ವಿಧಾನಸಭೆ ಸ್ಪೀಕರ್ಗೆ ನಿಂದನೆ: ಮಹಾರಾಷ್ಟ್ರದ 12 ಬಿಜೆಪಿ ಶಾಸಕರು ಅಮಾನತು
Maharashtra: ಇಂದು ಒಬಿಸಿ ವಿಷಯದ ವಿಪಕ್ಷಗಳು ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದು ಸ್ಪೀಕರ್ ಭಾಸ್ಕರ್ ಜಾಧವ್ ಅವರು ಮಾತನಾಡಲು ಸಾಕಷ್ಟು ಸಮಯ ನೀಡಿಲ್ಲ ಎಂದು ಆರೋಪಿಸಿದ್ದರು. ಕಲಾಪ ಮುಂದೂಡಿದ ನಂತರ ವಿಷಯ ಮತ್ತಷ್ಟು ಉಲ್ಬಣಗೊಂಡಿತು.
ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಕಲಾಪದ ವೇಳೆ ಸ್ಪೀಕರ್ನ್ನು ನಿಂದನೆ ಮಾಡಿದ ಆರೋಪದಲ್ಲಿ ಬಿಜೆಪಿಯ 12 ಶಾಸಕರನ್ನು ಒಂದು ವರ್ಷದವರೆಗೆ ಸದನವು ಅಮಾನತುಗೊಳಿಸಿದೆ. ವಿಧಾನಸಭಾ ಕಲಾಪದ ವೇಳೆ ಹಾಜರಿದ್ದ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್, ಇದು “ಸುಳ್ಳು ಆರೋಪಗಳು” ಎಂದು ಹೇಳಿದ್ದಾರೆ. “ಇವು ಸುಳ್ಳು ಆರೋಪಗಳು. ಇದು ಕಟ್ಟು ಕತೆ. ಬಿಜೆಪಿಯಿಂದ ಯಾರೂ ಅವಹೇಳನ ಮಾಡಿಲ್ಲ” ಎಂದು ಫಡ್ನವೀಸ್ ಮಾಧ್ಯಮಕ್ಕೆ ತಿಳಿಸಿದರು. “ಒಬಿಸಿ (ಇತರ ಹಿಂದುಳಿದ ಜಾತಿ) ಮೀಸಲಾತಿಗಾಗಿ, ನಾವು 12 ಕ್ಕೂ ಹೆಚ್ಚು ಶಾಸಕರನ್ನು ತ್ಯಾಗಮಾಡಲು ಸಿದ್ಧರಿದ್ದೇವೆ” ಎಂದು ಅವರು ಹೇಳಿದರು, ಈ ಅಧಿವೇಶನದಲ್ಲಿ ತಮ್ಮ ಪಕ್ಷವು ಹೈಲೈಟ್ ಮಾಡಲು ನಿರ್ಧರಿಸಿರುವ ಪ್ರಮುಖ ವಿಷಯಗಳಲ್ಲಿ ಇದೂ ಒಂದು ಎಂದು ಅವರು ಹೇಳಿದ್ದಾರೆ.
ಇಂದು ಒಬಿಸಿ ವಿಷಯದ ವಿಪಕ್ಷಗಳು ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದು ಸ್ಪೀಕರ್ ಭಾಸ್ಕರ್ ಜಾಧವ್ ಅವರು ಮಾತನಾಡಲು ಸಾಕಷ್ಟು ಸಮಯ ನೀಡಿಲ್ಲ ಎಂದು ಆರೋಪಿಸಿದ್ದರು. ಕಲಾಪ ಮುಂದೂಡಿದ ನಂತರ ವಿಷಯ ಮತ್ತಷ್ಟು ಉಲ್ಬಣಗೊಂಡಿತು.
“ಪ್ರತಿಪಕ್ಷದ ನಾಯಕರು ನನ್ನ ಕ್ಯಾಬಿನ್‌ಗೆ ಬಂದು ದೇವೇಂದ್ರ ಫಡ್ನವೀಸ್ ಮತ್ತು ಹಿರಿಯ ನಾಯಕ ಚಂದ್ರಕಾಂತ್ ಪಾಟೀಲ್ ಅವರ ಮುಂದೆ ಅಸಂಸದೀಯ ಭಾಷೆ ಬಳಸಿ ನನ್ನನ್ನು ನಿಂದಿಸಿದ್ದಾರೆ. ಕೆಲವು ನಾಯಕರು ನನ್ನ ಮೇಲೆ ದಾಳಿ ನಡೆಸಿರುವುದಾಗಿ ಜಾಧವ್ ಮಾಧ್ಯಮಗಳಿಗೆ ತಿಳಿಸಿದರು.
ಸ್ಪೀಕರ್ನ್ನು ಭೇಟಿಯಾಗಲು ಹೋದ ನಾಯಕರನ್ನು ಸಹ ನಿಂದಿಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ರಾಜ್ಯದ ಸಂಸದೀಯ ವ್ಯವಹಾರಗಳ ಸಚಿವರು ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಜಾಧವ್ ಕೇಳಿಕೊಂಡರು.
12 ಶಾಸಕರನ್ನು ಒಂದು ವರ್ಷ ಅಮಾನತುಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಪಟ್ಟಿಯಲ್ಲಿ ಸಂಜಯ್ ಕುಟೆ, ಆಶಿಶ್ ಶೆಲಾರ್, ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಕಲ್ಕರ್, ಪರಾಗ್ ಅಲವ್ನಿ, ಹರೀಶ್ ಪಿಂಪಾಲೆ, ರಾಮ್ ಸತ್ಪುಟೆ, ವಿಜಯ್ ಕುಮಾರ್ ರಾವಲ್, ಯೋಗೇಶ್ ಸಾಗರ್, ನಾರಾಯಣ್ ಕುಚೆ, ಕೀರ್ತಿಕುಮಾರ್ ಬಾಂಗ್ಡಿಯಾ ಹೆಸರು ಇದೆ.
“ಈ ಠಾಕ್ರೆ ಸರ್ಕಾರ ತಾಲಿಬಾನ್ನಂತೆ ವರ್ತಿಸುತ್ತಿದೆ. ನಾನು ಈ ಕ್ರಮವನ್ನು ಖಂಡಿಸುತ್ತೇನೆ. ನಾನು ಅಥವಾ ಬೇರೆ ಯಾವುದೇ ಶಾಸಕರು ಭಾಸ್ಕರ್ ಜಾಧವ್ ಅವರನ್ನು ನಿಂದಿಸಲಿಲ್ಲ” ಎಂದು ಬಿಜೆಪಿ ಶಾಸಕ ಆಶಿಶ್ ಶೆಲಾರ್ ಹೇಳಿದ್ದಾರೆ.
“ಯಾವುದೇ ಬಿಜೆಪಿ ಸದಸ್ಯರು ಕ್ಯಾಬಿನ್‌ನಲ್ಲಿ ಅವಹೇಳನ ಮಾಡಿಲ್ಲ. ನಾನು ಅವರಲ್ಲಿ ಕ್ಷಮೆಯಾಚಿಸಿದ್ದೇನೆ ಆದರೆ ಅದರ ಹೊರತಾಗಿಯೂ ಅವರು ಅಮಾನತುಗೊಳಿಸಿದ್ದಾರೆ” ಎಂದು ಅವರು ಹೇಳಿದರು. ಮಾಜಿ ಸ್ಪೀಕರ್ ನಾನಾ ಪಟೋಲೆ ರಾಜೀನಾಮೆ ನೀಡಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರಿಂದ ವಿಧಾನಸಭೆಯು ಹೊಸ ಸ್ಪೀಕರ್ ಅವರನ್ನು ಆಯ್ಕೆ ಮಾಡಬೇಕಾಗಿದೆ. ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸಂಖ್ಯಾಬಲ ಹೊಂದಿದ್ದರೂ ಬಿಜೆಪಿ ಈ ಹುದ್ದೆಗೆ ತನ್ನದೇ ಅಭ್ಯರ್ಥಿಯನ್ನು ಬಯಸಿದೆ.
2019 ರ ನವೆಂಬರ್‌ನಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಿದಾಗ ಅಧಿಕಾರ ಹಂಚಿಕೆ ವ್ಯವಸ್ಥೆಯಲ್ಲಿ ಕಾಂಗ್ರೆಸ್‌ಗೆ ಸ್ಪೀಕರ್ ಹುದ್ದೆ ನೀಡಲಾಯಿತು.
ಇದನ್ನೂ ಓದಿ: Bharat Chemicals: ಮಹಾರಾಷ್ಟ್ರದ ಭಾರತ್ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ; ಹಲವರಿಗೆ ಗಾಯ
(Maharashtra suspended 12 MLAs of the BJP for a year for abusing and manhandling the Speaker-in-chair)