ಪಾಲಕ್ಕಾಡ್​ ದೇಗುಲ ಧ್ವಂಸ ಪ್ರಕರಣ: SDPI ಕೃತ್ಯಕ್ಕೆ CPI-M ಪಕ್ಷ ಕುಮ್ಮಕ್ಕು ನೀಡಿದೆ: ಬಿಜೆಪಿ ಕಿಡಿ

ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ತೋರಿಸಿರುವುದರಿಂದ ಸಿಪಿಐ(ಎಂ) ಆಕ್ರೋಶಕ್ಕೆ ಒಳಗಾಗಿದೆ. ಹೀಗಾಗಿ ಎಸ್​ಡಿಪಿಐನಂತಹ ಭಯೋತ್ಪಾದಕ ಸಂಘಟನೆಯೊಂದಿಗೆ ಸೇರಿ ದಾಂಧಲೆ ನಡೆಸುತ್ತಿದೆ. ಜನರ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿ ನಡೆದು, ದೇವಸ್ಥಾನ ಧ್ವಂಸ ಮಾಡಿ ಹುಂಡಿ ಕದಿಯುವವರನ್ನು ಭಯೋತ್ಪಾದಕರೆಂದೇ ಕರೆಯಲಾಗುತ್ತದೆ.

ಪಾಲಕ್ಕಾಡ್​ ದೇಗುಲ ಧ್ವಂಸ ಪ್ರಕರಣ: SDPI ಕೃತ್ಯಕ್ಕೆ CPI-M ಪಕ್ಷ ಕುಮ್ಮಕ್ಕು ನೀಡಿದೆ: ಬಿಜೆಪಿ ಕಿಡಿ
ದೇವಸ್ಥಾನವನ್ನು ಧ್ವಂಸಗೊಳಿಸಿರುವ ದೃಶ್ಯ
Skanda

| Edited By: sadhu srinath

Dec 19, 2020 | 2:21 PM

ಕೊಚ್ಚಿ: ಕೇರಳದ ದೇವಸ್ಥಾನವೊಂದರಲ್ಲಿ ಪುಡಾರಿಗಳು ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕೃತ್ಯಗಳಿಗೆ ಸಿಪಿಐ(ಎಂ) ಕುಮ್ಮಕ್ಕು ನೀಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ದೇವಸ್ಥಾನಕ್ಕೆ ಹಾನಿ ಮಾಡಿರುವುದರ ಹಿಂದೆ ಎಸ್​ಡಿಪಿಐ ಸಂಘಟನೆ ಮತ್ತು ಆಡಳಿತ ಪಕ್ಷ ಸಿಪಿಐ(ಎಂ) ಕೈವಾಡವಿದೆ ಎಂದು ಪಾಲಕ್ಕಾಡ್​ ಜಿಲ್ಲೆಯ ಬಿಜೆಪಿ ಮುಖಂಡ ಕೃಷ್ಣನ್ ದಾಸ್ ಹೇಳಿದ್ದಾರೆ.

ದೇವಾಲಯವನ್ನು ಧ್ವಂಸಗೊಳಿಸಿದ ಕೃತ್ಯ ಮತ್ತು ಬಿಜೆಪಿ, ಆರ್​ಎಸ್​ಎಸ್​ ಕಚೇರಿ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಸಿಪಿಐ(ಎಂ) ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕೃತ್ಯಗಳಲ್ಲಿ ಇವರ ಕೈವಾಡ ಇರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿರುವ ಬೆನ್ನಲ್ಲೇ ಬಿಜೆಪಿ ಪಕ್ಷದ ಮುಖಂಡರು ಆಡಳಿತ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ತೋರಿಸಿರುವುದರಿಂದ ಸಿಪಿಐ(ಎಂ) ಆಕ್ರೋಶಕ್ಕೆ ಒಳಗಾಗಿದೆ. ಹೀಗಾಗಿ ಎಸ್​ಡಿಪಿಐನಂತಹ ಭಯೋತ್ಪಾದಕ ಸಂಘಟನೆಯೊಂದಿಗೆ ಸೇರಿ ದಾಂಧಲೆ ನಡೆಸುತ್ತಿದೆ. ಜನರ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿ ನಡೆದು, ದೇವಸ್ಥಾನ ಧ್ವಂಸ ಮಾಡಿ ಹುಂಡಿ ಕದಿಯುವವರನ್ನು ಭಯೋತ್ಪಾದಕರೆಂದೇ ಕರೆಯಲಾಗುತ್ತದೆ ಎಂದು ಪಕ್ಷದ ಮುಖಂಡ ಕೃಷ್ಣನ್ ದಾಸ್ ಕಿಡಿಕಾರಿದ್ದಾರೆ.

ಈಗ ಪೊಲೀಸರು ವಶಕ್ಕೆ ಪಡೆದಿರುವ 11 ಮಂದಿ CPI(M) ಕಾರ್ಯಕರ್ತರಲ್ಲಿ 4 ಜನ SDPI ಸಂಘಟನೆಗೆ ಸೇರಿದವರು. ಆಡಳಿತ ಪಕ್ಷದ ಈ ನಡೆ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು ಬಇಜೆಪಿ ಇದನ್ನು ತೀವ್ವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ಗುರುವಾರ ನಡೆದ ಪ್ರಕರಣದಲ್ಲಿ ಬಿಜೆಪಿ ನಾಯಕ ರತೀಶ್​ ಅವರ ಮನೆ, ಪಾಲಕ್ಕಾಡ್​ ಜಿಲ್ಲೆಯ ಸುಬ್ರಮಣ್ಯ ಸ್ವಾಮಿ ದೇವಾಲಯ, ಆರ್​​ಎಸ್​​ಎಸ್​ ಕಚೇರಿಯ ಮೇಲೆ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ ಸುಬ್ರಹ್ಮಣ್ಯ ಸ್ವಾಮಿ ದೇಗುಲ ಭಾಗಶಃ ಧ್ವಂಸವಾಗಿದೆ.

ಗೆದ್ದ ಖುಷಿ! ಪುರಸಭೆ ಕಚೇರಿ ಮೇಲೆ ಜೈ ಶ್ರೀರಾಮ್ ಬ್ಯಾನರ್ ಹಾಕಿದ್ದ ಬಿಜೆಪಿಗರ ವಿರುದ್ಧ ಕೇಸ್​ ದಾಖಲು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada