ಟೆಲಿಕಾಂ ಕಂಪನಿಗಳಿಗೆ ಭಾರಿ ನಷ್ಟ, ಉಂಟಾಗಿದೆ ಮುಚ್ಚುವ ಭೀತಿ

ದೆಹಲಿ: ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಕಂಪನಿ ಕ್ರಾಂತಿಯನ್ನೇ ಮಾಡಿದ್ರೆ. ಇನ್ನುಳಿದ ಕಂಪನಿಗಳು ಮುಚ್ಚೋ ಭೀತಿಯಲ್ಲಿವೆ. ಅದ್ರಲ್ಲೂ ವೊಡಾಫೋನ್‌ ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್‌ ಕಳೆದ ಕೆಲ ತಿಂಗಳಿಂದ ಭಾರಿ ನಷ್ಟಕ್ಕೀಡಾಗಿವೆ. ಎಷ್ಟರ ಮಟ್ಟಿಗೆ ಅಂದ್ರೆ, ಕೇಂದ್ರ ಸರ್ಕಾರ ನೆರವಿನ ಪ್ಯಾಕೇಜ್ ನೀಡಿದ್ರೆ ಮಾತ್ರ ವಹಿವಾಟು ಮುಂದುವರಿಸಲು ಸಾಧ್ಯ ಅಂತ ವೊಡಾಫೋನ್‌ ಐಡಿಯಾ ಅಸಹಾಯಕತೆ ಹೊರಹಾಕಿದೆ. ಎಷ್ಟು ನಷ್ಟ..? ಎಷ್ಟು ಬಾಕಿ..? ವೊಡಾಫೋನ್ ಐಡಿಯಾ ನೀಡಿರುವ ಮಾಹಿತಿ ಪ್ರಕಾರ ಕಂಪನಿಯು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು […]

ಟೆಲಿಕಾಂ ಕಂಪನಿಗಳಿಗೆ ಭಾರಿ ನಷ್ಟ, ಉಂಟಾಗಿದೆ ಮುಚ್ಚುವ ಭೀತಿ
ಪ್ರಾತಿನಿಧಿಕ ಚಿತ್ರ
Follow us
ಸಾಧು ಶ್ರೀನಾಥ್​
|

Updated on:Nov 16, 2019 | 10:49 PM

ದೆಹಲಿ: ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಕಂಪನಿ ಕ್ರಾಂತಿಯನ್ನೇ ಮಾಡಿದ್ರೆ. ಇನ್ನುಳಿದ ಕಂಪನಿಗಳು ಮುಚ್ಚೋ ಭೀತಿಯಲ್ಲಿವೆ. ಅದ್ರಲ್ಲೂ ವೊಡಾಫೋನ್‌ ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್‌ ಕಳೆದ ಕೆಲ ತಿಂಗಳಿಂದ ಭಾರಿ ನಷ್ಟಕ್ಕೀಡಾಗಿವೆ. ಎಷ್ಟರ ಮಟ್ಟಿಗೆ ಅಂದ್ರೆ, ಕೇಂದ್ರ ಸರ್ಕಾರ ನೆರವಿನ ಪ್ಯಾಕೇಜ್ ನೀಡಿದ್ರೆ ಮಾತ್ರ ವಹಿವಾಟು ಮುಂದುವರಿಸಲು ಸಾಧ್ಯ ಅಂತ ವೊಡಾಫೋನ್‌ ಐಡಿಯಾ ಅಸಹಾಯಕತೆ ಹೊರಹಾಕಿದೆ.

ಎಷ್ಟು ನಷ್ಟ..? ಎಷ್ಟು ಬಾಕಿ..? ವೊಡಾಫೋನ್ ಐಡಿಯಾ ನೀಡಿರುವ ಮಾಹಿತಿ ಪ್ರಕಾರ ಕಂಪನಿಯು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ ಒಟ್ಟಾರೆ 50,922 ಕೋಟಿ ರೂಪಾಯಿ ನಷ್ಟ ಎದುರಿಸಿದೆ. ಇದೇ ಅವಧಿಯಲ್ಲಿ ವೊಡಾಫೋನ್‌ ಚಂದಾದಾರರ ಸಂಖ್ಯೆ 32 ಕೋಟಿಯಿಂದ 31.1 ಕೋಟಿಗೆ ಇಳಿಕೆಯಾಗಿದೆ.

ಇನ್ನು ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಿರುವ ಏರ್​ಟೆಲ್ ಕಂಪನಿ ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 23,045 ಕೋಟಿ ರೂಪಾಯಿ ನಿವ್ವಳ ನಷ್ಟ ಎದುರಿಸಿದೆ. ಇದಲ್ಲದೆ ದೂರಸಂಪರ್ಕ ಇಲಾಖೆಗೆ ಎರಡೂ ಕಂಪನಿಗಳು 92 ಸಾವಿರ ಕೋಟಿಗೂ ಹೆಚ್ಚು ಬಾಕಿ ನೀಡಬೇಕಾಗಿದೆ.

ಕೇಂದ್ರದ ಕೈಯಲ್ಲಿದೆ ಕಂಪನಿಗಳ ಅಳಿವು, ಉಳಿವು..! ಒಂದ್ಕಡೆ ಎರಡೂ ಕಂಪನಿಗಳ ನಷ್ಟವೇ 74 ಸಾವಿರ ಕೋಟಿ ದಾಟಿದೆ. ಇದ್ರ ಜೊತೆಗೆ ಗ್ರಾಸ್ ಅಡ್ಜಸ್ಟ್​ಮೆಂಟ್ ರೆವೆನ್ಯೂದಿಂದ 92 ಸಾವಿರ ಕೋಟಿ ರೂಪಾಯಿ ಬಾಕಿ ಮೊತ್ತ ನೀಡಬೇಕಿರೋದು ಟೆಲಿಕಾಂ ಕಂಪನಿಗಳ ಆರ್ಥಿಕ ಹೊರೆ ಹೆಚ್ಚಾಗುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಟೆಲಿಕಾಂ ಕಂಪನಿಗಳನ್ನ ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ‌ಕೇಂದ್ರ ಸರ್ಕಾರ ಸಮಿತಿಯೊಂದನ್ನ ರಚಿಸಿತ್ತು.

ಕಾಲ್ ದರ ನಿಗದಿಪಡಿಸಲು ಸಮಿತಿ ನೀಡಿರೋ ವರದಿಯನ್ನ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಜಿಯೋ ಹೊರತುಪಡಿಸಿ ಉಳಿದೆಲ್ಲಾ ಟೆಲಿಕಾಂ ಕಂಪನಿಗಳು ‌ನಷ್ಟದಲ್ಲಿವೆ‌‌. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಟೆಲಿಕಾಂ ಕಂಪನಿಗಳ ನೆರವಿಗೆ ಕೇಂದ್ರದ ಮೋದಿ ಸರ್ಕಾರ ನಿಲ್ಲಬೇಕಿದೆ.

Published On - 9:05 pm, Sat, 16 November 19

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ