AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Most Expensive City: ಭಾರತದಲ್ಲಿ ವಲಸಿಗರಿಗೆ ದುಬಾರಿ ನಗರ ಮುಂಬೈ; ನಂತರದ ಸ್ಥಾನದಲ್ಲಿದೆ ದೆಹಲಿ, ಬೆಂಗಳೂರು

ಮರ್ಸರ್ಸ್ ಪ್ರಕಾರ ಮುಂಬೈ ಜಾಗತಿಕ ಶ್ರೇಯಾಂಕದಲ್ಲಿ 147 ನೇ ಸ್ಥಾನದಲ್ಲಿದೆ. ನವದೆಹಲಿ 169 ನೇ ಸ್ಥಾನದಲ್ಲಿದೆ. ಅದೇ ವೇಳೆ ಚೆನ್ನೈ (184), ಬೆಂಗಳೂರು (189), ಹೈದರಾಬಾದ್ (202), ಕೋಲ್ಕತ್ತಾ (211), ಮತ್ತು ಪುಣೆ (213) ಸ್ಥಾನದಲ್ಲಿದೆ.

Most Expensive City: ಭಾರತದಲ್ಲಿ ವಲಸಿಗರಿಗೆ ದುಬಾರಿ ನಗರ ಮುಂಬೈ; ನಂತರದ ಸ್ಥಾನದಲ್ಲಿದೆ ದೆಹಲಿ, ಬೆಂಗಳೂರು
ಮುಂಬೈ ನಗರ
Follow us
ರಶ್ಮಿ ಕಲ್ಲಕಟ್ಟ
|

Updated on: Jun 08, 2023 | 1:14 PM

ಮರ್ಸರ್ಸ್ ಕಾಸ್ಟ್ ಆಫ್ ಲಿವಿಂಗ್ (Mercer’s Cost of Living) ವರದಿಯ ಪ್ರಕಾರ ವಲಸಿಗರಿಗೆ ದುಬಾರಿ ನಗರ ಎಂದರೆ ಅದು ಮುಂಬೈ(Mumbai). ನವದೆಹಲಿ ಮತ್ತು ಬೆಂಗಳೂರು (Bangalore) ನಗರ ಈ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಐದು ಖಂಡಗಳ 227 ನಗರಗಳಲ್ಲಿ ಮರ್ಸರ್ಸ್ ಕಾಸ್ಟ್ ಆಫ್ ಲಿವಿಂಗ್ ಸಮೀಕ್ಷೆಯನ್ನು ನಡೆಸಲಾಯಿತು. ಮರ್ಸರ್ಸ್ ಪ್ರಕಾರ ಮುಂಬೈ ಜಾಗತಿಕ ಶ್ರೇಯಾಂಕದಲ್ಲಿ 147 ನೇ ಸ್ಥಾನದಲ್ಲಿದೆ. ನವದೆಹಲಿ 169 ನೇ ಸ್ಥಾನದಲ್ಲಿದೆ. ಅದೇ ವೇಳೆ ಚೆನ್ನೈ (184), ಬೆಂಗಳೂರು (189), ಹೈದರಾಬಾದ್ (202), ಕೋಲ್ಕತ್ತಾ (211), ಮತ್ತು ಪುಣೆ (213) ಸ್ಥಾನದಲ್ಲಿದೆ. ಜಾಗತಿಕ ಮಟ್ಟದಲ್ಲಿ ಹಾಂಗ್ ಕಾಂಗ್, ಸಿಂಗಾಪುರ್ ಮತ್ತು ಜ್ಯೂರಿಚ್ ಈ ವರ್ಷ ಅಂತರರಾಷ್ಟ್ರೀಯ ಉದ್ಯೋಗಿಗಳಿಗೆ ಅತ್ಯಂತ ದುಬಾರಿ ನಗರ ಎಂದು ವರದಿ ಹೇಳಿದೆ.

ವಸತಿ, ಸಾರಿಗೆ, ಆಹಾರ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಮತ್ತು ಮನರಂಜನೆ ಸೇರಿದಂತೆ ಪ್ರತಿ ಸ್ಥಳದಲ್ಲಿ 200 ಕ್ಕೂ ಹೆಚ್ಚು ವಸ್ತುಗಳ ವೆಚ್ಚವನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಉದ್ಯೋಗದಾತರು ಅಂತರರಾಷ್ಟ್ರೀಯ ನಿಯೋಜಿತರಿಗೆ ಸಮರ್ಥ ಮತ್ತು ಪಾರದರ್ಶಕ ಪರಿಹಾರ ಪ್ಯಾಕೇಜ್‌ಗಳನ್ನು ವಿನ್ಯಾಸಗೊಳಿಸಲು ಅಗತ್ಯವಿರುವ ಎಲ್ಲಾ ಪ್ರಮುಖ ಮಾಹಿತಿಯನ್ನು ಸಮೀಕ್ಷೆಯಲ್ಲಿ ಬಳಸಲಾಗಿದೆ. ವಿಶ್ವಾದ್ಯಂತ 400 ಕ್ಕೂ ಹೆಚ್ಚು ನಿಯೋಜನೆ ಸ್ಥಳಗಳಿಗೆ ದಕ್ಷ ಮತ್ತು ಸಮಾನ ಪರಿಹಾರ ಪ್ಯಾಕೇಜ್‌ಗಳನ್ನು ವಿನ್ಯಾಸಗೊಳಿಸಲು ಇದು ಅಂತರರಾಷ್ಟ್ರೀಯ ಉದ್ಯೋಗದಾತರಿಗೆ ಸಹಾಯ ಮಾಡುತ್ತದೆ. ವರದಿಯ ಪ್ರಕಾರ, ಶ್ರೇಯಾಂಕದಲ್ಲಿ ಕಡಿಮೆ ವೆಚ್ಚದ ಸ್ಥಳಗಳಲ್ಲಿ ಹವಾನಾ, ಕಳೆದ ವರ್ಷದ ಮಧ್ಯದಲ್ಲಿ ಕರೆನ್ಸಿ ಅಪಮೌಲ್ಯೀಕರಣದ ಕಾರಣದಿಂದಾಗಿ 83 ಸ್ಥಾನಗಳನ್ನು ಕಳೆದುಕೊಂಡಿತು. ಪಾಕಿಸ್ತಾನದ ಕರಾಚಿ ಮತ್ತು ಇಸ್ಲಾಮಾಬಾದ್ ನಗರಗಳೂ ಈ ಪಟ್ಟಿಯಲ್ಲಿದೆ.

ಭಾರತದ ನಗರಗಳಲ್ಲಿ ಚೆನ್ನೈ, ಹೈದರಾಬಾದ್, ಕೋಲ್ಕತ್ತಾ ಮತ್ತು ಪುಣೆಯಲ್ಲಿ ವಸತಿ ವೆಚ್ಚ ಮುಂಬೈಗಿಂತ 50 ಪ್ರತಿಶತದಷ್ಟು ಕಡಿಮೆಯಾಗಿದೆ. ಈ ನಗರಗಳಲ್ಲಿ ಕೋಲ್ಕತ್ತಾದಲ್ಲಿ ವಲಸಿಗರಿಗೆ ವಸತಿ ಸೌಕರ್ಯ ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದು ಇದು ನಿವಾಸಿಗಳು ಮತ್ತು ವಲಸಿಗರಿಗೆ ಹೆಚ್ಚು ಕೈಗೆಟುಕುವ ಆಯ್ಕೆಯನ್ನು ಒದಗಿಸುತ್ತದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Siri Fort Secret Tunnel: ದೆಹಲಿಯ ಸಿರಿ ಕೋಟೆಯಲ್ಲಿ ಉತ್ಖನನದ ವೇಳೆ ಪತ್ತೆಯಾಯ್ತು ಖಿಲ್ಜಿ ರಾಜವಂಶದ ಸುರಂಗ

ಜಾಗತಿಕ ಶ್ರೇಯಾಂಕದಲ್ಲಿ ಭಾರತೀಯ ನಗರಗಳಲ್ಲಿನ ವ್ಯತ್ಯಾಸ ಹಲವು ಅಂಶಗಳನ್ನು ಒಳಗೊಂಡಿದೆ. ನಿರ್ದಿಷ್ಟವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬದಲಾವಣೆ ಆಗಿರುವುದು ಕರೆನ್ಸಿ ಚಲಾವಣೆಯಿಂದಲೂ ಭಾಗಶಃ ಪ್ರಭಾವಿತವಾಗಿದೆ. ಯುರೋಪ್ ನಂಥಾ ಇತರ ಪ್ರದೇಶಗಳಲ್ಲಿ ಸರಕು ಮತ್ತು ಸೇವೆಗಳ ಬೆಲೆಗಳಲ್ಲಿನ ಹಣದುಬ್ಬರದ ಹೆಚ್ಚಳವು ಭಾರತೀಯ ನಗರಗಳ ಒಟ್ಟಾರೆ ಶ್ರೇಯಾಂಕಗಳನ್ನು ಕೆಳಗಿಳಿಸುವಲ್ಲಿ ಪ್ರಭಾವ ಬೀರಿದೆ ಎಂದು ಮರ್ಸರ, ಇಂಡಿಯಾ ಮೊಬಿಲಿಟಿ ಲೀಡರ್ ರಾಹುಲ್ ಶರ್ಮಾ ಹೇಳಿದ್ದಾರೆ. ಮುಂಬೈ (147) ಮತ್ತು ದೆಹಲಿ (169) ಜಾಗತಿಕ ಬಹುರಾಷ್ಟ್ರೀಯ ಸಂಸ್ಥೆಗಳಿಗೆ (MNCs) ಸಾಮಾನ್ಯ ವೆಚ್ಚದಲ್ಲಿ ಉತ್ತಮ ವಸತಿ ಒದಗಿಸುತ್ತವೆ ಎಂದು ವರದಿಯು ಉಲ್ಲೇಖಿಸಿದೆ.

ಮುಂಬೈ ಮತ್ತು ದೆಹಲಿ ವಲಸಿಗರಿಗೆ ಏಷ್ಯಾದ ಟಾಪ್ 35 ಅತ್ಯಂತ ದುಬಾರಿ ನಗರಗಳಲ್ಲಿ ಸ್ಥಾನ ಪಡೆದಿವೆ ಎಂದು 2023 ರಲ್ಲಿ ಸಮೀಕ್ಷೆ ಹೇಳಿದೆ. ಆದಾಗ್ಯೂ, ಮುಂಬೈ ಏಷ್ಯಾದ ನಗರಗಳಲ್ಲಿ ಹಿಂದಿನ ವರ್ಷದಿಂದ (2022) 27 ನೇ ಸ್ಥಾನಕ್ಕೆ ಇಳಿದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ