ಸಿಕ್ಕಿಂನಲ್ಲಿ ಭೂಕುಸಿತ: 70 ಅಡಿ ಬೈಲಿ ಸೇತುವೆಯನ್ನು 72 ಗಂಟೆಗಳೊಳಗೆ ನಿರ್ಮಿಸಿದ ಭಾರತೀಯ ಸೇನೆ

ಸಂಪರ್ಕವನ್ನು ಮರುಸ್ಥಾಪಿಸಲು ಮತ್ತು ಪ್ರತ್ಯೇಕವಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಹಜ ಸ್ಥಿತಿಗೆ ತರುವುದಕ್ಕೆ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಮತ್ತು ಸ್ಥಳೀಯ ಆಡಳಿತ ಸಹಕರಿಸಿದೆ ಎಂದು ಡಿಫೆನ್ಸ್ ಪಿಆರ್‌ಒ ಹೇಳಿದ್ದು ಬೈಲಿ ಸೇತುವೆಯನ್ನು ಭಾರತೀಯ ಸೇನೆಯ ಎಂಜಿನಿಯರ್​​ಗಳು 72 ಗಂಟೆಯೊಳಗೆ ನಿರ್ಮಿಸಿದ್ದಾರೆ.

ಸಿಕ್ಕಿಂನಲ್ಲಿ ಭೂಕುಸಿತ: 70 ಅಡಿ ಬೈಲಿ ಸೇತುವೆಯನ್ನು 72 ಗಂಟೆಗಳೊಳಗೆ ನಿರ್ಮಿಸಿದ ಭಾರತೀಯ ಸೇನೆ
ಬೈಲಿ ಸೇತುವೆ
Follow us
|

Updated on: Jun 27, 2024 | 9:04 PM

ಗ್ಯಾಂಗ್‌ಟಾಕ್‌ ಜೂನ್ 27: ಸಿಕ್ಕಿಂನ ರಾಜಧಾನಿ ಗ್ಯಾಂಗ್‌ಟಾಕ್‌ನ ಡಿಕ್ಚು-ಸಂಕ್ಲಾಂಗ್ ರಸ್ತೆಯಲ್ಲಿ 70 ಅಡಿ ಬೈಲಿ ಸೇತುವೆಯನ್ನು 72 ಗಂಟೆಗಳೊಳಗೆ ಸೇನೆಯ ಎಂಜಿನಿಯರ್‌ಗಳು ನಿರ್ಮಿಸಿದ್ದಾರೆ. ರಾಜ್ಯದಲ್ಲಿ ಇತ್ತೀಚಿನ ಪ್ರವಾಹದಿಂದ ಬಹುತೇಕ ಸ್ಥಳಗಳಲ್ಲಿ ಸಂಪರ್ಕ ಕಡಿದುಹೋಗಿದ್ದು, ಭಾರತೀಯ ಸೇನೆ ಪ್ರವಾಹ ಪೀಡಿತ ಪ್ರದೇಶಗಳ ಜನರು ಸಹಜ ಸ್ಥಿತಿಗೆ ಮರಳು ಸಹಾಯ ಮಾಡುತ್ತಿದೆ. ತ್ರಿಶಕ್ತಿ ಕಾರ್ಪ್ಸ್ ಆರ್ಮಿ ಎಂಜಿನಿಯರ್‌ಗಳು ಜೂನ್ 23 ರಂದು ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು ಎಂದು ಪಿಆರ್‌ಒ ಡಿಫೆನ್ಸ್, ಗುವಾಹಟಿ ವರದಿ ಮಾಡಿದೆ ಎಂದು ಎಎನ್ಐ ತಮ್ಮ ವರದಿ ಮಾಡಿದೆ.

ಸಂಪರ್ಕವನ್ನು ಮರುಸ್ಥಾಪಿಸಲು ಮತ್ತು ಪ್ರತ್ಯೇಕವಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಹಜ ಸ್ಥಿತಿಗೆ ತರಲು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಮತ್ತು ಸ್ಥಳೀಯ ಆಡಳಿತ ಸಹಕರಿಸಿದೆ ಎಂದು ಡಿಫೆನ್ಸ್ ಪಿಆರ್‌ಒ ಹೇಳಿದ್ದಾರೆ. ದಿಕ್ಚು-ಸಂಕ್ಲಾಂಗ್ ರಸ್ತೆಯಲ್ಲಿ ಡೆಟ್ ಖೋಲಾದಲ್ಲಿ ನಿರ್ಮಿಸಲಾದ ಸೇತುವೆಯು “ಡಿಕ್ಚುದಿಂದ ಸಂಕ್ಲಾಂಗ್‌ಗೆ ಚುಂಗ್‌ಥಾಂಗ್ ಕಡೆಗೆ ವಾಹನ ಸಂಚಾರವನ್ನು ಸಕ್ರಿಯಗೊಳಿಸಲು” ಮಹತ್ವದ ಕೊಂಡಿಯಾಗಿದೆ ಎಂದು ಡಿಫೆನ್ಸ್ ಪಿಆರ್‌ಒ ಹೇಳಿದ್ದಾರೆ.

ತೀಸ್ತಾ ನದಿಯ ಸಮೀಪದಲ್ಲಿರುವ ಮಂಗನ್‌ನಲ್ಲಿ ಜೂನ್ 16 ರ ವೇಳೆಗೆ 1200 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಪೀಡಿತ ಜನರಿಗೆ ನಿರ್ಣಾಯಕ ಆರೋಗ್ಯ ರಕ್ಷಣೆಯಂತಹ ಮೂಲಭೂತ ಅವಶ್ಯಕತೆಗಳ ಸರಬರಾಜಿಗೆ ಸೇತುವೆಯು ಸಹಾಯ ಮಾಡುತ್ತದೆ.

“ಡಿಕ್ಚುದಿಂದ ಸಂಕ್ಲಾಂಗ್‌ಗೆ ಚುಂಗ್‌ಥಾಂಗ್ ಕಡೆಗೆ ವಾಹನ ಸಂಚಾರವನ್ನು ಸಕ್ರಿಯಗೊಳಿಸಲು ಸೇತುವೆಯು ಪ್ರಮುಖ ಸಂಪರ್ಕವಾಗಿದೆ. ಮಂಗನ್ ಜಿಲ್ಲೆಯ ಸಂತ್ರಸ್ತ ಜನರಿಗೆ ನಿರ್ಣಾಯಕ ವೈದ್ಯಕೀಯ ನೆರವು ಸೇರಿದಂತೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸಲು ಸೇತುವೆಯು ಸಹಾಯ ಮಾಡುತ್ತದೆ ಎಂದು ಡಿಫೆನ್ಸ್ ಪಿಆರ್‌ಒ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಸಿಕ್ಕಿಂನ ಅರಣ್ಯ ಮತ್ತು ಪರಿಸರ ಸಚಿವ ಪಿಂಟ್ಸೊ ನಮ್ಗ್ಯಾಲ್ ಲೆಪ್ಚಾ ಅವರು ಜೂನ್ 27 ರಂದು ಸ್ಥಳಕ್ಕೆ ಭೇಟಿ ನೀಡಿದ್ದು ಸೇತುವೆಯನ್ನು ತ್ವರಿತ ವೇಗದಲ್ಲಿ ಪೂರ್ಣಗೊಳಿಸುವಲ್ಲಿ ಭಾರತೀಯ ಸೇನೆಯ ಪ್ರಯತ್ನಗಳನ್ನು ಶ್ಲಾಘಿಸಿದರು.

ಇದನ್ನೂ ಓದಿ: ಶ್ರೀಲಂಕಾದ ವಶದಲ್ಲಿ ತಮಿಳುನಾಡು ಮೀನುಗಾರರು; ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಜೈಶಂಕರ್ ಭರವಸೆ

ಉತ್ತರ ಸಿಕ್ಕಿಂನಲ್ಲಿ ನಿರಂತರ ಮಳೆಯಿಂದಾಗಿ ಅನೇಕ ಭೂಕುಸಿತಗಳು ಪ್ರದೇಶದ ರಸ್ತೆ ಸಂಪರ್ಕದ ಮೇಲೆ ಪರಿಣಾಮ ಬೀರಿವೆ. ಉತ್ತರ ಸಿಕ್ಕಿಂಗೆ ಹೋಗುವ ರಸ್ತೆಗಳಾದ ದಿಕ್ಚು-ಸಂಕ್ಲಾಂಗ್-ತೂಂಗ್, ಮಂಗನ್-ಸಂಕ್ಲಾಂಗ್, ಸಿಂಗ್ತಾಮ್-ರಂಗಂಗ್, ಮತ್ತು ರಂಗ್ರಾಂಗ್-ತೂಂಗ್ ಜೂನ್ 11 ರಿಂದ ಮಳೆಯಿಂದಾಗಿ ಕೊಚ್ಚಿ ಹೋಗಿವೆ.

ತ್ರಿಶಕ್ತಿ ಕಾರ್ಪ್ಸ್‌ನ ಭಾರತೀಯ ಸೇನಾ ಎಂಜಿನಿಯರ್‌ಗಳು ಉತ್ತರ ಸಿಕ್ಕಿಂನ ಗಡಿ ಗ್ರಾಮಗಳಲ್ಲಿ ಸಂಪರ್ಕವನ್ನು ಪುನಃಸ್ಥಾಪಿಸಲು ಜೂನ್ 23 ರಂದು ಮೊದಲು 150 ಅಡಿ ತೂಗು ಸೇತುವೆಯನ್ನು ನಿರ್ಮಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ