Coronavirus cases in India: ದೇಶದಲ್ಲಿ 12,885 ಹೊಸ ಕೊವಿಡ್ ಪ್ರಕರಣ, 461 ಮಂದಿ ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Nov 04, 2021 | 10:34 AM

Covid 19: ಪಶ್ಚಿಮ ಬಂಗಾಳದಲ್ಲಿ 919 ಹೊಸ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 15,95,414 ಕ್ಕೆ ಏರಿದೆ. ಇಲ್ಲಿ  14 ಸಾವುಗಳು ಸಂಭವಿಸಿದ್ದು ಸಾವಿನ ಸಂಖ್ಯೆಯನ್ನು 19,714 ತಲುಪಿದೆ.

Coronavirus cases in India: ದೇಶದಲ್ಲಿ 12,885 ಹೊಸ ಕೊವಿಡ್ ಪ್ರಕರಣ, 461 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 12,885 ಹೊಸ ಕೊವಿಡ್ (Covid-19) ಪ್ರಕರಣಗಳು, 15,054 ಚೇತರಿಕೆ ಮತ್ತು 461 ಸಾವುಗಳು ವರದಿಯಾಗಿವೆ. ಇದೇ ಅವಧಿಯಲ್ಲಿ 30,90,920 ಡೋಸ್ ಲಸಿಕೆ ನೀಡಿದ್ದು ಈವರೆಗೆ ಒಟ್ಟು 1,07,63,14,440 ಡೋಸ್ ಲಸಿಕೆ ನೀಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ 919 ಹೊಸ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 15,95,414 ಕ್ಕೆ ಏರಿದೆ. ಇಲ್ಲಿ  14 ಸಾವುಗಳು ಸಂಭವಿಸಿದ್ದು ಸಾವಿನ ಸಂಖ್ಯೆಯನ್ನು 19,714 ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8,152 ಆಗಿದೆ ಎಂದು ಆರೋಗ್ಯ ಬುಲೆಟಿನ್ ಹೇಳಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆಯು 1,48,579 ಕ್ಕೆ ಇಳಿದಿದೆ, ಇದು ಒಟ್ಟು ಸೋಂಕುಗಳ ಶೇ 0.43 ಆಗಿದೆ. ಆದರೆ ರಾಷ್ಟ್ರೀಯ ಕೊವಿಡ್ ಚೇತರಿಕೆ ದರವು ಶೇ 98.23  ದಾಖಲಾಗಿದೆ, ಇದು ಮಾರ್ಚ್ 2020 ರಿಂದ ಅತಿ ಹೆಚ್ಚು ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಡೇಟಾ ಪ್ರಕಾರ  24 ಗಂಟೆಗಳ ಅವಧಿಯಲ್ಲಿ ಸಕ್ರಿಯ  ಕೊವಿಡ್ ಪ್ರಕರಣಗಳಲ್ಲಿ ಒಟ್ಟು  2,630 ಪ್ರಕರಣಗಳ ಇಳಿಕೆ ದಾಖಲಾಗಿದೆ.

ದೈನಂದಿನ ಸಕಾರಾತ್ಮಕತೆಯ ದರವು 1.21 ಶೇಕಡಾದಲ್ಲಿ ದಾಖಲಾಗಿದೆ. 31 ದಿನಗಳಿಂದ ಇದು ಶೇಕಡಾ ಎರಡಕ್ಕಿಂತ ಕಡಿಮೆಯಾಗಿದೆ. ಸಾಪ್ತಾಹಿಕ ಸಕಾರಾತ್ಮಕತೆಯ ದರವು 1.17 ಶೇಕಡಾದಲ್ಲಿ ದಾಖಲಾಗಿದೆ. ಸಚಿವಾಲಯದ ಪ್ರಕಾರ, ಈ ಅಂಕಿ ಅಂಶವು 41 ದಿನಗಳವರೆಗೆ ಶೇಕಡಾ ಎರಡಕ್ಕಿಂತ ಕಡಿಮೆಯಾಗಿದೆ.

ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 3,37,12,794 ಕ್ಕೆ ಏರಿದೆ, ಆದರೆ ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.34 ರಷ್ಟಿದೆ. ರಾಷ್ಟ್ರವ್ಯಾಪಿ ಕೊವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ ದೇಶದಲ್ಲಿ ನೀಡಲಾದ ಲಸಿಕೆ ಡೋಸ್‌ಗಳ ಸಂಚಿತ ಸಂಖ್ಯೆ 107.63 ಕೋಟಿ ಮೀರಿದೆ.

ಮಹಾ: ಥಾಣೆಯಲ್ಲಿ 188 ಹೊಸ ಕೊವಿಡ್-19 ಪ್ರಕರಣ, 6 ಸಾವು
ಥಾಣೆಯಲ್ಲಿ 188 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ 5,66,318ಕ್ಕೆ ಏರಿದೆ. ವೈರಸ್ 6 ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ, ಇದು ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯನ್ನು 11,535 ಕ್ಕೆ ತಳ್ಳಿದೆ.  ಥಾಣೆಯಲ್ಲಿ ಕೊವಿಡ್ ಮರಣ ಪ್ರಮಾಣವು 2.03 ಪ್ರತಿಶತವಾಗಿದೆ. ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ, COVID-19 ಪ್ರಕರಣಗಳ ಸಂಖ್ಯೆ 1,38,082 ಕ್ಕೆ ಏರಿದೆ, ಆದರೆ ಸಾವಿನ ಸಂಖ್ಯೆ 3,289 ಆಗಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಕೊವ್ಯಾಕ್ಸಿನ್​​ಗೆ  ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ: ಭಾರತೀಯರ ಪ್ರಯಾಣ ಸುಗಮ ಎಂದ ಜೈಶಂಕರ್
ಭಾರತ್ ಬಯೋಟೆಕ್‌ನ ಕೊವಿಡ್ ಲಸಿಕೆ ಕೊವ್ಯಾಕ್ಸಿನ್​​ಗೆ ತುರ್ತು ಬಳಕೆಯ ಅನುಮೋದನೆಯನ್ನು ನೀಡುವ ವಿಶ್ವ ಆರೋಗ್ಯ ಸಂಸ್ಥೆಯ ನಿರ್ಧಾರವು ಅನೇಕ ಭಾರತೀಯ ನಾಗರಿಕರ ಪ್ರಯಾಣವನ್ನು ಸುಗಮಗೊಳಿಸುತ್ತದೆ ಮತ್ತು ಲಸಿಕೆ ಇಕ್ವಿಟಿಗೆ ಕೊಡುಗೆ ನೀಡುತ್ತದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಬುಧವಾರ ಹೇಳಿದ್ದಾರೆ.  ಇದು ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ’ದ ದೃಷ್ಟಿಗೆ ಜಾಗತಿಕ ಮನ್ನಣೆಯಾಗಿದೆ ಎಂದು ಅವರು ಹೇಳಿದರು.


ವಿಶ್ವ ಆರೋಗ್ಯ ಸಂಸ್ಥೆ (WHO) ಬುಧವಾರ ಭಾರತ್ ಬಯೋಟೆಕ್‌ನ ಕೊವಿಡ್ ಲಸಿಕೆ ಕೊವ್ಯಾಕ್ಸಿನ್ ತುರ್ತು ಬಳಕೆಯ ಅನುಮೋದನೆಯನ್ನು ನೀಡಿದೆ. “ಕೊವ್ಯಾಕ್ಸಿನ್ ಗೆ ತುರ್ತು ಬಳಕೆಯ ಪಟ್ಟಿಯನ್ನು ನೀಡುವ ವಿಶ್ವ ಆರೋಗ್ಯ ಸಂಸ್ಥೆಯ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಇದು ಅನೇಕ ಭಾರತೀಯ ನಾಗರಿಕರಿಗೆ ಪ್ರಯಾಣವನ್ನು ಸುಗಮಗೊಳಿಸುತ್ತದೆ ಮತ್ತು ಲಸಿಕೆ ಇಕ್ವಿಟಿಗೆ ಕೊಡುಗೆ ನೀಡುತ್ತದೆ. ಜೊತೆಗೆ ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ್ ಭಾರತ್ ದೃಷ್ಟಿಕೋನಕ್ಕೆ ಸಿಕ್ಕ ಜಾಗತಿಕ ಮನ್ನಣೆಯಾಗಿದೆ. ದೀಪಾವಳಿ ಸಂತಸ ತರಲಿ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Covaxin: ಕೊವ್ಯಾಕ್ಸಿನ್‌ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಒಪ್ಪಿಗೆ