವುದರಿಂದ, ಲಸಿಕೆ ವ್ಯರ್ಥವನ್ನು ಶೇಕಡಾ 1 ಕ್ಕಿಂತ ಕಡಿಮೆ ಇರುವಂತೆ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಲಾಗಿದೆ. ಕೇರಳ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳು ಲಸಿಕೆ ವ್ಯರ್ಥ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳವನ್ನು ವರದಿ ಮಾಡಿದೆ.

ಎರಡನೇ ಅಲೆ ಹಿಮ್ಮೆಟ್ಟುವಿಕೆಯ ಗೋಚರಿಸುವ ಸಂಕೇತಗಳ ಮಧ್ಯೆ, ಕೇಂದ್ರವು ಜೂನ್ 15 ರವರೆಗೆ ಇರವ ಲಸಿಕೆ ಒದಗಿಸಿರುವುದರಿಂದ ಲಸಿಕೆ ಹೆಚ್ಚಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಂದ್ರವು ಕೇಳಿದೆ. ಗ್ರಾಮೀಣ, ನಗರ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕಂಟೇನ್ಮೆಟ್ ಕ್ರಮಗಳ ಅಗತ್ಯ , ಮೊದಲ ಅಲೆ ಸಮಯದಲ್ಲಿ ಪರಿಣಾಮ ಬೀರದ ಆದರೆ ಎರಡನೆಯದನ್ನು ವಿರೋಧಿಸಲು ಸಾಧ್ಯವಾಗದ ಪ್ರದೇಶಗಳನ್ನು ಸಹ ಕೇಂದ್ರ ಸರ್ಕಾರ ಒತ್ತಿ ಹೇಳಿದೆ.

ಮಂಗಳವಾರ, ಭಾರತದ ದೈನಂದಿನ ಪ್ರಕರಣವು 40 ದಿನಗಳ ನಂತರ ಎರಡು ಲಕ್ಷಕ್ಕಿಂತ ಕಡಿಮೆಯಾಗಿದೆ, ಏಪ್ರಿಲ್ 14 ರಂದು, ಸಾಂಕ್ರಾಮಿಕ ರೋಗದ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ, ದೇಶವು 2 ಲಕ್ಷ ಪ್ರಕರಣಗಳ ಗಡಿ ದಾಟಿತು. ಅಂದಿನಿಂದ, ದೈನಂದಿನ ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದೆ ಮತ್ತು ಏಪ್ರಿಲ್ 30 ರಂದು, 24 ಗಂಟೆಗಳಲ್ಲಿ 4 ಲಕ್ಷ ಸೋಂಕುಗಳನ್ನು ವರದಿ ಮಾಡಿದ ವಿಶ್ವದ ಮೊದಲ ದೇಶವಾಗಿದೆ.

ಇದನ್ನೂ ಓದಿ: ದೇಶದಲ್ಲಿ ಕೊವಿಡ್​ನಿಂದ 577 ಮಕ್ಕಳು ಅನಾಥರಾಗಿದ್ದಾರೆ: ಸಚಿವೆ ಸ್ಮೃತಿ ಇರಾನಿ

ಇದನ್ನೂ ಓದಿ:  ಕೊರೊನಾ ಓಡಿಸಲು ನೂರಾರು ಕೆಜಿ ಅನ್ನ ಚೆಲ್ಲಿ ಮೌಢ್ಯಾಚರಣೆ, ಯುವಕರ ದೂರಿನ ಪ್ರತಿ ವೈರಲ್!

Published On - 11:06 am, Wed, 26 May 21