AzaadiSAT: 750 ಬಡ ಹೆಣ್ಮಕ್ಕಳು ಅಭಿವೃದ್ಧಿಪಡಿಸಿದ ಆಜಾದಿಸ್ಯಾಟ್; ಎಸ್​ಎಸ್​ಎಲ್​ವಿಯೊಂದಿಗೆ ಆಗಸಕ್ಕೆ ಹಾರಿದ ಉಪಗ್ರಹ

Space Kidz India Builds AzaadiSAT: ಇಸ್ರೋದಿಂದ ನಿರ್ಮಿತವಾಗಿರುವ ಎಸ್​ಎಸ್​ಎಲ್​ವಿ ಡಿ2 ರಾಕೆಟ್ ಜೊತೆ ಹಾರಿದ 3 ಉಪಗ್ರಹಗಳಲ್ಲಿ ಆಜಾದಿಸ್ಯಾಟ್ ಒಂದು. ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಗ್ರಾಮೀಣ ಭಾಗದ 75 ಶಾಲೆಗಳಿಂದ 750 ವಿದ್ಯಾರ್ಥಿನಿಯರನ್ನು ಆಜಾದಿ ಸ್ಯಾಟ್ ತಯಾರಿಕೆಗೆ ಬಳಸಿಕೊಳ್ಳಲಾಗಿದೆ.

AzaadiSAT: 750 ಬಡ ಹೆಣ್ಮಕ್ಕಳು ಅಭಿವೃದ್ಧಿಪಡಿಸಿದ ಆಜಾದಿಸ್ಯಾಟ್; ಎಸ್​ಎಸ್​ಎಲ್​ವಿಯೊಂದಿಗೆ ಆಗಸಕ್ಕೆ ಹಾರಿದ ಉಪಗ್ರಹ
ಆಜಾದಿಸ್ಯಾಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 10, 2023 | 9:59 AM

ಚೆನ್ನೈ: ಇಸ್ರೋದಿಂದ ವಿನೂತನ ಪ್ರಯೋಗಾರ್ಥ ತಯಾರಾಗುತ್ತಿರುವ ಎಸ್​ಎಸ್​ಎಲ್​ವಿ ಡಿ2 ರಾಕೆಟ್ (SSLV D2 Rocket) ಇಂದು ಯಶಸ್ವಿಯಾಗಿ ಆಗಸಕ್ಕೆ ಹಾರಿದೆ. ಮೂರು ಉಪಗ್ರಗಳನ್ನು ಇದು ಭೂಮಿಯ ಕೆಳಹಂತದ ಕಕ್ಷೆಗೆ ಸೇರಿಸುತ್ತಿದೆ. ಇಸ್ರೋ ಸಂಸ್ಥೆಯೇ ನಿರ್ಮಿಸಿದ ಇಒಎಸ್-07, ಅಮೆರಿಕದ ಅಂಟಾರಿಸ್ ನಿರ್ಮಿತ ಜೇನಸ್-01 ಮತ್ತು ಸ್ಪೇಸ್ ಕಿಡ್ಸ್ ಸಂಸ್ಥೆ ನಿರ್ಮಿಸಿದ ಆಜಾದಿಸ್ಯಾಟ್ (AzaadiSAT) ಈ ಮೂರು ಉಪಗ್ರಹಗಳನ್ನು ಹೊತ್ತು ಎಸ್​ಎಸ್​ಎಲ್​ವಿ ಮೇಲೆ ಹಾರಿದೆ. ಆದರೆ ಆಜಾದಿಸ್ಯಾಟ್ ಹಲವು ಕಾರಣಗಳಿಗೆ ಗಮನ ಸೆಳೆದಿದೆ. ಇದು ಬಡ ಹೆಣ್ಮಕ್ಕಳೇ ತಯಾರಿಸಿದ ಸೆಟಿಲೈಟ್ ಎನಿಸಿದೆ.

ಚೆನ್ನೈನ ಸ್ಪೇಸ್ ಕಿಡ್ಸ್ ಇಂಡಿಯಾ ಸಂಸ್ಥೆ (Space Kidz India) ವತಿಯಿಂದ ಆಜಾದಿಸ್ಯಾಟ್-2 ಉಪಗ್ರಹದ ತಯಾರಿಕೆ ಆಗಿದೆ. ಭಾರತದಾದ್ಯಂತ 75 ಶಾಲೆಗಳಿಂದ ಆಯ್ದ 750 ವಿದ್ಯಾರ್ಥಿನಿಯರು ಆಜಾದಿಸ್ಯಾಟ್ ಅಭಿವೃದ್ಧಿಯಲ್ಲಿ ಪಾಲ್ಗೊಂಡಿದ್ದಾರೆ. ಇವರೆಲ್ಲರೂ ಬಡಕುಟುಂಬದ ಹಿನ್ನೆಲೆಯವರು ಎಂಬುದು ವಿಶೇಷ. ಎನ್​ಸಿಸಿಯ 75ನೇ ವರ್ಷಾಚರಣೆಯ ಗೌರವಾರ್ಥದ ಸಂಕೇತವಾಗಿ ಆಜಾದಿಸ್ಯಾಟ್ ತಯಾರಾಗಿದೆ. 75 ಶಾಲೆಗಳಿಂದ ಈ ಹೆಣ್ಮಕ್ಕಳನ್ನು ಆಜಾದಿಸ್ಯಾಟ್ ಉಪಗ್ರಹ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ. ಇಂದು ರಾಕೆಟ್ ಉಡಾವಣೆ ಮಾಡುವಾಗ ಎನ್​ಸಿಸಿಯ ಹಾಡನ್ನು ನುಡಿಸಲಾಗಿತ್ತು. ಹಾಗೆಯೇ, ಬಾಹ್ಯಾಕಾಶದಲ್ಲಿ ಮಹಿಳೆಯರು ಎಂಬುದು ವಿಶ್ವಸಂಸ್ಥೆಯ ಈ ವರ್ಷದ ಧ್ಯೇಯವಾಕ್ಯವಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಶಾಲಾ ಹೆಣ್ಮಕ್ಕಳಿಗೆ ಬಾಹ್ಯಾಕಾಶ ಕ್ಷೇತ್ರದ ಮೂಲ ಅಂಶಗಳನ್ನು ಕಲಿಯುವ ಅವಕಾಶವನ್ನು ಆಜಾದಿಸ್ಯಾಟ್ ಮೂಲಕ ಕಲ್ಪಿಸಲಾಗಿದೆ.

ಇದನ್ನೂ ಓದಿ: SSLV-d2 Launch: 3 ಸೆಟಿಲೈಟ್ ಹೊತ್ತು ನಭಕ್ಕೆ ಹಾರಿದ ಎಸ್​ಎಸ್​ಎಲ್​ವಿ ರಾಕೆಟ್

ಆಜಾದಿ ಸ್ಯಾಟ್ ವಿಶೇಷತೆ:

ಆಜಾದಿ ಸ್ಯಾಟ್ ಉಪಗ್ರಹ ಒಟ್ಟು 8.7 ಕಿಲೋ ತೂಕ ಹೊಂದಿದೆ. ಇದರಲ್ಲಿ ತಲಾ 50 ಗ್ರಾಂ ತೂಕದ 75 ಬೇರೆ ಬೇರೆ ಪೇಲೋಡ್​ಗಳಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಈ ಪೇಲೋಡ್​ಗಳನ್ನು ಅಭಿವೃದ್ಧಿಪಡಿಸಿದರೆ ಸ್ಪೇಸ್ ಕಿಡ್ಸ್ ಇಂಡಿಯಾ ಸಂಸ್ಥೆಯು ಈ 75 ಪೇಲೋಡ್​ಗಳನ್ನು ಏಕೀಕೃತಗೊಳಿಸುವ ಕೆಲಸ ಮಾಡಿದೆ. ಈ ಸೆಟಿಲೈಟ್ ಹವ್ಯಾಸಿ ರೇಡಿಯೋ ಸಂವಹನ ಸಾಮರ್ಥ್ಯಗಳನ್ನು ಹೊಂದಿದೆ. ಬಾಹ್ಯಾಕಾಶದಲ್ಲಿ ವಿಕಿರಣಗಳ ಮಟ್ಟದ ಮಾಪನ ಮಾಡುತ್ತದೆ.

ಇತರ ಸೆಟಿಲೈಟ್​ಗಳು

ಇಂದು ಎಸ್​ಎಸ್​ಎಲ್​ವಿ ರಾಕೆಟ್ ಜೊತೆ ಉಡಾವಣೆ ಆದ ಇತರ ಸೆಟಿಲೈಟ್​ಗಳೆಂದರೆ ಇಒಎಸ್-07 ಮತ್ತು ಜೇನಸ್-1. ಇದರಲ್ಲಿ ಇಒಎಸ್-07 ಇಸ್ರೋದಿಂದಲೇ ನಿರ್ಮಿತವಾದ ಉಪಗ್ರಹ. ಜೇನಸ್-01 ಅಮೆರಿಕದ ಅಂಟಾರಿಸ್ ಸಂಸ್ಥೆ ತಯಾರಿಸಿದೆ. ಇಒಎಸ್ ಉಪಗ್ರಹ 153 ಕಿಲೋ ತೂಕ ಹೊಂದಿದ್ದು, ಈ ಮೂರು ಸೆಟಿಲೈಟ್ ಪೈಕಿ ಅದೇ ಗರಿಷ್ಠ ಭಾರ ಹೊಂದಿರುವುದು. ಜೇನಸ್ ಉಪಗ್ರಹ 10 ಕಿಲೋನಷ್ಟು ಪೇಲೋಡ್ ಹೊಂದಿದೆ.

ಎಸ್​ಎಸ್​ಎಲ್​ವಿ ರಾಕೆಟ್ಟು ಈ ಮೂರು ಉಪಗ್ರಹಗಳನ್ನು ಭೂಮಿಯಿಂದ ಸುಮಾರು 450 ಕಿಮೀ ಎತ್ತರದ ಕಕ್ಷೆಯೊಂದಕ್ಕೆ ಹೊತ್ತೊಯ್ದು ಬಿಡಲಿದೆ.

Published On - 9:59 am, Fri, 10 February 23

ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
’ಹನುಮಂತ ಗೆದ್ದಿದ್ದು ಬೇಸರ ಇಲ್ಲ’: ತ್ರಿವಿಕ್ರಂ ಫಸ್ಟ್ ರಿಯಾಕ್ಷನ್
’ಹನುಮಂತ ಗೆದ್ದಿದ್ದು ಬೇಸರ ಇಲ್ಲ’: ತ್ರಿವಿಕ್ರಂ ಫಸ್ಟ್ ರಿಯಾಕ್ಷನ್