AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸಗೊಬ್ಬರ ದರ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯಕ್ಕೆ ಬ್ರೇಕ್​; ಆದರೆ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ನಿಶ್ಚಿತ

ಈಗಾಗಲೇ ತಯಾರಿಸಲಾಗಿರುವ 11.26 ಲಕ್ಷ ಟನ್​ ರಸಗೊಬ್ಬರ ಹಳೇ ದರದಲ್ಲಿಯೇ ಮಾರಾಟವಾಗಲಿದೆ. ಆದರೆ, ಗೊಬ್ಬರದ ಚೀಲಗಳ ಮೇಲೆ ಮಾತ್ರ ಹೊಸ ದರ ಮುದ್ರಿತವಾಗಿದೆ. ಅದು ರೈತರಿಗೆ ಮಾರಾಟ ಮಾಡುವ ದರ ಅಲ್ಲ: ಇಪ್ಕೋ ಸಿಇಓ ಯು.ಎಸ್.ಅವಸ್ಥಿ

ರಸಗೊಬ್ಬರ ದರ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯಕ್ಕೆ ಬ್ರೇಕ್​; ಆದರೆ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ನಿಶ್ಚಿತ
ಸಂಗ್ರಹ ಚಿತ್ರ
Skanda
| Edited By: |

Updated on: Apr 10, 2021 | 11:36 AM

Share

ಮುಂಗಾರು ಸಮೀಪಿಸಿ ಕೃಷಿ ಚಟುವಟಿಕೆಗಳು ಗರಿಗೆದರುವ ಸಂದರ್ಭ ಸನ್ನಿಹಿತವಿದ್ದಾಗಲೇ ರೈತರಿಗೆ ಅಹಿತಕರವಾಗಿ ರಸಗೊಬ್ಬರ ಬೆಲೆಯನ್ನು ಏರಿಸಿದ್ದ ಭಾರತೀಯ ರೈತರ ರಸಗೊಬ್ಬರ ಸಹಕಾರ ನಿಗಮವು (IFFCO) ಕೇಂದ್ರ ಸರ್ಕಾರ ಕಿವಿ ಹಿಂಡಿದ ಮೇಲೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಯೂರಿಯಾ ಹೊರತಾಗಿ ರಸಗೊಬ್ಬರವಾದ ಡಿ-ಅಮೋನಿಯಂ ಫಾಸ್ಪೇಟ್ (DAP) ಹಾಗೂ ಎನ್​ಪಿಕೆ ಸೇರಿದಂತೆ ಇನ್ನಿತರ ರಸಗೊಬ್ಬರಗಳ ಬೆಲೆ ಏರಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರವು ರಸಗೊಬ್ಬರ ಮಾರಾಟ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ ಬೆಲೆ ಹೆಚ್ಚಿಸದಿರಲು ಸೂಚಿಸಿದೆ. ಇದಕ್ಕೆ ಸಂಸ್ಥೆಗಳು ಒಪ್ಪಿಕೊಂಡಿವೆ ಎನ್ನಲಾಗಿದ್ದು ಸದ್ಯ ಹಿಂದಿನ ದರದಲ್ಲೇ ರಸಗೊಬ್ಬರ ಮಾರಾಟ ಮುಂದುವರೆಯಲಿದೆ.

ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಅತಿ ಹೆಚ್ಚು ಬಳಕೆಯಾಗುವ ಡಿಎಪಿ, ಎನ್​ಪಿಕೆ, ಎಂಓಪಿ ಮುಂತಾದ ರಸಗೊಬ್ಬರಗಳ ಬೆಲೆಯನ್ನು ಕೇಂದ್ರ ಸರ್ಕಾರ ತನ್ನ ನಿಯಂತ್ರಣದಿಂದ ಈಗಾಗಲೇ ಮುಕ್ತಗೊಳಿಸಿದೆಯಾದರೂ ಸಂಸ್ಥೆಗಳಿಗೆ ಸಬ್ಸಿಡಿ ನೀಡುವುದು ಮುಂದುವರೆಸಿಕೊಂಡು ಬಂದಿದೆ. ಸಬ್ಸಿಡಿ ಮೊತ್ತ ಪಡೆಯುವ ಸಂಸ್ಥೆಗಳು ನಂತರ ರೈತರಿಗೆ ರಸಗೊಬ್ಬರವನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ. ಈ ವ್ಯವಸ್ಥೆ ಇನ್ನೂ ಮುಂದುವರಿದುಕೊಂಡು ಬಂದಿದೆ.

ಆದರೆ, ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಹಾಗೂ ಸ್ಥಳೀಯ ಮಟ್ಟದಲ್ಲಿ ಕಚ್ಛಾವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ ಎಂದು ಹೇಳಿರುವ ರಸಗೊಬ್ಬರ ಸಂಸ್ಥೆಗಳು ದರ ಹೆಚ್ಚಳ ಮಾಡಲು ನಿರ್ಧರಿಸಿದ್ದವು. ಬೇರೆ ಬೇರೆ ರಸಗೊಬ್ಬರಗಳಿಗೆ 50 ಕೆಜಿಗೆ ಸುಮಾರು ₹200ರಿಂದ ₹700ರವರೆಗೆ ಏರಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಸಗೊಬ್ಬರ ಕಂಪೆನಿಗಳ ಜೊತೆ ಮಾತುಕತೆ ನಡೆಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನಸುಖ್​ ಮಾಂಡವೀಯ ಈ ಹಿಂದೆ ನಿಗದಿಪಡಿಸಿದ್ದ ಹಳೇ ದರದಲ್ಲಿಯೇ ಮಾರಾಟ ಮಾಡುವಂತೆ ಸೂಚನೆ ನೀಡಿದ್ದಾರೆ.

ರಸಗೊಬ್ಬರ ಹಳೇ ದರದಲ್ಲಿಯೇ ಮಾರಾಟ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಹಳೇ ದರದಲ್ಲಿಯೇ ರಸಗೊಬ್ಬರ ಮಾರಾಟ ಮಾಡುವುದಕ್ಕೆ ಕಂಪೆನಿಗಳು ಒಪ್ಪಿವೆ. ಹೀಗಾಗಿ ರೈತರಿಗೆ ಯಾವುದೇ ಹೆಚ್ಚಿನ ಹೊರೆ ಬೀಳುವುದಿಲ್ಲ. ಈ ಹಿಂದಿದ್ದ ದರವನ್ನು ನೀಡಿ ರಸಗೊಬ್ಬರ ಪಡೆಯಬಹುದು ಎಂದು ತಿಳಿಸಿದ್ದಾರೆ. ಅಲ್ಲದೇ ಇದೇ ವಿಷಯದ ಕುರಿತು ಟ್ವೀಟ್ ಮಾಡಿರುವ ಇಪ್ಕೋ ಸಿಇಓ ಯು.ಎಸ್.ಅವಸ್ಥಿ, ನಮ್ಮ ಕಂಪೆನಿ ವತಿಯಿಂದ ಈಗಾಗಲೇ ತಯಾರಿಸಲಾಗಿರುವ 11.26 ಲಕ್ಷ ಟನ್​ ರಸಗೊಬ್ಬರ ಹಳೇ ದರದಲ್ಲಿಯೇ ಮಾರಾಟವಾಗಲಿದೆ. ಆದರೆ, ಗೊಬ್ಬರದ ಚೀಲಗಳ ಮೇಲೆ ಮಾತ್ರ ಹೊಸ ದರ ಮುದ್ರಿತವಾಗಿದೆ. ಅದು ರೈತರಿಗೆ ಮಾರಾಟ ಮಾಡುವ ದರ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಂತೆಯೇ, ಶುಕ್ರವಾರ ಸಂಜೆಯ ವೇಳೆಗೆ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಕಳೆದ 2020-21ರ ಸಾಲಿನಲ್ಲಿ ರಸಗೊಬ್ಬರಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನೇ ಈ ಬಾರಿ ಮುಂದುವರೆಸಲಾಗುವುದು ಎಂದು ತಿಳಿಸಿದೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಗೊಬ್ಬರ ಉದ್ಯಮದ ಪರಿಣಿತರು, ಜಾಗತಿಕ ಮಟ್ಟದಲ್ಲಿ ರಸಗೊಬ್ಬರ ದರ ಏರುತ್ತಿದ್ದರೂ ಸರ್ಕಾರ ಹಳೆಯ ಸಬ್ಸಿಡಿ ದರ ನೀಡುವುದಾಗಿ ಹೇಳುತ್ತಿದೆ. ಇನ್ನೊಂದೆಡೆ ರೂಪಾಯಿ ಮೌಲ್ಯ ಸಹ ಕುಸಿಯುತ್ತಿದ್ದು ಅಡ್ಡಪರಿಣಾಮ ಬೀರುತ್ತಿದೆ. ಪರಿಸ್ಥಿತಿ ಹೀಗಿರುವಾಗ ರಸಗೊಬ್ಬರದ ದರದ ಮೇಲೆ ಇದು ಸಹಜವಾಗಿ ಪರಿಣಾಮ ಬೀರಲಿದೆ ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ದರ ಏರುವ ಮುನ್ಸೂಚನೆ ನೀಡಿದ್ದಾರೆ.

(Union government says agricultural fertilizer will be sold for old price)

ಇದನ್ನೂ ಓದಿ: ರೈತರಿಗೆ ಮತ್ತೊಂದು ಬರೆ; ರಸಗೊಬ್ಬರದ ಬೆಲೆ ಹೆಚ್ಚಿಸಿದ ಇಫ್ಕೊ 

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?