Shobha Karandlaje: ನಗುಮುಖದ ಗಟ್ಟಿಗಿತ್ತಿ, ಹಿಂದುತ್ವ ಪರ ಚಿಂತನೆಯ ಮಹಿಳಾ ದನಿ ಶೋಭಾ ಕರಂದ್ಲಾಜೆ

Union Cabinet Expansion: ರಾಜಕಾರಣಿ ಶೋಭಾ ಕರಂದ್ಲಾಜೆ ಅವರು ಮೇ 2014 ರಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಪ್ರಸ್ತುತ ಸಂಸತ್ ಸದಸ್ಯರಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಚಾರ್ವಾಕದಲ್ಲಿ 23 ಅಕ್ಟೋಬರ್ 1966ರಲ್ಲಿ ಜನನ. ಅಮ್ಮ ಪೂವಮ್ಮ, ಅಪ್ಪ ಮೋನುಪ್ಪ ಗೌಡ .

Shobha Karandlaje: ನಗುಮುಖದ ಗಟ್ಟಿಗಿತ್ತಿ, ಹಿಂದುತ್ವ ಪರ ಚಿಂತನೆಯ ಮಹಿಳಾ ದನಿ ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ
Follow us
ರಶ್ಮಿ ಕಲ್ಲಕಟ್ಟ
|

Updated on:Jul 07, 2021 | 8:43 PM

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಅವರ ಆಪ್ತೆ. ಬಿಜೆಪಿ ಕರ್ನಾಟಕ  ಘಟಕದ ಉಪಾಧ್ಯಕ್ಷೆ. ಈ ಹಿಂದೆ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿದ್ದಾಗ ಬಿಗಿ ಆಡಳಿತದಿಂದ ಹೆಸರುವಾಸಿಯಾಗಿದ್ದರು. ಹಲವು ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದರು. ಹಿಂದುತ್ವ ಪರ ಚಿಂತನೆ, ಆರ್​ಎಸ್​ಎಸ್​ಗೆ ಅಚಲ ನಿಷ್ಠೆಯಿಂದಲೂ ಶೋಭಾ ಕರಂದ್ಲಾಜೆ ಅವರನ್ನು ಗುರುತಿಸಲಾಗುತ್ತದೆ.

ಶೋಭಾ ಕರಂದ್ಲಾಜೆ ಅವರ ಪರಿಚಯ ಶೋಭಾ ಕರಂದ್ಲಾಜೆ ಅವರು ಮೇ 2014ರಿಂದಲೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಚಾರ್ವಾಕದಲ್ಲಿ 23ನೇ ಅಕ್ಟೋಬರ್ 1966ರಲ್ಲಿ ಜನನ. ಅಮ್ಮ ಪೂವಮ್ಮ, ಅಪ್ಪ ಮೋನಪ್ಪ ಗೌಡ. ಸಮಾಜ ಶಾಸ್ತ್ರ ಮತ್ತು ಸಾಮಾಜಿಕ ಕಾರ್ಯ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಆರಂಭಿಕ ಜೀವನ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ಅತ್ಯಂತ ಪರಿಚಿತ ನಗು ಮುಖ ಶೋಭಾ ಕರಂದ್ಲಾಜೆ ಅವರದು. ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನಿಂದ ಬಿಎ ಪದವಿ ಮುಗಿಸಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ.

ದಬ್ಬಾಳಿಕೆಯ ಸಂಪ್ರದಾಯಗಳ ವಿರುದ್ಧ ಸೆಟೆದು ನಿಲ್ಲುವ ಮನೋಭಾವವು ಶೋಭಾ ಕರಂದ್ಲಾಜೆಗೆ ಮುಂಚಿನಿಂದಲೇ ಇತ್ತು. ಅವರು ಬಹಳ ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಿದರು. ಸಂಘ ಪರಿವಾರದ ಪೂರ್ಣಾವಧಿ ಕಾರ್ಯಕರ್ತೆಯಾದರು.

ಶೋಭಾ ಕರಂದ್ಲಾಜೆ ಅವರ ರಾಜಕೀಯ ಪಯಣಕ್ಕೆ ಪ್ರೇರೇಪಿಸಿದ ಅನೇಕ ಆದರ್ಶಗಳಲ್ಲಿ, ಮಹಿಳಾ ಸಬಲೀಕರಣವು ಪ್ರಮುಖವಾದುದು. ಬದಲಾವಣೆಯನ್ನು ಬಯಸುವ ಗ್ರಾಮೀಣ ಮಹಿಳೆಯರಿಗೆ ಪ್ರೋತ್ಸಾಹ ನೀಡಲು ಅವರು ಸದಾ ಶ್ರಮಿಸುತ್ತಿದ್ದಾರೆ. ಅವರ ರಾಜಕೀಯ ಮತ್ತು ವೈಯಕ್ತಿಕ ಬೆಳವಣಿಗೆಯು ಗ್ರಾಮೀಣ ಭಾರತೀಯ ಮಹಿಳೆಯೊಬ್ಬರು ಪ್ರಮುಖ ನಾಯಕಿಯಾಗಲು ಸಮರ್ಥರಾಗಿದ್ದಾರೆ ಎಂಬುದಕ್ಕೆ ಸಾಕ್ಷಿ.

ರಾಜಕೀಯ ಜೀವನ ಪ್ರಸ್ತುತ ಶೋಭಾ ಕರಂದ್ಲಾಜೆ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಮತ್ತು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸತ್ ಸದಸ್ಯರಾಗಿದ್ದಾರೆ. ಶೋಭಾ ಕರಂದ್ಲಾಜೆ ಅವರ ರಾಜಕೀಯ ಜೀವನಕ್ಕೆ ಒಂದು ಅಡಿಪಾಯವನ್ನು ನೀಡುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತನ್ನ ಪಾತ್ರವನ್ನು ನಿರ್ವಹಿಸಿದೆ. ಶೋಭಾ ಅವರ ಪಯಣ 1996ರಲ್ಲಿ ಉಡುಪಿಯಿಂದ ಪ್ರಾರಂಭವಾಯಿತು, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಬಿಜೆಪಿ ಮಹಿಳಾ ಮೋರ್ಚಾ, ನಂತರ ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಯಾದರು. 1998ರಲ್ಲಿ ಬಿಜೆಪಿಯ ಪೂರ್ಣಾವಧಿ ಕಾರ್ಯಕರ್ತೆಯಾಗಿ ನಂತರ ಹಿಂದೆ ಸರಿಯಲಿಲ್ಲ.

2004ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ಮಹತ್ವದ ಸ್ಥಾನ ಪಡೆದುಕೊಂಡರು. ಇದಕ್ಕೂ ಮೊದಲು ಅವರು ಭಾರತೀಯ ಜನತಾ ಪಕ್ಷದಲ್ಲಿ ಹಲವಾರು ಸಾಂಸ್ಥಿಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೇ 2008ರಲ್ಲಿ ಬೆಂಗಳೂರಿನ ಯಶವಂತಪುರದಿಂದ ಶಾಸಕರಾಗಿ ಆಯ್ಕೆಯಾದರು. ಅಂದಿನ ಬಿಜೆಪಿ ಸರ್ಕಾರದಲ್ಲಿ (ಮೇ 2008 – ನವೆಂಬರ್ 2009) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್​ಡಿಪಿಆರ್) ಸಚಿವರಾಗಿ ನೇಮಕಗೊಂಡರು. ಅವರ ಅಧಿಕಾರಾವಧಿಯಲ್ಲಿ, ಆರ್‌ಡಿಪಿಆರ್ ಸಚಿವಾಲಯವನ್ನು  ದೇಶದ ನಂಬರ್ 1 ಎಂದು ಘೋಷಿಸಲಾಯಿತು.

ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ₹ 800 ಕೋಟಿ ಹೆಚ್ಚುವರಿ ಅನುದಾನ ಸಿಕ್ಕಿತ್ತು. ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ವಿಶ್ವಬ್ಯಾಂಕ್‌ನಿಂದ ₹ 1200 ಕೋಟಿ ಒದಗಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆರ್ಥಿಕ ನೆರವಿನೊಂದಿಗೆ ಮೂಲ ಸೌಲಭ್ಯಗಳನ್ನು ಒದಗಿಸಲು ಶೋಭಾ ಶ್ರಮಿಸಿದ್ದರು. 2010ರಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಸರ್ಕಾರ ಇಂಧನ ಖಾತೆ ವಹಿಸಿಕೊಟ್ಟಿತು. ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ಸಹ ಅವರು ಹೊಂದಿದ್ದಾರೆ.

2014ರ ವರ್ಷವು ಶೋಭಾ ಕರಂದ್ಲಾಜೆ ಅವರ ರಾಜಕೀಯ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲುಗಲ್ಲಾಗಿದೆ. ಅವರು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ 1.81 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದು ದಾಖಲೆ. ಈ ಗೆಲುವಿನೊಂದಿಗೆ ಅವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸತ್ ಸದಸ್ಯೆಯ ಸ್ಥಾನವನ್ನು ಪಡೆದರು.

ಸಂಸತ್ ಸದಸ್ಯರಾಗಿ ಅವರು ಕ್ಷೇತ್ರಕ್ಕೆ ಹಲವು ‘ಪ್ರಥಮ’ಗಳನ್ನು ತಂದಿದ್ದಾರೆ, ಇದರಲ್ಲಿ ಮೊದಲ ಬಾರಿಗೆ ಉಡುಪಿ-ಚಿಕ್ಕಮಗಳೂರಿಗೆ ದಕ್ಕಿದ್ದು – ಪಾಸ್‌ಪೋರ್ಟ್ ಸೇವಾ ಕೇಂದ್ರ – ಸಖಿ ಒನ್ ಸ್ಟಾಪ್ ಸೆಂಟರ್ – ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜೆಮ್ಸ್ ಅಂಡ್ ಜ್ಯುವೆಲ್ಲರಿ (ಐಐಜಿಜೆ) – ಸರ್ಕಾರಿ ಟೂಲ್ ರೂಂ ಮತ್ತು ತರಬೇತಿ ಕೇಂದ್ರ – 2 ಕೇಂದ್ರ ವಿದ್ಯಾಲಯಗಳು – ರಾಮಕೃಷ್ಣ ಹೆಗಡೆ ಕೌಶಲ್ಯ ಅಭಿವೃದ್ಧಿ ಕೇಂದ್ರ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಸತ್ ಸದಸ್ಯರಾಗಿ ಮೊದಲ ಬಾರಿಗೆ ₹ 3700 ಕೋಟಿಗೂ ಹೆಚ್ಚು ಅನುದಾನ ಪಡೆಯುವಲ್ಲಿ ಯಶಸ್ವಿಯಾದರು. ಶೋಭಾ ಅವರು 2019ರಲ್ಲಿ ನಡೆದ 17ನೇ ಲೋಕಸಭಾ ಚುನಾವಣೆಯಲ್ಲಿ 3.49 ಲಕ್ಷ ಮತಗಳ ಅಂತರದ ಗೆಲುವಿನೊಂದಿಗೆ ಲೋಕಸಭಾ ಸ್ಥಾನ ಕಾಪಾಡಿಕೊಂಡರು. ಇದು ಕರ್ನಾಟಕದಲ್ಲಿ ಮಹಿಳಾ ಅಭ್ಯರ್ಥಿಯೊಬ್ಬರು ಸಾಧಿಸಿದ ಅತ್ಯಧಿಕ ಮತಗಳ ಅಂತರದ ಗೆಲುವು.

ನಿಭಾಯಿಸಿದ ಹುದ್ದೆಗಳು 2004 – 2008: ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು 2008 – 2013: ಸದಸ್ಯರು, ಕರ್ನಾಟಕ ವಿಧಾನಸಭೆ 2008 – 2013: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕರ್ನಾಟಕ ಸರ್ಕಾರ 2010-2012: ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆ, ಕರ್ನಾಟಕ ಸರ್ಕಾರ 2010-2013: ಇಂಧನ ಸಚಿವೆ, ಕರ್ನಾಟಕ ಸರ್ಕಾರ ಸಂಸದರಾಗಿ ಕಾರ್ಯನಿರ್ವಹಣೆ ಮೇ 2014- ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ 1.81 ಲಕ್ಷ ಮತಗಳ ಅಂತರಲ್ಲಿಲ 16ನೇ ಲೋಕಸಭಾ ಚುನಾವಣೆಯಲ್ಲಿ ಗೆಲುವು. 1 ಸೆಪ್ಟೆಂಬರ್, 2014- 03 ಡಿಸೆಂಬರ್ 2014: ಮಹಿಳಾ ಸಬಲೀಕರಣ ಸಮಿತಿ. 1 ಸೆಪ್ಟೆಂಬರ್, 2014- 25 ಮೇ 2019: ಸದಸ್ಯೆ, ರಕ್ಷಣಾ ಇಲಾಖೆಯ ಸ್ಥಾಯಿ ಸಮಿತಿ. 1 ಸೆಪ್ಟೆಂಬರ್, 2014- 25 ಮೇ 2019: ಸದಸ್ಯೆ, ಸಲಹಾ ಸಮಿತಿ, ಕೃಷಿ ಸಚಿವಾಲಯ. 13 ಮೇ, 2015- 25 ಮೇ 2019: ಸದಸ್ಯೆ, 2015 ರಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕಿನ ಜಂಟಿ ಸಮಿತಿ ಮೇ, 2019: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ 3.49 ಲಕ್ಷ ಅಂತರದಿಂದ 17 ನೇ ಲೋಕಸಭೆಗೆ ಮರು ಆಯ್ಕೆಯಾದರು. 13 ಸೆಪ್ಟೆಂಬರ್, 2019 ರಿಂದ: ಸದಸ್ಯೆ, ಇಂಧನ ಸ್ಥಾಯಿ ಸಮಿತಿ 09 ನೇ ಅಕ್ಟೋಬರ್-2019 ರಿಂದ: ಸದಸ್ಯ, ಮಹಿಳಾ ಸಬಲೀಕರಣ ಸಮಿತಿ.

ಇದನ್ನೂ ಓದಿ: ಕೇರಳ ಮೂಲ, ಬೆಂಗಳೂರು ವಾಸ್ತವ್ಯ: ನೂತನ ಸಚಿವ ರಾಜೀವ್ ಚಂದ್ರಶೇಖರ್​ ಟೆಕಿ, ಉದ್ಯಮಿಯೂ ಹೌದು

(Karnataka’s BJP Firebrand Shobha Karandlaje Lok Sabha MP representing the Udupi-Chikkamagaluru)

Published On - 8:32 pm, Wed, 7 July 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್