Ayushman Bhava: ಪ್ರಧಾನಿ ಮೋದಿ ಜನ್ಮದಿನದಂದು ‘ಆಯುಷ್ಮಾನ್ ಭವ’ ಅಭಿಯಾನಕ್ಕೆ ಚಾಲನೆ, ಯೋಜನೆಯ ಪ್ರಮುಖ ಅಂಶಗಳು ಇಲ್ಲಿವೆ

|

Updated on: Sep 16, 2023 | 11:16 AM

Narendra Modi: ಸೆ.13ರಂದು 'ಆಯುಷ್ಮಾನ್ ಭವ' ಯೋಜನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಿದರು. ಇದೀಗ ಯೋಜನೆಯ ಅಭಿಯಾನವನ್ನು ಪ್ರಧಾನಿ ಮೋದಿ ಅವರ ಜನ್ಮದಿನದಂದು (ಸೆ.17) ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Ayushman Bhava: ಪ್ರಧಾನಿ ಮೋದಿ ಜನ್ಮದಿನದಂದು ಆಯುಷ್ಮಾನ್ ಭವ ಅಭಿಯಾನಕ್ಕೆ ಚಾಲನೆ, ಯೋಜನೆಯ ಪ್ರಮುಖ ಅಂಶಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us on

ಕೇಂದ್ರ ಸರ್ಕಾರದ ಮಹತ್ವಾಂಕ್ಷಿಯ ಯೋಜನೆಗಳಲ್ಲಿ ಒಂದಾದ ‘ಆಯುಷ್ಮಾನ್ ಭವ’ (Ayushman Bhava) ಯೋಜನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆ.13ರಂದು ಚಾಲನೆ ನೀಡಿದರು. ಇನ್ನು ಈ ಯೋಜನೆಯ ಅಭಿಯಾನವನ್ನು ಸೆ.17ರಂದು ಪ್ರಧಾನಿ ನರೇಂದ್ರ (Narendra Modi) ಮೋದಿ ಅವರ ಜನ್ಮದಿನದಂದು ನಡೆಸಲಾಗುವುದು. ಈ ಆಯುಷ್ಮಾನ್ ಭವ ಯೋಜನೆಯ ಪ್ರಯೋಜನ ಮತ್ತು ಪ್ರಮುಖ ಅಂಶಗಳೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಆಯುಷ್ಮಾನ್ ಭವ ಯೋಜನೆ ಪ್ರಮುಖ ಅಂಶಗಳು ಇಲ್ಲಿವೆ:

1. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪ್ರಾರಂಭಿಸಿದ ‘ಆಯುಷ್ಮಾನ್ ಭವ’ ಅಭಿಯಾನವು ರಾಷ್ಟ್ರವ್ಯಾಪಿಯಾಗಿ ಪರಿಚಯವಾಗಬೇಕು ಮತ್ತು ಇದು ದೇಶದ ಜನರು ಆರೋಗ್ಯದ ಪ್ರಯೋಜನ ಪಡೆಯಲು ಪ್ರಾಥಮಿಕ ಹಂತ ಎಂದು ಹೇಳಿದೆ. ಆರೋಗ್ಯ ಸೇವೆಗಳನ್ನು ಸಕಲದಲ್ಲಿ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ, ದೇಶದ ಪ್ರತಿ ಹಳ್ಳಿ ಮತ್ತು ಪಟ್ಟಣಗಳಿಗೂ ಈ ಯೋಜನೆ ತಲುಪುತ್ತದೆ ಎಂದು ಹೇಳಿದೆ.

2) ಆಯುಷ್ಮಾನ್ ಭಾರತ್ ಕಾರ್ಯಕ್ರಮದ ಯಶಸ್ಸಿನ ನಂತರ ಈ ‘ಆಯುಷ್ಮಾನ್ ಭವ’ ಯೋಜನೆಯನ್ನು ತರಲಾಗಿದೆ. ಇದು ಆರೋಗ್ಯ ಸೇವೆಗಳಲ್ಲಿ ಒಂದು ಮಾದರಿ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಸರ್ಕಾರ ಹೇಳಿದೆ.

3. ಆಯುಷ್ಮಾನ್ ಭವ ಯೋಜನೆಯ ಅಭಿಯಾನಕ್ಕೆ ಸೆಪ್ಟಂಬರ್ 17 ರಿಂದ ಅಂದರೆ ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬದಂದು ಚಾಲನೆ ನೀಡಲಾಗುವುದು ಅಕ್ಟೋಬರ್ 2 ರಂದು ‘ಸೇವಾ ಪಖ್ವಾಡಾ’ (ಸೇವಾ ಪಾಕ್ಷಿಕ) ಕಾರ್ಯಕ್ರಮದ ಸಮಯದಲ್ಲಿ ಇದನ್ನು ಕಾರ್ಯಗತಗೊಳಿಸುವ ಮೂಲಕ ರಾಷ್ಟ್ರದ್ಯಾಂತ ಆರೋಗ್ಯ ಯೋಜನೆಯನ್ನು ಎಲ್ಲರಿಗೂ ತಲುಪುವಂತೆ ಸಾಕಾರಗೊಳಿಸಲಾಗುತ್ತದೆ.

4. ಈ ಆರೋಗ್ಯ ಯೋಜನೆಯ ಸದುಪಯೋಗವನ್ನು ಪ್ರತಿಯೊಬ್ಬ ವ್ಯಕ್ತಿಯು ಪಡೆಯಬೇಕು ಎಂಬುದು ಸರ್ಕಾರದ ಗುರಿಯಾಗಿದೆ. ಈ ಯೋಜನೆಯ ಮೂಲಕ ವಲಯಗಳಲ್ಲಿ, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಸಮುದಾಯ ಮಟ್ಟದಲ್ಲಿ ಒಂದೇ ಧ್ಯೇಯದ ಅಡಿಯಲ್ಲಿ ಒಂದುಗೂಡಿಸುವುದು ಇದರ ಗುರಿಯಾಗಿದೆ.

5. ಆಯುಷ್ಮಾನ್ ಭವ ಯೋಜನೆಯಲ್ಲಿ ಗ್ರಾಮಮಟ್ಟದಿಂದಲ್ಲೇ ಪ್ರಾರಂಭ ಮಾಡಲಾಗುವುದು. ಎಲ್ಲ ಆರೋಗ್ಯ ಇಲಾಖೆ, ಇತರ ಸರ್ಕಾರಿ ಇಲಾಖೆಗಳು ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸ್ಥಳೀಯ ಚುನಾಯಿತ ಸಂಸ್ಥೆಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ:ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ 4 ಕೋಟಿ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಲಿಂಕ್

6. ಇನ್ನು ಸರ್ಕಾರದ ಆರೋಗ್ಯ ಯೋಜನೆ ಯಾರಿಗೆಲ್ಲ ತಲುಪಿಲ್ಲ, ಯೋಜನೆಗಳಿಂದ ಯಾರೆಲ್ಲ ಹಿಂದುಳಿದಿದ್ದರೆ ಎಂಬುದನ್ನು ಈ ಯೋಜನೆ ಮೂಲಕ ಖಚಿತಪಡಿಸಿಕೊಳ್ಳಲಾಗುವುದು. ಜತೆಗೆ ಪ್ರತಿ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಮಗ್ರ ಆರೋಗ್ಯ ರಕ್ಷಣೆಯನ್ನು ವಿಸ್ತರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

7.ಸಿನರ್ಜಿಸ್ಟಿಕ್ ವಿಧಾನ (ಸಹಕ್ರಿಯೆ ವಿಧಾನ)ಗಳ ಮೂಲಕ ಮೂರು ಘಟಕಗಳನ್ನು ಸ್ಧಾಪಿಸಿಲಾಗುವುದು. 1)ಆಯುಷ್ಮಾನ್ – ಆಪ್ಕೆ ದ್ವಾರ 3.0 (ಆಯುಷ್ಮಾನ್ ನಿಮ್ಮ ಬಾಗಿಲಲ್ಲಿ) 2)ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ (ಎಚ್‌ಡಬ್ಲ್ಯೂಸಿ) 3)ಆಯುಷ್ಮಾನ್ ಮೇಳ. ಈ ಮೂಲಕ ಜನರಿಗೆ ಆಯುಷ್ಮಾನ್ ಭವದ ಬಗ್ಗೆ ತಿಳಿಸಲಾಗುವುದು ಮತ್ತು ಆರೋಗ್ಯ ಸೇವೆಗಳನ್ನು ನೀಡಲಾಗುವುದು.

8. PM-JAY (Pradhan Mantri Jan Arogya Yojana) ಯೋಜನೆಯಡಿಯಲ್ಲಿ ಆಯುಷ್ಮಾನ್ ನಿಮ್ಮ ಬಾಗಿಲಲ್ಲಿ 3.0 ತರಲಾಗುವುದು. ಈಗಾಗಲೇ ಯಾರೆಲ್ಲ ಆಯುಷ್ಮಾನ್ ಕಾರ್ಡ್‌ ಪಡೆದಿಲ್ಲ ಅವರಿಗೆ ಈ ಯೋಜನೆಯ ಮೂಲಕ ನೀಡಲಾಗುವುದು.

9. HWC (Health and Wellness Centres) ಗಳು ಮತ್ತು CHC (Community Health Centers) ಗಳ ಮೂಲಕ ಆಯುಷ್ಮಾನ್ ಮೇಳಗಳನ್ನು ನಡೆಸಲಾಗುವುದು. ಈ ಮೇಳದಲ್ಲಿ ಆಯುಷ್ಮಾನ್ ಭವ ಯೋಜನೆಯ ಸೇವೆಗಳನ್ನು ನೀಡಲಾಗುವುದು. ಈ ಮೇಳದಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ಕೂಡ ವಿತರಣೆ ಮಾಡಲಾಗುವುದು.

10. ಆಯುಷ್ಮಾನ್ ಸಭೆಗಳನ್ನು ನಡೆಸಿ, ಆ ಮೂಲಕ ಆಯುಷ್ಮಾನ್ ಭವ ಯೋಜನೆಗಳ ಸೇವೆಗಳನ್ನು ನೀಡಲಾಗುವುದು. ಪ್ರತಿ ಗ್ರಾಮ ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲಿ ಸಭೆಯನ್ನು ನಡೆಸಲಾಗುವುದು. ಇಲ್ಲಿಯು ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುವುದು. ಜತೆಗೆ ಆರೋಗ್ಯ ಯೋಜನೆಗಳು ಮತ್ತು ಸಾಂಕ್ರಾಮಿಕವಲ್ಲದ ರೋಗಗಳು, ಕ್ಷಯರೋಗ (ನಿಕ್ಷಯ ಮಿತ್ರ) ನಂತಹ ರೋಗ ಪರಿಸ್ಥಿತಿಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:11 am, Sat, 16 September 23