ಪಾಕಿಸ್ತಾನ ಮತ್ತು ಚೀನಾದ ಜಂಟಿ ಹೇಳಿಕೆಯಲ್ಲಿ ಜಮ್ಮು ಕಾಶ್ಮೀರದ ಉಲ್ಲೇಖ; ಇದು ಅನಗತ್ಯ ಎಂದ ಭಾರತ
07 ಜೂನ್ 2024 ರ ಚೀನಾ ಮತ್ತು ಪಾಕಿಸ್ತಾನದ ನಡುವಿನ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಬಗ್ಗೆ ಅನಗತ್ಯ ಉಲ್ಲೇಖಗಳನ್ನು ನಾವು ಗಮನಿಸಿದ್ದೇವೆ" ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಹೇಳಿಕೆ ತಿಳಿಸಿದೆ.
ದೆಹಲಿ ಜೂನ್ 13: ಚೀನಾ ಮತ್ತು ಪಾಕಿಸ್ತಾನದ (Pakistan) ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಉಲ್ಲೇಖಗಳನ್ನು ವಿದೇಶಾಂಗ ಸಚಿವಾಲಯವು ಗುರುವಾರ ‘ಅನಗತ್ಯ’ ಎಂದು ಹೇಳಿದೆ. “07 ಜೂನ್ 2024 ರ ಚೀನಾ ಮತ್ತು ಪಾಕಿಸ್ತಾನದ ನಡುವಿನ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಬಗ್ಗೆ ಅನಗತ್ಯ ಉಲ್ಲೇಖಗಳನ್ನು ನಾವು ಗಮನಿಸಿದ್ದೇವೆ” ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೊರಡಿಸಿದ ಹೇಳಿಕೆ ತಿಳಿಸಿದೆ. “ನಾವು ಅಂತಹ ಉಲ್ಲೇಖಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ. ಈ ವಿಷಯದಲ್ಲಿ ನಮ್ಮ ನಿಲುವು ಸ್ಥಿರವಾಗಿದೆ, ಇದು ಸಂಬಂಧಪಟ್ಟ ದೇಶಗಳಿಗೆ ಚೆನ್ನಾಗಿ ತಿಳಿದಿದೆ ಎಂದು ಸಚಿವಾಲಯ ಹೇಳಿದೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿವೆ. ಅದು ಯಾವಾಗಲೂ ಹಾಗೆಯೇ ಉಳಿಯುತ್ತದೆ ಎಂದು ಸಚಿವಾಲಯ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿವೆ. ಇದರ ಬಗ್ಗೆ ಪ್ರತಿಕ್ರಿಯಿಸಲು ಯಾವುದೇ ದೇಶಕ್ಕೆ ಯೋಗ್ಯತೆ ಇಲ್ಲ ಎಂದು ಎಂಇಎ ಹೇಳಿದೆ.
ಪಾಕಿಸ್ತಾನ ಮತ್ತು ಚೀನಾದ ಜೂನ್ 7 ರ ಜಂಟಿ ಹೇಳಿಕೆಯು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅಡಿಯಲ್ಲಿನ ಚಟುವಟಿಕೆಗಳು ಮತ್ತು ಯೋಜನೆಗಳನ್ನು ಉಲ್ಲೇಖಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. “ಅದೇ ಜಂಟಿ ಹೇಳಿಕೆಯು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಎಂದು ಕರೆಯಲ್ಪಡುವ ಚಟುವಟಿಕೆಗಳು ಮತ್ತು ಯೋಜನೆಗಳನ್ನು ಉಲ್ಲೇಖಸಿದ್ದ ಅವುಗಳಲ್ಲಿ ಕೆಲವು ಭಾರತದ ಸಾರ್ವಭೌಮ ಪ್ರದೇಶದ ಅಡಿಯಲ್ಲಿ ಪಾಕಿಸ್ತಾನದಿಂದ ಬಲವಂತವಾಗಿ ಮತ್ತು ಅಕ್ರಮವಾಗಿ ವಶಪಡಿಸಿಕೊಂಡಿವೆ” ಎಂದು ಹೇಳಿದೆ.
“ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ಮೇಲೆ ಪ್ರಭಾವ ಬೀರುವ ಈ ಪ್ರದೇಶಗಳ ಪಾಕಿಸ್ತಾನದ ಅಕ್ರಮ ಆಕ್ರಮವನ್ನು ಬಲಪಡಿಸಲು ಅಥವಾ ಕಾನೂನುಬದ್ಧಗೊಳಿಸಲು ಇತರ ದೇಶಗಳ ಯಾವುದೇ ಕ್ರಮಗಳನ್ನು ನಾವು ದೃಢವಾಗಿ ವಿರೋಧಿಸುತ್ತೇವೆ ಮತ್ತು ತಿರಸ್ಕರಿಸುತ್ತೇವೆ” ಎಂದು ಭಾರತ ಹೇಳಿದೆ.
ಇದನ್ನೂ ಓದಿ: Kuwait Fire tragedy: ಸಾವಿಗೀಡಾದ 43 ಭಾರತೀಯರಲ್ಲಿ 24 ಮಂದಿ ಕೇರಳದವರು; ಕುವೈತ್ಗೆ ತೆರಳಿದ ಆರೋಗ್ಯ ಸಚಿವೆ ವೀಣಾ ಜಾರ್ಜ್
ಜೂನ್ 7 ರಂದು ತಮ್ಮ ಜಂಟಿ ಹೇಳಿಕೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚೀನಾದ ಕಡೆಯಿಂದ ವಿವರಿಸಲಾಗಿದೆ ಎಂದು ಪಾಕಿಸ್ತಾನ ಹೇಳಿತ್ತು. ಜಮ್ಮು ಮತ್ತು ಕಾಶ್ಮೀರ ವಿವಾದವು ಹಳೇದು, ಯುಎನ್ ಚಾರ್ಟರ್, ಸಂಬಂಧಿತ ಯುಎನ್ ಭದ್ರತಾ ಮಂಡಳಿಯ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಸರಿಯಾಗಿ ಮತ್ತು ಶಾಂತಿಯುತವಾಗಿ ಪರಿಹರಿಸಬೇಕು ಎಂದು ಚೀನಾದ ಕಡೆಯವರು ಪುನರುಚ್ಚರಿಸಿದ್ದಾರೆ ಎಂದು ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ