Sign In

By signing in or creating an account, you agree with Associated Broadcasting Company's Terms & Conditions and Privacy Policy.

Monkeypox VS Covid 19: ಮಂಕಿಪಾಕ್ಸ್​ ಹಾಗೂ ಕೋವಿಡ್-19 ನಡುವೆ ಸಾಮ್ಯತೆ ಇದೆಯೇ?

ಕೋವಿಡ್ ಬಳಿಕ ಇದೀಗ ಮಂಕಿಪಾಕ್ಸ್​ (Monkeypox) ಎಂಬುದು ಇಡೀ ವಿಶ್ವವನ್ನೇ ಮತ್ತೆ ಹೆದರುವಂತೆ ಮಾಡುತ್ತಿದೆ. ಕೊರೊನಾ(Corona) ಭಯದಿಂದ ಇನ್ನೂ ಜನತೆ ಹೊರಬರಲು ಸಾಧ್ಯವಾಗುತ್ತಿಲ್ಲ,

Monkeypox VS Covid 19: ಮಂಕಿಪಾಕ್ಸ್​  ಹಾಗೂ ಕೋವಿಡ್-19 ನಡುವೆ ಸಾಮ್ಯತೆ ಇದೆಯೇ?
Monkey Pox VS Covid 19
Follow us
TV9 Web
| Updated By: ನಯನಾ ರಾಜೀವ್

Updated on:Jul 25, 2022 | 2:45 PM

ಕೋವಿಡ್ ಬಳಿಕ ಇದೀಗ ಮಂಕಿಪಾಕ್ಸ್​ (Monkeypox) ಎಂಬುದು ಇಡೀ ವಿಶ್ವವನ್ನೇ ಮತ್ತೆ ಹೆದರುವಂತೆ ಮಾಡುತ್ತಿದೆ. ಕೊರೊನಾ(Corona) ಭಯದಿಂದ ಇನ್ನೂ ಜನತೆ ಹೊರಬರಲು ಸಾಧ್ಯವಾಗುತ್ತಿಲ್ಲ, ಅದರ ನಡುವೆ ಮಂಕಿಪಾಕ್ಸ್​ ಮತ್ತೆ ಜನರ ನಿದ್ದೆಗೆಡಿಸಿದ್ದು, ನಿದ್ರೆಯಲ್ಲೂ ಕನವರಿಸುವಂತೆ ಮಾಡಿ ಭಾರತವೂ ಸೇರಿದಂತೆ ಜಗತ್ತಿನ ಅನೇಕ ದೇಶಗಳನ್ನು ಕಾಡುತ್ತಿರುವ ಮಂಕಿಪಾಕ್ಸ್ ಸೋಂಕನ್ನು ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ತುರ್ತುಪರಿಸ್ಥಿತಿಯನ್ನು ಈಗಾಗಲೇ ಘೋಷಿಸಿದೆ.

ಹಾಗೆಯೇ ಇದುವರೆಗೆ 70 ದೇಶಗಳಿಂದ 16,000 ಪ್ರಕರಣಗಳು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ. ಮಂಕಿಪಾಕ್ಸ್ ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿದೆ. ಅನೇಕ ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಮಾಡಿದ್ದಾರೆ.

ಈ ಮೂಲಕ ಮಂಕಿಪಾಕ್ಸ್ ಸೋಂಕನ್ನು ಅಪಾಯಕಾರಿ ಎಂಬ ಎಚ್ಚರಿಕೆ ಗಂಟೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮೊಳಗಿಸಿದೆ. 70ಕ್ಕೂ ಹೆಚ್ಚು ದೇಶಗಳಲ್ಲಿ ಮಂಕಿಪಾಕ್ಸ್ ಪಿಡುಗು ಹರಡಿಕೊಂಡಿದ್ದು, ಇದನ್ನು ಅಸಾಧಾರಣ ಸನ್ನಿವೇಶ ಎಂದು ಡಬ್ಲ್ಯೂಎಚ್‌ಒ ಪರಿಗಣಿಸಿದೆ.

ಮಂಕಿಪಾಕ್ಸ್ VS ಕೋವಿಡ್: ಎರಡೂ ವೈರಸ್​ಗಳ ಕುರಿತು ಮಾಹಿತಿ ಕೋವಿಡ್ 19 ಹಾಗೂ ಮಂಕಿಪಾಕ್ಸ್ ಎರಡೂ ಕೂಡ ವಿಭಿನ್ನ ವೈರಸ್ ಆಗಿದ್ದು, ಕೊರೊನಾವೈರಸ್​ನಿಂದ ಸಾರ್ಸ್​ ಕೋವ್-2ನಿಂದ ಹರಡಿದರೆ, ಮಂಕಿಪಾಕ್ಸ್ ಆರ್ಥೋಪಾಕ್ಸ್​ವೈರಸ್​ನಿಂದ ಹರಡುವಂಥದ್ದಾಗಿದೆ.

SARS-CoV-2 ಒಂದು ಹೊಸ ಸ್ಟ್ರೈನ್ ಆಗಿದ್ದು ಅದು ಗಾಳಿಯ ಮೂಲಕ ಹರಡುತ್ತದೆ ಮತ್ತು ಶ್ವಾಸಕೋಶಗಳು ಮತ್ತು ಇತರ ಅಂಗಗಳ ಮೇಲೆ ದಾಳಿ ಮಾಡುತ್ತದೆ.

ಈ ಪಿಡುಗನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು ವರ್ಗೀಕರಿಸಬೇಕೇ ಎಂದು ಮಂಕಿಪಾಕ್ಸ್ ಪರಿಣತರು ಚರ್ಚೆ ನಡೆಸಿದ್ದರು. ಪರಿಣತರ ಸಮಿತಿಯು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧಾನೊಮ್ ಅವರಿಗೆ ಸಲಹೆ ರವಾನಿಸಿತ್ತು.

ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಟೆಡ್ರೋಸ್ ಅವರ ಹೊಣೆಗಾರಿಕೆಯಾಗಿತ್ತು. ಇದೀಗ ಮಂಕಿಪಾಕ್ಸ್ ಸಾಂಕ್ರಾಮಿಕವನ್ನು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತುಪರಿಸ್ಥಿತಿ ಎಂದು ಘೋಷಿಸಿದೆ.

ಮಂಕಿಪಾಕ್ಸ್​, ಕೋವಿಡ್ 19 ಲಕ್ಷಣಗಳೇನು? ಕೋವಿಡ್ ಲಕ್ಷಣಗಳು: ಚಳಿ, ಜ್ವರ, ಉಸಿರಾಟದ ಸಮಸ್ಯೆ, ಕಫ, ಕೆಮ್ಮು, ತಲೆ ನೋವು, ಮೈಕೈ ನೋವು, ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುವುದು, ಗಂಟಲು ನೋವು, ವಾಕರಿಕೆ.

ಮಂಕಿಪಾಕ್ಸ್ ಲಕ್ಷಣಗಳು: ಮಂಕಿಪಾಕ್ಸ್​ ಸೋಂಕಿತರಲ್ಲಿ ಜ್ವರ, ಮೈಕೈ ತುರಿಕೆ, ಚಳಿ, ದೇಹದಲ್ಲಿ ದದ್ದುಗಳು ಕಾಣಿಸಿಕೊಳ್ಳುವುದು, ಈ ಗುಳ್ಳೆಗಳು ನೋವನ್ನು ಉಂಟು ಮಾಡಬಹುದು. ಇದು ವಾರಗಳ ಕಾಲ ಇರಲಿದೆ.

ಮಂಕಿಪಾಕ್ಸ್ ಹಾಗೂ ಕೋವಿಡ್ ಹರಡುವ ಬಗೆ ಕೊರೊನಾ ಸೋಂಕಿತರ ನಿಕಟ ಸಂಪರ್ಕದಲ್ಲಿರುವವರಿಗೆ ಸೋಂಕು ಹರಡುತ್ತದೆ, ಹಾಗೆಯೇ ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಎಂಜಿಲು, ಕೆಮ್ಮು, ಉಸಿರಿನಿಂದಲೂ ಹರಡಬಹುದು.

ಆದರೆ ಮಂಕಿಪಾಕ್ಸ್ ಚರ್ಮರೋಗದಂತಿದ್ದು, ಚರ್ಮ ಚರ್ಮ ತಾಕಿದಾಗ ಸೋಂಕು ಹರಡುತ್ತದೆ. ಪುರುಷ ಪುರುಷನೊಂದಿಗೆ ಲೈಂಗಿಕ ಸಂಪರ್ಕ ಬೆಳಸಿದಾಗ ಸೋಂಕು ಹರಡುತ್ತದೆ ಎಂದು ಹೇಳಲಾಗಿದೆ.

ಚಿಕಿತ್ಸೆ ಇದೆಯೇ? SARS-CoV-2 ಅನ್ನು ಎದುರಿಸಲು ವಿಶ್ವವು ಸುಮಾರು ಒಂದು ವರ್ಷವನ್ನು ತೆಗೆದುಕೊಂಡಿತು. ಈ ಸಮಯದಲ್ಲಿ, Covid-19 ಪ್ರಪಂಚದಾದ್ಯಂತ ವಿಪತ್ತಿಗೆ ಕಾರಣವಾಯಿತು, ಲಕ್ಷಾಂತರ ಜನರ ಸಾವಿಗೆ ಕಾರಣವಾಯಿತು. ಮಂಕಿಪಾಕ್ಸ್​ ಕೂಡ ದಶಕಗಳಿಂದ ನಮ್ಮ ನಡುವಿದ್ದು, ಲಸಿಕೆಯನ್ನು ಕಂಡು ಹಿಡಿಯುತ್ತಿದ್ದಾರೆ. ಮಂಕಿಪಾಕ್ಸ್​ ಸೋಂಕಿತರಿಗೆ ಸ್ಮಾಲ್​ ಪಾಕ್ಸ್​ಗೆ ನೀಡುವ ಲಸಿಕೆಯನ್ನೇ ನೀಡಲಾಗುತ್ತದೆ.

Published On - 2:43 pm, Mon, 25 July 22