AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kargil Vijay Diwas 2022: 22ರ ವಯಸ್ಸಿನಲ್ಲೇ ಪಾಪಿಗಳನ್ನು ಹಿಮ್ಮೆಟ್ಟಿಸಿ ದೇಶಕ್ಕಾಗಿ ಬಲಿದಾನ ಕೊಟ್ಟ ಕಾರ್ಗಿಲ್ ಯುದ್ಧದ ಮೊದಲ ಹುತಾತ್ಮ ವೀರ ಕ್ಯಾಪ್ಟನ್ ಸೌರಭ್ ಕಾಲಿಯಾ

Capt Saurabh Kalia: ವಿಪರ್ಯಾಸವೆಂದರೆ ಕಾಲಿಯಾ ಕುಟುಂಬವು ತಮ್ಮ ಮನೆ ಮಗನ 23 ನೇ ಹುಟ್ಟುಹಬ್ಬವನ್ನು ಜೂನ್ 29, 1999 ರಂದು ಆಚರಿಸಬೇಕಿತ್ತು ಆದ್ರೆ ಅಂದು ಮಗನ ತುಂಡು ತುಂಡಾದ ದೇಹವನ್ನು ಭಾರತೀಯ ಸೇನೆ ಹಸ್ತಾಂತರಿಸಿದಾಗ ಪೋಷಕರಿಗೆ ಭೂಮಿಯೇ ಬಾಯ್ತೆರೆದು ಎಲ್ಲವೂ ನಶ್ವರವಾದಂತಾಗಿತ್ತು.

Kargil Vijay Diwas 2022: 22ರ ವಯಸ್ಸಿನಲ್ಲೇ ಪಾಪಿಗಳನ್ನು ಹಿಮ್ಮೆಟ್ಟಿಸಿ ದೇಶಕ್ಕಾಗಿ ಬಲಿದಾನ ಕೊಟ್ಟ ಕಾರ್ಗಿಲ್ ಯುದ್ಧದ ಮೊದಲ ಹುತಾತ್ಮ ವೀರ ಕ್ಯಾಪ್ಟನ್ ಸೌರಭ್ ಕಾಲಿಯಾ
ಕ್ಯಾಪ್ಟನ್ ಸೌರಭ್ ಕಾಲಿಯಾ
TV9 Web
| Edited By: |

Updated on:Jul 27, 2022 | 1:30 PM

Share

ಜಮ್ಮ ಕಾಶ್ಮೀರದಲ್ಲಿ(Jammu and Kashmir) ತಾವೇ ಸರ್ವರೆಂದು ಅಟ್ಟಹಾಸ ಮೆರೆಯುತ್ತಿದ್ದ, ಕಾರ್ಗಿಲ್(Kargil) ಬೆಟ್ಟಗಳಲ್ಲಿ ಅವಿತು ಕುತಂತ್ರಿಯಂತೆ ಹೊಂಚು ಹಾಕಿ ರಕ್ತದೋಕುಳಿಯಾಡಿದ ಪಾಪಿ ಪಾಕಿಸ್ತಾನಕ್ಕೆ ಭಾರತದ(India) ಶಕ್ತಿ ಏನು ಎಂಬುದನ್ನು ತೋರಿಸಿಕೊಟ್ಟ ಕಾರ್ಗಿಲ್ ಯುದ್ದ(Kargil War) ನಡೆದು ಇಂದಿಗೆ ಒರೋಬ್ಬರಿ 23 ವರ್ಷಗಳಾಗಿವೆ. ಇಂದು ಇಡೀ ಭಾರತ ಕಾರ್ಗಿಲ್ ವಿಜಯೋತ್ಸವವನ್ನು(Kargil Vijay Diwas 2022) ಆಚರಿಸುತ್ತಿದೆ. ಹುತಾತ್ಮ ಯೋಧರಿಗೆ ನುಡಿ ನಮನ ಸಲ್ಲಿಸಿದೆ. ಈ ಕಾರ್ಗಿಲ್ ವಿಜಯೋತ್ಸವದಂದು ವೀರ ಯೋಧ ಸೌರಭ್ ಕಾಲಿಯಾರನ್ನು(Capt Saurabh Kalia) ಯಾರು ಮರೆಯುವಂತಿಲ್ಲ. ತಮ್ಮ 23ನೇ ಹುಟ್ಟಹಬ್ಬವನ್ನು ಆಚರಿಸಿಕೊಳ್ಳಬೇಕಿದ್ದ ನವ ತರುಣ ಭಾರತಕ್ಕಾಗಿ ಕಾರ್ಗಿಲ್ ಯುದ್ಧದಲ್ಲಿ ತನ್ನ ಪ್ರಾಣವನ್ನು ಒತ್ತೆಯಿಟ್ಟ ಮೊದಲ ಹೋರಾಟಗಾರರಿವರು. ಪಾಪಿಗಳಿಗೆ ತಕ್ಕ ಪಾಠ ಕಲಿಸಲೇ ಬೇಕು ಎಂದು ಭಾರತೀಯ ಸೇನೆ ಕೊತ ಕೊತ ಕುದಿಯುವಂತೆ ಮಾಡಿದ್ದು ಇದೇ ಯೋಧನ ದೇಹ.

ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಹೀನ ಕೃತ್ಯ ಮೆರೆದಿದ್ದ ಪಾಪಿಗಳು

ಮೇ 1999 ರಲ್ಲಿ ಪಾಕಿಸ್ತಾನಿ ಸೇನೆ ಅಕ್ರಮವಾಗಿ ಕಾರ್ಗಿಲ್ ಪ್ರದೇಶ ಸೇರಿದಂತೆ ಚೆಕ್ ಪೋಸ್ಟ್​ಗಳ ಮುಖಾಂತರ ಸಿಯಾಚಿನ್ ಗಡಿವರೆಗೂ ನುಸುಳುವಿಕೆಗೆ ಪ್ರಯತ್ನಗಳನ್ನು ಮಾಡುತ್ತಿತ್ತು. ಈ ಬಗ್ಗೆ ವಿಚಾರ ತಿಳಿದ ಭಾರತೀಯ ಸೇನೆ ಅದನ್ನು ಖಚಿತಪಡಿಸಿಕೊಳ್ಳಲು ಮೊದಲ ಬಾರಿಗೆ ಜಾಟ್ ರೆಜಿಮೆಂಟ್ನ ಕ್ಯಾಪ್ಟನ್ ಸೌರಭ್ ಕಾಲಿಯಾರನ್ನು 6 ಜನರ ತಂಡದೊಂದಿಗೆ ‘ಬಜರಂಗ್’ ಪೋಸ್ಟಿನತ್ತ ಕಳಿಸಿತು. ಅಲ್ಲಿ ಶತ್ರುಗಳಿರುವುದು ಖಚಿತವಾದ ಬಳಿಕ ವಿಚಾರವನ್ನು ಭಾರತ ಸೇನೆಗೆ ಮುಟ್ಟಿಸಿದ್ರು. ಬಳಿಕ ಕಾರ್ಗಿಲ್​‌ನ ಕಕ್ಸರ್ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಹಲವಾರು ಗಂಟೆಗಳ ಕಾಲ ಪಾಕಿಸ್ತಾನ ಮತ್ತು ಭಾರತದ 6 ಯೋಧರ ನಡುವೆ ಯುದ್ಧ ನಡೆಯಿತು. ಭಯೋತ್ಪಾದಕರೆಂದು ಕೊಂಡಿದ್ದ 150 ಪಾಕಿಸ್ತಾನಿ ಸೈನಿಕರನ್ನು ಅಡಗು ತಾಣಗಳಿಂದ ಹೊರಗೆಳೆಯುವುದರಲ್ಲಿ ಈ ತಂಡ ಯಶಸ್ವಿಯಾಗಿತ್ತು. ಆದರೆ ಅಷ್ಟರಲ್ಲಿ ಇವರ ಬಳಿಯಿದ್ದ ಶಸ್ತ್ರಾಸ್ತ್ರಗಳು ಮುಗಿದು ಹೋದವು. ಆಗ ಪಾಪಿ ಸೈನಿಕರು ಕ್ಯಾಪ್ಟನ್ ಸೌರಭ್ ಕಾಲಿಯಾ, ಅರ್ಜುನ್ ರಾಮ್, ಭನ್ವರ್ ಲಾಲ್ ಬಗಾರಿಯಾ, ಭಿಕಾ ರಾಮ್, ಮೂಲಾ ರಾಮ್ ಮತ್ತು ನರೇಶ್ ಸಿಂಗ್ ಸೇರಿ 6 ಯೋಧರನ್ನು ಸೆರೆ ಹಿಡಿಯಿತು. ಬಳಿಕ ಇವರಿಗೆ ಚಿತ್ರವಿಚಿತ್ರವಾಗಿ ಹಿಂಸಿಸಿ 22 ದಿನಗಳ ಸೆರೆಯ ನಂತರ ಕೊಂದಿತು.

ಪೋಸ್ಟ್ ಮಾರ್ಟಮ್ ರಿಪೋರ್ಟ್ ಪ್ರಕಾರ, ಕ್ಯಾಪ್ಟನ್ ಸೌರಭ್ ಕಾಲಿಯಾರನ್ನು ಸಿಗರೇಟ್ ನಿಂದ ಹಿಂಸಿಸಿರುವ ಮಾರ್ಕ್ ಗಳು ಪತ್ತೆಯಾಗಿವೆ. ಕಣ್ಣಿಗೆ ರಾಡ್ ನಿಂದ ಚುಚ್ಚಿ ಕಣ್ಣು ತೆಗೆದಿದ್ದರು, ಕಿವಿ, ಕೈ ಕಾಲುಗಳನ್ನು ಕತ್ತರಿಸಿ ಅವರ ಮರ್ಮಾಂಗವನ್ನು ಕತ್ತರಿಸಿ ತುಂಡು ತುಂಡಾಗಿರುವ ದೇಹವನ್ನು ಭಾರತಕ್ಕೆ 22 ದಿನಗಳ ನಂತರ ಹಸ್ತಾಂತರಿಸಿದ್ದರು.

Capt Saurabh Kalia

ಕ್ಯಾಪ್ಟನ್ ಸೌರಭ್ ಕಾಲಿಯಾ ಪೋಷಕರು

ಇನ್ನು ಕ್ಯಾಪ್ಟನ್ ಸೌರಭ್ ಕಾಲಿಯಾ ಅವರನ್ನು ಪಾಕಿಸ್ತಾನ ಸೆರೆಹಿಡಿದಾಗ ಅವರಿಗೆ ಕೇವಲ 22 ವರ್ಷ ವಯಸ್ಸಾಗಿತ್ತು. ಪಾಪಿ ಪಾಕಿಸ್ತಾನ ನನ್ನ ಮಗನಿಗೆ ಮಾಡಿದ್ದು ಅನ್ಯಾಯ ಯುದ್ಧ ನೀತಿಯ ಪ್ರಕಾರ ಇದು ತಪ್ಪು, ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನಿಸಿ ಎಂಬ ಬೇಡಿಕೆಯನ್ನು ಕಾಲಿಯಾ ಅವರ ಅಸಹಾಯಕ ತಂದೆ ನರೇಂದರ್ ಕಾಲಿಯಾ ಇಂದಿಗೂ ಮುಂದಿಡುತ್ತಿದ್ದಾರೆ. ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.

ವಿಪರ್ಯಾಸವೆಂದರೆ ಕಾಲಿಯಾ ಕುಟುಂಬವು ತಮ್ಮ ಮನೆ ಮಗನ 23 ನೇ ಹುಟ್ಟುಹಬ್ಬವನ್ನು ಜೂನ್ 29, 1999 ರಂದು ಆಚರಿಸಬೇಕಿತ್ತು ಆದ್ರೆ ಅಂದು ಮಗನ ತುಂಡು ತುಂಡಾದ ದೇಹವನ್ನು ಭಾರತೀಯ ಸೇನೆ ಹಸ್ತಾಂತರಿಸಿದಾಗ ಪೋಷಕರಿಗೆ ಭೂಮಿಯೇ ಬಾಯ್ತೆರೆದು ಎಲ್ಲವೂ ನಶ್ವರವಾದಂತಾಗಿತ್ತು. ಹುಟ್ಟಹಬ್ಬದ ಸಂಭ್ರಮದಲ್ಲಿರಬೇಕಿದ್ದ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿತ್ತು. ಮಗ ಮೇಲಿದ್ದ ಎಲ್ಲಾ ಆಸೆ, ಕನಸುಗಳು ಚಿತೆ ಏರಿದ್ದವು.

23 ವರ್ಷಗಳ ನಂತರ, ದೇಶವು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸುತ್ತಿದೆ. ಆದ್ರೆ ಕಾಲಿಯಾ ಕುಟುಂಬವು ತಮ್ಮ ಮನೆ ಮಗನನ್ನು ಕಳೆದು ಕೊಂಡು ಕತ್ತಲಲ್ಲಿ ಮುಳುಗಿದೆ. ತಮ್ಮ ಮಗ ಕಾರ್ಗಿಲ್ ಯುದ್ಧಕ್ಕೆ ಹೋಗುವ ಮುನ್ನ ಅವಶ್ಯಕತೆ ಬಿದ್ದಾಗ ಹಣ ಡ್ರಾ ಮಾಡಿಕೊಳ್ಳಿ ಎಂದು ಬರೆದುಕೊಟ್ಟು ಹೋಗಿದ್ದ ಚೆಕ್ ನೋಡುತ್ತ ತಮ್ಮ ಮಗನ ನೆನಪಲ್ಲೇ ದಿನಗಳನ್ನು ಕಳೆಯುತ್ತಿದ್ದಾರೆ.

ಸೌರಭ್ ಕಾಲಿಯಾರ ಶಿಕ್ಷಣ

ಸೌರಭ್ ಕಾಲಿಯಾ 29 ಜೂನ್ 1976 ರಂದು ಅಮೃತಸರದಲ್ಲಿ ಜನಿಸಿದರು. ಇವರ ತಾಯಿ ವಿಜಯಾ ಕಾಲಿಯಾ ಮತ್ತು ತಂದೆ ಡಾ. ಎನ್. ಕೆ. ಕಾಲಿಯಾ. ಇವರು ಡಿ.ಎ.ವಿ. ಪಬ್ಲಿಕ್ ಶಾಲೆ ಪಾಲಂಪುರದಲ್ಲಿ ವಿಧ್ಯಾಭ್ಯಾಸವನ್ನು ಮಾಡಿದರು. ಬಿಎಸ್ಸಿ ಪದವಿಯನ್ನು ಪಾಲಂಪುರದಲ್ಲಿ ಬಿಎಸ್ಸಿ ಮೆಡಿಕಲ್‍ನಲ್ಲಿ ಪಡೆದುಕೊಂಡರು. 1997 ರಲ್ಲಿ ಪದವೀಧರರಾದರು. 1997 ರಲ್ಲಿ ಡೆಹ್ರಾಡೂನ್‍ನ ಮಿಲಿಟರಿ ಅಕಾಡೆಮಿಗೆ ಸೇರಿದರು.

Published On - 7:00 am, Wed, 27 July 22

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ