Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರಕ್ಕೆ ಕೊವಿಡ್ 3ನೇ ಅಲೆಯ ಕಾರ್ಮೋಡ; 8 ಲಕ್ಷ ಮಂದಿಗೆ ಸೋಂಕು ತಗುಲುವ ಆತಂಕ

ಕೇವಲ 2ರಿಂದ 4 ವಾರಗಳ ಒಳಗೆ ಮಹಾರಾಷ್ಟ್ರಕ್ಕೆ ಕೊವಿಡ್ 3ನೇ ಅಲೆ ವ್ಯಾಪಿಸುವ ಆತಂಕವಿದ್ದು, ಸಕ್ರಿಯ ಸೋಂಕು ಪ್ರಕರಣಗಳು 8 ಲಕ್ಷ ಮುಟ್ಟಬಹುದು ಎಂದು ಕಾರ್ಯಪಡೆಯ ಸದಸ್ಯರು ವಿಶ್ಲೇಷಿಸಿದ್ದಾರೆ.

ಮಹಾರಾಷ್ಟ್ರಕ್ಕೆ ಕೊವಿಡ್ 3ನೇ ಅಲೆಯ ಕಾರ್ಮೋಡ; 8 ಲಕ್ಷ ಮಂದಿಗೆ ಸೋಂಕು ತಗುಲುವ ಆತಂಕ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 17, 2021 | 9:40 PM

ಮುಂಬೈ: ಕರ್ನಾಟಕದ ನೆರೆಯಲ್ಲಿರುವ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ 3ನೇ ಅಲೆ ಶೀಘ್ರದಲ್ಲಿಯೇ ಬಾಧಿಸಬಹುದು ಎಂದು ಮಹಾರಾಷ್ಟ್ರ ಸರ್ಕಾರದ ತಜ್ಞರ ಕಾರ್ಯಪಡೆ ಎಚ್ಚರಿಕೆ ನೀಡಿದೆ. ಇನ್ನು ಕೇವಲ 2ರಿಂದ 4 ವಾರಗಳ ಒಳಗೆ ಮಹಾರಾಷ್ಟ್ರಕ್ಕೆ ಕೊವಿಡ್ 3ನೇ ಅಲೆ ವ್ಯಾಪಿಸುವ ಆತಂಕವಿದ್ದು, ಸಕ್ರಿಯ ಸೋಂಕು ಪ್ರಕರಣಗಳು 8 ಲಕ್ಷ ಮುಟ್ಟಬಹುದು ಎಂದು ಕಾರ್ಯಪಡೆಯ ಸದಸ್ಯರು ವಿಶ್ಲೇಷಿಸಿದ್ದಾರೆ. ಈವರೆಗೆ ಸೋಂಕು ಬಾಧಿಸದ ಕೆಳ ಮಧ್ಯಮವರ್ಗದ ಜನರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಈ ಹಿಂದೆ ಆಂದಾಜಿಸಿದ್ದಂತೆ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಬಾಧಿಸಬಹುದು ಎಂದು ಕಾರ್ಯಪಡೆ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 3ನೇ ಅಲೆಯ ಪರಿಣಾಮಗಳು ಹೀಗಿರಬಹುದು ಎಂದು ಕಾರ್ಯಪಡೆ ಸದಸ್ಯರು ಸರ್ಕಾರಕ್ಕೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. 3ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆಯು 2ನೇ ಅಲೆಯ ದುಪ್ಪಟ್ಟು ಪ್ರಮಾಣದಲ್ಲಿರಬಹುದು. ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷಕ್ಕೆ ಮುಟ್ಟಬಹುದು ಎಂದು ಕಾರ್ಯಪಡೆ ಸದಸ್ಯರು ಮಾಹಿತಿ ನೀಡಿದರು.

ಒಟ್ಟು ಪ್ರಕರಣಗಳ ಪೈಕಿ ಶೇ 10ರಷ್ಟು ಮಾತ್ರ ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಾಣಿಸಬಹುದು. ಮೊದಲ ಎರಡು ಅಲೆಗಳಲ್ಲಿಯೂ ಇಂಥದ್ದೇ ವಿದ್ಯಮಾನ ಕಂಡುಬಂದಿತ್ತು. ಕೊವಿಡ್ ತಡೆಯಲೆಂದು ರೂಪಿಸಿರುವ ಶಿಷ್ಟಾಚಾರಗಳನ್ನು ಜನರು ಚಾಚೂತಪ್ಪದೆ ಪಾಲಿಸಬೇಕು. ಬ್ರಿಟನ್​ನಲ್ಲಿ 2ನೇ ಅಲೆ ನಿಯಂತ್ರಣಕ್ಕೆ ಬಂದ ನಾಲ್ಕು ವಾರಗಳ ಒಳಗೆ 3ನೇ ಅಲೆ ಕಾಣಿಸಿಕೊಂಡಿತ್ತು. ಅಂಥದ್ದೇ ಪರಿಸ್ಥಿತಿಯೂ ಇಲ್ಲಿಯೂ ಪುನರಾವರ್ತನೆ ಆಗಬಹುದು ಎಂದು ತಜ್ಞರು ಎಚ್ಚರಿಕೆ ಹೇಳಿದ್ದಾರೆ.

ಸಾಮಾನ್ಯವಾಗಿ ಎರಡು ಅಲೆಗಳ ನಡುವೆ 100 ದಿನಗಳ ಅಂತರ ಇರುತ್ತದೆ. ಒಂದು ಅಲೆಯ ಉತ್ತುಂಗ ಸ್ಥಿತಿಯಿಂದ ಮತ್ತೊಂದು ಅಲೆಯ ಆರಂಭಕ್ಕೆ ಎಂಟು ವಾರಗಳ ಅಂತರ ಇರುವುದು ಹಲವು ದೇಶಗಳಲ್ಲಿ ಅನುಭವಕ್ಕೆ ಬಂದ ವಿಚಾರ.

ಮಹಾರಾಷ್ಟ್ರದಲ್ಲಿ ಕಳೆದ 2 ವರ್ಷಗಳಿಂದ 5 ಹಂತಗಳ ಅನ್​ಲಾಕ್ ಮಾದರಿ ಜಾರಿಯಲ್ಲಿದೆ. ನಾಗಪುರ ಮತ್ತು ಪುಣೆ ಸೇರಿದಂತೆ 15 ಜಿಲ್ಲೆಗಳಲ್ಲಿ ಲಾಕ್​ಡೌನ್ ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸಲಾಗುತ್ತಿದೆ. ಮುಂಬೈ ಮತ್ತು ಅದರ ಉಪನಗರಗಳಾದ ಥಾಣೆ, ವಸಾಯಿ-ವಿರಾರ್, ಕಲ್ಯಾಣ್-ಡೊಂಬಿವಿಲಿ ಮತ್ತು ಇತರ ಪ್ರದೇಶಗಳನ್ನು ವಿಂಗಡಿಸಲಾಗಿದೆ. ರಾಜ್ಯದ ಇತರ 34 ಜಿಲ್ಲೆಗಳನ್ನು ಪ್ರತ್ಯೇಕಗೊಳಿಸಿ ಒಂದು ಆಡಳಿತಾತ್ಮಕ ಘಟಕಗಳನ್ನಾಗಿ ನಿರ್ವಹಿಸಲಾಗುತ್ತಿದೆ. ಶೇ 5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಮತ್ತು ಶೇ 25ಕ್ಕಿಂತ ಕಡಿಮೆ ಆಕ್ಸಿಜನ್ ಬೆಡ್​ಗಳು ಭರ್ತಿಯಾಗಿರುವ ಜಿಲ್ಲೆಗಳಲ್ಲಿ ನಿರ್ಬಂಧ ತೆರವುಗೊಳಿಸಲು ಅವಕಾಶ ನೀಡಲಾಗಿದೆ.

ಜನರಲ್ಲಿ ಇನ್ನೂ ಕೊವಿಡ್​ ತಡೆ ಮಾರ್ಗಸೂಚಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಸರಿಸಬೇಕು ಎಂಬ ಮನಃಸ್ಥಿತಿ ರೂಪುಗೊಂಡಿಲ್ಲ. ಮಾಸ್ಕ್​ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲನೆಯ ಬಗ್ಗೆ ಜನರು ನಿರ್ಲಕ್ಷ್ಯ ತೋರುವುದು ಮುಂದುವರಿದಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಎಲ್ಲಾ ಪ್ರಕರಣಗಳು ಪತ್ತೆಯಾಗದಿರುವುದೂ ಕಾರಣ ಇರಬಹುದು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

(Maharashtra on Edge of 3rd Covid Wave Active Cases May Reach 8 Lakh Task Force)

ಇದನ್ನೂ ಓದಿ: ಅವಧಿಗೂ ಮುನ್ನವೇ ಹರಡಲಿದೆಯಾ ಕೊವಿಡ್ 3ನೇ ಅಲೆ? ಪ್ರತಿ ದಿನ ಶೇ.5ರಷ್ಟು ಮಕ್ಕಳಲ್ಲಿ ಸೋಂಕು

ಇದನ್ನೂ ಓದಿ: ಕೊರೊನಾ ಅವಕೃಪೆ: ಲಾಕ್‌ಡೌನ್‌ನಿಂದ ಇಡೀ ದೇಶಕ್ಕೆ 5.4 ಲಕ್ಷ ಕೋಟಿ ರೂ ನಷ್ಟ, 3ನೇ ಅಲೆ ಬಂದರಂತೂ… ಇನ್ನೂ ನಷ್ಟ ನಷ್ಟ

Published On - 9:39 pm, Thu, 17 June 21

ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ