ಇಸ್ರೋದಿಂದ ಕ್ವಾಂಟಂ ತಂತ್ರಜ್ಞಾನ ಆಧಾರಿತ ಮಾಹಿತಿ ಹಂಚಿಕೆ ಪ್ರಾತ್ಯಕ್ಷಿಕೆ; ದೇಶದಲ್ಲಿ ಇದೇ ಮೊದಲು
ಈ ಪ್ರಯೋಗವು ಅತ್ಯಂತ ಪ್ರಮುಖವಾದದ್ದು ಏಕೆಂದರೆ, ಭವಿಷ್ಯದಲ್ಲಿ ಉಪಗ್ರಹಗಳು ಮತ್ತು ಭೂಮಿ ಮೇಲಿನ ಕೇಂದ್ರದ ಮಧ್ಯೆ ಕ್ವಾಂಟಂ ಕೀ ಎನ್ಕ್ರಿಪ್ಟೆಡ್ ಡೇಟಾ ಟ್ರಾನ್ಸ್ಮಿಷನ್ಗೆ ಈ ಪ್ರಯೋಗವು ಆಧಾರವಾಗಲಿದೆ. ಉಪಗ್ರಹ ಆಧಾರಿತ ಕ್ವಾಂಟಂ ಎನ್ಕ್ರಿಪ್ಟೆಡ್ ಸಂವಹನ ಬಳಸಿಕೊಂಡು, ರಹಸ್ಯ ಸಂದೇಶಗಳನ್ನು ಹಂಚಿಕೊಳ್ಳುವುದಕ್ಕೆ ಜಾಲವನ್ನು (ನೆಟ್ವರ್ಕ್) ರೂಪಿಸಬಹುದಾಗಿದೆ.
ಅಹಮದಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ಸೋಮವಾರ 300 ಮೀಟರ್ಗಳ ಮುಕ್ತ ಕ್ವಾಂಟಂ ಮಾಹಿತಿ ಹಂಚಿಕೆಯ ಪ್ರಾತ್ಯಕ್ಷಿಕೆ ನಡೆಯಿತು. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಯೋಗ ನಡೆಯಿತು. ಈ ಪ್ರಾತ್ಯಕ್ಷಿಕೆಯಲ್ಲಿ ಅಹ್ಮದಾಬಾದ್ನಲ್ಲಿ ಇರುವ ಸ್ಪೇಸ್ ಅಪ್ಲಿಕೇಷನ್ ಕೇಂದ್ರದ ಎರಡು ಲೈನ್-ಆಫ್-ಸೈಟ್ ಕಟ್ಟಡದ ಮಧ್ಯೆ ಕ್ವಾಂಟಂನ ಎನ್ಕ್ರಿಪ್ಟೆಡ್ ಮುಖ್ಯ ಸಂದೇಶಗಳ ಜತೆಗೆ ನೇರ ವಿಡಿಯೋ ಕಾನ್ಫರೆನ್ಸಿಂಗ್ ಕೂಡ ಇತ್ತು. ಈ ಪ್ರಯೋಗವು ಅತ್ಯಂತ ಪ್ರಮುಖವಾದದ್ದು ಏಕೆಂದರೆ, ಭವಿಷ್ಯದಲ್ಲಿ ಉಪಗ್ರಹಗಳು ಮತ್ತು ಭೂಮಿ ಮೇಲಿನ ಕೇಂದ್ರದ ಮಧ್ಯೆ ಕ್ವಾಂಟಂ ಕೀ ಎನ್ಕ್ರಿಪ್ಟೆಡ್ ಡೇಟಾ ಟ್ರಾನ್ಸ್ಮಿಷನ್ಗೆ ಈ ಪ್ರಯೋಗವು ಆಧಾರವಾಗಲಿದೆ. ಉಪಗ್ರಹ ಆಧಾರಿತ ಕ್ವಾಂಟಂ ಎನ್ಕ್ರಿಪ್ಟೆಡ್ ಸಂವಹನ ಬಳಸಿಕೊಂಡು, ರಹಸ್ಯ ಸಂದೇಶಗಳನ್ನು ಹಂಚಿಕೊಳ್ಳುವುದಕ್ಕೆ ಜಾಲವನ್ನು (ನೆಟ್ವರ್ಕ್) ರೂಪಿಸಬಹುದಾಗಿದೆ.
ಕ್ವಾಂಟಂ ತಂತ್ರಜ್ಞಾನ ಬಳಸಿಕೊಂಡು ರಾಜಿಯಾಗದಂಥ ಸುರಕ್ಷಿತ ಉಪಗ್ರಹ ಡೇಟಾ ಸಂವಹನಕ್ಕೆ ಇದು ತುಂಬ ಪ್ರಮುಖವಾದ ಸಾಧನೆಯ ಮೈಲುಗಲ್ಲಾಗಿದೆ ಎಂದು ಇಸ್ರೋ ಹೇಳಿದೆ. ಕ್ವಾಂಟಂ ಕ್ರಿಪ್ಟೋಗ್ರಫಿ ಎಂಬುದು ಭವಿಷ್ಯಕ್ಕೆ ಸಾಕ್ಷ್ಯವಾಗಿದ್ದು, ಯಾವುದೇ ಡೇಟಾ ಟ್ರಾನ್ಸ್ಮಿಷನ್ ಕೂಡ ಎನ್ಕ್ರಿಪ್ಷನ್ ಆದ ಮೇಲೆ ಸದ್ಯಕ್ಕಿರುವ ಕಂಪ್ಯೂಟರ್ಗಳಿಂದ ಭೇದಿಸುವುದಕ್ಕೆ ಸಾಧ್ಯವಿಲ್ಲ. ಈಗಿರುವ ಡೇಟಾ ಭದ್ರತೆಯು ಬ್ಯಾಂಕಿಂಗ್ನಂಥ ಸೂಕ್ಷ್ಮ ಮಾಹಿತಿಗೆ ಪ್ರೈಮ್ ಫ್ಯಾಕ್ಟರೈಸೇಷನ್ ಸಮಸ್ಯೆಯಿದೆ. ಈಗಿರುವ ಕಂಪ್ಯೂಟರ್ಗಳು ಪ್ರೈಮ್ ಫ್ಯಾಕ್ಟರ್ 6 ಆಗಿದ್ದು 2 ಮತ್ತು 3 ಹೇಳಬಲ್ಲದು. ಆದರೆ ಈ ತನಕ ದೊಡ್ಡ ಸಂಖ್ಯೆ ಹೇಳಲು ಸಾಧ್ಯವಾಗಿಲ್ಲ.
ಇದಕ್ಕಾಗಿ ಕ್ವಾಂಟಂ ಕಂಪ್ಯೂಟರ್ಸ್ ಅಗತ್ಯವಿದೆ. ಇದನ್ನು ಹೇಗೆ ಅಭಿವೃದ್ಧಿ ಪಡಿಸುವುದು ಎಂಬ ಬಗ್ಗೆ ಯಾವ ದೇಶವೂ ದಾರಿ ಕಂಡುಕೊಂಡಿಲ್ಲ. ಆದರೆ ಅವರೆಲ್ಲರೂ ಆ ಓಟದಲ್ಲಿದ್ದಾರೆ. ನಮ್ಮ ಸುತ್ತ ಇರುವ ಕಂಪ್ಯೂಟರ್ಗಳು ಸಿಲಿಕಾನ್ ಟ್ರಾನ್ಸಿಸ್ಟರ್ಸ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬಿಟ್ಸ್ನಲ್ಲಿ ಮಾಹಿತಿ ಸಂಗ್ರಹಿಸುತ್ತದೆ. ಆದರೆ ಕ್ವಾಂಟಂ ಕಂಪ್ಯೂಟರ್ಗಳು ಕ್ಯುಬಿಟ್ಸ್ ಬಳಸುತ್ತವೆ. ಅದು ಪ್ರೋಟಾನ್ ಅಥವಾ ಎಲೆಕ್ಟ್ರಾನ್- ಅದು , 1 ಅಥವಾ ಯಾವುದೇ ಅದ್ಭುತ ಸಂಯೋಜನೆಯಾದ 0 ಮತ್ತು 1 ಆಗಿರುತ್ತದೆ. ಇದೀಗ ಇಸ್ರೋ ಭಾರತದ ಎರಡು ಕೇಂದ್ರದ ಮಧ್ಯೆ ತಂತ್ರಜ್ಞಾನ ಪ್ರಾತ್ಯಕ್ಷಿಕೆ ನೀಡಿದೆ.
NavIC ರಿಸೀವರ್ ಟ್ರಾನ್ಮಿಟರ್ ಮತ್ತು ರಿಸೀವರ್ ಮಾಡ್ಯುಲ್ (ಮಾದರಿ)ಗಳ ಸಮಯ ಹೊಂದಾಣಿಕೆ ಸೇರಿದಂತೆ ಹಲವಾರು ಮುಖ್ಯ ತಂತ್ರಜ್ಞಾನಗಳನ್ನು ದೇಶೀಯವಾಗಿ ಪ್ರಾತ್ಯಕ್ಷಿಕೆಗೆ ಅಭಿವೃದ್ಧಿಪಡಿಸಲಾಗಿದೆ. NavIC ಅಥವಾ ನೇವಿಗೇಷನ್ ವಿಥ್ ಇಂಡಿಯನ್ ಕಾನ್ಸ್ಟಲೇಷನ್ ಎಂಬುದು ಭಾರತದ ಪ್ರಾದೇಶೀಕ ಮಾದಿಯ ಉಪಗ್ರಹ ಆಧಾರಿತ ಪೊಸಿಷನಿಂಗ್ ಸಿಸ್ಟಮ್.
Published On - 10:55 pm, Tue, 23 March 21