AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾಂ ಈಶಾನ್ಯ: ಸೀರೆ ತೊಟ್ಟು ಶಾಲೆಗೆ ಬಂದ ಭಾರತದ ಮೊದಲ ಎಐ ಶಿಕ್ಷಕಿ

ಸಾಂಪ್ರದಾಯಿಕವಾಗಿ ಸೀರೆಯನ್ನು ತೊಟ್ಟ ಭಾರತದ ಮೊದಲ ಕೃತಕ ಬುದ್ಧಿಮತ್ತೆ(AI) ಶಿಕ್ಷಕಿಯನ್ನು ಪರಿಚಯಿಸಲಾಗಿದೆ. ಇದೀಗ ಈ ಎಐ ಶಿಕ್ಷಕಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ತಕ್ಷಣವೇ ಉತ್ತರ ನೀಡುತ್ತಿದೆ. ಈ ಎಐ ಶಿಕ್ಷಕಿಯನ್ನು ಗುವಾಹಟಿಯ ಖಾಸಗಿ ಶಾಲೆಯಲ್ಲಿ ಮೊದಲ ಬಾರಿಗೆ ಪ್ರಯೋಗ ಮಾಡಲಾಗಿದೆ.

ಅಸ್ಸಾಂ ಈಶಾನ್ಯ: ಸೀರೆ ತೊಟ್ಟು ಶಾಲೆಗೆ ಬಂದ ಭಾರತದ ಮೊದಲ ಎಐ ಶಿಕ್ಷಕಿ
ಅಕ್ಷಯ್​ ಪಲ್ಲಮಜಲು​​
|

Updated on: May 31, 2024 | 3:55 PM

Share

ಶಿಕ್ಷಣಕ್ಕೂ ಕಾಲಿಟ್ಟಿದೆ ಎಐ ತಂತ್ರ, ಹೌದು ಅಸ್ಸಾಂ ಮತ್ತು ಈಶಾನ್ಯ ಭಾಗದಲ್ಲಿ ಸಾಂಪ್ರದಾಯಿಕವಾಗಿ ಸೀರೆಯನ್ನು ತೊಟ್ಟ ಭಾರತದ ಮೊದಲ ಕೃತಕ ಬುದ್ಧಿಮತ್ತೆ(AI) ಶಿಕ್ಷಕಿಯನ್ನು ಪರಿಚಯಿಸಲಾಗಿದೆ, ಇದೀಗ ಈ ಎಐ ಶಿಕ್ಷಕಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ತಕ್ಷಣವೇ ಉತ್ತರ ನೀಡುತ್ತಿದೆ. ಈ ಎಐ ಶಿಕ್ಷಕಿಯನ್ನು ಗುವಾಹಟಿಯ ಖಾಸಗಿ ಶಾಲೆಯಲ್ಲಿ ಮೊದಲ ಬಾರಿಗೆ ಪ್ರಯೋಗ ಮಾಡಲಾಗಿದೆ. ವಿದ್ಯಾರ್ಥಿಗಳು ಹಿಮೋಗ್ಲೋಬಿನ್ ಎಂದರೇನು? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ವಿವರಗಳೊಂದಿಗೆ ವಿದ್ಯಾರ್ಥಿಗಳಿಗೆ ಈ ಎಐ ಶಿಕ್ಷಕಿ ಉತ್ತರಿಸಿದ್ದಾರೆ.

ಪ್ರಶ್ನೆಗಳು ಪಠ್ಯಕ್ರಮದಿಂದ ಅಥವಾ ಯಾವುದರ ಬಗ್ಗೆ ಇರಲಿ ಯಾವುದೇ ಸಮಯದಲ್ಲಿ ಮತ್ತು ಉದಾಹರಣೆಗಳು ಹಾಗೂ ಉಲ್ಲೇಖಗಳೊಂದಿಗೆ ಉತ್ತರವನ್ನು ಎಐ ಶಿಕ್ಷಕಿ ನೀಡುತ್ತಾರೆ ಎಂದು ಅಲ್ಲಿನ ಶಿಕ್ಷಕರೊಬ್ಬರು ಹೇಳಿದ್ದಾರೆ. ವಿದ್ಯಾರ್ಥಿಗಳು ಕೂಡ ತುಂಬಾ ಆಸಕ್ತಿಯಿಂದ ಎಐ ಶಿಕ್ಷಕಿಯನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು ಶಾಲೆಗೆ ಮೊದಲು ಬಾರಿ ಈ ಎಐ ಶಿಕ್ಷಕಿ ಬಂದ ಕಾರಣ ವಿದ್ಯಾರ್ಥಿಗಳು ಭಯಗೊಂಡಿದ್ದಾರೆ. ಹ್ಯಾಂಡ್‌ಶೇಕ್‌ ಮಾಡುವುದು ಇಂತಹ ಅನೇಕ ಸನ್ನೆಗಳನ್ನು ಈ ಎಐ ಶಿಕ್ಷಕಿ ಮಾಡುವುದನ್ನು ಕಂಡು ವಿದ್ಯಾರ್ಥಿಗಳು ಅಚ್ಚರಿಪಟ್ಟಿದ್ದಾರೆ. ಇನ್ನು ಎಐ ಶಿಕ್ಷಕಿ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಹಾಗೂ ತುಂಬಾ ಲವಲವಿಯಿಂದ ಮಕ್ಕಳ ಜತೆಗೆ ಸಮಯ ಕಳೆಯುತ್ತಿದೆ ಎಂದು ಹೇಳಲಾಗಿದೆ.

ಈ ಎಐ ಶಿಕ್ಷಕಿ ಧ್ವನಿ-ನಿಯಂತ್ರಿತ ಸಹಾಯಕವನ್ನು ಹೊಂದಿದ್ದು ಅದು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಸಹಾಯ ಮಾಡುತ್ತದೆ. ಮತ್ತು ಉತ್ತರ ಜತೆಗೆ ವಿವರಣೆಯನ್ನು ನೀಡುತ್ತದೆ. ಮಕ್ಕಳು ಇದರಿಂದ ತುಂಬಾ ಉತ್ಸಾಹಿಗಳಾಗಿದ್ದಾರೆ. ಹಾಗೂ ಎಐ ಶಿಕ್ಷಕಿ ಎಲ್ಲದಕ್ಕೂ ಉತ್ತರ ನೀಡುತ್ತಾರೆ ಎಂದು ಶಿಕ್ಷಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಯುವತಿ ಮೇಲೆ ಅತ್ಯಾಚಾರವೆಸಗಿ, ಮದುವೆ ದಿನ ಆಕೆಯನ್ನು ಅಪಹರಿಸಲು ಯತ್ನಿಸಿದ ಯುವಕ

NITI ಆಯೋಗ್ ಪ್ರಾರಂಭಿಸಿದ ಅಟಲ್ ಟಿಂಕರಿಂಗ್ ಲ್ಯಾಬ್ (ATL) ಯೋಜನೆಯಡಿಯಲ್ಲಿ ಮೇಕರ್‌ಲ್ಯಾಬ್ಸ್ ಎಜು-ಟೆಕ್ ಸಹಯೋಗದೊಂದಿಗೆ ಈ ಎಐಯನ್ನು ಅಭಿವೃದ್ಧಿ ಮಾಡಲಾಗಿದೆ. ಶಿಕ್ಷಕರು ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಲಿಕೆಯ ಅನುಭವವನ್ನು ಹೆಚ್ಚಿಸುವಲ್ಲಿ ಮತ್ತು ವಿದ್ಯಾರ್ಥಿಗಳ ವೈವಿಧ್ಯಮಯ ಕಲಿಕಾ ಶೈಲಿಗಳನ್ನು ಪೂರೈಸುವಲ್ಲಿ ಮಹತ್ವದ ಮೈಲಿಗಲ್ಲನ್ನು ಹೊಂದಿದೆ ಎಂದು ಹೇಳಿದರು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ